Bigg Boss Kannada 13: ಬಿಗ್ ಬಾಸ್ ಪ್ರಸಾರ ಸಮಯದಲ್ಲಿ ಬದಲಾವಣೆ!
Bigg Boss Kannada 13: ‘ಬಿಗ್ ಬಾಸ್ ಕನ್ನಡ’ ಸೀಸನ್ 13ರ (Bigg Boss Kannada 13) ಫಿನಾಲೆಗೆ ದಿನಗಣನೆ ಶುರುವಾಗಿದೆ. ಕಾರ್ಯಕ್ರಮ ಅಂತಿಮ ಹಂತದತ್ತ ಸಾಗುತ್ತಿರುವಾಗಲೇ ವೀಕ್ಷಕರಿಗೆ ವಾಹಿನಿಯಿಂದ ಮತ್ತೊಂದು ಮಹತ್ವದ ಅಪ್ಡೇಟ್ ಸಿಕ್ಕಿದೆ. ಈ ಬಾರಿ ಸ್ಪರ್ಧಿಗಳ ಆಟದಲ್ಲಿ ಬದಲಾವಣೆಯಾಗಿಲ್ಲ, ಬದಲಿಗೆ ಜಿಯೋ ಹಾಟ್ಸ್ಟಾರ್ನಲ್ಲಿ ಬಿಗ್ ಬಾಸ್ ಸಂಚಿಕೆ ಪ್ರಸಾರವಾಗುವ ಸಮಯವನ್ನು ಬದಲಾಯಿಸಲಾಗಿದೆ. ಈ ಕುರಿತು ಸ್ವತಃ ಕಿಚ್ಚ ಸುದೀಪ್ (Kiccha sudeep) ಅವರೇ ಹೊಸ ಪ್ರೋಮೋ ಮೂಲಕ ಮಾಹಿತಿ ನೀಡಿದ್ದಾರೆ.
ಬಿಗ್ ಬಾಸ್ ಕನ್ನಡ -
‘ಬಿಗ್ ಬಾಸ್ ಕನ್ನಡ’ ಸೀಸನ್ 13ರ (Bigg Boss Kannada 13) ಫಿನಾಲೆಗೆ ದಿನಗಣನೆ ಶುರುವಾಗಿದೆ. ಕಾರ್ಯಕ್ರಮ ಅಂತಿಮ ಹಂತದತ್ತ ಸಾಗುತ್ತಿರುವಾಗಲೇ ವೀಕ್ಷಕರಿಗೆ ವಾಹಿನಿಯಿಂದ ಮತ್ತೊಂದು ಮಹತ್ವದ ಅಪ್ಡೇಟ್ ಸಿಕ್ಕಿದೆ. ಈ ಬಾರಿ ಸ್ಪರ್ಧಿಗಳ ಆಟದಲ್ಲಿ ಬದಲಾವಣೆಯಾಗಿಲ್ಲ, ಬದಲಿಗೆ ಜಿಯೋ ಹಾಟ್ಸ್ಟಾರ್ನಲ್ಲಿ ಬಿಗ್ ಬಾಸ್ ಸಂಚಿಕೆ ಪ್ರಸಾರವಾಗುವ ಸಮಯವನ್ನು ಬದಲಾಯಿಸಲಾಗಿದೆ. ಈ ಕುರಿತು ಸ್ವತಃ ಕಿಚ್ಚ ಸುದೀಪ್ (Kiccha sudeep) ಅವರೇ ಹೊಸ ಪ್ರೋಮೋ ಮೂಲಕ ಮಾಹಿತಿ ನೀಡಿದ್ದಾರೆ.
ರಾತ್ರಿ 9:30ರ ಬದಲು ಇನ್ಮುಂದೆ 9 ಗಂಟೆಗೆ ಪ್ರಸಾರ!
ಇದುವರೆಗೆ ಬಿಗ್ ಬಾಸ್ ಕನ್ನಡದ ವಾರದ ದಿನಗಳ ಸಂಚಿಕೆಗಳು ಟಿವಿ ಹಾಗೂ ಜಿಯೋ ಹಾಟ್ಸ್ಟಾರ್ನಲ್ಲಿ ರಾತ್ರಿ 9:30ಕ್ಕೆ ಪ್ರಸಾರವಾಗುತ್ತಿದ್ದವು. ವಾರಾಂತ್ಯದ ಸಂಚಿಕೆಗಳು ಮಾತ್ರ ರಾತ್ರಿ 9 ಗಂಟೆಗೆ ಆರಂಭವಾಗುತ್ತಿದ್ದವು.
ಇದನ್ನೂ ಓದಿ: Rang Kesari: ಟೀಕೆಗಳಿಗೆ ಹಾಡಿನ ಮೂಲಕವೇ ಉತ್ತರ ಕೊಟ್ಟ ಸಲ್ಮಾನ್ ಖಾನ್! ‘ರಂಗ್ ಕೇಸರಿ’ ಸಾಂಗ್ ಔಟ್
ಆದರೆ ಇದೀಗ ಒಟಿಟಿ ವೀಕ್ಷಕರಿಗಾಗಿ ಪ್ರಸಾರದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಇನ್ಮುಂದೆ ವಾರದ ದಿನಗಳಲ್ಲಿಯೂ ಜಿಯೋ ಹಾಟ್ಸ್ಟಾರ್ನಲ್ಲಿ ಬಿಗ್ ಬಾಸ್ ಎಪಿಸೋಡ್ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ಅಂದರೆ ಈ ಹಿಂದಿನ ಸಮಯಕ್ಕಿಂತ ಅರ್ಧ ಗಂಟೆ ಮುಂಚಿತವಾಗಿಯೇ ವೀಕ್ಷಕರು ಹೊಸ ಸಂಚಿಕೆಯನ್ನು ವೀಕ್ಷಿಸಬಹುದು.
ಶನಿವಾರ ಪ್ರಸಾರವಾದ ಸಂಚಿಕೆಯಲ್ಲಿ ಈ ಬದಲಾವಣೆಯ ಬಗ್ಗೆ ಮಾಹಿತಿ ನೀಡಲಾಗಿದ್ದು, ಕಿಚ್ಚ ಸುದೀಪ್ ಪ್ರೋಮೋ ಮೂಲಕ ಹೊಸ ಸಮಯವನ್ನು ವೀಕ್ಷಕರಿಗೆ ನೆನಪಿಸಿದ್ದಾರೆ.
ಯಾವಾಗ ಬೇಕಾದರೂ ಎಪಿಸೋಡ್ ನೋಡುವ ಅವಕಾಶ!
ಜಿಯೋ ಹಾಟ್ಸ್ಟಾರ್ನಲ್ಲಿ ಕೇವಲ ಪ್ರಸಾರದ ಸಮಯ ಬದಲಾವಣೆಯಷ್ಟೇ ಅಲ್ಲದೆ, ವೀಕ್ಷಕರಿಗೆ ಮತ್ತೊಂದು ಅನುಕೂಲವೂ ಇದೆ. ನಿಗದಿತ ಸಮಯದಲ್ಲಿ ಸಂಚಿಕೆ ವೀಕ್ಷಿಸಲು ಸಾಧ್ಯವಾಗದವರು ತಮಗೆ ಅನುಕೂಲವಾದ ಸಮಯದಲ್ಲಿ ಆ ಎಪಿಸೋಡ್ ಅನ್ನು ವೀಕ್ಷಿಸಬಹುದು.ಹೀಗಾಗಿ ರಾತ್ರಿ 9 ಗಂಟೆಗೆ ನೇರವಾಗಿ ವೀಕ್ಷಿಸಲು ಸಾಧ್ಯವಾಗದಿದ್ದರೂ, ನಂತರ ತಮ್ಮ ಬಿಡುವಿನ ವೇಳೆಯಲ್ಲಿ ಕಾರ್ಯಕ್ರಮವನ್ನು ನೋಡಬಹುದಾಗಿದೆ. ಒಟಿಟಿ ವೀಕ್ಷಕರಿಗೆ ಈ ಸೌಲಭ್ಯ ಅನುಕೂಲಕರವಾಗಲಿದೆ.
ಬಿಗ್ ಬಾಸ್ ಕಾರ್ಯಕ್ರಮದ ಒಟಿಟಿ ಪ್ರಸಾರದ ಸಮಯದ ವಿಚಾರದಲ್ಲಿ ಈ ಹಿಂದೆಯೂ ಬದಲಾವಣೆಗಳಾಗಿವೆ. ವೂಟ್ ಆ್ಯಪ್ ಇದ್ದ ಸಮಯದಲ್ಲಿ ಟಿವಿಯಲ್ಲಿ ಪ್ರಸಾರವಾಗುವುದಕ್ಕೂ ಮುನ್ನವೇ ಒಟಿಟಿಯಲ್ಲಿ ಸಂಚಿಕೆಗಳು ಲಭ್ಯವಾಗುತ್ತಿದ್ದವು.
ಇದನ್ನೂ ಓದಿ: Bigg Boss kannada 13: ಗಗನ್ ಮಾತಿನಿಂದ ನೊಂದ ಗೆಳೆಯ; ಸುದೀಪ್ ಮುಂದೆ ತಾಂಡವ್ ರಾಮ್ ಕಣ್ಣೀರು
ಆದರೆ ಜಿಯೋ ಹಾಟ್ಸ್ಟಾರ್ ಆರಂಭವಾದ ಬಳಿಕ ಟಿವಿ ಮತ್ತು ಒಟಿಟಿ ಎರಡರಲ್ಲೂ ಬಹುತೇಕ ಒಂದೇ ಸಮಯಕ್ಕೆ ಸಂಚಿಕೆ ಪ್ರಸಾರವಾಗುತ್ತಿತ್ತು. ಇದೀಗ ಮತ್ತೆ ಒಟಿಟಿ ವೀಕ್ಷಕರಿಗೆ ಅನುಕೂಲವಾಗುವಂತೆ ಸಮಯವನ್ನು ಬದಲಿಸಲಾಗಿದೆ.