Bigg Boss Kannada 13: ನಿಯಮ ಮುರಿದ ಯಶಸ್; ಚಪ್ಪಾಳೆ ಗಿಟ್ಟಿಸಿಕೊಂಡ ಆಸಿಯಾ ಇದಕ್ಕೆ ಸಾಥ್!
Bigg Boss Kannada 13: ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ನಿಯಮ ಉಲ್ಲಂಘನೆ ಮಾಡುತ್ತಲೇ ಇದ್ದಾರೆ. ವಿಕೆಂಡ್‌ನಲ್ಲಿ ಕಿಚ್ಚ ಸುದೀಪ್ ಅವರು ವಾರ್ನಿಂಗ್ ಕೊಟ್ಟರೂ ಸಹ ಸ್ಪರ್ಧಿಗಳು ಈ ಬಗ್ಗೆ ಅಲರ್ಟ್ ಆಗಿಲ್ಲ. ಕಿಚ್ಚ ಸುದೀಪ್ ನೀಡಿದ ಖಡಕ್ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಸ್ಪರ್ಧಿ ಯಶಸ್ ಮತ್ತೆ ದೊಡ್ಡ ತಪ್ಪು ಮಾಡಿದ್ದಾರೆ. ಸುದೀಪ್ ಅವರ ಬುದ್ಧಿಮಾತಿಗೆ ಬೆಲೆ ನೀಡದೆ ಯಶಸ್ ತೋರಿದ ಈ ಉದ್ಧಟತನಕ್ಕೆ ವೀಕ್ಷಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅದರಲ್ಲೂ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡ ಆಸಿಯಾ ಅವರು ಯಶಸ್ ಅವರ ಬೆಂಬಲಕ್ಕೆ ನಿಂತಿದ್ದು ಭಾರಿ ಚರ್ಚೆ ಆಗುತ್ತಿದೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಮನೆಯಲ್ಲಿ (Bigg Boss Kannada 13) ಸ್ಪರ್ಧಿಗಳು ನಿಯಮ ಉಲ್ಲಂಘನೆ ಮಾಡುತ್ತಲೇ ಇದ್ದಾರೆ. ವಿಕೆಂಡ್‌ನಲ್ಲಿ ಕಿಚ್ಚ ಸುದೀಪ್ (Sudeep) ಅವರು ವಾರ್ನಿಂಗ್ ಕೊಟ್ಟರೂ ಸಹ ಸ್ಪರ್ಧಿಗಳು ಈ ಬಗ್ಗೆ ಅಲರ್ಟ್ ಆಗಿಲ್ಲ. ಕಿಚ್ಚ ಸುದೀಪ್ ನೀಡಿದ ಖಡಕ್ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಸ್ಪರ್ಧಿ ಯಶಸ್ ಮತ್ತೆ ದೊಡ್ಡ ತಪ್ಪು ಮಾಡಿದ್ದಾರೆ. ಸುದೀಪ್ ಅವರ ಬುದ್ಧಿಮಾತಿಗೆ ಬೆಲೆ ನೀಡದೆ ಯಶಸ್ (Yashas) ತೋರಿದ ಈ ಉದ್ಧಟತನಕ್ಕೆ ವೀಕ್ಷಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅದರಲ್ಲೂ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡ ಆಸಿಯಾ ಅವರು ಯಶಸ್ ಅವರ ಬೆಂಬಲಕ್ಕೆ ನಿಂತಿದ್ದು ಭಾರಿ ಚರ್ಚೆ ಆಗುತ್ತಿದೆ.
ನಿಯಮ ಮೀರಿದ ಯಶಸ್
ಹೌದು ಕಳೆದ ವಾರ ಆಸಿಯಾ ಅವರ ಆಟ, ವಾರ ಪೂರ್ತಿ ಉತ್ತಮವಾಗಿ ಆಡಿದ ರೀತಿಗೆ ಕಿಚ್ಚನ ಚಪ್ಪಾಳೆಯನ್ನು ಪಡೆದಿದ್ದರು, ಆದರೆ ಕೊಟ್ಟ ಮರುದೀನವೇ ವಿವಾದಕ್ಕೆ ಸಿಲುಕಿದ್ದಾರೆ.
ಇದನ್ನೂ ಓದಿ: Bigg Boss Kannada 13: ಅಸಹ್ಯ ನೀನು, ತಂದು ಹಾಕಿ ತಮಾಷೆ ನೋಡೋ ವ್ಯಕ್ತಿತ್ವ ಎಂದು ಕಿರಣ್ ಮೇಲೆ ಗಾನವಿ ಗರಂ
ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಗಾನವಿ, ಕಿರಣ್ ಶಾಸ್ತ್ರಿ ಹಾಗೂ ಯಶಸ್ ಅವರನ್ನು ಹೈಜಾಕ್ ಮಾಡಿದರು. ಮನೆಯಲ್ಲಿ ಇರಲು ಅರ್ಹರಲ್ಲದವರು ಎಂದು ಹೊರಗಿಟ್ಟರು. ಈ ನಿಯಮದಲ್ಲಿ ಮನೆಯಿಂದ ಹೊರ ಇದ್ದವರು ಮನೆಯ ಯಾವುದೇ ಸೌಕರ್ಯ ಬಳಸುವಂತಿರಲಿಲ್ಲ.
ವಾಶ್ ರೂಂ ಬಳಕೆಗೆ ಮನೆಗೆ ಒಳಗೆ ಬರಬಹುದು ಮನೆಯಲ್ಲಿರುವ ಯಾವುದೇ ವಸ್ತುವನ್ನು ಇವರು ಬಳಕೆ ಮಾಡುವಂತೆ ಇಲ್ಲ. ಈ ನಿಯಮಗಳನ್ನು ಸೌಂದರ್ಯ ಪಾಲನೆ ಮಾಡಿಕೊಳ್ಳುವಂತೆ ನೋಡಿಕೊಳ್ಳಲು ತಿಳಿಸಲಾಗಿತ್ತು. ಆದರೆ, ಯಶಸ್ ಅವರು ನಿಯಮ ಮೀರಿದ್ದರು.
ಅಷ್ಟೇ ಅಲ್ಲ ಯಶಶ್ ಅವರ ಜೊತೆಗೆ ಮಂಜು ಸೇರಿದಂತೆ ಅನೇಕರು ಅವರ ಜೊತೆಗೆ ಸೋಫಾ ಮೇಲೆ ಕುಳಿತು ಮಾತನಾಡಿದ್ದಾರೆ. ಇದು ಬಿಗ್ ಬಾಸ್ ಗಮನಕ್ಕೆ ಬಂದ ಕಾರಣ ಅರ್ಧದಷ್ಟು ಮೊಟ್ಟೆಯನ್ನು ವಾಪಸ್ ಕೊಡಬೇಕು ಎಂದು ಆದೇಶಿಸಿದರು.
Elru life Alli Asiya thara obru friend idre avr life sikkapatte chenag iratte every moment kooda
— 𝚁𝚊𝚑𝚞𝚕 (@savagesoul_83) September 28, 2026
How he cares for Yashas is really great he is nobody to her just a co contestant for 3 months but she is really a Mother natured Girl ❤️#asiyafirdose #bbk13 pic.twitter.com/cyRVKr9xXS
ಯಶಸ್ ಅವರು ಅಷ್ಟೂ ಮೊಟ್ಟೆ ನೀಡಬೇಕು ಎಂಬುದು ಮನೆಯವರ ವಾದ ಆಗಿತ್ತು. ಕೊನೆಗೆ ಅವರು ಇದಕ್ಕೆ ಒಪ್ಪಿದರು. ಆದರೆ ಆಸಿಯಾ ಇದ್ದವರು ನಿಮ್ಮ ಎಲ್ಲಾ ಮೊಟ್ಟೆಯನ್ನು ಕೊಟ್ಟಿದ್ದೇನೆ. ಕಾಮನ್ ಆಗಿ ನಾಲ್ಕು ಮೊಟ್ಟೆ ಉಳಿದಿದೆ. ಅದನ್ನು ನಾನು ನಿಮಗೆ ನೀಡುತ್ತೇನೆ ಎಂದರು.
ಯಶಸ್ ತಪ್ಪು ಮಾಡಿದಾಗ ತಿಳಿ ಹೇಳೋದು ಬಿಟ್ಟು ಆಸಿಯಾ ಸಪೋರ್ಟ್ ಮಾಡಿರೋದು ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ.
ಇದನ್ನೂ ಓದಿ: Bigg Boss Kannada 13: ಮಗಳೇ ಪ್ರಪಂಚ, ತಾಯಿ ಬಿಟ್ಟರೇ ಯಾರು ಇಲ್ಲ; ಜಗ್ಗಮಮ್ಮಿ ಕಣ್ಣೀರು
ಇನ್ನು ಯಶಸ್ ಕೂಡ ತಮ್ಮ ಉದ್ಧಟತನ ಪ್ರದರ್ಶಿಸಿದ್ದಾರೆ, ತಪ್ಪು ಮಾಡಿದ್ದಲ್ಲದೇ ನಾನು ಮತ್ತಷ್ಟು ನಿಯಮ ಬ್ರೇಕ್ ಮಾಡುತ್ತೇನೆ. ಇನ್ನಷ್ಟು ತೊಂದರೆ ಆಗುವಂತೆ ನಡೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.