ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಬಿಗ್ ಬಾಸ್ʼ ಮನೆಯಲ್ಲಿ 4ನೇ ವಾರದ ನಾಮಿನೇಷನ್ ಕದನ; 6 ಸ್ಪರ್ಧಿಗಳ ತಲೆಮೇಲೆ ತೂಗುಗತ್ತಿ, ಸೆಲೆಬ್ರಿಟಿಗಳಿಗೇ ಎಲಿಮಿನೇಷನ್ ಭೀತಿ!

Bigg Boss Kannada 13: ಬಿಗ್‌ ಬಾಸ್‌ ಮನೆಯಲ್ಲಿ ನಾಲ್ಕನೇ ವಾರದ ನಾಮಿನೇಷನ್ ಪ್ರಕ್ರಿಯೆ ಮುಕ್ತಾಯವಾಗಿದ್ದು, ಆರು ಸ್ಪರ್ಧಿಗಳು ಅಪಾಯದ ಅಂಚಿನಲ್ಲಿದ್ದಾರೆ. ಕಿರಣ್, ಧನುಷ್, ಲಿಖಿತ್, ಮಂಜ ಹಾಗೂ ಸೆಲೆಬ್ರಿಟಿಗಳಾದ ಯಶಸ್, ಸಂಗೀತಾ ನಾಮಿನೇಟ್ ಆಗಿದ್ದಾರೆ. ಕಂಟೆಂಟ್ ನೀಡುತ್ತಿರುವ ಸಾಮಾನ್ಯ ಸ್ಪರ್ಧಿಗಳು ಸೇಫ್‌ ಆಗುವ ಸಾಧ್ಯತೆಯಿದ್ದು, ಸೆಲೆಬ್ರಿಟಿ ಸ್ಪರ್ಧಿಗಳಿಗೆ ಗೇಟ್‌ಪಾಸ್ ಸಿಗುವ ಭೀತಿ ಹೆಚ್ಚಾಗಿದೆ.

BBK 13: ಆರು ಸ್ಪರ್ಧಿಗಳ ತಲೆಮೇಲೆ ನೇತಾಡುತ್ತಿದೆ ಎಲಿಮಿನೇಷನ್ ತೂಗುಗತ್ತಿ!

-

Avinash GR
Avinash GR Sep 30, 2026 12:24 PM

‘ಬಿಗ್ ಬಾಸ್ ಕನ್ನಡ ಸೀಸನ್ 13’ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದ್ದು, ಸ್ಪರ್ಧಿಗಳ ನಡುವಿನ ಪೈಪೋಟಿ ಮತ್ತಷ್ಟು ರಂಗೇರಿದೆ. ಕಳೆದ ವಾರವಷ್ಟೇ ಡಬಲ್ ಎಲಿಮಿನೇಷನ್‌ನಲ್ಲಿ ಅವಿನಾಶ್ ಷಟಮರ್ಷಣ ಮತ್ತು ವೈಷ್ಣವಿ ಕೌಂಡಿನ್ಯ ದೊಡ್ಮನೆಯಿಂದ ಹೊರಬಿದ್ದಿದ್ದರು.

ಇದೀಗ ನಾಲ್ಕನೇ ವಾರದ ನಾಮಿನೇಷನ್ ಪ್ರಕ್ರಿಯೆ ಮುಕ್ತಾಯವಾಗಿದ್ದು, ಮನೆಯಲ್ಲಿ ಯಾರು ಉಳಿಯಲಿದ್ದಾರೆ ಹಾಗೂ ಯಾರಿಗೆ ಕಿಚ್ಚ ಸುದೀಪ್ ವಾರಾಂತ್ಯದ ಪಂಚಾಯಿತಿಯಲ್ಲಿ ಗೇಟ್ ಪಾಸ್ ನೀಡಲಿದ್ದಾರೆ ಎಂಬ ಕೌತುಕ ಪ್ರೇಕ್ಷಕರಲ್ಲಿ ತೀವ್ರಗೊಂಡಿದೆ. ಇದೇ ಹೊತ್ತಿನಲ್ಲಿ ದೊಡ್ಮನೆಗೆ ಹೊಸದಾಗಿ ವೈಲ್ಡ್ ಕಾರ್ಡ್ ಸ್ಪರ್ಧಿಗಳ ಪ್ರವೇಶವಾಗಿದ್ದು, ಆಟದ ಗತಿಯೇ ಬದಲಾಗುವ ನಿರೀಕ್ಷೆ ಮೂಡಿಸಿದೆ.

ನಾಲ್ಕೂ ಜನ ಕಾಮನರ್ಸ್‌ ನಾಮಿನೇಟ್

ಈ ಬಾರಿಯ ನಾಮಿನೇಷನ್ ಪಟ್ಟಿಯಲ್ಲಿ ಒಟ್ಟು ಆರು ಮಂದಿ ಸ್ಥಾನ ಪಡೆದಿದ್ದಾರೆ. ಕಾಮನರ್ಸ್ ವಿಭಾಗದಿಂದ ಕಿರಣ್ ಶಾಸ್ತ್ರಿ, ಧನುಷ್, ಲಿಖಿತ್ ಮತ್ತು ಮಂಜ ನಾಮಿನೇಟ್ ಆಗಿದ್ದರೆ, ಸೆಲೆಬ್ರಿಟಿ ವಿಭಾಗದಿಂದ ನಟ ಯಶಸ್ ಕೃಷ್ಣ, ನಟಿ ಸಂಗೀತಾ ಭಟ್ ಡೇಂಜರ್ ಜೋನ್‌ನಲ್ಲಿದ್ದಾರೆ. ಧನುಷ್ ಸ್ವಂತ ಬುದ್ಧಿಯಿಂದ ಆಡದೆ ಇತರರ ಮಾತು ಕೇಳುತ್ತಾರೆಂಬ ಕಾರಣಕ್ಕೆ ನಾಮಿನೇಟ್ ಆದರೆ, ಮಂಜ ಅವರ ಅತಿಯಾದ ಮಾತು ಮತ್ತು ನಡವಳಿಕೆ ಸಹಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಬದಲಾಗುವುದಾಗಿ ಮಂಜ ಹೇಳಿದ್ದರೂ ಮನೆಯವರಿಗೆ ಅವರ ಮೇಲೆ ನಂಬಿಕೆ ಉಳಿದಿಲ್ಲ. ಇನ್ನು ಕಳೆದ ವಾರ ಕ್ಯಾಪ್ಟನ್ ಆಗಿದ್ದ ಸಂಗೀತಾ ಭಟ್ ಪಕ್ಷಪಾತ ಮಾಡಿದ್ದಾರೆ ಎಂಬ ಆರೋಪ ಹೊತ್ತು ನಾಮಿನೇಷನ್ ಅಂಗಳಕ್ಕೆ ಬಂದಿದ್ದಾರೆ. ವೈಲ್ಡ್ ಕಾರ್ಡ್ ಸ್ಪರ್ಧಿಗಳ ನೇರ ಆಯ್ಕೆಯ ಮೂಲಕ ಯಶಸ್ ಹಾಗೂ ಕಿರಣ್ ಶಾಸ್ತ್ರಿ ಕೂಡ ನಾಮಿನೇಟ್‌ ಆಗುವ ಆಂತಕದಲ್ಲಿದ್ದಾರೆ.

Bigg Boss Kannada 13: ಇದೇ ಭಾನುವಾರ ಬಿಗ್ ಬಾಸ್ 13 Grand Take Off!

ಕಿರಣ್‌ ಶಾಸ್ತ್ರಿ ಮೇಲೆ ದೂರುಗಳ ಸರಮಾಲೆ

ವಿಶೇಷವಾಗಿ ಕಿರಣ್ ಶಾಸ್ತ್ರಿ ಅವರ ನಡವಳಿಕೆ ಮನೆಯ ಸದಸ್ಯರಲ್ಲಿ ಭಾರೀ ಕಿರಿಕಿರಿ ಉಂಟುಮಾಡಿದೆ. ಭಾಷೆಯ ಬಳಕೆಯಲ್ಲಿ ಪದೇ ಪದೇ ತಪ್ಪು ಮಾಡುವುದು, ಸಹಸ್ಪರ್ಧಿಗಳೊಂದಿಗೆ ಹೊಂದಿಕೊಳ್ಳದಿರುವುದು, ಮಾತಿನ ಮೇಲೆ ಹಿಡಿತವಿಲ್ಲದೆ ಮಹಿಳಾ ಸ್ಪರ್ಧಿಗಳನ್ನು ಏಕವಚನದಲ್ಲಿ ಸಂಬೋಧಿಸಿರುವುದು ಅವರ ವಿರುದ್ಧ ಎಲ್ಲರೂ ಮುಗಿಬೀಳಲು ಪ್ರಮುಖ ಕಾರಣವಾಗಿದೆ. ಒಟ್ಟಾರೆ ಆಟದ ಶೈಲಿ ಮತ್ತು ಮನೆಯೊಳಗಿನ ಉಪಸ್ಥಿತಿಯನ್ನು ಗಮನಿಸಿದರೆ, ಈ ವಾರ ಕಾಮನರ್ಸ್‌ಗಿಂತ ಸೆಲೆಬ್ರಿಟಿಗಳಾದ ಯಶಸ್ ಹಾಗೂ ಸಂಗೀತಾ ಭಟ್ ಅವರಿಗೇ ಎಲಿಮಿನೇಷನ್ ಭೀತಿ ಹೆಚ್ಚಾಗಿದೆ ಎಂಬ ಲೆಕ್ಕಾಚಾರಗಳು ಕೇಳಿಬರುತ್ತಿವೆ.

ಆ ʻ6 ಮಂದಿʼ ಎದೆಯಲ್ಲಿ ಢವಢವ, ಈ ವಾರ ಎಲಿಮಿನೇಟ್‌ ಆಗೋದ್ಯಾರು ಗೊತ್ತಾ?



ಸೇಫ್‌ ಆಗ್ತಾರಾ ಕಾಮನರ್ಸ್?

ಮಂಜ ಮತ್ತು ಕಿರಣ್ ಶಾಸ್ತ್ರಿ ಸದಾ ಜಗಳ, ಗಲಾಟೆ ಹಾಗೂ ಕಿರುಚಾಟದ ಮೂಲಕವೇ ಇಡೀ ಸಂಚಿಕೆಯ ಬಹುತೇಕ ಸ್ಕ್ರೀನ್ ಸ್ಪೇಸ್ ಆಕ್ರಮಿಸಿಕೊಳ್ಳುತ್ತಿದ್ದಾರೆ. ಧನುಷ್ ತಮ್ಮ ಆಟದ ಮೂಲಕ ಗಮನ ಸೆಳೆದರೆ, ಲಿಖಿತ್ ಕಿತ್ತಾಟ ಹಾಗೂ ಇರಿಟೇಷನ್ ತಂತ್ರಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಹೀಗಾಗಿ ನೆಗೆಟಿವ್ ಅಥವಾ ಪಾಸಿಟಿವ್ ಯಾವುದೇ ಇರಲಿ, ಕಂಟೆಂಟ್ ನೀಡುತ್ತಿರುವ ಈ ನಾಲ್ವರು ಕಾಮನರ್ಸ್‌ಗೆ ಪ್ರೇಕ್ಷಕರ ವೋಟಿಂಗ್ ರಕ್ಷಣೆ ಸಿಗುವ ಸಾಧ್ಯತೆ ದಟ್ಟವಾಗಿದೆ.

ಸೆಲೆಬ್ರಿಟಿಗಳಿಗೆ ಕುತ್ತು ಗ್ಯಾರಂಟಿ

ಆದರೆ‌, ಆರಂಭದಿಂದಲೂ ಸೈಲೆಂಟ್ ಆಗಿದ್ದ ಯಶಸ್ ಈ ವಾರ ನಿಯಮ ಮೀರಿ ನಡೆದುಕೊಂಡಿರುವುದು ಅವರಿಗೆ ಮುಳುವಾಗುವ ಸಾಧ್ಯತೆಯಿದೆ. ಜೊತೆಗೆ ಸಂಗೀತಾ ಭಟ್ ಕೂಡ ಉತ್ತಮ ಪ್ರದರ್ಶನ ನೀಡದಿದ್ದರೆ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಹೀಗಾಗಿ ಈ ವಾರ ಸೆಲೆಬ್ರಿಟಿ ಸ್ಪರ್ಧಿಯೊಬ್ಬರು ಮನೆಯಿಂದ ಹೊರಬೀಳುವ ಸಾಧ್ಯತೆ ಹೆಚ್ಚಿದ್ದು, ಅಂತಿಮ ತೀರ್ಪು ಯಾರ ಪರವಾಗಿರಲಿದೆ ಎಂಬುದು ವಾರಾಂತ್ಯದಲ್ಲಿ ಬಹಿರಂಗವಾಗಲಿದೆ.