Bigg Boss Kannada 13: ಇಬ್ಬರಲ್ಲಿ ಒಬ್ಬರನ್ನು ಮನೆಗೆ ಕಳುಹಿಸಿಯೇ ನಾನು ಹೋಗೋದು; ಧನುಷ್ ಓಪನ್ ಚಾಲೆಂಜ್
Bigg Boss Kannada 13: ಬಿಗ್ ಬಾಸ್ ಮನೆಯಲ್ಲಿ ಸಂಗೀತಾ ಭಟ್ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ. ಮತ್ತೊಂದು ಕಡೆ ಕಾಮನ್ ಮ್ಯಾನ್ ಗ್ರೂಪ್‌ಗಳಲ್ಲಿ ಬಿರುಕು ಮೂಡಿದೆ. ಧನುಷ್ ಇದ್ದವರು ಲಿಖಿತ್-ಮಂಜು ಇಬ್ಬರಲ್ಲಿ ಒಬ್ಬರನ್ನು ಹೊರಗೆ ಕಳುಹಿಸಿ ಮನೆಗೆ ಹೋಗುವೆ ಎಂದು ಕಿರಣ್ ಮುಂದೆ ಹೇಳಿದ್ದಾರೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಮನೆಯಲ್ಲಿ ಸಂಗೀತಾ ಭಟ್ (Sangeetha Bha) ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ. ಮತ್ತೊಂದು ಕಡೆ ಕಾಮನ್ ಮ್ಯಾನ್ ಗ್ರೂಪ್‌ಗಳಲ್ಲಿ ಬಿರುಕು ಮೂಡಿದೆ. ಧನುಷ್ (Dhanush) ಇದ್ದವರು ಲಿಖಿತ್-ಮಂಜು (Likhith Manja) ಇಬ್ಬರಲ್ಲಿ ಒಬ್ಬರನ್ನು ಹೊರಗೆ ಕಳುಹಿಸಿ ಮನೆಗೆ ಹೋಗುವೆ ಎಂದು ಕಿರಣ್ ಮುಂದೆ ಹೇಳಿದ್ದಾರೆ.
ಸದ್ದಿಲ್ಲದೆ ಇವರ ಮಧ್ಯೆ ಬಿರುಕು
ಅಗ್ನಿಪರೀಕ್ಷೆಯಿಂದ ಒಟ್ಟಾಗಿ ಬಂದ ಸ್ಪರ್ಧಿಗಳು ಎಂದರೆ ಅದು ಕಿರಣ್ ಶಾಸ್ತ್ರಿ, ಲಿಖಿತ್, ಧನುಷ್ ಹಾಗೂ ಮಾಡರ್ನ್ ಮಹಾಕವಿ ಮಂಜು. ಸದ್ದಿಲ್ಲದೆ ಇವರ ಮಧ್ಯೆ ಬಿರುಕು ಮೂಡಲು ಶುರುವಾಗಿದೆ. ಧನುಷ್ ಅವರು ಆಟದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಆಸಿಯಾ ಅವರು ಕಿವಿಮಾತೊಂದನ್ನು ಹೇಳಿದ್ದಾರೆ. ‘ನೀವು ಮಂಜು ಮೊದಲಾದವರ ಜೊತೆ ಸೇರಬೇಡಿ. ಅವರು ಮಾಡಿದ ತಪ್ಪಿನಿಂದ ನಿಮಗೂ ಅಪವಾದ ಬರುತ್ತದೆ’ ಎಂಬ ಕಿವಿಮಾತನ್ನು ಹೇಳಿದರು.
ಇದನ್ನೂ ಓದಿ: Amruthadhaare Serial: ಅಮೃತಧಾರೆಯ ಹೊಸ ಅಧ್ಯಾಯ! ಭೂಮಿಕಾ ಬದುಕಿನ ಹಾದಿಗೆ ಬಿಗ್ ಟ್ವಿಸ್ಟ್
ಈ ವಿಷಯ ಧನುಷ್ಗೆ ನಿಜ ಎನಿಸಿದೆ. ಮಂಜು ಹಾಗೂ ಲಿಖಿತ್ ಏನೆನೋ ಪ್ಲ್ಯಾನ್ ಮಾಡುತ್ತಾ ಇರುತ್ತಾರೆ. ಅವರು ಬೇರೆಯವರ ಮೇಲೆ ದ್ವೇಷ ಸಾಧಿಸಲು ನಮ್ಮನ್ನು ಬಳಸಿಕೊಳ್ಳುತ್ತಾರೆ. ಇಬ್ಬರಲ್ಲಿ ಒಬ್ಬರನ್ನು ಮನೆಗೆ ಕಳುಹಿಸಿಯೇ ನಾನು ಹೋಗುವೆ ಎಂದಿದ್ದಾರೆ.
Dhanush telling to Shastri that Manja and likith ibrunu namba beda namma nammalle tanditu nodtare.
— Abhi (@Abhi4Ahead) September 19, 2026
Good Dhanush atleast now you understood about Kantri manja
Appreciated for your understanding.
if you surrendered to manja surely you would be losing Asiya friendship#BBK13 pic.twitter.com/FEwhaUXnlh
ಬಿಗ್ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗುವುದು ಬಿಗ್ಬಾಸ್ಗೆ ಅಥವಾ ಸುದೀಪ್ಗೆ ಉಪನಾಯಕ ಆದಂತೆ. ಬಿಗ್ಬಾಸ್ ಮನೆಯ ಕ್ಯಾಪ್ಟನ್ಗೆ ವಿಶೇಷ ಗೌರವ ಇರುತ್ತದೆ. ಸಂಗೀತಾ ಭಟ್ ಅವರು ಈ ಸೀಸನ್ನಿನ ಮೊದಲ ಕ್ಯಾಪ್ಟನ್ ಆಗಿದ್ದಾರೆ. ಆಸಿಯಾ ಫಿರ್ದೋಸ್ ಹಾಗೂಸಂಗೀತಾ ಭಟ್‌ಎದುರಾಳಿಗಳಾಗಿ ಫೈಟ್ ಕೊಟ್ಟಿದ್ದು, ಇವರಿಗೆ ತಂಡಗಳ ಸಪೋರ್ಟ್‌ಬೇಕಿತ್ತು. ಎಲ್ಲಹಂತದಲ್ಲೂ ಸಂಗೀತಾ ಭಟ್‌ಗೆ ಸಾಥ್ ಸಿಕ್ಕಿದ್ದು, ‘ಬಿಗ್ ಬಾಸ್ ಸೀಸನ್-13’ರ ಮೊಟ್ಟ ಮೊದಲ ಕ್ಯಾಪ್ಟನ್ (Captain) ಆದರು.
ಇದನ್ನೂ ಓದಿ: Bigg Boss Kannada 13: ಮೊಟ್ಟ ಮೊದಲ ಕ್ಯಾಪ್ಟನ್ ಸಂಗೀತಾ! ಗೆಲುವನ್ನು ಸಂಭ್ರಮಿಸಿದ ಆಸಿಯಾ
‘ಕಣ್ಗಾವಲು’ ಟಾಸ್ಕ್ ಗೆದ್ದಿದ್ದ ಸಂಗೀತಾ ಭಟ್ ಅವರು ನೇರವಾಗಿ ಕ್ಯಾಪ್ಟನ್ಸಿ ಟಾಸ್ಕ್ ಆಡಲು ಫೈಲೆಟ್ ಆಗಿ ಆಯ್ಕೆ ಆದರು. ಆಸಿಯಾ ಫಿದೋಸ್ ಅವರನ್ನ ಕೋ-ಫೈಲೆಟ್ ಆಯ್ಕೆ ಮಾಡಿಕೊಂಡರು. ಆಸಿಯಾ ತಮ್ಮ ವಿರುದ್ದ ಆಡಲು ಅವಿನಾಶ್, ಯಶಸ್, ಧನುಷ್ ಅವರನ್ನ ಆಯ್ಕೆ ಮಾಡಿಕೊಂಡಿದ್ದರು.