LACMA Art Film Gala: LACMA ಆರ್ಟ್ ಫಿಲ್ಮ್ ಗಾಲಾದಲ್ಲಿ ಮಿಂಚಿದ ಸೂಪರ್ಸ್ಟಾರ್ ಹೃತಿಕ್ ರೋಷನ್!
LACMA Art Film Gala: ಬಾಲಿವುಡ್ನ ಖ್ಯಾತ ನಟ ಹೃತಿಕ್ ರೋಷನ್ (Hrithik Roshan) ಅವರು ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ನಡೆದ ಪ್ರತಿಷ್ಠಿತ LACMA (ಲಾಸ್ ಏಂಜಲೀಸ್ ಕೌಂಟಿ ಮ್ಯೂಸಿಯಂ ಆಫ್ ಆರ್ಟ್) ಆರ್ಟ್ ಫಿಲ್ಮ್ ಗಾಲಾ ಕಾರ್ಯಕ್ರಮದಲ್ಲಿ ಸ್ಟೈಲಿಶ್ ಲುಕ್ನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಈ ಅದ್ಧೂರಿ (Leonardo DiCaprio) ಕಾರ್ಯಕ್ರಮದಲ್ಲಿ ಹಾಲಿವುಡ್ನ ಖ್ಯಾತ ನಟರು, ನಿರ್ದೇಶಕರು, ಕಲಾವಿದರು ಹಾಗೂ ಜಾಗತಿಕ ಸಾಂಸ್ಕೃತಿಕ ಕ್ಷೇತ್ರದ ಗಣ್ಯರು ಭಾಗವಹಿಸಿದ್ದರು.
ಹೃತಿಕ್ ರೋಷನ್ -
ಬಾಲಿವುಡ್ನ ಖ್ಯಾತ ನಟ ಹೃತಿಕ್ ರೋಷನ್ (Hrithik Roshan) ಅವರು ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ನಡೆದ ಪ್ರತಿಷ್ಠಿತ LACMA (ಲಾಸ್ ಏಂಜಲೀಸ್ ಕೌಂಟಿ ಮ್ಯೂಸಿಯಂ ಆಫ್ ಆರ್ಟ್) ಆರ್ಟ್ ಫಿಲ್ಮ್ ಗಾಲಾ ಕಾರ್ಯಕ್ರಮದಲ್ಲಿ ಸ್ಟೈಲಿಶ್ ಲುಕ್ನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಈ ಅದ್ಧೂರಿ (Leonardo DiCaprio) ಕಾರ್ಯಕ್ರಮದಲ್ಲಿ ಹಾಲಿವುಡ್ನ ಖ್ಯಾತ ನಟರು, ನಿರ್ದೇಶಕರು, ಕಲಾವಿದರು ಹಾಗೂ ಜಾಗತಿಕ ಸಾಂಸ್ಕೃತಿಕ ಕ್ಷೇತ್ರದ ಗಣ್ಯರು ಭಾಗವಹಿಸಿದ್ದರು.
ಕಸ್ಟಮ್ ಟಕ್ಸೆಡೋದಲ್ಲಿ ಮಿಂಚಿದ ಹೃತಿಕ್
ಕಾರ್ಯಕ್ರಮದಲ್ಲಿ ಹೃತಿಕ್ ರೋಷನ್ ಅವರು ಇಟಲಿಯ ಐಷಾರಾಮಿ ಫ್ಯಾಷನ್ ಬ್ರ್ಯಾಂಡ್ 'ಬ್ರುನೆಲ್ಲೊ ಕುಚಿನೆಲ್ಲಿ' (Brunello Cucinelli) ವಿನ್ಯಾಸಗೊಳಿಸಿದ ವಿಶೇಷ ಕಸ್ಟಮ್ ಟಕ್ಸೆಡೋ ಧರಿಸಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ಸರಳತೆಯಲ್ಲೇ ಐಷಾರಾಮಿತನವನ್ನು ಪ್ರತಿಬಿಂಬಿಸುವ 'ಕ್ವೈಟ್ ಲಕ್ಸುರಿ' (Quiet Luxury) ಶೈಲಿಗೆ ಹೆಸರುವಾಸಿಯಾಗಿರುವ ಈ ಬ್ರ್ಯಾಂಡ್, ಮಾನವೀಯ ಮೌಲ್ಯಗಳು ಮತ್ತು ಬಂಡವಾಳಶಾಹಿಯ ಸಮತೋಲನದ ತತ್ವವನ್ನು ಪ್ರತಿಪಾದಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
First visuals of #HrithikRoshan from LACMA. Credit: LACMA official Instagram. https://t.co/REEhkhZwpg
— HrithikRules.com (@HrithikRules) November 8, 2026
ಇದನ್ನೂ ಓದಿ: Bigg Boss Kannada 13: ‘ಬಿಗ್ ಬಾಸ್’ ಗಾನವಿ ಗೌಡ ಫ್ಯಾಮಿಲಿ ವಿಚಾರ ರಿವೀಲ್ ಮಾಡಿದ ಕಿಚ್ಚ!
ಖ್ಯಾತ ನಿರ್ದೇಶಕ ಡೆನಿಸ್ ವಿಲೆನ್ಯೂವ್ಗೆ ಗೌರವ
ಈ ವರ್ಷದ 15ನೇ ಆವೃತ್ತಿಯ LACMA ಆರ್ಟ್ ಫಿಲ್ಮ್ ಗಾಲಾದಲ್ಲಿ ಖ್ಯಾತ ಚಿತ್ರ ನಿರ್ದೇಶಕ ಡೆನಿಸ್ ವಿಲೆನ್ಯೂವ್ ಹಾಗೂ ಕಲಾವಿದೆ ವಿಜಾ ಸೆಲ್ಮಿನ್ಸ್ ಅವರನ್ನು ಗೌರವಿಸಲಾಯಿತು. 'ಡ್ಯೂನ್' (Dune) ಸೇರಿದಂತೆ ಹಲವು ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿರುವ ಡೆನಿಸ್ ವಿಲೆನ್ಯೂವ್ ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಗೌರವಿಸಲ್ಪಟ್ಟರೆ, ಕಲಾ ಕ್ಷೇತ್ರದಲ್ಲಿನ ಮಹತ್ವದ ಸಾಧನೆಗಾಗಿ ವಿಜಾ ಸೆಲ್ಮಿನ್ಸ್ ಅವರಿಗೆ ಗೌರವ ಸಲ್ಲಿಸಲಾಯಿತು.
ಭಾರತೀಯ ಚಿತ್ರರಂಗಕ್ಕೆ ಹೆಮ್ಮೆಯ ಕ್ಷಣ
ನವೆಂಬರ್ 7ರ ಸಂಜೆ ನಡೆದ ಈ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಹೃತಿಕ್ ರೋಷನ್ ಅವರ ಉಪಸ್ಥಿತಿ ಭಾರತೀಯ ಚಿತ್ರರಂಗದ ಪಾಲಿಗೆ ವಿಶೇಷ ಕ್ಷಣವಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೊದಲ ಮುಖ್ಯವಾಹಿನಿಯ ಭಾರತೀಯ ನಟ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಫ್ಯಾಷನ್ ಬ್ರ್ಯಾಂಡ್ ಗುಚ್ಚಿ (Gucci) ಬೆಂಬಲಿತ ಈ ವಾರ್ಷಿಕ ದತ್ತಿ ಕಾರ್ಯಕ್ರಮವು ಕಲೆ, ಸಿನಿಮಾ ಮತ್ತು ಸಂಸ್ಕೃತಿಯ ನಡುವಿನ ಸಂಬಂಧವನ್ನು ಸಂಭ್ರಮಿಸುತ್ತದೆ.ಹಾಲಿವುಡ್ ನಟ ಲಿಯೊನಾರ್ಡೊ ಡಿಕಾಪ್ರಿಯೊ ಹಾಗೂ ಉದ್ಯಮಿ ಮತ್ತು ಸಾಂಸ್ಕೃತಿಕ ಕ್ಷೇತ್ರದ ಪ್ರಮುಖ ವ್ಯಕ್ತಿ ಇವಾ ಚೌ ಅವರು ಕಾರ್ಯಕ್ರಮದ ಸಹ-ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದ್ದರು.
ಭಾರತೀಯ ಮೂಲದ ನಿರ್ಮಾಪಕಿ, ವೆಂಚರ್ ಕ್ಯಾಪಿಟಲಿಸ್ಟ್ ಹಾಗೂ ಇಂಟರ್ನ್ಯಾಷನಲ್ ಎಮ್ಮಿ ಬೋರ್ಡ್ ಸದಸ್ಯೆಯಾಗಿರುವ ಕವಿತಾ ಗುಪ್ತಾ ಅವರು ಹೃತಿಕ್ ರೋಷನ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಆತಿಥ್ಯ ವಹಿಸಿದ್ದರು. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತೀಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕವಿತಾ ಗುಪ್ತಾ ಅವರು ನಿರಂತರವಾಗಿ ಶ್ರಮಿಸುತ್ತಿದ್ದಾರೆ.
ಗಣ್ಯರ ಸಮಾಗಮಕ್ಕೆ ಸಾಕ್ಷಿಯಾದ ಗಾಲಾ
ಈ ಅದ್ಧೂರಿ ಸಮಾರಂಭದಲ್ಲಿ ಹಾಲಿವುಡ್ನ ಹಲವು ಪ್ರಸಿದ್ಧ ತಾರೆಯರು ಭಾಗವಹಿಸಿದ್ದರು. ಲಿಯೊನಾರ್ಡೊ ಡಿಕಾಪ್ರಿಯೊ, ಟಾಮ್ ಹ್ಯಾಂಕ್ಸ್, ತಿಮೋಥಿ ಚಾಲಮೆಟ್, ನಿಕೋಲ್ ಕಿಡ್ಮನ್, ಆಂಡ್ರ್ಯೂ ಗಾರ್ಫೀಲ್ಡ್, ಅನ್ಯಾ ಟೇಲರ್-ಜಾಯ್, ರುಫಸ್ ಸೆವೆಲ್, ಆಶ್ಲೆ ಪಾರ್ಕ್, ಜೆಸ್ಸಿಕಾ ವಿಲಿಯಮ್ಸ್ ಮತ್ತು ಮೋನಿಕಾ ಬಾರ್ಬರೊ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.ಇದಲ್ಲದೆ, ಉದ್ಯಮ ಮತ್ತು ಜಾಗತಿಕ ಫ್ಯಾಷನ್ ಲೋಕದ ಪ್ರಮುಖ ವ್ಯಕ್ತಿಗಳಾದ ಕೈಲಿ ಜೆನ್ನರ್ ಹಾಗೂ ಕಿಮ್ ಕಾರ್ಡಶಿಯನ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: Bigg Boss Kannada 13: ಬಿಗ್ ಬಾಸ್ ಮನೆಗೆ ಮಂಜ ಎಂಟ್ರಿ ಕೊಟ್ಟಿದ್ದು ಹೇಗಿತ್ತು? ಸ್ಪರ್ಧಿಗಳು ಶಾಕ್
LACMA ಆರ್ಟ್ ಫಿಲ್ಮ್ ಗಾಲಾ ಪ್ರತಿವರ್ಷ ನಡೆಯುವ ಪ್ರತಿಷ್ಠಿತ ಕಾರ್ಯಕ್ರಮವಾಗಿದ್ದು, ಕಲೆ, ಸಿನಿಮಾ, ಫ್ಯಾಷನ್, ಉದ್ಯಮ ಮತ್ತು ದತ್ತಿ ಕ್ಷೇತ್ರಗಳ ಪ್ರಮುಖರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುತ್ತದೆ.