ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಗಿಲ್ಲಿ ನಟನ ಬೆಳವಣಿಗೆ ಬಗ್ಗೆ ನನಗೆ ಸಂತೋಷವಿದೆ, ಅಸೂಯೆ ಇಲ್ಲʼ; ಪ್ರಶ್ನಿಸುವವರ ಬಾಯಿ ಮುಚ್ಚಿಸಿದ ಧನುಷ್‌ ಗೌಡ

Dhanush Gowda On Gilli Nata: ಧನುಷ್‌ ಗೌಡ ಅವರು ತಮ್ಮ ಹೊಸ ಆಲ್ಬಂ ಹಾಡು 'ಜಿನುಗೊ ಮಳೆ' ಬಿಡುಗಡೆ ವೇಳೆ ಮಾತನಾಡಿ, "ಗಿಲ್ಲಿ ನಟನ ಏಳಿಗೆಯ ಬಗ್ಗೆ ತಮಗೆ ಅಸೂಯೆಯಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಸದ್ಯದಲ್ಲೇ ಹೊಸ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

ʻಜನರು ಗಿಲ್ಲಿಯನ್ನೇ ಬೆಳೆಸಲಿ, ನಂಗೇನೂ ತೊಂದರೆ ಇಲ್ಲʼ- ಧನುಷ್‌ ಗೌಡ

-

Avinash GR
Avinash GR Apr 15, 2026 8:04 AM

ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರಲ್ಲಿ ಸ್ಪರ್ಧಿಯಾಗಿದ್ದ ನಟ ಧನುಷ್‌ ಗೌಡ ಮತ್ತು ಸ್ಪಂದನಾ ಸೋಮಣ್ಣ ಅವರು ಒಟ್ಟಿಗೆ ಸೇರಿ ಜಿನುಗೊ ಮಳೆ ಎಂಬ ಆಲ್ಭಂ ಸಾಂಗ್‌ನ ಹೊರತಂದಿದ್ದಾರೆ. ಏಪ್ರಿಲ್‌ 14ರಂದು ಈ ಸಾಂಗ್‌ ರಿಲೀಸ್‌ ಆಗಿದೆ. ಈ ವೇಳೆ ವಿಶ್ವವಾಣಿ ಟಿವಿ ಜೊತೆಗೆ ಎಕ್ಸ್‌ಕ್ಲೂಸಿವ್‌ ಆಗಿ ಮಾತನಾಡಿರುವ ನಟ ಧನುಷ್‌ ಗೌಡ, ಸಾಕಷ್ಟು ವಿಚಾರಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ ಗಿಲ್ಲಿ ನಟ ಅವರ ಕುರಿತಾಗಿ ಒಂದಷ್ಟು ಕ್ಲಾರಿಟಿ ನೀಡಿದ್ದಾರೆ.

ಗಿಲ್ಲಿ ನಟ ಜೊತೆಗೆ ಅಸಮಾಧಾನ ಇದೆಯಾ ಎಂಬ ಬಗ್ಗೆ ಸ್ಪಷ್ಟನೆ ನೀಡಿರುವ ಧನುಷ್‌, ಸೋಶಿಯಲ್‌ ಮೀಡಿಯಾದಲ್ಲಿ ಕೇಳಿಬರುವ ಕಾಮೆಂಟ್ಸ್‌ ಬಗ್ಗೆಯೂ ಮಾತನಾಡಿದ್ದಾರೆ. "ನಾನು ಈಗಾಗಲೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ. ಕನ್ನಡಿಗರೇ ಆದ ನಮ್ಮ ಸ್ನೇಹಿತರು ಬೆಳೆಯುತ್ತಿದ್ದಾರೆ ಎಂದರೆ ನಮಗೆ ಸಂತೋಷವೇ ಹೊರತು ಯಾವುದೇ ಅಸೂಯೆ ಇಲ್ಲ" ಎಂದು ಧನುಷ್‌ ಹೇಳಿದ್ದಾರೆ.

Bigg Boss Kannada 12: ಧನುಷ್‌ ಗೌಡ ಪ್ರಕಾರ ಇವರು ಮಿಡ್‌ ವೀಕ್‌ ಎಲಿಮಿನೇಟ್‌ ಆಗ್ತಾರಂತೆ! ಯಾರದು?

ನಮ್ಮ ನಡುವೆ ಉತ್ತಮ ಬಾಂಧವ್ಯವಿದೆ

"ಯಾರೇ ಆಗಲಿ, ಚಿತ್ರರಂಗದಲ್ಲಿ ಬೆಳೆಯಬೇಕು ಮತ್ತು ಆ ಮೂಲಕ ಕನ್ನಡ ಇಂಡಸ್ಟ್ರಿ ಬೆಳಗಬೇಕು. ನೀವು ಅವರನ್ನೇ (ಗಿಲ್ಲಿ ನಟ) ಬೆಳೆಸಿ, ನನಗೇನೂ ತೊಂದರೆಯಿಲ್ಲ. ಒಂದು ವೇಳೆ ನಮ್ಮಿಬ್ಬರ ಮಧ್ಯೆ ಸ್ನೇಹವೇ ಇಲ್ಲದಿದ್ದರೆ, ನನ್ನ ಆಲ್ಬಂ ಸಾಂಗ್‌ ರಿಲೀಸ್ ಕಾರ್ಯಕ್ರಮಕ್ಕೆ ನಾನು ಗಿಲ್ಲಿಯನ್ನು ಕರೆಯುತ್ತಿರಲಿಲ್ಲ. ನಾನು ಫೋನ್ ಮಾಡಿದ ತಕ್ಷಣ ಬರ್ತಿನಿ ಅಣ್ಣ ಅಂತ ಹೇಳಿದ್ದರು. ಕೆಲವೊಂದು ಕಾರಣಗಳಿಂದಾಗಿ ಬಂದಿಲ್ಲ ಅನ್ಸತ್ತೆ. ನಾನು ಗಿಲ್ಲಿ ಅವರ ಅಣ್ಣನಿಗೂ ಕರೆಮಾಡಿ, ಕಾರ್ಯಕ್ರಮಕ್ಕೆ ಬನ್ನಿ ಎಂದು ಆಹ್ವಾನಿಸಿದ್ದೆ. ಇಷ್ಟೆಲ್ಲಾ ನಾವು ಮಾಡುತ್ತಿದ್ದೇವೆ ಎಂದರೆ ನಮ್ಮ ನಡುವೆ ಉತ್ತಮ ಬಾಂಧವ್ಯವಿದೆ ಎಂದೇ ಅರ್ಥ" ಎಂದು ಟೀಕಾಕಾರರಿಗೆ ಉತ್ತರಿಸಿದ್ದಾರೆ ಧನುಷ್‌.

ಧನುಷ್‌ - ಅಶ್ವಿನಿ ಗೌಡ ಯಾವ್ಯಾವ ವಿಷಯಗಳಲ್ಲಿ ಪಂಟ್ರು ಗೊತ್ತಾ? ಇವರಿಬ್ಬರಿಗೆ ಬಿಗ್ ಬಾಸ್ ಕೊಟ್ಟ 'ಪಂಚಿಂಗ್' ಬಿರುದುಗಳೇನು?

ಕಾವ್ಯ ಶೈವ ಬಗ್ಗೆ ಧನುಷ್‌ ಮಾತು

ಕಾವ್ಯ ಶೈವ ಅವರ ಪೋಸ್ಟ್‌ಗಳಿಗೆ ಬರುತ್ತಿರುವ ನೆಗೆಟಿವ್ ಕಾಮೆಂಟ್‌ಗಳ ಕುರಿತು ಪ್ರತಿಕ್ರಿಯಿಸಿದ ಧನುಷ್ ಅವರು, "ನಾವು ಈ ಬಗ್ಗೆ ಮಾತನಾಡಿ ನಮ್ಮ ಮನಃಶಾಂತಿಯನ್ನು ಹಾಳುಮಾಡಿಕೊಳ್ಳಲು ನಾವು ಸಿದ್ಧರಿಲ್ಲ. ನಮ್ಮನ್ನು ಇಷ್ಟಪಡುವವರು ಎಲ್ಲಿದ್ದರೂ ಬೆಂಬಲಿಸುತ್ತಾರೆ, ಇಷ್ಟಪಡದವರ ಬಗ್ಗೆ ನಾವೇನು ಮಾಡಲು ಸಾಧ್ಯವಿಲ್ಲ" ಎನ್ನುವ ಮೂಲಕ ನಕಾರಾತ್ಮಕ ವಿಚಾರಗಳಿಂದ ದೂರವಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಧನುಷ್‌ ಗೌಡ ಸಂದರ್ಶನ



ಸಿನಿಮಾ ಮಾಡಲು ಧನುಷ್‌ ರೆಡಿ

"ಸದ್ಯ ಸಿನಿಮಾದ ಕಥೆಗಳ ಬಗ್ಗೆ ಚರ್ಚೆ ನಡೆಸುತ್ತಿದ್ದೇನೆ. ನನ್ನ ಮೊದಲ ಚಿತ್ರವಾದ್ದರಿಂದ ಸಹಜವಾಗಿಯೇ ಜವಾಬ್ದಾರಿ ಹೆಚ್ಚಿದೆ. ಮೊದಲ ಆಲ್ಬಂ ಹಾಡನ್ನು ನಾವು ಇಡೀ ತಂಡದೊಂದಿಗೆ ಸಾಕಷ್ಟು ಯೋಚನೆ ಮಾಡಿ ರೂಪಿಸಿದ್ದೆವು. ಇದೇ ತಂಡದವರು ಸಿನಿಮಾ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದು, ಅವರು ಹೇಳುವ ಕಥೆ ಇಷ್ಟವಾದರೆ ಖಂಡಿತವಾಗಿಯೂ ಅವರ ಜೊತೆಗೇ ಸಿನಿಮಾ ಮಾಡುತ್ತೇನೆ. ಬೇರೆ ಕಥೆಗಳ ಬಗ್ಗೆಯೂ ಮಾತುಕತೆ ನಡೆಯುತ್ತಿದೆ. ಚೊಚ್ಚಲ ಸಿನಿಮಾ ಜನರಿಗೆ ಇಷ್ಟವಾಗುವಂತಿರಬೇಕು ಎಂಬುದು ನನ್ನ ಉದ್ದೇಶ" ಎಂದು ಧನುಷ್ ಗೌಡ ತಿಳಿಸಿದ್ದಾರೆ.