ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Rishab Shetty: ರಿಷಬ್ ಶೆಟ್ಟಿ ಹೊಸ ಸಿನಿಮಾ ಘೋಷಣೆ; ಪೋಸ್ಟರ್‌ ಔಟ್‌!

Rishab Shetty: ನಟನೆಯ ಜೊತೆಗೆ ನಿರ್ದೇಶನ ಮತ್ತು ನಿರ್ಮಾಣದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿರುವ ರಿಷಬ್ ಶೆಟ್ಟಿ (Rishab shetty) ಇದೀಗ ಮತ್ತೊಂದು ಹೊಸ ಸಿನಿಮಾದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದು ಸಂಭ್ರಮದಲ್ಲಿರುವ ರಿಷಬ್, ಇದೀಗ ತಮ್ಮ ಮುಂದಿನ ಸಿನಿಮಾ ‘ಮೋಟಾರ್ ಸೈಕಲ್ ಡೈರೀಸ್’ (Motorcycle Diaries) ಅನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

ರಿಷಬ್ ಶೆಟ್ಟಿ ಹೊಸ ಸಿನಿಮಾ ಘೋಷಣೆ; ಪೋಸ್ಟರ್‌ ಔಟ್‌!

ರಿಷಬ್‌ ಶೆಟ್ಟಿ -

Yashaswi Devadiga
Yashaswi Devadiga Nov 29, 2026 6:13 PM

ನಟನೆಯ ಜೊತೆಗೆ ನಿರ್ದೇಶನ ಮತ್ತು ನಿರ್ಮಾಣದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿರುವ ರಿಷಬ್ ಶೆಟ್ಟಿ (Rishab shetty) ಇದೀಗ ಮತ್ತೊಂದು ಹೊಸ ಸಿನಿಮಾದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದು ಸಂಭ್ರಮದಲ್ಲಿರುವ ರಿಷಬ್, ಇದೀಗ ತಮ್ಮ ಮುಂದಿನ ಸಿನಿಮಾ ‘ಮೋಟಾರ್ ಸೈಕಲ್ ಡೈರೀಸ್’ (Motorcycle Diaries) ಅನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

ನವೆಂಬರ್ 29ರಂದು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸಿನಿಮಾದ ಶೀರ್ಷಿಕೆ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಈ ಹೊಸ ಪ್ರಾಜೆಕ್ಟ್ ಬಗ್ಗೆ ಮಾಹಿತಿ ನೀಡಿದ್ದಾರೆ. ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಜೊತೆ ರಿಷಬ್ ಶೆಟ್ಟಿ ಕೈಜೋಡಿಸಿರುವುದು ಈ ಚಿತ್ರದ ವಿಶೇಷ.

ಇದನ್ನೂ ಓದಿ: Bigg Boss Kannada 13: ಸುದೀಪ್ ಬಳಿ ಗಾನವಿ ಕ್ಷಮೆ ಕೇಳಿದ್ದು ಏಕೆ?

ಬೈಕ್ ಪ್ರಯಾಣದ ಸುತ್ತ ಸಾಗಲಿದೆಯೇ ಕಥೆ?

‘ಮೋಟಾರ್ ಸೈಕಲ್ ಡೈರೀಸ್’ ಚಿತ್ರದ ಪೋಸ್ಟರ್ ಈಗಾಗಲೇ ಕುತೂಹಲ ಮೂಡಿಸಿದೆ. ಡೈರಿಯ ಪುಟಗಳ ಮಧ್ಯೆ ವ್ಯಕ್ತಿಯೊಬ್ಬ ಬುಲೆಟ್ ಬೈಕ್ ಸವಾರಿ ಮಾಡುತ್ತಿರುವ ದೃಶ್ಯವನ್ನು ಪೋಸ್ಟರ್‌ನಲ್ಲಿ ಕಾಣಬಹುದು. ಚಿತ್ರದ ಶೀರ್ಷಿಕೆ ಮತ್ತು ಪೋಸ್ಟರ್ ಗಮನಿಸಿದರೆ ನೆನಪುಗಳು, ಪ್ರಯಾಣ ಹಾಗೂ ಬದುಕಿನ ಅನುಭವಗಳನ್ನು ಆಧರಿಸಿದ ಕಥೆ ಇರಬಹುದೆಂಬ ನಿರೀಕ್ಷೆ ಮೂಡಿದೆ. ಆದರೆ ಚಿತ್ರದ ಕಥಾಹಂದರದ ಬಗ್ಗೆ ಚಿತ್ರತಂಡ ಇನ್ನೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಈ ಚಿತ್ರವನ್ನು ಶಿವ ಚಿರಂತನ ಬರೆದು ನಿರ್ದೇಶನ ಮಾಡಲಿದ್ದಾರೆ. ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ ಹಾಗೂ ಸೂರ್ಯದೇವರ ನಾಗವಂಶಿ ಜಂಟಿಯಾಗಿ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಜಿ.ವಿ. ಪ್ರಕಾಶ್ ಕುಮಾರ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ.

ಇದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿದ್ಧವಾಗುತ್ತಿರುವ ಸಿನಿಮಾವಾಗಿದ್ದು, ಸದ್ಯಕ್ಕೆ ಚಿತ್ರದ ನಾಯಕ-ನಾಯಕಿ ಸೇರಿದಂತೆ ತಾರಾಗಣದ ವಿವರಗಳನ್ನು ಬಹಿರಂಗಪಡಿಸಿಲ್ಲ. ಅಷ್ಟೇ ಅಲ್ಲದೆ, ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಸ್ವತಃ ನಟಿಸುತ್ತಾರೆಯೇ ಅಥವಾ ಬೇರೆ ಜವಾಬ್ದಾರಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆಯೇ ಎಂಬುದೂ ಸ್ಪಷ್ಟವಾಗಿಲ್ಲ.

ಆಡಿಷನ್ ಮೂಲಕವೇ ಶುರುವಾಗಿತ್ತು ಸಿನಿಮಾದ ಕೆಲಸ

ಕೆಲವು ತಿಂಗಳ ಹಿಂದೆ ರಿಷಬ್ ಶೆಟ್ಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ 'ಅಧ್ಯಾಯ ಎರಡು ಇಲ್ಲಿಂದ ಶುರು' ಎಂಬ ಅರ್ಥ ಬರುವ ಪೋಸ್ಟ್ ಹಂಚಿಕೊಂಡಿದ್ದರು. ಬಳಿಕ ಹೊಸ ಸಿನಿಮಾಕ್ಕಾಗಿ ಕಲಾವಿದರ ಆಯ್ಕೆಗೆ ಕಾಸ್ಟಿಂಗ್ ಕಾಲ್ ಕೂಡ ನೀಡಿದ್ದರು.ಬೆಂಗಳೂರು ಮತ್ತು ಕಲಬುರಗಿಯಲ್ಲಿ ಆಡಿಷನ್‌ಗಳನ್ನು ನಡೆಸಲಾಗಿತ್ತು. ಇದೀಗ ಘೋಷಣೆಯಾಗಿರುವ ‘ಮೋಟಾರ್ ಸೈಕಲ್ ಡೈರೀಸ್’ ಚಿತ್ರಕ್ಕೂ ಆ ಆಡಿಷನ್‌ಗಳಿಗೂ ಸಂಬಂಧವಿದೆ ಎಂಬ ಮಾಹಿತಿ ಹೊರಬಿದ್ದಿದೆ.ಚಿತ್ರದ ಪೋಸ್ಟರ್ ಹಂಚಿಕೊಂಡಿರುವ ರಿಷಬ್, 'ಪ್ರತಿ ಮೈಲಿಗಲ್ಲೂ ಒಂದು ನೆನಪು, ಪ್ರತಿ ತಿರುವಲ್ಲೂ ಒಂದು ಕಥೆ' ಎಂಬ ಸಾಲುಗಳ ಮೂಲಕ ಸಿನಿಮಾದ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದ್ದಾರೆ.

ಇದನ್ನೂ ಓದಿ: Bigg Boss Kannada 13: ಸೀಕ್ರೆಟ್ ಟಾಸ್ಕ್ ಗೆದ್ದು ಸೇಡು ತೀರಿಸಿಕೊಂಡ ಯಶಸ್!

ರಿಷಬ್ ಶೆಟ್ಟಿ ಕೈಯಲ್ಲಿ ಸಾಲು ಸಾಲು ಸಿನಿಮಾಗಳು

ಸದ್ಯ ರಿಷಬ್ ಶೆಟ್ಟಿ ತೆಲುಗಿನ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಜೈ ಹನುಮಾನ್’ನಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ನಂತರ ಶಿವಾಜಿ ಮಹಾರಾಜರ ಜೀವನಕ್ಕೆ ಸಂಬಂಧಿಸಿದ ಹಿಂದಿ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಮಾಹಿತಿ ಇದೆ.ಇದರ ಜೊತೆಗೆ ತಮ್ಮ ನಿರ್ದೇಶನದ ಮುಂದಿನ ಚಿತ್ರದ ಬಗ್ಗೆಯೂ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಯಿದೆ. ಅದು ‘ಕಾಂತಾರ: ಚಾಪ್ಟರ್ 2’ ಆಗಿರಬಹುದು ಎಂಬ ಚರ್ಚೆಯೂ ನಡೆಯುತ್ತಿದೆ.