Actress Ashwini : ಆ ಮನುಷ್ಯನಿಗೆ ನಾನು ಒಬ್ಬಳೆ ಆಗಿರಲಿಲ್ಲ! ಲವ್, ಬ್ರೇಕಪ್ ಬಗ್ಗೆ ರಿವೀಲ್ ಮಾಡಿದ ಬಿಗ್ ಬಾಸ್ ಖ್ಯಾತಿಯ ಅಶ್ವಿನಿ
Actress Ashwini :ಕನ್ನಡದ ಬಲು ಜನಪ್ರಿಯ ಧಾರಾವಾಹಿ ‘ಮುದ್ದುಲಕ್ಷ್ಮಿʼಯ ನಟಿ ಅಶ್ವಿನಿ . ಸಣ್ಣ ವಯಸ್ಸಿಗೆ ಬೆಂಗಳೂರಿಗೆ ಬಂದ ಅಶ್ವಿನಿ, ನಿರೂಪಕಿ ಆಗಿ ಸೇರಿಕೊಂಡರಂತೆ. ಬಳಿಕ ಬಿಗ್ ಬಾಸ್ ಮೂಲಕ ಮತ್ತಷ್ಟು ಫೇಮಸ್ ಆದರು. ನಟಿಯಾಗಿ ಗುರುತಿಸಿಕೊಳ್ಳಲು ಸತತ ಪ್ರಯತ್ನ ಮಾಡಿದ್ದಾರೆ. ಬಹಳ ಸಣ್ಣ ವಯಸ್ಸಿಗೆ ಮನೆ ಬಿಟ್ಟು ಬಂದು ಬೆಂಗಳೂರಿಗೆ ಬಂದವರು ಅಶ್ವಿನಿ. ಅವರೇ ಹೇಳಿಕೊಂಡಿರುವಂತೆ, ಎಲ್ಲರಿಗೂ ಪೋಷಕರೆಂದರೆ ಪ್ರೀತಿ, ಭಯವಾದರೆ ಪೋಷಕರ ಬಳಿ ಹೋಗುತ್ತಾರೆ. ಆದರೆ ಪೋಷಕರಿಂದಲೇ ಭಯವಾದರೆ? ಹಾಗಾಗಿ ನಾನು ಪೋಷಕರನ್ನು ಬಿಟ್ಟು ಬಂದಿದ್ದೆʼ ಎಂದು ಸಾಕಷ್ಟು ಸಲ ಹೇಳಿಕೊಂಡಿದ್ದರು. ಇದೀಗ ನಟಿ ತಮ್ಮ ಲವ್ ಸ್ಟೋರಿ ಹಾಗೇ ಬಾಲ್ಯದ ಕಹಿ ನೆನಪುಗಳ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ನಟಿ ಅಶ್ವಿನಿ -
ಕನ್ನಡದ ಬಲು ಜನಪ್ರಿಯ ಧಾರಾವಾಹಿ ‘ಮುದ್ದುಲಕ್ಷ್ಮಿʼಯ ನಟಿ ಅಶ್ವಿನಿ (Ashvini Ash). ಸಣ್ಣ ವಯಸ್ಸಿಗೆ ಬೆಂಗಳೂರಿಗೆ ಬಂದ ಅಶ್ವಿನಿ, ನಿರೂಪಕಿ ಆಗಿ ಸೇರಿಕೊಂಡರಂತೆ. ಬಳಿಕ ಬಿಗ್ ಬಾಸ್ (Bigg Boss Kannada) ಮೂಲಕ ಮತ್ತಷ್ಟು ಫೇಮಸ್ ಆದರು. ನಟಿಯಾಗಿ ಗುರುತಿಸಿಕೊಳ್ಳಲು ಸತತ ಪ್ರಯತ್ನ ಮಾಡಿದ್ದಾರೆ. ಬಹಳ ಸಣ್ಣ ವಯಸ್ಸಿಗೆ ಮನೆ ಬಿಟ್ಟು ಬಂದು ಬೆಂಗಳೂರಿಗೆ ಬಂದವರು ಅಶ್ವಿನಿ. ಅವರೇ ಹೇಳಿಕೊಂಡಿರುವಂತೆ, ಎಲ್ಲರಿಗೂ ಪೋಷಕರೆಂದರೆ ಪ್ರೀತಿ, ಭಯವಾದರೆ ಪೋಷಕರ ಬಳಿ ಹೋಗುತ್ತಾರೆ. ಆದರೆ ಪೋಷಕರಿಂದಲೇ ಭಯವಾದರೆ? ಹಾಗಾಗಿ ನಾನು ಪೋಷಕರನ್ನು ಬಿಟ್ಟು ಬಂದಿದ್ದೆʼ ಎಂದು ಸಾಕಷ್ಟು ಸಲ ಹೇಳಿಕೊಂಡಿದ್ದರು. ಇದೀಗ ನಟಿ ತಮ್ಮ ಲವ್ ಸ್ಟೋರಿ (Love Story) ಹಾಗೇ ಬಾಲ್ಯದ ಕಹಿ ನೆನಪುಗಳ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Nayanthara: ಪತ್ನಿಯಾಗಿ ವೇದಿಕೆ ಏರಿದ ನಯನತಾರಾ! ವಿಘ್ನೇಶ್ ಶಿವನ್ ಭಾವುಕ
ಕೆಟ್ಟ ನೆನಪುಗಳೆ ಬರುತ್ತವೆ
ನಟಿ ಮಾತನಾಡಿ, ʻಹುಟ್ಟಿದ್ದು ಮೈಸೂರಿನಲ್ಲಿ. ಬೆಳೆದಿದ್ದು ಬೆಂಗಳೂರು. ಅಪ್ಪ ಅಮ್ಮ, ನಾನು ಅಷ್ಟೇ ಇದ್ವಿ. ಪರಿಸ್ಥಿತಿ ತುಂಬಾ ಕಷ್ಟ ಇತ್ತು. ನನ್ನ ಬಾಲ್ಯ ಚೆನ್ನಾಗಿ ಇರಲಿಲ್ಲ. ಕೆಟ್ಟ ನೆನಪುಗಳೆ ಬರುತ್ತವೆ. ಪಾಲಕರು ತೆಗೆದುಕೊಳ್ಳುವ ನಿರ್ಧಾರಗಳು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ನನಗೆ ನನ್ನ ಬಾಲ್ಯ ನೆಗೆಟಿವ್ ಆಗಿಯೇ ಇತ್ತು. ಏನಾದರೂ ಮೆಮೋರೀಸ್ ಇದ್ರೆ ಹೇಳಿ ಅಂದರೆ ಯಾವುದೂ ಇಲ್ಲ. 2014ರಲ್ಲಿ ಮನೆಯಲ್ಲಿ ಸ್ವಲ್ಪ ಉಸಿರುಗಟ್ಟಿದ ವಾತಾವರಣ ಆಗಿತ್ತು. ಮೊದಲ ಮಗುವಿಗೆ ಪ್ರೀತಿ ಜಾಸ್ತಿ ಇತ್ತು.
ನಾವಿಬ್ಬರೂ ಹೆಣ್ಣು ಮಕ್ಕಳು. ಹಣಕಾಸಿನ ಸಮಸ್ಯೆಗಳು ಇತ್ತು. ಮತ್ತೆ ಕೆಲವು ಮನೆಯಲ್ಲಿ ಪರಿಸ್ಥಿತಿಗಳು ನನಗೆ ನೋವುಂಟು ಮಾಡುತ್ತಿತ್ತು. ನಾನು ಸತ್ತೋಗ್ತೀನಿ ಅಂತ ಚಿಕ್ಕ ವಯಸ್ಸಿನಲ್ಲೇ ತುಂಬಾ ಸಲ ಹೇಳ್ತಾ ಇದ್ದೆ. ಅದು ಕಾರಣ ಕೆಟ್ಟ ಪರಿಸ್ಥಿತಿ. ಹೆಣ್ಣು ಮಗುನ ಸರಿಯಾಗಿ ಟ್ರೀಟ್ ಮಾಡಿಲ್ಲ ಅಂದರೆ, ದಾರಿ ತಪ್ಪುತ್ತಾಳೆ, ಇಲ್ಲ ಅಂದರೆ ದಾರಿ ಹುಡುಕಿಕೊಂಡು ಹೋಗ್ತಾಳೆʼ ಎಂದಿದ್ದಾರೆ.
ಫ್ಲರ್ಟ್ ಮಾಡುತ್ತಿದ್ದಂತಹ ಹುಡುಗಿ ನನ್ನ ಕಸಿನ್ ಆಗಿದ್ದರು
ಇನ್ನು ಲವ್ ವಿಚಾರ ಬರೋದಾರೆ, ʻಒಬ್ಬ ವ್ಯಕ್ತಿ ಮೇಲೆ ಪ್ರೀತಿ ಆಗಿತ್ತು. ಕಮ್‌ಫರ್ಟ್ ಜೋನ್ ಆಯ್ತು. ನನ್ನ ಜೀವನದಲ್ಲಿ ಗೌರವ ಹುಡುಕುತ್ತಿದ್ದೆ, ಇನ್ನು ಆ ಮನುಷ್ಯನಿಗೆ ನಾನು ಒಬ್ಬಳೆ ಆಗಿರಲಿಲ್ಲ. ಆಮೇಲೆ ಸತ್ಯಾಂಶ ಗೊತ್ತಾಯ್ತು. ಇನ್ನು ಪ್ರೀತಿಯನ್ನು ನಾನು ಎಕ್ಸ್‌ಪ್ರೆಸ್ ಮಾಡೋದು ತುಂಬಾ ಕಷ್ಟ.
ನಾಲ್ಕು ವರ್ಷ ನನಗೆ ಅವರೇ ಪ್ರಪಂಚ ಆಗಿದ್ದರು. ಅವರನ್ನು ಮೀಟ್ ಮಾಡುತ್ತಿದ್ದೆ, ಮೊದಲು ಸ್ನೇಹಿರಾದವು. ನಾನು ನನ್ನ ವಿಚಾರಗಳನ್ನು ಶೇರ್ ಮಾಡುತ್ತಿದೆ, ಆಗ ಖುಷಿ ಆಗಿದ್ದೆ. ನಾನು ಅಟ್ಯಾಚ್ ತುಂಬಾ ಆಗಿದ್ದೆ. ಬರ್ತಾ ಬರ್ತಾ ಅವರು ನನ್ನ ಮಾತಾಡಿಸೋದು ಬಿಟ್ಟರು. ಮನೇಲಿ ತೋರಿಸೋರನ್ನೇ ಮದುವೆ ಆಗ್ತೀನಿ ಅಂದ್ರು.
ಇದನ್ನೂ ಓದಿ: Amruthadhaare Serial: ಆನಂದ್ ಕಣ್ಗಾವಲಲ್ಲಿ ಸುನಿ; ಜೈದೇವ್ ಕಥೆ ಏನು?
ನಂತರ ನನಗೆ ಆರ್ಥ ಆಯ್ತು. ಅವರ ಜೀವನದಲ್ಲಿ ನಾನು ಒಬ್ಬಳೆ ಇಲ್ಲ ಅಂತ. ಅವರು ಮೆಸೆಜ್ ಮಾಡುತ್ತಿದ್ದಂತಹ ಫ್ಲರ್ಟ್ ಮಾಡುತ್ತಿದ್ದಂತಹ ಹುಡುಗಿ ನನ್ನ ಕಸಿನ್ ಆಗಿದ್ದರು. ಕೊನೆಗೆ ಆ ವಿಚಾರ ಗೊತ್ತಾಯ್ತು ನನಗೆ. ಆ ವ್ಯಕ್ತಿ ಇವತ್ತಿಗೂ ಕಾಂಟೆಕ್ಟ್ ಇದ್ದಾರೆ. ಮದುವೆ ಆಗಿದೆ. ಮಗು ಆಗಿದೆ ಚೆನ್ನಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ.