ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bigg Boss Kannada 12: ಟವರ್‌ನಿಂದ ಬಿದ್ದ ಸ್ಪರ್ಧಿ, ಯಾರ ಕೈ ಸೇರಲಿದೆ ಮೊದಲ ಟಿಕೆಟ್?

Bigg Boss Kannada : ಬಿಗ್‌ ಬಾಸ್‌ ಫಿನಾಲೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಫಿನಾಲೆ ವಾರ ಹತ್ತಿರವಾಗುತ್ತಿದ್ದಂತೆ ಟಾಸ್ಕ್​​ಗಳು ಸಹ ಕಠಿಣವಾಗುತ್ತಿವೆ. ರಘು, ಅಶ್ವಿನಿ, ಕಾವ್ಯಾ, ಧನುಶ್ ಅವರುಗಳು ಆಟವಾಡಲು ಮುಂದಾಗಿದ್ದರು. ಒಂದಿಷ್ಟು ಕಬ್ಬಿಣದ ಎಳೆಗಳನ್ನು ಬಳಸಿ ಟವರ್‌ ಹತ್ತಬೇಕು, ಕೋಲು ಇಡುತ್ತ, ಟವರ್ ಕಟ್ಟುವಲ್ಲಿ ಯಾರು ಯಶಸ್ವಿಯಾಗುವರೋ ಅವರು ಫಿನಾಲೆಗೆ ಮೊದಲ ಟಿಕೆಟ್‌ ಪಡೆಯುತ್ತಾರೆ. ಹಾಗಾದ್ರೆ ಗೆದ್ದವರು ಯಾರು ಗೊತ್ತಾ?

ಟವರ್‌ನಿಂದ ಬಿದ್ದ ಸ್ಪರ್ಧಿ, ಯಾರ ಕೈ ಸೇರಲಿದೆ ಮೊದಲ ಟಿಕೆಟ್?

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Jan 8, 2026 6:11 PM

ಬಿಗ್‌ ಬಾಸ್‌ (Bigg Boss Kannada 12) ಫಿನಾಲೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಫಿನಾಲೆ ವಾರ ಹತ್ತಿರವಾಗುತ್ತಿದ್ದಂತೆ ಟಾಸ್ಕ್​​ಗಳು ಸಹ ಕಠಿಣವಾಗುತ್ತಿವೆ. ರಘು, ಅಶ್ವಿನಿ, ಕಾವ್ಯಾ, ಧನುಶ್ ಅವರುಗಳು ಆಟವಾಡಲು ಮುಂದಾಗಿದ್ದರು. ಒಂದಿಷ್ಟು ಕಬ್ಬಿಣದ ಎಳೆಗಳನ್ನು ಬಳಸಿ ಟವರ್‌ (Tower) ಹತ್ತಬೇಕು, ಕೋಲು ಇಡುತ್ತ, ಟವರ್ ಕಟ್ಟುವಲ್ಲಿ ಯಾರು ಯಶಸ್ವಿಯಾಗುವರೋ ಅವರು ಫಿನಾಲೆಗೆ ಮೊದಲ ಟಿಕೆಟ್‌ ಪಡೆಯುತ್ತಾರೆ. ಹಾಗಾದ್ರೆ ಗೆದ್ದವರು (TOP 6 Winner) ಯಾರು ಗೊತ್ತಾ?

ಏನಿದು ಟಾಸ್ಕ್‌?

ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಇರೋ ಕಬ್ಬಿಣದ ಸರುಕುಗಳನ್ನು ಸ್ಪರ್ಧಿಯ ಬೆಂಬಲಿಗ ಆಯಾತಕಾರದಲ್ಲಿ ಇಡಬೇಕು. ಕಟೆಂಡರ್‌ ಒಂದರಂತೆ ನಿರ್ಮಿಸಿತ್ತು ಹತ್ತಿ ಶಿಖರದಲ್ಲಿ ನಿಂತು ಜೈ ಬಿಗ್‌ ಬಾಸ್‌ ಎಂದು ಘೋಷಿಸಬೇಕು.ಈ ವೇಳೆ ಅಶ್ವಿನಿ ಅವರು ಎಡವಿದ್ದಾರೆ. ಅದನ್ನು ನೋಡಿ ಗಿಲ್ಲಿ ನಟ, ಧ್ರುವಂತ್‌, ರಕ್ಷಿತಾ ಕೂಡ ಶಾಕ್‌ ಆಗಿದ್ದಾರೆ. ಆಟ ಆಡುವಾಗ ಧನುಷ್‌ ಗೌಡ, ಅಶ್ವಿನಿ ಗೌಡ ಬಿದ್ದಿದ್ದಾರೆ. ಇದನ್ನು ನೋಡಿ ಧ್ರುವಂತ್‌, ಗಿಲ್ಲಿ ನಟ, ರಾಶಿಕಾ ಶಾಕ್‌ ಆಗಿದ್ದಾರೆ. ಒಟ್ಟಿನಲ್ಲಿ ಎಲ್ಲರೂ ಹೆದರಿದ್ದಾರೆ.

ಇದನ್ನೂ ಓದಿ: Bigg Boss Kannada 12: ಧ್ರುವಂತ್‌-ಅಶ್ವಿನಿ ಜಗಳ; ಗಿಲ್ಲಿಗೆ ಸಖತ್‌ ಮಜಾ! ನಕ್ಕು ನಕ್ಕು ಮನೆಮಂದಿ ಸುಸ್ತು

ಇವರೇ ಗ್ರ್ಯಾಂಡ್‌ ಫಿನಾಲೆಯ ಟಾಪ್‌ 6

ಸೋಷಿಯಲ್‌ ಮೀಡಿಯಾ ಪ್ರಕಾರ ಧನುಷ್‌ ಈ ಟಾಸ್ಕ್‌ ಗೆದ್ದು ಬೀಗಿದ್ದಾರೆ. ಒಂದು ವೇಳೆ ಆದರೆ ವಿನ್‌ ಆದವರು ಗ್ರ್ಯಾಂಡ್‌ ಫಿನಾಲೆಯಲ್ಲಿ ಟಾಪ್‌ 6 ಆಗುತ್ತಾರೆ.

ಇನ್ನು ಬಿಗ್‌ ಬಾಸ್‌ ಮನೆಯಲ್ಲಿ ‘ಟಿಕೆಟ್ ಟು ಟಾಪ್ 6’ ಆಟದಲ್ಲಿ ಸಖತ್‌ ಪೈಪೋಟಿ ನಡೆದಿದೆ. ‘ಟಿಕೆಟ್ ಟು ಟಾಪ್ 6’ ಟಾಸ್ಕ್ ಆಡುವಾಗ ರಕ್ಷಿತಾ ಶೆಟ್ಟಿ ಔಟ್ ಆಗಿ, ರಘು ಅವರಿಗೆ ಅವಕಾಶ ಮಾಡಿಕೊಟ್ಟಿದ್ದರು. ಹಾಗಾಗಿ ಅವರಿಗೆ ಟಾಪ್ 6 ಆಟದಲ್ಲಿ ಸ್ಪರ್ಧಿಸುವ ಅರ್ಹತೆ ಇಲ್ಲದಂತಾಗಿತ್ತು. ಮತ್ತೊಂದು ಅಶ್ವಿನಿ ಹಾಗೂ ಧ್ರುವಂತ್‌ ಎರಡನೇ ಸುತ್ತಿನಲ್ಲಿ ಆಟ ವಿನ್‌ ಆಗಿದ್ದು ಮುಂದಿನ ಹಂತಕ್ಕೆ ಆಯ್ಕೆ ಆಗಿದ್ದರು.

ಕಲರ್ಸ್‌ ಕನ್ನಡ ಪ್ರೋಮೋ

ಅಶ್ವಿನಿ -ಧ್ರುವಂತ್‌ ದೂರ ದೂರ

ಧ್ರುವಂತ್‌ ಹಾಗೂ ಅಶ್ವಿನಿ ಮಧ್ಯೆ ಸಣ್ಣ ಜಗಳ ಆಗಿದೆ. ಇದು ಮನೆಯವರ ಗಮನಕ್ಕೆ ಬಂತು. ಏನು ಮ್ಯಾಟರ್‌ಗೆ ಜಗಳ ಆಗಿದ್ದು? ನೋಡಿ ಸಖತ್‌ ಬೇಜಾರ್‌ ಆಯ್ತು ಎಂದಿದ್ದಾರೆ ಗಿಲ್ಲಿ. ಅದಕ್ಕೆ ಧ್ರುವಂತ್‌, ಕಣ್ಣು ಮುಂದೆ ಆಗ್ತಾ ಇರೋದು ನೋಡಿಕೊಂಡು ಸುಮ್ಮನೆ ಇರೋಕೆ ಆಗ್ತಿಲ್ಲ ಎಂದಿದ್ದಾರೆ.

ಇದನ್ನೂ ಓದಿ: Bigg Boss Kannada 12: ಎರಡು ಮುಖ ಇದೆ ಅನ್ಸೋದು ಸಹಜ, ಆದ್ರೂ ತಾಯಿ ತಾಯಿನೇ! ಅಶ್ವಿನಿ ಬಗ್ಗೆ ಧ್ರುವಂತ್‌ ಗುಣಗಾನ

ಇದಕ್ಕೆ ಕುಮ್ಮಕ್ಕು ಕೊಟ್ಟ ಗಿಲ್ಲಿ, ಹೌದಣ್ಣ ಎಂದಿದ್ದಾರೆ. ರಘು ಕೂಡ ಗಿಲ್ಲಿ ಮತ್ತು ಧನುಷ್‌ ಜೊತೆ, ಅಶ್ವಿನಿ ಒಬ್ಬರೇ ಇದ್ದಾಗ, ಇವರೇ ಸಪೋರ್ಟ್‌ ಮಾಡಿದ್ದು ಎಂದಿದ್ದಾರೆ. ಇನ್ನು ಸಹವಾಸ ಬೇಡ ಅಂತ ಸೈಲೆಂಟ್‌ ಆಗ್ತೀರಾ ಅಂತ ಗಿಲ್ಲಿ ಮತ್ತಷ್ಟು ಧ್ರುವಂತ್‌ಗೆ ಕೇಳಿದ್ದಾರೆ. ಅದಕ್ಕೆ ಧ್ರುವಂತ್‌, ಆಗಿರೋದು, ಆಗುತ್ತ ಇರೋದು ಎಲ್ಲದೂ ಒಳ್ಳೆಯದಕ್ಕೆ ಎಂದಿದ್ದಾರೆ ಧ್ರುವಂತ್‌. ಅಶ್ವಿನಿ ಹಾಗೂ ಧ್ರುವಂತ್‌ ಜಗಳ ಮನೆಮಂದಿ ಸಖತ್‌ ಹಬ್ಬ ಮಾಡಿದ್ದಾರೆ.