ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಧನುಷ್ ನಟನೆಯ ಹೊಸ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಮಿಂಚಲಿದ್ದಾರೆ ನಟಿ ಸಾಯಿ ಪಲ್ಲವಿ? ಈ ಸಿನಿಮಾದ ಟೈಟಲ್‌ ಏನು?

ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ಧನುಷ್ ಅವರ 55ನೇ ಚಿತ್ರವು ಭಾರಿ ಕುತೂಹಲ ಮೂಡಿಸಿದೆ. ಈ ಆಕ್ಷನ್ ಥ್ರಿಲ್ಲರ್ ಸಿನಿಮಾದಲ್ಲಿ ಸಾಯಿ ಪಲ್ಲವಿ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದರೆ ಎಂಬ ಮಾಹಿತಿ ಸಿಕ್ಕಿದೆ. ಧನುಷ್ ಜೊತೆಗೆ ಮಮ್ಮುಟ್ಟಿ, ಶ್ರೀಲೀಲಾ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಖಡಕ್‌ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಮಿಂಚಲಿದ್ದಾರೆ ನಟಿ ಸಾಯಿ ಪಲ್ಲವಿ

-

Avinash GR
Avinash GR Jun 10, 2026 6:38 PM

ನಟ ಧನುಷ್ ಅವರ 55ನೇ ಸಿನಿಮಾ (D55) ಸದ್ಯ ಭಾರಿ ಕುತೂಹಲ ಮೂಡಿಸಿದೆ. 'ಅಮರನ್' ಖ್ಯಾತಿಯ ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶಿಸುತ್ತಿರುವ ಈ ಆಕ್ಷನ್ ಥ್ರಿಲ್ಲರ್ ಚಿತ್ರದ ಬಗ್ಗೆ ದಿನಕ್ಕೊಂದು ಹೊಸ ಸುದ್ದಿಗಳು ಹೊರಬರುತ್ತಿದ್ದು, ಸಿನಿಪ್ರೇಮಿಗಳ ನಿರೀಕ್ಷೆ ದುಪ್ಪಟ್ಟಾಗಿದೆ.

ಪೊಲೀಸ್ ಅಧಿಕಾರಿಯಾಗಿ ಸಾಯಿ ಪಲ್ಲವಿ?

ಸದ್ಯ ಬಾಲಿವುಡ್‌ನ 'ರಾಮಾಯಣ' ಸಿನಿಮಾದಲ್ಲಿ ಬ್ಯುಸಿಯಾಗಿರುವ ನಟಿ ಸಾಯಿ ಪಲ್ಲವಿ, ಈ ಚಿತ್ರದಲ್ಲಿ ಧನುಷ್‌ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಹರಿದಾಡುತ್ತಿರುವ ಲೇಟೆಸ್ಟ್ ಗಾಸಿಪ್‌ಗಳ ಪ್ರಕಾರ, ಸಾಯಿ ಪಲ್ಲವಿ ಈ ಚಿತ್ರದಲ್ಲಿ ಖಡಕ್‌ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. 'ಮಾರಿ 2' ಚಿತ್ರದ ಸೂಪರ್ ಹಿಟ್ ಜೋಡಿಯಾದ ಧನುಷ್ ಮತ್ತು ಸಾಯಿ ಪಲ್ಲವಿ 6 ವರ್ಷಗಳ ನಂತರ ಮತ್ತೆ ಒಂದಾಗುತ್ತಿದ್ದು, ಮೊದಲ ಬಾರಿಗೆ ಸಾಯಿ ಪಲ್ಲವಿ ಖಾಕಿ ತೊಡುತ್ತಿರುವುದು ಫ್ಯಾನ್ಸ್‌ಗೆ ಭಾರಿ ಥ್ರಿಲ್ ನೀಡಿದೆ.

ʻಏಕ್ ದಿನ್ ಚಿತ್ರಕ್ಕೆ ನಾನು ಸರಿಯಾದ ಆಯ್ಕೆ ಆಯ್ಕೆಯಾಗಿರಲಿಲ್ಲʼ; ಆಮಿರ್‌ ಖಾನ್‌ ಮಗನ ಸಿನಿಮಾದ ಬಗ್ಗೆ ಸಾಯಿ ಪಲ್ಲವಿ ಹಿಂಗ್ಯಾಕೆ ಹೇಳಿದ್ರು?

ಅಂಡರ್‌ಕವರ್ ಏಜೆಂಟ್ ಆಗಿ ಧನುಷ್

ಇತ್ತೀಚೆಗಷ್ಟೇ ಬಿಡುಗಡೆಯಾದ 'ಕರ' ಚಿತ್ರದ ಬೆನ್ನಲ್ಲೇ ಧನುಷ್ ಈ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಮೂಲಗಳ ಪ್ರಕಾರ, ಧನುಷ್ ಈ ಚಿತ್ರದಲ್ಲಿ 'ತಿರುಕುಮಾರನ್' ಎಂಬ ಹೆಸರಿನ ಗೂಢಚಾರನಾಗಿ, ಮಮ್ಮುಟ್ಟಿ ಅವರ ಗ್ಯಾಂಗ್‌ನಲ್ಲಿ ಅಂಡರ್‌ಕವರ್ ಏಜೆಂಟ್ ಆಗಿ ಕೆಲಸ ಮಾಡುವ ಪಾತ್ರ ನಿಭಾಯಿಸುತ್ತಿದ್ದಾರೆ ಎನ್ನಲಾಗಿದೆ.

'ಪೇರನ್ಬು' ಚಿತ್ರದಲ್ಲಿ ನಟಿಸಿದ್ದ ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟ್ಟಿ 7 ವರ್ಷಗಳ ನಂತರ ತಮಿಳು ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುತ್ತಿದ್ದಾರೆ. ಈಗಾಗಲೇ ಚೆನ್ನೈನಲ್ಲಿ ಧನುಷ್ ಮತ್ತು ಮಮ್ಮುಟ್ಟಿ ನಡುವಿನ ಪ್ರಮುಖ ದೃಶ್ಯಗಳ ಶೂಟಿಂಗ್ ಪೂರ್ಣಗೊಂಡಿದೆ. ಶಿವಕಾರ್ತಿಕೇಯನ್ ನಟನೆಯ 'ಪರಾಶಕ್ತಿ' ಚಿತ್ರದ ನಂತರ ನಟಿ ಶ್ರೀಲೀಲಾ ನಟಿಸುತ್ತಿರುವ ಎರಡನೇ ತಮಿಳು ಸಿನಿಮಾ ಇದಾಗಿದೆ. ಹಿರಿಯ ನಟ ಇಂದ್ರನ್ಸ್ ಕೂಡ ಈ ಚಿತ್ರದ ತಾರಾಗಣದಲ್ಲಿದ್ದಾರೆ. ಸಾಯಿ ಅಭ್ಯಂಕರ್ ಇನ್ನೂ ಹೆಸರಿಡದ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

ʻರಾಜಾ ಶಿವಾಜಿʼ ಅಬ್ಬರದ ಎದುರು ಡಲ್‌ ಹೊಡೆದ ಸಾಯಿ ಪಲ್ಲವಿಯ ʻಏಕ್‌ ದಿನ್‌ʼ; ಸೋಲಿನ ಸುಳಿಯಲ್ಲಿ ಆಮಿರ್‌ ಖಾನ್‌ ಮಗ

ಶೀಘ್ರದಲ್ಲೇ ಟೈಟಲ್‌ ಲಾಂಚ್

ಜುಲೈ 28ರ ಧನುಷ್ ಅವರ ಜನ್ಮದಿನದಂದು ಈ ಚಿತ್ರದ ಶೀರ್ಷಿಕೆ ಘೋಷಣೆ ಮಾಡಲು ಚಿತ್ರತಂಡ ಯೋಜಿಸಿತ್ತು. ಆದರೆ, ಸದ್ಯ ಶೂಟಿಂಗ್ ಬಿರುಸಿನಿಂದ ಸಾಗುತ್ತಿರುವುದರಿಂದ ಇದೇ ವಾರ ಅಧಿಕೃತ ಶೀರ್ಷಿಕೆಯನ್ನು ಅನಾವರಣಗೊಳಿಸಲು ನಿರ್ಮಾಪಕರು ಸಜ್ಜಾಗಿದ್ದಾರೆ. ವರದಿಗಳ ಪ್ರಕಾರ, ಈ ಚಿತ್ರಕ್ಕೆ ‘ಚೆಳಿಯನ್’ (Chezhiyan) ಎಂಬ ಶೀರ್ಷಿಕೆಯನ್ನು ಇಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.

ಈ ಚಿತ್ರದ ಕಥೆ ಏನು?

ಚಿತ್ರದ ಕಥೆಯ ಬಗ್ಗೆ ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ ಸಣ್ಣ ಸುಳಿವು ನೀಡಿದ್ದಾರೆ. "ನನ್ನ ಹಿಂದಿನ ಸಿನಿಮಾ 'ಅಮರನ್' ದೇಶಕ್ಕಾಗಿ ಹೋರಾಡಿದ ವೀರನ ಬಗ್ಗೆ ಇತ್ತು. ಆದರೆ ಈ ಸಿನಿಮಾ ಸಮಾಜದಲ್ಲಿ ನಮ್ಮ ನಡುವೆಯೇ ಬದುಕುತ್ತಿರುವ, ಯಾರಿಗೂ ತಿಳಿಯದ ಅನೇಕ ಅನಾಮಧೇಯ ವೀರರ ಕಥೆಯಾಗಿದ್ದು, ನಾಯಕ ಅಂತಹ ಒಬ್ಬ ವೀರನನ್ನು ಪ್ರತಿನಿಧಿಸುತ್ತಾನೆ" ಎಂದು ಅವರು ತಿಳಿಸಿದ್ದಾರೆ.

ವಂಡರ್‌ಬಾರ್ ಫಿಲ್ಮ್ಸ್ ಮತ್ತು ಆರ್‌ಟೇಕ್ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಬಹುನಿರೀಕ್ಷಿತ ಚಿತ್ರದ ಉಳಿದ ತಾರಾಗಣ ಹಾಗೂ ರಿಲೀಸ್ ಡೇಟ್ ಸದ್ಯದಲ್ಲೇ ಅಧಿಕೃತವಾಗಿ ಹೊರಬೀಳಬೇಕಿದೆ.