ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻರಾಮಾಯಣ ಚಿತ್ರದಲ್ಲಿ ರಣ್‌ಬೀರ್ - ನಾನು ಇನ್ನೂ ಮುಖಾಮುಖಿಯಾಗಿಲ್ಲʼ; ಇಂಟರೆಸ್ಟಿಂಗ್‌ ವಿಚಾರ ರಿವೀಲ್‌ ಮಾಡಿದ ನಟ ಯಶ್‌

Ramayana Movie Update: ರಣ್‌ಬೀರ್‌ ಕಪೂರ್‌, ಯಶ್‌ ನಟನೆಯ ರಾಮಾಯಣ ಸಿನಿಮಾ ಈಗ ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಿದೆ. ಲಾಸ್ ಏಂಜಲ್ಸ್‌ನಲ್ಲಿ ನಡೆದ 'ಸಿನಿಮಾಕಾನ್ 2026'ರಲ್ಲಿ ಭಾಗವಹಿಸಿದ್ದ ಯಶ್, "ರಾಮಾಯಣ ಚಿತ್ರದ ಮೊದಲ ಭಾಗದಲ್ಲಿ ತಾವು ಮತ್ತು ರಣ್‌ಬೀರ್ ಎಲ್ಲಿಯೂ ಮುಖಾಮುಖಿಯಾಗಿಲ್ಲ" ಎಂಬ ವಿಚಾರವನ್ನು ಹಂಚಿಕೊಂಡಿದ್ದಾರೆ.

Ramayana Movie: ರಣ್‌ಬೀರ್ ಕಪೂರ್‌ ಬಗ್ಗೆ ನಟ ಯಶ್‌ ಏನಂದ್ರು ನೋಡಿ

-

Avinash GR
Avinash GR Apr 15, 2026 8:57 AM

ʻರಾಕಿಂಗ್‌ ಸ್ಟಾರ್‌ʼ ಯಶ್ ಈಗ ಕೇವಲ ಪ್ಯಾನ್ ಇಂಡಿಯಾ ಸ್ಟಾರ್ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿಯೂ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಲು ಸಜ್ಜಾಗಿದ್ದಾರೆ. ಅವರ ನಟನೆ ಮತ್ತು ಸಹ ನಿರ್ಮಾಣದ ‘ರಾಮಾಯಣ’ ಸಿನಿಮಾ ಕೂಡ ಜಾಗತಿಕವಾಗಿ ಭಾರಿ ಕುತೂಹಲ ಮೂಡಿಸಿದೆ. ಸದ್ಯ ಈ ಚಿತ್ರದ ಪ್ರಚಾರಕ್ಕಾಗಿ ಇತ್ತೀಚೆಗಷ್ಟೇ ಲಾಸ್ ಏಂಜಲ್ಸ್‌ನಲ್ಲಿ ನಡೆದ ಪ್ರತಿಷ್ಠಿತ ‘ಸಿನಿಮಾಕಾನ್ 2026’ (CinemaCon 2026) ಸಮಾವೇಶದಲ್ಲಿ ಯಶ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರು ಹಾಲಿವುಡ್‌ ಮಾಧ್ಯಮಗಳಿಗೆ ಸಂದರ್ಶನವನ್ನು ನೀಡುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.

ಹೌದು, ಖ್ಯಾತ ಸಿನಿಮಾ ವಿಮರ್ಶಾ ತಾಣ ‘ರಾಟನ್ ಟೊಮ್ಯಾಟೋಸ್’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ʻರಾಕಿಂಗ್ ಸ್ಟಾರ್ʼ ಯಶ್‌ ತಮ್ಮ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದ ಕುರಿತು ಕುತೂಹಲಕಾರಿ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಜೊತೆಗೆ ರಣ್‌ಬೀರ್ ಕಪೂರ್ ಜೊತೆಗಿನ ಒಡನಾಟದ ಬಗ್ಗೆಯೂ ತಿಳಿಸಿದ್ದಾರೆ.

Ramayana: 'ರಾಮಾಯಣ'ದಲ್ಲಿ ನಟಿಸಲು ನೂರಾರು ಕೋಟಿ ರೂ. ಸಂಭಾವನೆ ಪಡೆದ ಯಶ್-ರಣಬೀರ್ ಕಪೂರ್‌

ರಣ್‌ಬೀರ್ ಜೊತೆ ಕೆಲಸ ಮಾಡಿದ ಅನುಭವ

ಸಂದರ್ಶನದ ವೇಳೆ, "ಚಿತ್ರೀಕರಣದ ವೇಳೆ ನಿಮ್ಮ ಹಾಗೂ ರಣ್‌ಬೀರ್ ಕಪೂರ್ ನಡುವಿನ ಕಾಂಬಿನೇಶನ್ ಹೇಗಿತ್ತು" ಎಂದು ಪ್ರಶ್ನೆ ಮಾಡಲಾಗಿದೆ. ಅದಕ್ಕೆ ಉತ್ತರಿಸಿದ ಯಶ್‌, “ಒಂದು ಆಸಕ್ತಿದಾಯಕ ವಿಷಯವೆಂದರೆ, ಈ ಚಿತ್ರದ ಮೊದಲ ಭಾಗದಲ್ಲಿ ನಾವಿಬ್ಬರೂ ಎಲ್ಲಿಯೂ ಮುಖಾಮುಖಿಯಾಗಿಲ್ಲ. ನಿಮಗೆ ತಿಳಿದಿರುವಂತೆ ‘ರಾಮಾಯಣ’ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಮೊದಲ ಭಾಗದಲ್ಲಿ ರಾವಣನಾಗಿ ನನಗೆ ನನ್ನದೇ ಆದ ಸಾಮ್ರಾಜ್ಯವಿದ್ದರೆ, ರಾಮನಾಗಿ ರಣ್‌ಬೀರ್ ಅವರಿಗೆ ಅವರದ್ದೇ ಆದ ಸಾಮ್ರಾಜ್ಯವಿದೆ” ಎಂದು ವಿವರಿಸಿದ್ದಾರೆ.

Yash Meets Shivanna: ರಾಕಿಭಾಯ್‌ ಮೀಟ್ಸ್‌ ಶಿವಣ್ಣ; ಶಿವ ರಾಜ್‌ಕುಮಾರ್‌ ಆರೋಗ್ಯ ವಿಚಾರಿಸಿದ ಯಶ್‌-ರಾಧಿಕಾ ಪಂಡಿತ್‌

ಇಬ್ಬರ ನಡುವೆ ಪರಸ್ಪರ ಗೌರವ ಇದೆ

ರಣ್‌ಬೀರ್ ಕಪೂರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಯಶ್‌, "ಚಿತ್ರೀಕರಣದ ಸಮಯದಲ್ಲಿ ನಾವಿಬ್ಬರೂ ಒಂದೆರಡು ಬಾರಿ ಭೇಟಿಯಾಗಿದ್ದೇವೆ. ರಣಬೀರ್ ಅದ್ಭುತ ನಟ. ನಮ್ಮಿಬ್ಬರ ನಡುವೆ ಪರಸ್ಪರವಾಗಿ ಅಪಾರ ಗೌರವವಿದೆ" ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, "ರಾಮಾಯಣದಂತಹ ಕನಸಿನ ಪ್ರಾಜೆಕ್ಟ್ ಮಾಡುವಾಗ ಈ ಪೌರಾಣಿಕ ಕಥೆಗೆ ಅತ್ಯುತ್ತಮವಾದುದನ್ನು ನೀಡುವುದೇ ನಮ್ಮೆಲ್ಲರ ಏಕೈಕ ಗುರಿಯಾಗಿದೆ. ಹೀಗಾಗಿ, ರಣಬೀರ್ ಮತ್ತು ನನ್ನ ದೃಷ್ಟಿಕೋನ ಒಂದೇ ಆಗಿದ್ದು, ನಾವಿಬ್ಬರೂ ಬಹಳ ಸಂತೋಷದಿಂದ ಈ ಚಿತ್ರದಲ್ಲಿ ಪಾಲ್ಗೊಂಡಿದ್ದೇವೆ" ಎಂದು ಯಶ್‌ ಅವರು ಹೇಳಿದ್ದಾರೆ.

ರಣ್‌ಬೀರ್‌ ಕಪೂರ್‌ ಬಗ್ಗೆ ಮಾತನಾಡಿದ ಯಶ್

ನಿತೇಶ್‌ ತಿವಾರಿ ನಿರ್ದೇಶನದ ಈ ಸಿನಿಮಾದಲ್ಲಿ ರಣ್‌ಬೀರ್ ಕಪೂರ್ ಅವರು ರಾಮನ ಪಾತ್ರದಲ್ಲಿ ಕಾಣಿಸಿಕೊಂಡರೆ, ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ ನಟಸಿದ್ದಾರೆ. ಯಶ್ ಅವರು ರಾವಣನ ಪಾತ್ರ ಮಾಡುವುದರ ಜೊತೆಗೆ ‘ರಾಮಾಯಣ’ ಸಿನಿಮಾಕ್ಕೆ ಸಹ ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದಾರೆ. ಈಚೆಗೆ ಈ ಚಿತ್ರದ ಮೊದಲ ಟೀಸರ್‌ ರಿಲೀಸ್‌ ಆಗಿತ್ತು. 2026ರ ದೀಪಾವಳಿ ಹಬ್ಬದಂದು ಈ ಚಿತ್ರವನ್ನು ವಿಶ್ವಾದ್ಯಂತ ಹಲವು ಭಾಷೆಗಳಲ್ಲಿ ತೆರೆಗೆ ತರುವುದು ನಿರ್ಮಾಪಕರ ಉದ್ದೇಶವಾಗಿದೆ.