ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಐಟಿ ಕ್ಷೇತ್ರದಲ್ಲಿ ಹನಿಟ್ರಾಪ್‌! ಚೀನಾ ಗೂಢಚಾರಿಣಿ ಜತೆ ಅಫೇರ್‌ ಒಪ್ಪಿಕೊಂಡ ಎನ್‌ವಿಡಿಯಾ ಸಿಇಒ!

ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ವಲಯದ ಜಾಗತಿಕ ದೈತ್ಯ ಸಂಸ್ಥೆ ಎನ್‌ವಿಡಿಯಾ ಸಹ-ಸಂಸ್ಥಾಪಕ ಮತ್ತು ಸಿಇಒ ಆಗಿರುವ ಜನ್ಸನ್ ಹುವಾಂಗ್ ವಿದೇಶಿ ಗೂಢಚರ್ಯೆ ಜಾಲದ ಸಂಚಿಗೆ ಬಲಿಯಾಗಿದ್ದಾರೆ ಎಂಬ ಗಂಭೀರ ವರದಿಗಳ ಬೆನ್ನಲ್ಲೇ ಕಂಪನಿಯ ನಿರ್ದೇಶಕರ ಮಂಡಳಿಯು ಭಾನುವಾರ ಸ್ವತಂತ್ರ ತನಿಖೆಯನ್ನು ಪ್ರಕಟಿಸಿದೆ.

ಚೀನಾ ಗೂಢಚಾರಿಣಿ ಜತೆ ಅಫೇರ್‌ ಒಪ್ಪಿಕೊಂಡ ಎನ್‌ವಿಡಿಯಾ ಸಿಇಒ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Nov 9, 2026 9:18 AM

ವಾಷಿಂಗ್ಟನ್‌: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ವಲಯದ ಜಾಗತಿಕ ದೈತ್ಯ ಸಂಸ್ಥೆ ಎನ್‌ವಿಡಿಯಾ ಸಹ-ಸಂಸ್ಥಾಪಕ ಮತ್ತು ಸಿಇಒ ಆಗಿರುವ ಜನ್ಸನ್ ಹುವಾಂಗ್ ವಿದೇಶಿ ಗೂಢಚರ್ಯೆ (Nvidia's Jensen Huang) ಜಾಲದ ಸಂಚಿಗೆ ಬಲಿಯಾಗಿದ್ದಾರೆ ಎಂಬ ಗಂಭೀರ ವರದಿಗಳ ಬೆನ್ನಲ್ಲೇ ಕಂಪನಿಯ ನಿರ್ದೇಶಕರ ಮಂಡಳಿಯು ಭಾನುವಾರ ಸ್ವತಂತ್ರ ತನಿಖೆಯನ್ನು ಪ್ರಕಟಿಸಿದೆ. ಅಮೆರಿಕದ ಗುಪ್ತಚರ ಸಂಸ್ಥೆಗಳು ಚೀನಾದ ಬೇಹುಗಾರ್ತಿ ಎಂದು ಗುರುತಿಸಿರುವ ಉದ್ಯಮಿಯೊಬ್ಬರ ಜೊತೆ ತಾವು ನಿಕಟ ಸಂಬಂಧ ಹೊಂದಿದ್ದನ್ನು ಜನ್ಸನ್ ಹುವಾಂಗ್ ಅವರು ಆಡಳಿತ ಮಂಡಳಿಯ ಎದುರು ಒಪ್ಪಿಕೊಂಡ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಅಮೆರಿಕದ ಅತ್ಯಂತ ಸೂಕ್ಷ್ಮ ತಂತ್ರಜ್ಞಾನ ಮತ್ತು ಎಐ ಚಿಪ್‌ಗಳ ರಹಸ್ಯಗಳನ್ನು ಬೀಜಿಂಗ್‌ಗೆ ತಲುಪಿಸಲು ಚೀನಾ ಹೂಡಿದ್ದ ಜಾಲಕ್ಕೆ ಹುವಾಂಗ್ ಬಲಿಯಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಸ್ವತಃ ಅವರೇ ಹೇಳಿಕೊಂಡಿದ್ದು, ತಮ್ಮ ಉದ್ಯೋಗಿಗಳಿಗೆ ಇಮೇಲ್‌ ಮೂಲಕ ಕ್ಷಮೆ ಕೇಳಿದ್ದಾರೆ. ನಾನು ನನ್ನ ಪತ್ನಿಗೆ ನಂಬಿಕೆದ್ರೋಹ ಮಾಡಿದ್ದೇನೆ. ನನ್ನ ನಡೆ ನನ್ನ ಪತ್ನಿ ಮತ್ತು ಮಕ್ಕಳ ಮನಸ್ಸಿಗೆ ತೀವ್ರ ಆಘಾತ ಉಂಟುಮಾಡಿದೆ. ನಾನು ಮಾಡಿದ್ದಕ್ಕೆ ಯಾವುದೇ ಕ್ಷಮೆಯಿಲ್ಲ, ನಾನು ತೀವ್ರವಾಗಿ ವಿಷಾದಿಸುತ್ತೇನೆ ಎಂದು ಅವರು ಅದರದಲ್ಲಿ ಬರೆದುಕೊಂಡಿದ್ದಾರೆ.

ಚೀನಾದ ಪ್ರಜೆಯಾಗಿರುವ ಮತ್ತು ಸೆಮಿಕಂಡಕ್ಟರ್ ಚಿಪ್ ಖರೀದಿದಾರಳಾಗಿರುವ ಅಲೈಸ್ ಹುವಾಂಗ್ ಎಂಬಾಕೆಯೊಂದಿಗೆ ಜನ್ಸನ್ ಹುವಾಂಗ್ ಅತ್ಯಂತ ನಿಕಟ ಸಂಬಂಧ ಬೆಳೆಸಿಕೊಂಡಿದ್ದರು. ಅಲೈಸ್ ಹುವಾಂಗ್ ಈ ಹಿಂದೆ ಚೀನಾದಲ್ಲಿ ದೂರದರ್ಶನ ವರದಿಗಾರ್ತಿಯಾಗಿದ್ದು, ಪ್ರಸ್ತುತ ಸಿಂಗಾಪುರ ಮೂಲದ 'ಮೆಗಾಸ್ಪೀಡ್' ಎಂಬ ದತ್ತಾಂಶ ಕೇಂದ್ರ ಕಂಪನಿಯ ಉನ್ನತ ಅಧಿಕಾರಿಯಾಗಿದ್ದಾಳೆ. ಈಕೆಯು ಅಮೆರಿಕದ ಎಐ ತಂತ್ರಜ್ಞಾನದ ರಹಸ್ಯ ಹಾಗೂ ಎನ್‌ವಿಡಿಯಾ ಚಿಪ್‌ಗಳ ಮಾಹಿತಿಯನ್ನು ನೇರವಾಗಿ ಬೀಜಿಂಗ್‌ಗೆ ರವಾನಿಸುತ್ತಿದ್ದಳು ಎಂದು ಅಮೆರಿಕದ ಗುಪ್ತಚರ ಇಲಾಖೆ ತಿಳಿಸಿತ್ತು.

ಪ್ರೀಮಿಯಂ ಅಗರಬತ್ತಿ ಮಾರುಕಟ್ಟೆ ವಿಸ್ತರಣೆಗೆ ಮುಂದಾದ ಐಟಿಸಿ, 2 ಹೊಸ ಉತ್ಪನ್ನಗಳ ಬಿಡುಗಡೆ

ಈ ವರದಿಗಳು ಹೊರಬರುತ್ತಿದ್ದಂತೆ ಎನ್‌ವಿಡಿಯಾ ಕಂಪನಿಯ ಆಡಳಿತ ಮಂಡಳಿ ತಕ್ಷಣವೇ ಸ್ವತಂತ್ರ ತನಿಖೆಗೆ ಆದೇಶಿಸಿದೆ. ದೇಶದ ಭದ್ರತೆ ಮತ್ತು ಕಂಪನಿಯ ರಹಸ್ಯಗಳು ಸೋರಿಕೆಯಾಗಿರುವ ಬಗ್ಗೆ ಸದ್ಯಕ್ಕೆ ಯಾವುದೇ ಬಲವಾದ ಪುರಾವೆಗಳು ಸಿಕ್ಕಿಲ್ಲವಾದರೂ, ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುವುದು ಎಂದು ಮಂಡಳಿ ತಿಳಿಸಿದೆ. ಜೆನ್ಸನ್ ಹುವಾಂಗ್ ಅವರು ಈ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಘೋಷಿಸಿದ್ದಾರೆ