ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBM 7: ಮಲಯಾಳಂನಲ್ಲಿ ಬಿಗ್ ಬಾಸ್ ಆರಂಭ: ಮನೆಯೊಳಗೆ ಯಾರೆಲ್ಲ ಹೋಗಿದ್ದಾರೆ?, ಇಲ್ಲಿದೆ ಕಂಪ್ಲಿಟ್ ಲಿಸ್ಟ್

ಮೋಹನ್ ಲಾಲ್ ನೇತೃತ್ವದಲ್ಲಿ ಮಲಯಾಳಂ ಭಾಷೆಯಲ್ಲಿ ಬಿಗ್ ಬಾಸ್ ಮಲಯಾಳಂ ಸೀಸನ್ 7 ನಿನ್ನೆ ತಡರಾತ್ರಿ ಪ್ರಾರಂಭವಾಯಿತು. ಈ ಬಾರಿ ಒಟ್ಟು 19 ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ಇದರಲ್ಲಿ ಮಲಯಾಳಂ ಮನರಂಜನಾ ಪ್ರಪಂಚದ ಅನೇಕ ಸೆಲೆಬ್ರಿಟಿಗಳ ಹೆಸರುಗಳು ಸೇರಿವೆ.

ಮಲಯಾಳಂ ಬಿಗ್ ಬಾಸ್ ಮನೆಯೊಳಗೆ ಯಾರೆಲ್ಲ ಹೋಗಿದ್ದಾರೆ?

bigg boss malayalam

Profile Vinay Bhat Aug 4, 2025 3:43 PM

ರಿಯಾಲಿಟಿ ಶೋ ಬಿಗ್ ಬಾಸ್ (Bigg Boss) ಟಿವಿ ಜಗತ್ತಿನಲ್ಲಿ ಅತ್ಯಂತ ಜನಪ್ರಿಯ ಕಾರ್ಯಕ್ರಮವಾಗಿದೆ. ಇದೀಗ ಬಿಗ್ ಬಾಸ್ ಫೀವರ್ ಶುರುವಾಗಿದೆ. ಒಂದೊಂದೆ ಭಾಷೆಯಲ್ಲಿ ಈ ಅತಿ ದೊಡ್ಡ ರಿಯಾಲಿಟಿ ಶೋಗೆ ಚಾಲನೆ ಸಿಗುತ್ತಿದೆ. ಸದ್ಯ ಹಿರಿಯ ನಟ ಮೋಹನ್ ಲಾಲ್ ನೇತೃತ್ವದಲ್ಲಿ ಮಲಯಾಳಂ ಭಾಷೆಯಲ್ಲಿ ಬಿಗ್ ಬಾಸ್ ಮಲಯಾಳಂ ಸೀಸನ್ 7 ನಿನ್ನೆ ತಡರಾತ್ರಿ ಪ್ರಾರಂಭವಾಯಿತು. ಈ ಬಾರಿ ಒಟ್ಟು 19 ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ಇದರಲ್ಲಿ ಮಲಯಾಳಂ ಮನರಂಜನಾ ಪ್ರಪಂಚದ ಅನೇಕ ಸೆಲೆಬ್ರಿಟಿಗಳ ಹೆಸರುಗಳು ಸೇರಿವೆ.

ಹೆಸರುಗಳಲ್ಲಿ ಅಪ್ಪಾನಿ ಶರತ್, ಸಾರಿಕಾ, ರೇಣು ಸುಧಿ, ಶೈತ್ಯ, ನವೀನ್, ಅಧಿಲಾ ನೂರಾ, ಶಾನವಾಸ್ ಶಾನು, ಜಿಸೆಲ್ ಥಕ್ರಾಲ್, ಮುನ್ಷಿ ರಂಜಿತ್, ರೇನಾ ಫಾತಿಮಾ, ಅಭಿಲಾಷ್, ಬಿನ್ನಿ ನೋಬಿನ್, ಆರ್ ಜೆ ಬಿನ್ಸಿ, ಒನಿಲ್ ಸಾಬು, ಅಕ್ಬರ್ ಖಾನ್, ಕಲಾಭವನ್ ಸರಿಗಾ, ಆರ್ಯನ್ ಕಥುರಿಯಾ, ಅನೀಸೋಲ್ ಸೇರಿದ್ದಾರೆ.

ಇನ್ನು ಮಲಯಾಳಂ ಬಿಗ್ ಬಾಸ್ ಶುರುವಾಗುವ ಜೊತೆಗೆ ಈ ಬಾರಿಯ ಸೀಸನ್​ಗೆ ಮೋಹನ್ ಲಾಲ್ ಪಡೆಯುತ್ತಿರುವ ಸಂಭಾವನೆಯೂ ರಿವಿಲ್ ಆಗಿದೆ. ಇವರು ಈ ಒಂದು ಸೀಸನ್​ಗೆ ಒಂದಲ್ಲ.. ಎರಡಲ್ಲ.. 24 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿಯನ್ನು ಮಾಡಿದೆ. ವರದಿಯ ಪ್ರಕಾರ, ಮೊದಲ ಸೀಸನ್‌ಗೆ ಮೋಹನ್ ಲಾಲ್ ಅವರಿಗೆ ₹12 ಕೋಟಿ ಸಂಭಾವನೆ ನೀಡಲಾಗಿತ್ತು. ಆ ನಂತರ ತಮ್ಮ ಸಂಭಾವನೆಯನ್ನು ₹18 ಕೋಟಿಗೆ ಏರಿಸಿದ್ದರು. ಈಗ ಇದು 24 ಕೋಟಿಗೆ ಬಂದು ನಿಂತಿದೆಯಂತೆ.

ಬಿಗ್ ಬಾಸ್ ಮಲಯಾಳಂ 7 ಅನ್ನು ಎಲ್ಲಿ ವೀಕ್ಷಿಸಬಹುದು?

ನೀವು ಬಿಗ್ ಬಾಸ್ ಮಲಯಾಳಂ 7 ಅನ್ನು ಟಿವಿ ಚಾನೆಲ್ ಏಷ್ಯಾನೆಟ್ ಮತ್ತು ಒಟಿಟಿ ಪ್ಲಾಟ್‌ಫಾರ್ಮ್ ಜಿಯೋ ಹಾಟ್‌ಸ್ಟಾರ್‌ನಲ್ಲಿ ಸುಲಭವಾಗಿ ವೀಕ್ಷಿಸಬಹುದು. ನೀವು ಈ ರಿಯಾಲಿಟಿ ಶೋ ಅನ್ನು ಆನ್‌ಲೈನ್‌ನಲ್ಲಿ ಯಾವುದೇ ಸಮಯದಲ್ಲಿ, ದಿನದ 24 ಗಂಟೆಗಳು, ವಾರದ ಏಳು ದಿನಗಳು ವೀಕ್ಷಿಸಬಹುದು.

Bhagya Lakshmi Serial: ಪೂಜಾಳ ಹುಟ್ಟುಹಬ್ಬದ ಪಾರ್ಟಿಯಲ್ಲಿ ತಾಂಡವ್​ನ ಕೆನ್ನೆಗೆ ಬಾರಿಸಿದ ಭಾಗ್ಯ

ಕನ್ನಡ ಬಿಗ್ ಬಾಸ್ ಯಾವಾಗ ಆರಂಭ?:

ಮೂಲಗಳ ಪ್ರಕಾರ, ಬಿಗ್ ಬಾಸ್ ಸೀಸನ್ 12 ಕನ್ನಡ ಸೆಪ್ಟೆಂಬರ್ ಕೊನೆಯಲ್ಲಿ ಪ್ರಾರಂಭವಾಗಲಿದೆ. ಮತ್ತೊಂದು ವಿಶೇಷ ಎಂದರೆ, ಸಾಮಾನ್ಯವಾಗಿ ಪ್ರತಿ ಭಾರಿ ಬಿಗ್‌ ಬಾಸ್‌ ಗ್ರ್ಯಾಂಡ್ ಓಪನಿಂಗ್ ಶನಿವಾರ ಮಧ್ಯರಾತ್ರಿ ಶೂಟಿಂಗ್ ಆರಂಭವಾಗಿ ರವಿವಾರದಂದು ಟೆಲಿಕಾಸ್ಟ್ ಆಗುತ್ತದೆ. ಆದರೆ, ಈಗ ಬಂದಿರುವ ಮಾಹಿತಿಯ ಪ್ರಕಾರ, ಬಿಬಿಕೆ 12 ಸೆಪ್ಟೆಂಬರ್ 21 ಅಥವಾ ಸೆಪ್ಟೆಂಬರ್ 28ರಿಂದ ಅಂದರೆ ಸೋಮವಾರದಿಂದ ಆರಂಭವಾಗುವ ಸಾಧ್ಯತೆ ಇದೆ.