ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ಈ ವರ್ಷ ಬೇಗ ಶುರುವಾಗ್ತಿದೆ ಕನ್ನಡಿಗರ ಮೆಚ್ಚಿನ ಶೋ ʻಬಿಗ್‌ ಬಾಸ್‌ʼ! ಪ್ರೋಮೋ ಔಟ್‌

Bigg Boss Kannada 13: ''ಐಪಿಎಲ್'' ಮುಕ್ತಾಯವಾದ ಬೆನ್ನಲ್ಲೇ ''ಬಿಗ್ ಬಾಸ್'' ಶುರುವಾಗ್ತಿದೆ. ಇದಕ್ಕೆ ತಮಿಳಿನಲ್ಲಿ ''ಬಿಗ್ ಬಾಸ್'' ಸೀಸನ್ 10ರ ಕೆಲಸ ಶುರುವಾಗಿದ್ದು, ಈ ವರ್ಷದ ಮೊದಲ ಪ್ರೋಮೋವನ್ನು ಬಿಡುಗಡೆ ಮಾಡಲಾಗಿದೆ. ಇದರ ಬೆನ್ನಲ್ಲೇ ಈಗ ಕನ್ನಡ ಬಿಗ್‌ ಬಾಸ್‌ ಕಡೆಯಿಂದಲೂ ಸಣ್ಣ ಪ್ರೋಮೋ ಔಟ್‌ ಆಗಿದೆ. ಇನ್ನು ಸೀಸನ್‌ 12ರಲ್ಲಿ ಗಿಲ್ಲಿ ನಟ ಸೀಸನ್ -12 ವಿನ್ನರ್ ಆಗಿದ್ದರು. 50 ಲಕ್ಷ ನಗದು ಬಹುಮಾನ ಪಡೆದುಕೊಂಡಿದ್ದರು. ಒಂದು ಕಾರನ್ನು ಕೂಡ ಈ ಸಲ ಕೊಡಲಾಗಿತ್ತು. ಕಳೆದ ಬಿಗ್‌ಬಾಸ್ ಸೀಸನ್‌ಗಳ ಯಶಸ್ಸಿನ ನಂತರ ಕಲರ್ಸ್ ಕನ್ನಡ ತಂಡ ಈ ಬಾರಿಯ ಸೀಸನ್ ಅನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಆಯೋಜಿಸುತ್ತಿದೆ.

ಈ ವರ್ಷ ಬೇಗ ಶುರುವಾಗ್ತಿದೆ ಕನ್ನಡಿಗರ ಮೆಚ್ಚಿನ ಶೋ ʻಬಿಗ್‌ ಬಾಸ್‌ʼ!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Jun 3, 2026 7:10 PM

IPL ಮತ್ತು ''ಬಿಗ್ ಬಾಸ್'' (Bigg Boss Kannada 13) ಕಳೆದ ಹಲವು ವರ್ಷಗಳಿಂದ ಭಾರತವನ್ನು ಆವರಿಸಿಕೊಂಡಿವೆ. ವರ್ಷದ ಮಧ್ಯಂತರಕ್ಕೆ ಬಿಗ್ ಬಾಸ್‌ ಗೆ ಸ್ವಾಗತ ಕೋರಲು ವೀಕ್ಷಕರು ಅಣಿಯಾಗುತ್ತಾರೆ. ತಮ್ಮ ಕಷ್ಟ-ನಷ್ಟಗಳನ್ನೆಲ್ಲ ಮರೆತು ''ಬಿಗ್ ಬಾಸ್'' ಸ್ಫರ್ಧಿಗಳ ಸಂಭ್ರಮವನ್ನು ಕಣ್ತುಂಬಿಕೊಳ್ಳುತ್ತಾರೆ. ಇದೀಗ ಕಲರ್ಸ್‌ ಕನ್ನಡ (Colors Kannada) ವೀಕ್ಷಕರಿಗೆ ಗುಡ್‌ ನ್ಯೂಸ್‌ ಕೊಟ್ಟಿದೆ. ಈ ವರ್ಷ ಬೇಗ ಶುರುವಾಗ್ತಿದೆ ಕನ್ನಡಿಗರ ಹಬ್ಬ... With something special! ಅಂತ ಕ್ಯಾಪ್ಷನ್‌ ಕೊಟ್ಟಿದೆ.

''ಐಪಿಎಲ್'' ಮುಕ್ತಾಯವಾದ ಬೆನ್ನಲ್ಲೇ ''ಬಿಗ್ ಬಾಸ್'' ಶುರುವಾಗಿದೆ. ಇದಕ್ಕೆ ತಮಿಳಿನಲ್ಲಿ ''ಬಿಗ್ ಬಾಸ್'' ಸೀಸನ್ 10ರ ಕೆಲಸ ಶುರುವಾಗಿದ್ದು, ಈ ವರ್ಷದ ಮೊದಲ ಪ್ರೋಮೋವನ್ನು ಬಿಡುಗಡೆ ಮಾಡಲಾಗಿದೆ. ಇದರ ಬೆನ್ನಲ್ಲೇ ಈಗ ಕನ್ನಡ ಬಿಗ್‌ ಕಡೆಯಿಂದಲೂ ಸಣ್ಣ ಪ್ರೋಮೋ ಔಟ್‌ ಆಗಿದೆ.

ಇದನ್ನೂ ಓದಿ: Amruthadhaare Serial: ಕೆಡಿ ಜೈದೇವ್‌ ಮಾಸ್ಟರ್‌ ಪ್ಲ್ಯಾನ್‌; ಅಪರಿಚಿತ ದಂಪತಿ ದಿವಾನ್ ಮನೆಗೆ ಎಂಟ್ರಿ!

ಇನ್ನು ಸೀಸನ್‌ 12ರಲ್ಲಿ ಹಳ್ಳಿ ಹೈದ ಗಿಲ್ಲಿ ನಟ ಸೀಸನ್ -12 ವಿನ್ನರ್ ಆಗಿದ್ದರು. 50 ಲಕ್ಷ ನಗದು ಬಹುಮಾನ ಪಡೆದುಕೊಂಡಿದ್ದರು. ಒಂದು ಕಾರನ್ನು ಕೂಡ ಈ ಸಲ ಕೊಡಲಾಗಿತ್ತು. ಕಳೆದ ಬಿಗ್‌ಬಾಸ್ ಸೀಸನ್‌ಗಳ ಯಶಸ್ಸಿನ ನಂತರ ಕಲರ್ಸ್ ಕನ್ನಡ ತಂಡ ಈ ಬಾರಿಯ ಸೀಸನ್ ಅನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಆಯೋಜಿಸುತ್ತಿದೆ.

ಒಂದು ಮನೆ, ಅದರ ಕೋಣೆ ಕೋಣೆಗಳನ್ನೂ ಗಮನಿಸುವ ಕ್ಯಾಮೆರಾಗಳು ಹಾಗೂ ಅದರಲ್ಲಿ 100 ದಿನಗಳ ಕಾಲ ಉಳಿದುಕೊಳ್ಳುವ ಸ್ಪರ್ಧಿಗಳು ಮತ್ತು ಒಟ್ಟಾರೆ ಅದೊಂದು 'ಗೇಮ್ ಶೋ' ಎಂಬರ್ಥದಲ್ಲಿ ಕಾರ್ಯಕ್ರಮ ಮೊದಲಿಗೆ ಪ್ರಸಾರವಾಯಿತು.

ಈ- ಟಿವಿಯಾಗಿದ್ದ ಕಲರ್ಸ್ ಕನ್ನಡ ವಾಹಿನಿ 'ಬಿಗ್ ಬಾಸ್ ಕನ್ನಡ' ಕಾರ್ಯಕ್ರಮವನ್ನು ಆರಂಭಿಸಿತ್ತು. 'ಬಿಗ್ ಬಾಸ್' ಕಾರ್ಯಕ್ರಮದ ಹಿನ್ನೆಲೆ, ಜನಪ್ರಿಯತೆಗಳ ಆಚೆಗೂ ಗಮನ ಸೆಳೆಯುವುದು ಇದರ ಹಿಂದಿರುವ ತಂತ್ರಜ್ಞಾನದ ಬಳಕೆ. ಒಂದು ಮನೆಯನ್ನು ಆವರಿಸಿಕೊಂಡಿರುವ ಸುಮಾರು 60ಕ್ಕೂ ಹೆಚ್ಚು ಕ್ಯಾಮೆರಾಗಳು, ಅವುಗಳನ್ನು 24/7 ಕಾಯಲು ಅಳವಡಿಸಿಕೊಂಡಿರುವ ಶೈಲಿ, ಕೊನೆಗೆ, ದಿನಕ್ಕೊಂದು ಸ್ಟೋರಿಯ ರೂಪದಲ್ಲಿ ಒಂದು ಗಂಟೆಗೆ ನಡೆಯುವ ಎಡಿಟಿಂಗ್ ಇದು ಕಾರ್ಯಕ್ರಮದ ಪ್ರಮುಖ ಹೈಲೈಟ್‌.

ಇದನ್ನೂ ಓದಿ: Kangana Ranaut: ಇದೊಂದೇ ಕಾರಣಕ್ಕೆ ಬಾಲಿವುಡ್‌ನಿಂದ ದೂರ ಇರುವೆ; ಕಂಗನಾ

ಸದ್ಯಕ್ಕೆ ಸಣ್ಣ ಪ್ರೋಮೋ ಮಾತ್ರ ಔಟ್‌ ಆಗಿದೆ. ಯಾವಾಗಿನಿಂದ ಪ್ರಸಾರ, ಹೀಗೆ ಯಾವುದೇ ಮಾಹಿತಿ ವಾಹಿನಿ ಹಂಚಿಕೊಂಡಿಲ್ಲ. ಹೊಸ ರೂಪ, ಹೊಸ ಸೀಸನ್, ಹೊಸ ಆಟ ಅಂತ ಕಮೆಂಟ್‌ ಮಾಡ್ತಿದ್ದಾರೆ ನೆಟ್ಟಿಗರು.