Bigg Boss Kannada 13: ಬೆನ್ನಹಿಂದೆ ಚಾಕು ಹಾಕಿದ ಯಶಸ್; ಅತ್ತ ಸೌದರ್ಯ ಅಸಲಿ ಬಣ್ಣ ರಿವೀಲ್!
Bigg Boss Kannada 13: ‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ದಿನದಿಂದ ದಿನಕ್ಕೆ ರೋಚಕ ತಿರುವುಗಳು ಎದುರಾಗುತ್ತಿವೆ. ಮನೆಯ ಸ್ಪರ್ಧಿಗಳ ನಡುವಿನ ಸ್ನೇಹ, ಮನಸ್ತಾಪ, ಆರೋಪ-ಪ್ರತ್ಯಾರೋಪಗಳು ವೀಕ್ಷಕರಲ್ಲಿ ಕುತೂಹಲ ಮೂಡಿಸಿವೆ. ಇದೀಗ ವಾರದ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ಅವರು ಸೌಂದರ್ಯಾ ಶೆಟ್ಟಿ ಮತ್ತು ಯಶಸ್ ನಡುವಿನ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.
ಬಿಗ್ ಬಾಸ್ ಕನ್ನಡ -
‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ (Bigg Boss Kannada 13) ದಿನದಿಂದ ದಿನಕ್ಕೆ ರೋಚಕ ತಿರುವುಗಳು ಎದುರಾಗುತ್ತಿವೆ. ಮನೆಯ ಸ್ಪರ್ಧಿಗಳ ನಡುವಿನ ಸ್ನೇಹ, ಮನಸ್ತಾಪ, ಆರೋಪ-ಪ್ರತ್ಯಾರೋಪಗಳು ವೀಕ್ಷಕರಲ್ಲಿ ಕುತೂಹಲ ಮೂಡಿಸಿವೆ. ಇದೀಗ ವಾರದ ಪಂಚಾಯ್ತಿಯಲ್ಲಿ (Varada Panchayti) ಕಿಚ್ಚ ಸುದೀಪ್ ಅವರು ಸೌಂದರ್ಯಾ ಶೆಟ್ಟಿ (Soundarya shetty) ಮತ್ತು ಯಶಸ್ ನಡುವಿನ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.
ಕಳೆದ ವಾರದ ಕ್ಯಾಪ್ಟನ್ ಆಗಿದ್ದ ಸೌಂದರ್ಯಾ ಶೆಟ್ಟಿ ಅವರ ಆಟದ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿದ್ದವು. ಅದರಲ್ಲೂ ವರನ ಹುಡುಕುವ ಟಾಸ್ಕ್ ವೇಳೆ ಅವರು ಯಶಸ್ಗೆ ಫೇವರ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ವಿಚಾರವನ್ನೇ ವಾರದ ಪಂಚಾಯ್ತಿಯಲ್ಲಿ ಸುದೀಪ್ ಪ್ರಸ್ತಾಪಿಸಿದ್ದಾರೆ.
ಯಶಸ್ಗೆ ಫೇವರ್ ಮಾಡಿದ್ರಾ ಸೌಂದರ್ಯಾ ಶೆಟ್ಟಿ?
ಕಳೆದ ವಾರ ಬಿಗ್ ಬಾಸ್ ಮನೆಯಲ್ಲಿ ವರನ ಹುಡುಕುವ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್ನಲ್ಲಿ ಗಗನ್ ಉತ್ತಮವಾಗಿ ಆಡಿದ್ದಾರೆ ಎಂದು ಸ್ವತಃ ಸೌಂದರ್ಯಾ ಶೆಟ್ಟಿ ಅವರೇ ಹೇಳಿದ್ದರು ಎನ್ನಲಾಗಿದೆ. ಆದರೂ ಅಂತಿಮವಾಗಿ ಗಗನ್ ಸೋಲನುಭವಿಸಿದ್ದರು. ಮತ್ತೊಂದೆಡೆ, ಯಶಸ್ಗೆ ಸೌಂದರ್ಯಾ ಹೆಚ್ಚು ಆದ್ಯತೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಇದನ್ನೂ ಓದಿ: Bigg Boss Kannada 13: ಈ ವಾರ ಇವರಿಗೆ ಕಿಚ್ಚನ ಚಪ್ಪಾಳೆ ಆದ್ರೆ, ಈ ಸೀಸನ್ ವಿನ್ನರ್ ಯಾರು? ವೀಕ್ಷಕರು ಹೇಳೋದೇನು?
ಸೌಂದರ್ಯಾ ಅವರ ಈ ನಿರ್ಧಾರದಿಂದ ಮನೆಯೊಳಗೆ ಅಸಮಾಧಾನ ಸೃಷ್ಟಿಯಾಗಿತ್ತು. ಕ್ಯಾಪ್ಟನ್ ಆಗಿದ್ದವರು ಎಲ್ಲ ಸ್ಪರ್ಧಿಗಳಿಗೂ ಸಮಾನ ಅವಕಾಶ ನೀಡಬೇಕಿತ್ತು ಎಂಬ ಅಭಿಪ್ರಾಯವೂ ವ್ಯಕ್ತವಾಗಿತ್ತು. ಹೀಗಾಗಿ ಅವರ ನಿರ್ಧಾರವು ನಿಜಕ್ಕೂ ಫೇವರಿಸಂ ಆಗಿತ್ತೇ ಎಂಬ ಪ್ರಶ್ನೆ ಎದ್ದಿದೆ.
ಸೌಂದರ್ಯಾಗೆ ಯಶಸ್ ಬೆನ್ನಿಗೆ ಚೂರಿ ಹಾಕಿದ್ರಾ?
ಇನ್ನು ಈ ವಿಚಾರಕ್ಕಿಂತಲೂ ಕುತೂಹಲಕಾರಿ ಸಂಗತಿ ಎಂದರೆ ಯಶಸ್ ಮತ್ತು ಸೌಂದರ್ಯಾ ನಡುವಿನ ಸಂಬಂಧ. ಯಶಸ್ಗೆ ಫೇವರ್ ಮಾಡಿದ್ದ ಸೌಂದರ್ಯಾ ಅವರಿಗೆ ನಂತರ ಯಶಸ್ ಅವರಿಂದಲೇ ಬೆಂಬಲ ಸಿಗಲಿಲ್ಲ ಎಂಬ ವಿಚಾರ ಚರ್ಚೆಗೆ ಬಂದಿದೆ. ಸೌಂದರ್ಯಾ ಅವರ ನಂಬಿಕೆಗೆ ಯಶಸ್ ದ್ರೋಹ ಬಗೆದಿದ್ದಾರೆಯೇ ಎಂಬ ಪ್ರಶ್ನೆಯೂ ಮೂಡಿದೆ.
ಈ ವಿಚಾರವನ್ನು ಕಿಚ್ಚ ಸುದೀಪ್ ಅವರು ವಾರದ ಪಂಚಾಯ್ತಿಯಲ್ಲಿ ವಿಟಿ ಮೂಲಕ ತೋರಿಸಿದ್ದಾರೆ. ಸೌಂದರ್ಯಾ ಅವರು ಯಶಸ್ಗೆ ನೀಡಿದ್ದ ಬೆಂಬಲ ಮತ್ತು ಅದಕ್ಕೆ ಪ್ರತಿಯಾಗಿ ಯಶಸ್ ನಡೆದುಕೊಂಡ ರೀತಿಯನ್ನು ವಿಡಿಯೋ ಮೂಲಕ ಎತ್ತಿ ತೋರಿಸಿದ್ದಾರೆ..
ಎರಡು ನಿಮಿಷ ಬ್ರೇಕ್ ಕೇಳಿ ಎದ್ದು ನಡೆದ ಸೌಂದರ್ಯಾ!
ಸುದೀಪ್ ಅವರು ವಿಟಿ ತೋರಿಸುತ್ತಿದ್ದಂತೆ ಸೌಂದರ್ಯಾ ಶೆಟ್ಟಿ ಬೇಸರಗೊಂಡಿದ್ದಾರೆ. ಈ ವಿಚಾರವನ್ನು ಎದುರಿಸಲು ಸಾಧ್ಯವಾಗದೆ ಎರಡು ನಿಮಿಷ ಬ್ರೇಕ್ ಬೇಕೆಂದು ಹೇಳಿ ಎದ್ದು ನಡೆದಿದ್ದಾರೆ. ಇದರಿಂದ ವಾರದ ಪಂಚಾಯ್ತಿಯಲ್ಲಿನ ವಾತಾವರಣ ಮತ್ತಷ್ಟು ಗಂಭೀರವಾಗಿದೆ.
ಸೌಂದರ್ಯಾ ಅವರ ಈ ಪ್ರತಿಕ್ರಿಯೆ ಇದೀಗ ವೀಕ್ಷಕರ ಗಮನ ಸೆಳೆದಿದೆ. ಯಶಸ್ ವಿಚಾರದಲ್ಲಿ ಅವರು ಇಷ್ಟೊಂದು ಬೇಸರಗೊಳ್ಳಲು ಕಾರಣವೇನು? ಸುದೀಪ್ ತೋರಿಸಿದ ವಿಡಿಯೋದಲ್ಲಿ ಅಂಥದ್ದೇನಿತ್ತು? ಎಂಬ ಕುತೂಹಲ ಮೂಡಿದೆ.
ಸುದೀಪ್ ಕ್ಲಾಸ್ಗೆ ಸೌಂದರ್ಯಾ ಉತ್ತರವೇನು?
ಕಿಚ್ಚ ಸುದೀಪ್ ಅವರು ವಾರದ ಪಂಚಾಯ್ತಿಯಲ್ಲಿ ಸ್ಪರ್ಧಿಗಳ ತಪ್ಪುಗಳನ್ನು ನೇರವಾಗಿ ಪ್ರಶ್ನಿಸುವ ಮೂಲಕ ಆಟದ ನೈಜ ಚಿತ್ರಣವನ್ನು ಮುಂದಿಡುತ್ತಾರೆ. ಈ ಬಾರಿಯೂ ಸೌಂದರ್ಯಾ ಅವರ ಫೇವರಿಸಂ ಆರೋಪ ಮತ್ತು ಯಶಸ್ ಅವರ ನಡೆ ಬಗ್ಗೆ ಅವರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: Bigg Boss Kannada 13: ಈ ವಾರದ ಕ್ಯಾಪ್ಟನ್ ಜಗ್ಗ ಮಮ್ಮಿ! ಉತ್ತಮ ಪ್ರಶಾಂತ್, ಕಳಪೆ ಯಾರು?
ಒಟ್ಟಿನಲ್ಲಿ, ಬಿಗ್ ಬಾಸ್ ಕನ್ನಡ ಸೀಸನ್ 13ರ ಈ ವಾರದ ಪಂಚಾಯ್ತಿ ಸೌಂದರ್ಯಾ ಶೆಟ್ಟಿ ಮತ್ತು ಯಶಸ್ ನಡುವಿನ ವಿಚಾರದಿಂದಾಗಿ ಸಾಕಷ್ಟು ಗಮನ ಸೆಳೆಯುತ್ತಿದೆ. ಸ್ನೇಹಕ್ಕೆ ಬೆಲೆ ಕೊಟ್ಟ ಸೌಂದರ್ಯಾಗೆ ಯಶಸ್ ನಿಜವಾಗಿಯೂ ಕೈಕೊಟ್ಟರಾ? ಎಂಬುದಕ್ಕೆ ಇಂದಿನ ಸಂಚಿಕೆಯಲ್ಲಿ ಉತ್ತರ ಸಿಗಬೇಕಿದೆ.