Actor Dhanush: ರಾಂಝಾನಾ ಸಿನಿಮಾ ರೀ ರಿಲೀಸ್- ನಟ ಧನುಷ್ ಅಸಮಾಧಾನಗೊಂಡಿದ್ದೇಕೆ?
Raanjhanaa Movie: ಆನಂದ್ ಎಲ್ ರೈ ನಿರ್ದೇಶನ ರಾಂಝಾನಾ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಇದೇ ಸಿನಿಮಾದಲ್ಲಿ ಖ್ಯಾತ ನಟ ಧನುಷ್ ಮತ್ತು ಸೋನಂ ಕಪೂರ್ ಕೂಡ ನಟಿಸಿದ್ದರು. ಇದೀಗ ಅದೇ ಸಿನಿಮಾ ಎಐ ತಂತ್ರಜ್ಞಾನ ಬಳಸಿ ರೀ ರಿಲೀಸ್ ಮಾಡಲಾಗಿದೆ. ಚಿತ್ರದಲ್ಲಿ ಅನಧಿಕೃತವಾಗಿ ವಿಶೇಷ ಎಐ ಎಫೆಕ್ಟ್ ಬಳಸಲಾಗಿದ್ದು ಈ ಬಗ್ಗೆ ನಟ ಧನುಷ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ನವದೆಹಲಿ: ಆನಂದ್ ಎಲ್ ರೈ ನಿರ್ದೇಶನ ರಂಝಾನ (Raanjhanaa) ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಇದೇ ಸಿನಿಮಾದಲ್ಲಿ ಖ್ಯಾತ ನಟ ಧನುಷ್ ಮತ್ತು ಸೋನಂ ಕಪೂರ್ ಕೂಡ ನಟಿಸಿದ್ದರು. ಇದೀಗ ಅದೇ ಸಿನಿಮಾ ಎಐ ತಂತ್ರಜ್ಞಾನ ಬಳಸಿ ರೀ ರಿಲೀಸ್ ಮಾಡಲಾಗಿದೆ. ಚಿತ್ರದಲ್ಲಿ ಅನಧಿಕೃತವಾಗಿ ವಿಶೇಷ ಎಐ ಎಫೆಕ್ಟ್ ಬಳಸಲಾಗಿದ್ದು ಈ ಬಗ್ಗೆ ನಟ ಧನುಷ್ ಅವರು ಅಸ ಮಾಧಾನ ವ್ಯಕ್ತಪಡಿಸಿದ್ದಾರೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಧನುಷ್ ಅವರು ಮರು ಬಿಡುಗಡೆಯಾದ ʼರಾಂಝಾನಾʼ ಸಿನಿಮಾದಿಂದ ಮೂಲ ಕಥೆಗೆ ಧಕ್ಕೆ ಮಾಡಲಾಗಿದೆ. ಸೃಜನಶೀಲತೆ ಕೆಲಸಕ್ಕೆ ಎಐ ಬಳಕೆ ಮಾಡಿದ್ದು ನಿಜಕ್ಕೂ ಬೇಸರ ಪಡುವ ವಿಚಾರ ಎಂದು ನಟ ಧನುಷ್ ಅವರು ಈ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
'ರಾಂಝಾನಾ' ಚಿತ್ರತಂಡದಿಂದ ಯಾವುದೇ ಒಪ್ಪಿಗೆಯನ್ನು ಪಡೆಯದೇ ಎಐ ರಚಿತವಾದ ರಾಂಝಾನಾವನ್ನು ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿತ್ತು. ಈ ರೀತಿ ಅನುಮತಿ ಇಲ್ಲದೆ ಸಿನಿಮಾ ಒಂದನ್ನು ರೀ ರಿಲೀಸ್ ಮಾಡುವುದು ಚಲನಚಿತ್ರೋದ್ಯಮಕ್ಕೆ ನೆಗೆಟಿವ್ ಪ್ರಭಾವ ಬೀರಲಿದೆ. ಇದು ಕಲಾವಿದರ ಸೃಜನಶೀಲ ಕೆಲಸಕ್ಕೆ ಧಕ್ಕೆಯಾಗಲಿದೆ. ಎಐ ಅನ್ನು ಬಳಸುವ ನೈತಿಕತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ನಟ ಧನುಷ್ ಅವರು ತಮ್ಮ ಟ್ವಿಟ್ಟರ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
'ರಾಂಝಾನ' ಚಿತ್ರದ ರೀ ರಿಲೀಸ್ ಗೆ ಕೃತಕ ಬುದ್ಧಿಮತ್ತೆ ಬಳಸಿದ್ದರ ಬಗ್ಗೆ ನನಗೆ ಅಸಮಧಾನವಿದೆ. ಕ್ಲೈಮ್ಯಾಕ್ಸ್‌ನಲ್ಲಿ ಎಐ ಬಳಕೆ ಮಾಡಿರುವುದು ಕಥೆಯ ಜೀವಾಳವನ್ನೇ ತೆಗೆದುಹಾಕಿದಂತಿದೆ. ಸಂಬಂಧ ಪಟ್ಟವರು ಚಿತ್ರತಂಡದ ಆಕ್ಷೇಪಣೆಯ ಹೊರತಾಗಿಯೂ ಈ ಸಿನಿಮಾ ರೀ ರಿಲೀಸ್ ಮಾಡಿದ್ದಾರೆ ಎಂದು ಧನುಷ್ ತಮ್ಮ ಟ್ವಿಟ್ಟರ್ ಎಕ್ಸ್ ನಲ್ಲಿ ಹೇಳಿಕೆ ನೀಡಿದ್ದಾರೆ. ಚಲನಚಿತ್ರದ ವಿಷಯ ವನ್ನು ಬದಲಾಯಿಸಲು ಎಐ ಬಳಕೆ ಮಾಡಿರುವುದು ಕಳವಳಕಾರಿ ವಿಚಾರವಾಗಿದೆ. ಇದು ಕಥೆಯನ್ನು ಪ್ರೇಕ್ಷಕರಿಗೆ ತೋರಿಸುವ ರೀತಿಗೆ ಹಾಗೂ ಸಿನಿಮಾದ ಕಥೆಗೆ ಧಕ್ಕೆ ತರುತ್ತದೆ. ಭವಿಷ್ಯದಲ್ಲಿ ಇಂತಹ ಅಭ್ಯಾಸಗಳನ್ನು ತಡೆಗಟ್ಟಲು ಕಠಿಣ ನಿಯಮಗಳನ್ನು ಜಾರಿಗೆ ತರುತ್ತಾರೆ ಎಂಬ ನಿರೀಕ್ಷೆಯಲ್ಲಿ ಇದ್ದೇನೆ ಎಂದು ಅವರು ಹೇಳಿದರು.
'ರಂಝಾನ' ಸಿನಿಮಾ ನಿರ್ದೇಶಕ ಆನಂದ್ ಎಲ್ ರೈ ಕೂಡ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. 'ರಾಂಝಾನಾ' ಸಿನಿಮಾ ಅನುಮತಿ ಇಲ್ಲದೆ ರೀ ರಿಲೀಸ್ ಮಾಡಿದ್ದ ವಿಚಾರ ನನಗೆ ತುಂಬಾ ಬೇಸರ ತರಿಸಿದೆ. ನನ್ನ ಒಪ್ಪಿಗೆಯಿಲ್ಲದೆ ಪಾತ್ರ ಹಾಗೂ ಕಥೆಯ ಕೆಲ ಅಂಶ ಬದಲಾಯಿಸುವುದು ಮತ್ತು ಮರು ಬಿಡುಗಡೆ ಮಾಡುವುದು ನಿಜಕ್ಕೂ ಖಂಡನೀಯ. ಎಐ ಮಾರ್ಪಡಿಸಿದ ಆವೃತ್ತಿಯನ್ನು ನಾನು ಬೆಂಬಲಿಸುವುದಿಲ್ಲ. ಅದರಲ್ಲಿ ನನ್ನ ಪಾತ್ರವಾಗಲಿ ಅಥವಾ ಮೂಲ ಚಿತ್ರವನ್ನು ನಿರ್ಮಿಸಿದ ತಂಡವು ಇರಲಿಲ್ಲ ಎಂದು ನಿರ್ದೇಶಕ ಆನಂದ್ ಎಲ್ ರೈ ಅವರು ಪೋಸ್ಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. 2013ರಲ್ಲಿ ಬಿಡುಗಡೆಯಾಗಿ ಯಶಸ್ಸನ್ನು ಕಂಡ 'ರಾಂಝಾನಾ' ಸಿನಿಮಾ ಇದೀಗ ಏರೋಸ್ ಇಂಟರ್‌ನ್ಯಾಷನಲ್ ನಿರ್ಮಾಣ ಸಂಸ್ಥೆ ಈ ಸಿನಿಮಾದಲ್ಲಿ ಎಐ ಬಳಕೆ ಮಾಡಿದೆ ಎಂದು ವರದಿಯಾಗಿದೆ.