Bigg Boss Kannada 12: ನಿಮ್ಮನ್ನು ಬಿಗ್ ಬಾಸ್ ಹೊರಗೆ ಏಕೆ ಕಳುಹಿಸಿಲ್ಲ? ಕಾವ್ಯಾಗೆ ಕಿಚ್ಚನ ಖಡಕ್ ಪ್ರಶ್ನೆ
Kavya: ಬಿಗ್ ಬಾಸ್ ಅಂದರೆನೇ ನಿಯಮ. ನಿಯಮ ಅಂದರೆ ಬಿಗ್ ಬಾಸ್. ಯಾವುದೇ ನಿಯಮ ಉಲ್ಲಂಘನೆ ಆದ್ರೂ ಬಿಗ್ ಬಾಸ್ ಆ ಕ್ಷಣಕ್ಕೆ ನಿರ್ಧಾರ ತೆಗೆದುಕೊಳ್ತಾರೆ. ಫ್ಯಾಮಿಲಿ ವೀಕ್ ಸಂದರ್ಭದಲ್ಲಿ ಕಾವ್ಯ ಮನೆಯವರು ಬಿಗ್ ಬಾಸ್ ವಾರ್ನಿಂಗ್ ಕೊಟ್ಟಿದ್ದರು, ಪದೇ ಪದೇ ತಪ್ಪು ಮಾಡಿದ್ದರು. ಆ ಬಳಿಕ ಅವರನ್ನು ಹೊರಗೆ ಕೂಡ ಕಳಿಸಿದ್ದರು ಬಿಗ್ ಬಾಸ್. ಈ ಬಗ್ಗೆ ಎಪಿಸೋಡ್ ಶುರುವಾಗ್ತದ್ದಂತೆ ಸುದೀಪ್ ಪ್ರಸ್ತಾಪಿಸಿದ್ದಾರೆ. ನಿಮ್ಮನ್ನು ಹೊರಗೆ ಏಕೆ ಕಳುಹಿಸಿಲ್ಲ ಎಂಬುದೇ ನನ್ನ ಪ್ರಶ್ನೆ ಎಂದು ನೇರವಾಗಿ ಕಾವ್ಯಗೆ ಹೇಳಿದ್ದಾರೆ ಸುದೀಪ್.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಅಂದರೆನೇ (Bigg Boss Kannada 12) ನಿಯಮ. ನಿಯಮ ಅಂದರೆ ಬಿಗ್ ಬಾಸ್. ಯಾವುದೇ ನಿಯಮ ಉಲ್ಲಂಘನೆ ಆದ್ರೂ ಬಿಗ್ ಬಾಸ್ ಆ ಕ್ಷಣಕ್ಕೆ ನಿರ್ಧಾರ ತೆಗೆದುಕೊಳ್ತಾರೆ. ಫ್ಯಾಮಿಲಿ ವೀಕ್ (Family Week) ಸಂದರ್ಭದಲ್ಲಿ ಕಾವ್ಯ ಮನೆಯವರು ಬಿಗ್ ಬಾಸ್ ವಾರ್ನಿಂಗ್ ಕೊಟ್ಟಿದ್ದರು, ಪದೇ ಪದೇ ತಪ್ಪು ಮಾಡಿದ್ದರು. ಆ ಬಳಿಕ ಅವರನ್ನು ಹೊರಗೆ ಕೂಡ ಕಳಿಸಿದ್ದರು ಬಿಗ್ ಬಾಸ್. ಈ ಬಗ್ಗೆ ಎಪಿಸೋಡ್ ಶುರುವಾಗ್ತದ್ದಂತೆ ಸುದೀಪ್ (Sudeep) ಪ್ರಸ್ತಾಪಿಸಿದ್ದಾರೆ. ನಿಮ್ಮನ್ನು ಹೊರಗೆ ಏಕೆ ಕಳುಹಿಸಿಲ್ಲ ಎಂಬುದೇ ನನ್ನ ಪ್ರಶ್ನೆ ಎಂದು ನೇರವಾಗಿ ಕಾವ್ಯಗೆ (Kavya Shaiva) ಹೇಳಿದ್ದಾರೆ ಸುದೀಪ್.
ಕಾವ್ಯ ಮನೆಯವರ ಬಳಿ ಚರ್ಚಿಸಿದ್ದೇನು?
ಹೊರಗಿನಿಂದ ಬಂದ ಕುಟುಂಬದವರು ಬಿಗ್ ಬಾಸ್ ಮನೆಗೆ ಸಂಬಂಧಿಸಿದ ಹೊರ ಜಗತ್ತಿನ ವಿಷಯಗಳನ್ನು ಇಲ್ಲಿ ಚರ್ಚೆ ಮಾಡುವುದು ಬಿಗ್ ಬಾಸ್ ಮನೆಯ ಮೂಲ ನಿಯಮದ ಉಲ್ಲಂಘನೆ. ಇದು ಎಲ್ಲರೂ ಪಾಲಿಸಬೇಕಾದ ಅಂಶವೂ ಆಗಿದೆ. ಆದರೆ ಕಾವ್ಯ ಅವರ ಬಳಿ ಗಿಲ್ಲಿ ಕುರಿತಾಗಿ ಸಹೋದರ ಹಾಗೂ ಅಮ್ಮ ಗುಟ್ಟಾಗಿ ಮಾತನಾಡಿದ್ದರು.
ಇದನ್ನೂ ಓದಿ: Bigg Boss Kannada 12: ಗಿಲ್ಲಿ ಪಕ್ಕ ಹೋಗಿ ಕಾವ್ಯಾ ಕೂರ್ತಾರೆ ಎಂದ ರಕ್ಷಿತಾ; ನಿಮಗಂತೂ ಪಕ್ಕಾ ಉರಿಯತ್ತೆ ಎಂದ ಕಿಚ್ಚ!
Haters, you can't do anything to Kavya apart from barking & crying about her on PR driven SM. Cry harder haters, she is going to shine just like she always does...🤗❤️🔥
— Techie Prajwal (@techie_prajju) January 3, 2026
Haters please STFU...🤫🤫#KavyaShaiva #BBK12 #BBKSeason12 pic.twitter.com/oVyXAgLRBC
ಗಿಲ್ಲಿ ಸ್ನೇಹ ನೆಕ್ಟ್ಸ್ ಲೆವೆಲ್
ಬಿಗ್ ಬಾಸ್ ಮನೆಗೆ ಬಂದಾಗ ತಮ್ಮ ಹೇಳಿದ್ದು ಹೀಗೆ. ನೋಡುವರಿಗೆ ನೀನು ಎಫರ್ಟ್ ಹಾಕುತ್ತದ್ದೀಯಾ ಅನ್ನಿಸುತ್ತಿದೆ. ನೀನು ಜಾಸ್ತಿ ಕಾಣಿಸಿಕೊಳ್ಳಬೇಕು. ತಲೆ ಕೆಡಿಸಿಕೊಳ್ಳಬೇಡ. ನಿನ್ನ ಮತ್ತು ಗಿಲ್ಲಿ ಸ್ನೇಹ ನೆಕ್ಟ್ಸ್ ಲೆವೆಲ್ನಲ್ಲಿ ಇದೆ. ನಾಮಿನೇಷನ್ನಲ್ಲಿ ಅವನ ಹೆಸರು ತೆಗೆದುಕೊಳ್ಳುತ್ತೀಯ. ಆದರೂ ಅವನು ಅದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದರು. ಇದಾದ ಬಳಿಕ ಬಿಗ್ ಬಾಸ್ ಒಂದು ವಾರ್ನಿಂಗ್ ಕೊಟ್ಟರು.
ಹೊರಗಡೆ ವಿಚಾರ ಚರ್ಚಿಸುವಂತಿಲ್ಲ ಎಂದು. ಆದರೂ ಕಾವ್ಯ ಅವರು ಮಾತು ಮುಂದುವರಿಸಿದ್ದರು. ಗಿಲ್ಲಿಯಿಂದ ಕಾವ್ಯಾ ಅಂತ ಹೇಳಿಸಿಕೊಳ್ಳುವುದು ನನಗೆ ಇಷ್ಟ ಇಲ್ಲಒಬ್ಬರನ್ನು ಕೆಳಗೆ ಇಟ್ಟು ಮಾತಾಡೋದು ಅವನ ಉದ್ದೇಶ ಆಗಿರಲ್ಲ. ಮಾತಿನ ಭರದಲ್ಲಿ ಹೇಳುತ್ತಾನೆ. ಅದನ್ನು ಕಟ್ ಮಾಡಲು ನಾನು ಅವನನ್ನು ನಾಮಿನೇಟ್ ಮಾಡಿದೆ. ಎಂದು ಕಾವ್ಯ ಅಂದರು. ‘ಗಿಲ್ಲಿಗೆ ಯಾವಾಗಲೂ ಅಣ್ಣ ಅಣ್ಣ ಅನ್ನೋಕೆ ಹೋಗಬೇಡ. ಅವನು ನಿನ್ನ ಫ್ರೆಂಡ್ ಎಂದು ಕಾವ್ಯಾ ಅವರ ತಾಯಿ ಹೇಳಿದರು. ನಿಮ್ಮಿಬ್ಬರ ಸ್ನೇಹ ಬ್ರೇಕ್ ಆಗದೇ ಬಂದಿದೆ ಹಾಗೇ ಇರಲಿ ಎಂದು ಕಾವ್ಯ ತಮ್ಮ ಹೇಳಿದ್ದರು. ಈ ಎಲ್ಲ ಮಾತುಗಳ ವಿಟಿಯನ್ನ ಪ್ಲೇ ಮಾಡಿಸಿದರು ಕಿಚ್ಚ.
ನಿಮ್ಮನ್ನು ಹೊರಗೆ ಕರೆದಿಲ್ಲ, ಅದೇ ನನಗೆ ಆಶ್ಚರ್ಯ
ಕಿಚ್ಚ ಈ ಬಗ್ಗೆ ಮಾತನಾಡಿ, ನಿಮ್ಮ ತಮ್ಮ ಮಾತನಾಡಿದ್ದು ಸರಿ ಅಲ್ಲ. ನೀವು ಸೀಸನ್ ಇಡೀ ಬ್ಯಾಲೆನ್ಸ್ಡ್ ಆಗಿ ಮಾತನಾಡುತ್ತಾ ಬಂದವರು.ಈಗ ಹೀಗೆ ಮಾಡಿದ್ದು ಎಷ್ಟು ಸರಿ? ಎಲ್ಲ ಕುಟುಂಬದವರೂ ಹಿಂಟ್ ಕೊಡೋದಾಗಿದ್ರೆ ಈ ಸೀಸನ್ ಎಲ್ಲಿ ಹೋಗುತ್ತೆ? ನಿಮ್ಮನ್ನು ಹೊರಗೆ ಕರೆದಿಲ್ಲ. ಅದೇ ನನಗೆ ಆಶ್ಚರ್ಯ ಆಗಿದ್ದು.
ಇದನ್ನೂ ಓದಿ: Bigg Boss Kannada 12: ಬನಿಯನ್ನೇ ಹಾಕ್ಕೊಂಡು ಇದ್ರು ಬದುಕುತ್ತಿರುವುದು ರಾಜನ ರೀತಿ! ಗಿಲ್ಲಿ ಗುಟ್ಟು ರಿವೀಲ್ ಮಾಡಿದ ಕಿಚ್ಚ
ಈ ಸೀಸನ್ ಬಿಗ್ ಬಾಸ್ ಅಷ್ಟು ಗಂಭೀರವಾಗಿ ಹೋಗಿಲ್ಲ. ಹಿಂಟ್ ಕೊಟ್ಟು ಹೋದಮೇಲೆ ಅದನ್ನು ಮರಳಿ ಪಡೆಯೋಕೆ ಆಗಲ್ಲ. ಡ್ಯಾಮೇಜ್ ಮಾಡಿಯಾಗಿದೆ ಎಂದು ಸುದೀಪ್ ಬೇಸರ ಹೊರಹಾಕಿದರು. ಬಿಗ್ ಬಾಸ್ ಅನೇಕ ಬಾರಿ ವಾರ್ನ್ ಮಾಡುತ್ತಾ ಇದ್ದರು. ನಂತರ ಕಾಲ್ ತೆಗೆದುಕೊಂಡರು. ನೀವು ನಿಯಮ ಮೀರಿದ್ದಿರಿ. ಅದು ಸರಿ ಅಲ್ಲ ಎಂದು ನೇರವಾಗಿ ಹೇಳಿದ್ದಾರೆ.