ಧ್ರುವ ಸರ್ಜಾ ನಟನೆಯ ʻಕೆಡಿʼ ರಿಲೀಸ್‌ಗೆ ಕ್ಷಣಗಣನೆ; ʻಆ್ಯಕ್ಷನ್ ಪ್ರಿನ್ಸ್ ʼ ಫ್ಯಾನ್ಸ್‌ಗೆ ಈ ಸಿನಿಮಾ ಯಾಕೆ ಸ್ಪೆಷಲ್ ಗೊತ್ತಾ? ಇಲ್ಲಿವೆ 5 ಕಾರಣಗಳು
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ʻಕೆಡಿ: ದಿ ಡೆವಿಲ್ʼ ಏಪ್ರಿಲ್ 30 ರಂದು ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. 19 ತಿಂಗಳ ನಂತರ ಧ್ರುವ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. 120 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಈ ಪ್ಯಾನ್ ಇಂಡಿಯಾ ಚಿತ್ರವು 70ರ ದಶಕದ ಭೂಗತ ಲೋಕದ ಕಥೆ ಹೊಂದಿದೆ.
-
ʻಆ್ಯಕ್ಷನ್ ಪ್ರಿನ್ಸ್ ʼ ಧ್ರುವ ಸರ್ಜಾ ಅಭಿನಯದ ʻಕೆಡಿ: ದಿ ಡೆವಿಲ್ʼ ಸಿನಿಮಾವು ತೆರೆಗೆ ಬರುವುದಕ್ಕೆ ಕ್ಷಣಗಣನೆ ಆರಂಭವಾಗಿದೆ. ಏಪ್ರಿಲ್ 30ರಂದು ರಾಜ್ಯಾದ್ಯಂತ ಈ ಸಿನಿಮಾವು ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಬೆಂಗಳೂರಿನ ಬಹುತೇಕ ಕಡೆ ಬೆಳಗ್ಗೆ 6 ಗಂಟೆಗೆಲ್ಲಾ ʻಕೆಡಿʼ ಸಿನಿಮಾದ ಫ್ಯಾನ್ಸ್ ಶೋಗಳು ಆರಂಭವಾಗಲಿವೆ. ಇನ್ನು, ಈ ಚಿತ್ರವು ಧ್ರುವ ಸರ್ಜಾ ಅಭಿಮಾನಿಗಳಿಗೆ ತುಂಬಾ ವಿಶೇಷ. ಯಾಕೆ ಗೊತ್ತಾ? ಇಲ್ಲಿವೆ ನೋಡಿ ಕಾರಣಗಳು.
1- 19 ತಿಂಗಳ ನಂತರ ದರ್ಶನ
ʻಮಾರ್ಟಿನ್ʼ ಸಿನಿಮಾ ತೆರೆಕಂಡು 19 ತಿಂಗಳ ನಂತರ ಧ್ರುವ ಸರ್ಜಾ ಅವರು ಕೆಡಿ ರೂಪದಲ್ಲಿ ಆಗಮಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಅಭಿಮಾನಿಗಳು ಬಹಳ ಸಮಯದಿಂದ ಕಾಯುತ್ತಿದ್ದಾರೆ. ನೆಚ್ಚಿನ ನಟನನ್ನು ನೋಡಲು ಧ್ರುವ ಅವರ ವಿಐಪಿಗಳೂ ಭಾರಿ ಕುತೂಹಲ ಇಟ್ಟುಕೊಂಡಿದ್ದಾರೆ.
2- ಇದು ಪ್ಯಾನ್ ಇಂಡಿಯಾ ಅಬ್ಬರ
ಕೆವಿಎನ್ ಪ್ರೊಡಕ್ಷನ್ಸ್ ಅಡಿಯಲ್ಲಿ ಮೂಡಿಬರುತ್ತಿರುವ ʻಕೆಡಿʼ ಸಿನಿಮಾ ದೊಡ್ಡಮಟ್ಟದಲ್ಲಿ ಬಿಡುಗಡೆಯಾಗುತ್ತಿದ್ದು, ಧ್ರುವ ಸರ್ಜಾ ಅವರ ಕ್ರೇಜ್ ಅನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ನಿರೀಕ್ಷೆಯಿದೆ, ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಅವರ ರೀಚ್ ಇನ್ನಷ್ಟು ಹೆಚ್ಚುತ್ತದೆ. ಈಗಾಗಲೇ ಈ ಚಿತ್ರದ ಹಾಡುಗಳು ಐದು ಭಾಷೆಯಲ್ಲಿಯೂ ರಿಲೀಸ್ ಆಗಿವೆ. ಸದ್ಯದ ಮಾಹಿತಿ ಪ್ರಕಾರ, ಒಂದೆರಡು ವಾರಗಳ ನಂತರ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೂ ಈ ಸಿನಿಮಾ ಬರಲಿದೆ.
3- ಮೇಕಿಂಗ್‌ನಲ್ಲಿ ಅದ್ದೂರಿತನ
ಜೋಗಿ ಪ್ರೇಮ್ ನಿರ್ದೇಶನದ ಕೆಡಿ ಸಿನಿಮಾವು ಧ್ರುವ ಅವರ ಕರಿಯರ್‌ನಲ್ಲೇ ದೊಡ್ಡ ಬಜೆಟ್‌ನ ಸಿನಿಮಾ. ಅದ್ದೂರಿ ಮೇಕಿಂಗ್ ಈ ಚಿತ್ರದ ಹೈಲೈಟ್. ಈ ಚಿತ್ರದ ಬಜೆಟ್ ಸುಮಾರು 120 ಕೋಟಿ ರೂ. ಎಂದು ಹೇಳಲಾಗಿದೆ. 70ರ ದಶಕದ ಬ್ಯಾಕ್‌ಡ್ರಾಪ್‌ನಲ್ಲಿ ನಡೆಯುವ ಕಥೆ ಇದಾಗಿದ್ದು, ಹಳೆಯ ಕಾಲದ ಸ್ಟೈಲ್, ದೊಡ್ಡ ದೊಡ್ಡ ಸೆಟ್‌ಗಳು ಇಲ್ಲಿವೆ.
KD ಟ್ರೇಲರ್‌ನಲ್ಲಿ ಧ್ರುವ ಸರ್ಜಾ ಅಬ್ಬರ: ಈ ಬಾರಿ ರಕ್ತಸಿಕ್ತ ರೌಡಿಸಂ ಲೋಕದ ಕಥೆ ಹೇಳ್ತಾರೆ ʻಜೋಗಿʼ ಪ್ರೇಮ್
4- ಧ್ರುವ ಸರ್ಜಾಗೆ ಭಿನ್ನ ಲುಕ್
ರೆಟ್ರೋ ಶೈಲಿಯ ಕೆಡಿ ಚಿತ್ರಕ್ಕಾಗಿ ಧ್ರುವ ಸರ್ಜಾ ಅವರು ಹಿಂದೆಂದೂ ಕಾಣದ ಮಾಸ್ ಹಾಗೂ ಖಡಕ್ ಅವತಾರದಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳಿಗೆ ಇಷ್ಟವಾಗಲಿದೆ. ಅವರ ಮ್ಯಾಸ್ ಪ್ರೆಸೆನ್ಸ್ ಅಭಿಮಾನಿಗಳಿಗೆ ದೊಡ್ಡ ಹೈಲೈಟ್. ಅವರ ಡೈಲಾಗ್ ಡೆಲಿವರಿ ಕೂಡ ಭಿನ್ನವಾಗಿದೆ.
5- ದೊಡ್ಡ ಕಲಾವಿದರ ಬಳಗ
ಧ್ರುವ ಸರ್ಜಾ ಅವರ ಹಿಂದಿನ ಎಲ್ಲಾ ಸಿನಿಮಾಗಳಿಗೆ ಹೋಲಿಸಿದರೆ, ಈ ಬಾರಿ ಸಾಕಷ್ಟು ಹಿರಿಯ ಹಾಗೂ ಅನುಭವಿ ಕಲಾವಿದರ ಜೊತೆಗೆ ಧ್ರುವ ತೆರೆಹಂಚಿಕೊಂಡಿದ್ದಾರೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್ ಇನ್ನೂ ಮುಂತಾದ ಅನೇಕರು ಇಲ್ಲಿ ನಟಿಸಿದ್ದಾರೆ. ಧ್ರುವ ಸರ್ಜಾ ಅವರ ಡ್ಯಾನ್ಸ್ ಮತ್ತು ಆಕ್ಷನ್ ಅನ್ನು ಫ್ಯಾನ್ಸ್ ಜಾಸ್ತಿ ನಿರೀಕ್ಷೆ ಮಾಡುತ್ತಾರೆ. ಅದಿಲ್ಲಿ ತುಸು ಜಾಸ್ತಿಯೇ ಇದೆ ಎಂಬ ಮಾತುಗಳು ಕೇಳಿಬಂದಿವೆ.