ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ಈ ವಾರದ ಕ್ಯಾಪ್ಟನ್‌ ಜಗ್ಗ ಮಮ್ಮಿ!‌ ಉತ್ತಮ ಪ್ರಶಾಂತ್‌, ಕಳಪೆ ಯಾರು?

Bigg Boss Kannada 13: ಆರಂಭದಲ್ಲಿ ಈ ಟಾಸ್ಕ್​​ನಲ್ಲಿ ತಾಂಡವ್ ಗೆಲ್ಲುತ್ತಾರೆ ಎಂದೇ ನಿರೀಕ್ಷಿಸಲಾಗಿತ್ತು. . ಇಡೀ ವಾರ ಅದ್ಭುತವಾಗಿ ಪ್ರದರ್ಶನ ನೀಡಿದ, ಎಲ್ಲರನ್ನೂ ನಗಿಸಿದ ಪ್ರಶಾಂತ್ ಅವರಿಗೆ ಈ ವಾರ ಉತ್ತಮ ನೀಡಲಾಯ್ತು. ಶಾಸ್ತ್ರಿಗೆ ಈ ವಾರ ಹೆಚ್ಚಿನ ಸಂಖ್ಯೆಯಲ್ಲಿ ಓಟುಗಳು ಬಿದ್ದ ಕಾರಣ ಶಾಸ್ತ್ರಿ ಮತ್ತೊಮ್ಮೆ ಕಳಪೆ ಆದರು.

ಈ ವಾರದ ಕ್ಯಾಪ್ಟನ್‌ ಜಗ್ಗ ಮಮ್ಮಿ!‌ ಉತ್ತಮ ಪ್ರಶಾಂತ್‌, ಕಳಪೆ ಯಾರು?

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Oct 31, 2026 10:01 AM

ವಾರದ ಟಾಸ್ಕ್‌ ಗೆದ್ದ ಯಶಸ್‌ ಕೃಷ್ಣ, ಜಗದೀಶ್‌, ಗಾನವಿ, ಕುಮಾರಿ ಹಾಗೂ ಸೋನಿಕಾ ‘ಬಿಗ್‌ ಬಾಸ್’ ಕೊಟ್ಟ ಕ್ಯಾಪ್ಟನ್ಸಿ ಟಾಸ್ಕ್‌ (capataincy task) ಆಡುತ್ತಾರೆ. ಈ ಟಾಸ್ಕ್‌ಲ್ಲಿ ಪ್ರತಿ ಸುತ್ತಿನಲ್ಲಿ ಜಗದೀಶ್‌ ಅವರು ಟಾಸ್ಕ್‌ ಗೆಲ್ಲುತ್ತಾರೆ. ಅನಾರೋಗ್ಯದ ಕಾರಣ ಕುಮಾರಿ ಬಹಳ ಸುಸ್ತಾಗಿ ಕುಸಿದು ಬಿಳುತ್ತಾರೆ. ವೈದ್ಯರ ಸಲಹೆ ಮೇರೆಗೆ ಕುಮಾರಿ ಅವರು ಆಟದಿಂದ ಹೊರಗಡೆ ಉಳಿಯುತ್ತಾರೆ. ತಾಂಡವ್‌ ರಾಮ್‌ ಅವರ (thandav Ram) ಬದಲಿಗೆ ಆಡುತ್ತಾರೆ. ಇದಾದ ಬಳಿಕ ಜಗದೀಶ್‌ ಬಿಗ್‌ ಬಾಸ್‌ ಕ್ಯಾಪ್ಟನ್‌ ಆಗಿ ಆಯ್ಕೆ ಆಗಿದ್ದಾರೆ.ಚೌಕಾಕಾರದ ಆಕೃತಿಯನ್ನು ರಚಿಸಿ ಅದರ ನಡುವಿನಿಂದ ಚೆಂಡನ್ನು ನಿಗದಿತ ಗುರಿಗೆ ಎಸೆಯುವ ಟಾಸ್ಕ್ ಅನ್ನು ನೀಡಲಾಗಿತ್ತು.

ಆರಂಭದಲ್ಲಿ ಈ ಟಾಸ್ಕ್​​ನಲ್ಲಿ ತಾಂಡವ್ ಗೆಲ್ಲುತ್ತಾರೆ ಎಂದೇ ನಿರೀಕ್ಷಿಸಲಾಗಿತ್ತು. . ಇಡೀ ವಾರ ಅದ್ಭುತವಾಗಿ ಪ್ರದರ್ಶನ ನೀಡಿದ, ಎಲ್ಲರನ್ನೂ ನಗಿಸಿದ ಪ್ರಶಾಂತ್ ಅವರಿಗೆ ಈ ವಾರ ಉತ್ತಮ ನೀಡಲಾಯ್ತು. ಶಾಸ್ತ್ರಿಗೆ ಈ ವಾರ ಹೆಚ್ಚಿನ ಸಂಖ್ಯೆಯಲ್ಲಿ ಓಟುಗಳು ಬಿದ್ದ ಕಾರಣ ಶಾಸ್ತ್ರಿ ಮತ್ತೊಮ್ಮೆ ಕಳಪೆ ಆದರು.

ಇದನ್ನೂ ಓದಿ: Bigg Boss Kannada 13: ಈ ವಾರ ಇವರಿಗೆ ಕಿಚ್ಚನ ಚಪ್ಪಾಳೆ ಆದ್ರೆ, ಈ ಸೀಸನ್‌ ವಿನ್ನರ್‌ ಯಾರು? ವೀಕ್ಷಕರು ಹೇಳೋದೇನು?

ಇದನ್ನೂ ಓದಿ: Bigg Boss Kannada 12: Bigg Boss 12 Finale: ಕುಚಿಕು ದೋಸ್ತಿಗಳೇ ವಿನ್ನರ್‌, ರನ್ನರ್‌! ಗೆದ್ದ ಗಿಲ್ಲಿ ಪಕ್ಕಾ ನಿಂತ ಪಟಾಕಿ ರಕ್ಷಿತಾ

ಈ ವಾರವೆಲ್ಲ ಬಿಗ್​​ಬಾಸ್ ಮನೆಯಲ್ಲಿ ಸೌಂದರ್ಯಾ ಶೆಟ್ಟಿ ಸ್ವಯಂವರ ನಡೆಯಿತು. ಈ ಟಾಸ್ಕ್​​ನಲ್ಲಿ ತಾಂಡವ್ ಅವರು ಸೌಂದರ್ಯಾ ತಂದೆಯ ಪಾತ್ರವಹಿಸಿದ್ದರು. ಅವರಿಗೆ ಜೋಡಿಯಾಗಿ ಪ್ರಶಾಂತ್ ಅವರಿಗೆ ಮಹಿಳೆಯ ವೇಷ ತೊಡಿಸಲಾಗಿತ್ತು.

ಈ ಬಾರಿ ʻಬಿಗ್‌ ಬಾಸ್‌ʼ ಕಪ್‌ ಗೆಲ್ಲೋದು ತಾಂಡವ್‌ ರಾಮ್‌ ಪಕ್ಕಾ ಎನ್ನುತ್ತಿದ್ದಾರೆ ವೀಕ್ಷಕರು. ಅಷ್ಟೇ ಅಲ್ಲ ಪ್ರಶಾಂತ್‌ ಕೂಡ (Prashanth) ಈ ವಾರ ಅವರು ಭರಪೂರ ಮನರಂಜನೆ ನೀಡಿದ್ದು, ಕಿಚ್ಚನ ಚಪ್ಪಾಳೆಗೆ (kichchana chappale) ಅವರು ಅರ್ಹರು ಎನ್ನುವ ಮಾತು ಕೇಳಿ ಬಂದಿದೆ.