ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಮದರ್‌ ಪ್ರಾಮಿಸ್‌ʼ‌ ಸಿನಿಮಾ ಟ್ರೇಲರ್‌: ಜುಲೈ 10ಕ್ಕೆ ಥಿಯೇಟರ್‌ನಲ್ಲಿ ‌ʻಡಾಲಿʼ ಧನಂಜಯ್‌ ಗ್ಯಾಂಗ್‌ನ ಹಾವಳಿ ಫಿಕ್ಸ್!

ನಟ ಧನಂಜಯ ಅವರ 'ಡಾಲಿ ಪಿಕ್ಚರ್ಸ್' ನಿರ್ಮಾಣದ, ಅವರ ಆಪ್ತ ಗೆಳೆಯ ಪೂರ್ಣ ಮೈಸೂರು ನಿರ್ದೇಶನದ ‘ಮದರ್ ಪ್ರಾಮಿಸ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಗೆಳೆತನ, ಗ್ಯಾಂಗ್ ವಾರ್, ಕ್ರಿಕೆಟ್ ಬೆಟ್ಟಿಂಗ್ ಹಾಗೂ ತಾಯಿ ಸೆಂಟಿಮೆಂಟ್ ಒಳಗೊಂಡ ಈ ವಿಶಿಷ್ಟ ಕಾಮಿಡಿ ಥ್ರಿಲ್ಲರ್ ಚಿತ್ರವು ಜುಲೈ 10ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

ʻಡಾಲಿʼ ಧನಂಜಯ್ ಗ್ಯಾಂಗ್‌ನ ʻಮದರ್‌ ಪ್ರಾಮಿಸ್‌ʼ ಟ್ರೇಲರ್ ಧಮಾಕಾ!‌‌

-

Avinash GR
Avinash GR Jun 26, 2026 4:24 PM

ನಟ 'ಡಾಲಿ' ಧನಂಜಯ ಅವರ ಹೋಮ್ ಬ್ಯಾನರ್ 'ಡಾಲಿ ಪಿಕ್ಚರ್ಸ್'ನಿಂದ ಮತ್ತೊಂದು ಹೊಸ ಸಿನಿಮಾ ಸೌಂಡು ಮಾಡಲು ಸಜ್ಜಾಗಿದೆ. ಬಹುತೇಕ ಹೊಸಬರೇ ಸೇರಿಕೊಂಡು ಮಾಡಿರುವ ‘ಮದರ್ ಪ್ರಾಮಿಸ್’ ಚಿತ್ರವು ಜುಲೈ 10ರಂದು ತೆರೆಗೆ ಬರಲಿದ್ದು, ಚಿತ್ರದ ಟ್ರೇಲರ್ ಸದ್ಯ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಟ್ರೇಲರ್ ನೋಡಿದ ಗಾಂಧಿನಗರದ ಮಂದಿ, ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುವುದರ ಜೊತೆಗೆ ಪ್ರೇಕ್ಷಕರ ಮನಸ್ಸು ಗೆಲ್ಲುವುದು ಗ್ಯಾರಂಟಿ ಎಂದು ಭವಿಷ್ಯ ನುಡಿಯುತ್ತಿದ್ದಾರೆ.

ಗೆಳೆಯರ ಬಳಗದ ಜಂಟಿ ಸಾಹಸ

ಈ ಸಿನಿಮಾದ ವಿಶೇಷತೆಯೆಂದರೆ ಧನಂಜಯ ಅವರು ತಮ್ಮ ಆಪ್ತ ಸ್ನೇಹಿತರ ಬಳಗವನ್ನು ಒಟ್ಟುಗೂಡಿಸಿ ಈ ಚಿತ್ರವನ್ನು ಸಿದ್ಧಪಡಿಸಿದ್ದಾರೆ. ಧನು ಅವರ ಆಪ್ತ ಗೆಳೆಯ ಪೂರ್ಣ ಮೈಸೂರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಮತ್ತೊಬ್ಬ ಗೆಳೆಯ ಹರ್ಷ ಮುರುಂಡಿ ಶಿವಲಿಂಗಪ್ಪ ಅವರು ಡಾಲಿ ಪಿಕ್ಚರ್ಸ್ ಜೊತೆ ಕೈಜೋಡಿಸಿ, ಈ ಚಿತ್ರದ ಮೂಲಕ ಅಧಿಕೃತವಾಗಿ ಚಿತ್ರರಂಗಕ್ಕೆ ನಿರ್ಮಾಪಕರಾಗಿ ಹೆಜ್ಜೆ ಇಟ್ಟಿದ್ದಾರೆ. 'ಡೇರ್ ಡೆವಿಲ್ ಮುಸ್ತಾಫಾ' ಖ್ಯಾತಿಯ ಶಶಾಂಕ್ ಸೊಗಾಲ್‌ ಅವರು ಕ್ರಿಯೇಟಿವ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವುದು ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್.

Daali Dhananjaya: ನಟ ಧನಂಜಯ-ಧನ್ಯತಾ ಮದುವೆಗೆ ವಿಶೇಷ ಸ್ಟ್ಯಾಂಪ್ ನೀಡಿ ಶುಭ ಕೋರಿದ ಅಂಚೆ ಇಲಾಖೆ

ಕಾಮಿಡಿ + ಎಮೋಷನ್ ಸಮ್ಮಿಲನ

‘ಮದರ್ ಪ್ರಾಮಿಸ್’ ಪಕ್ಕಾ ಕಾಮಿಡಿ ಹಾಗೂ ಥ್ರಿಲ್ಲರ್ ಕಥಾಹಂದರ ಹೊಂದಿರುವ ಯೂತ್‌ಫುಲ್ ಸಿನಿಮಾವಾಗಿದೆ. ಬಿಡುಗಡೆಯಾಗಿರುವ ಟ್ರೇಲರ್‌ನಲ್ಲಿ ಗೆಳೆತನ, ಡಾನ್‌ಗಳ ಗ್ಯಾಂಗ್ ವಾರ್, ಕ್ರಿಕೆಟ್ ಬೆಟ್ಟಿಂಗ್ ಹಾಗೂ ತಾಯಿ ಸೆಂಟಿಮೆಂಟ್ ಸೇರಿದಂತೆ ಕಮರ್ಷಿಯಲ್ ಸಿನಿಮಾಗೆ ಬೇಕಾದ ಎಲ್ಲಾ ಅಂಶಗಳೂ ಎದ್ದು ಕಾಣುತ್ತಿವೆ. ಈ ಚಿತ್ರದಲ್ಲಿ ಧನಂಜಯ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದು, ಅವರೊಂದಿಗೆ ನಟ ನಾಗಭೂಷಣ್, ಹಿರಿಯ ನಟಿಯರಾದ ವಿನಯಪ್ರಸಾದ್, ಗೀತಾ ಹಾಗೂ ನಟ ಗುರುದತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಹುಲ್ ರಾಯ್ ಅವರ ಛಾಯಾಗ್ರಹಣ ಹಾಗೂ ನವನೀತ್ ಶ್ಯಾಮ್ ಅವರ ಸಂಗೀತ ಚಿತ್ರಕ್ಕಿದೆ.

ರಂಗಾಯಣ ರಘು ನಟನೆಯ 400ನೇ ಸಿನಿಮಾದ ಟೈಟಲ್ ರಿವೀಲ್; ಸಾಥ್ ನೀಡಿದ ʻಡಾಲಿʼ ಧನಂಜಯ್

ಗಮನ ಸೆಳೆದ ‘ಅಮ್ಮನ ಹಾಡು’

ವಿಶ್ವ ತಾಯಂದಿರ ದಿನದಂದು ಬಿಡುಗಡೆಯಾಗಿದ್ದ ಈ ಚಿತ್ರದ ಭಾವನಾತ್ಮಕ ‘ಅಮ್ಮನ ಹಾಡು’ ಈಗಾಗಲೇ ಸೂಪರ್ ಹಿಟ್ ಆಗಿದೆ. ಈ ಹಾಡಿಗೆ ಸ್ವತಃ ಧನಂಜಯ ಅವರೇ ಸಾಹಿತ್ಯ ಬರೆದಿರುವುದು ವಿಶೇಷ. ಈ ಬಗ್ಗೆ ಮಾತನಾಡಿದ್ದ ಧನಂಜಯ, "ಟಗರುಪಲ್ಯ ಚಿತ್ರದ ನಂತರ ಬಿಜಿಯಾಗಿದ್ದ ನನಗೆ, ನಿರ್ದೇಶಕ ಪೂರ್ಣ ಒತ್ತಾಯ ಮಾಡಿ ಈ ಹಾಡನ್ನು ಬರೆಯಿಸಿದ. ಆರಂಭದಲ್ಲಿ ನನಗೆ ಬರೆಯಲು ಸಾಧ್ಯವೇ ಎಂಬ ಗೊಂದಲವಿತ್ತು. ಆದರೆ ಅಮ್ಮನ ಮೇಲಿನ ಪ್ರೀತಿ ಈ ಸರಳ ಸಾಲುಗಳನ್ನು ಬರೆಯುವಂತೆ ಮಾಡಿತು" ಎಂದು ತಮ್ಮ ಅನುಭವ ಹಂಚಿಕೊಂಡಿದ್ದರು.

ಸದ್ಯ ಬಿಡುಗಡೆಯಾಗಿರುವ ಟ್ರೇಲರ್ ಮೂಲಕ ಭರವಸೆ ಮೂಡಿಸಿರುವ ‘ಮದರ್ ಪ್ರಾಮಿಸ್’ ಚಿತ್ರವು ಜುಲೈ 10ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಗ್ರ್ಯಾಂಡ್ ಆಗಿ ತೆರೆಕಾಣಲಿದೆ.