ಬೇಬಿ ಬಂಪ್ ಫೋಟೋಗಳನ್ನು ಹಂಚಿಕೊಂಡ ನಟ ಧನಂಜಯ್ ಪತ್ನಿ ಧನ್ಯತಾ; ಮಗುವಿನ ನಿರೀಕ್ಷೆಯಲ್ಲಿ ʻಡಾಲಿʼ ದಂಪತಿ
ಸ್ಯಾಂಡಲ್ವುಡ್ ನಟ ʻಡಾಲಿʼ ಧನಂಜಯ್ ಅವರು ವೈದ್ಯೆ ಧನ್ಯತಾ ಜೊತೆ ಕಳೆದ ವರ್ಷ ಫೆಬ್ರವರಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸದ್ಯ ಈ ದಂಪತಿ ಮುದ್ದು ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ವರ್ಷದ ಜನವರಿಯಲ್ಲಿ ಧನಂಜಯ್ ಅವರು ಸಿಹಿಸುದ್ದಿ ಹಂಚಿಕೊಂಡಿದ್ದರು. ಶೀಘ್ರದಲ್ಲೇ ನಾವು ಪೋಷಕರಾಗುತ್ತಿದ್ದೇವೆ ಎಂದು ಡಾಲಿ ತಿಳಿಸಿದ್ದರು. ಸದ್ಯ ಗರ್ಭಿಣಿಯಾಗಿರುವ ತಮ್ಮ ಪತ್ನಿ ಧನ್ಯತಾ ಅವರ ಬೇಬಿ ಬಂಪ್ ಫೋಟೋಗಳನ್ನು ಡಾಲಿ ಧನಂಜಯ್ ಹಂಚಿಕೊಂಡಿದ್ದಾರೆ. ಆ ಫೋಟೋಗಳಿಗೆ, "ನಮ್ಮ ಜಗತ್ತು ವಿಸ್ತರಿಸುತ್ತಿದೆ" ಎಂದು ಕ್ಯಾಪ್ಷನ್ ಕೂಡ ನೀಡಿದ್ದಾರೆ. ಇಲ್ಲಿವೆ ಡಾಲಿ ಪತ್ನಿ ಧನ್ಯತಾ ಅವರ ಬೇಬಿ ಬಂಪ್ ಫೋಟೋಶೂಟ್ನ ಫೋಟೋಗಳು ವೈರಲ್ ಆಗುತ್ತಿವೆ.
-
ಕೆಲ ತಿಂಗಳ ಹಿಂದೆ ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ಪತ್ನಿ ಗರ್ಭಿಣಿ ಆಗಿರುವ ವಿಚಾರವನ್ನು ಹಂಚಿಕೊಂಡಿದ್ದ ಡಾಲಿ.
ಆ ಶೋನಲ್ಲಿ ಎರಡು ಗುಲಾಬಿಗಳನ್ನು ಡಾಲಿಗೆ ನೀಡಲಾಗಿತ್ತು, ಅವುಗಳನ್ನು ಎತ್ತಿಕೊಂಡು, "ಒಂದನ್ನ ನನ್ನ ಹೆಂಡ್ತಿಗೆ ಕೊಡ್ತೀನಿ.
ಇನ್ನೊಂದನ್ನು ಸದ್ಯದಲ್ಲೇ ಇನ್ನೊಂದು ಜೀವ ಜೊತೆಯಾಗುತ್ತಿದೆ. ಅದಕ್ಕೆ ಅಂತ ಹೇಳಿ ಕೊಡ್ತೀನಿ" ಎಂದಿದ್ದರು. ಹೀಗೆ ಹೇಳುವ ಮೂಲಕ ತಮ್ಮ ನಾವು ಮಗುವಿನ ನಿರೀಕ್ಷೆಯಲ್ಲಿ ಇದ್ದೇವೆ ಎಂಬುದನ್ನು ಧನಂಜಯ್ ಎಲ್ಲರಿಗೂ ಹೇಳಿದ್ದರು.
ಮೈಸೂರಿನಲ್ಲಿ ಧನಂಜಯ್ - ಧನ್ಯತಾ ಅವರ ಮದುವೆಯು ಅದ್ಧೂರಿಯಾಗಿ ನಡೆದಿತ್ತು.
ಧನಂಜಯ್ ಮತ್ತು ಧನ್ಯತಾ ಅವರದ್ದು ಲವ್ ಕಮ್ ಅರೆಂಜ್ ಮ್ಯಾರೇಜ್ ಆಗಿದೆ.
ಡಾಲಿ ಧನಂಜಯ್ ಅವರ ಮದುವೆಗೆ ಕನ್ನಡ ಚಿತ್ರರಂಗದ ತಾರೆಯರು, ರಾಜಕಾರಣಿಗಳು, ವಿವಿಐಪಿಗಳು, ಸಾವಿರಾರು ಅಭಿಮಾನಿಗಳು ಸಾಕ್ಷಿಯಾಗಿದ್ದರು.
ಮೈಸೂರಿನ ಜೆಎಸ್ಎಸ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆದಿರುವ ಧನ್ಯತಾ, ಸ್ತ್ರೀರೋಗ ತಜ್ಞರಾಗಿದ್ದು, ಇನ್ಫರ್ಟಿಲಿಟಿ ಸ್ಪೆಷಲಿಸ್ಟ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ನಟ ಧನಂಜಯ್ ಅವರು ಜೊತೆಗೆ ಫ್ಯಾಮಿಲಿಗೂ ಸಮಯವನ್ನು ನೀಡುತ್ತಿದ್ದಾರೆ.