MI vs SRH: 44 ಬಾಲ್‌ಗಳಲ್ಲಿ ಶತಕ ಬಾರಿಸಿ ಸನತ್ ಜಯಸೂರ್ಯ ದಾಖಲೆ ಮುರಿದ ರಯಾನ್ ರಿಕೆಲ್ಟನ್!
Ryan Rickelton Century: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ರಯಾನ್ ರಿಕೆಲ್ಟನ್ ಅವರು ಕೇವಲ 44 ಎಸೆತಗಳಲ್ಲಿ ಶತಕ ಬಾರಿಸಿದ್ದಾರೆ. ಆ ಮೂಲಕ ಮುಂಬೈ ಇಂಡಿಯನ್ಸ್ ಪರ ವೇಗದ ಶತಕ ಬಾರಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
ಶತಕ ಸಿಡಿಸಿ ಸನತ್ ಜಯಸೂರ್ಯ ದಾಖಲೆ ಮುರಿದ ರಿಕೆಲ್ಟನ್. -
ಮುಂಬೈ: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ 41ನೇ ಪಂದ್ಯದಲ್ಲಿ (SRH vs MI) ಮುಂಬೈ ಇಂಡಿಯನ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ರಯಾನ್ ರಿಕೆಲ್ಟನ್ (Ryan Rickelton) ಸ್ಪೋಟಕ ಶತಕ ಬಾರಿಸಿದರು. ಆ ಮೂಲಕ ತಮ್ಮ ಐಪಿಎಲ್ ವೃತ್ತಿ ಜೀವನದಲ್ಲಿ ಮೊದಲ ಶತಕ ದಾಖಲಿಸಿದರು ಹಾಗೂ ಮುಂಬೈ ಇಂಡಿಯನ್ಸ್ ಪರ ದೊಡ್ಡ ದಾಖಲೆಯೊಂದನ್ನು ಮುರಿದಿದ್ದಾರೆ. ಇವರ ಶತಕದ ಬಲದಿಂದ ಐದು ಬಾರಿ ಚಾಂಪಿಯನ್ಸ್ ಪಂದ್ಯದಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕಿತು.
ಬುಧವಾರ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಆಯ್ಕೆ ಮಾಡಿಕೊಂಡ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರ ನಿರ್ಧಾರವನ್ನು ಆರಂಭಿಕರಾದ ರಯಾನ್ ರಿಕೆಲ್ಟನ್ ಹಾಗೂ ವಿಲ್ ಜ್ಯಾಕ್ಸ್ 93 ರನ್‌ಗಳ ಜೊತೆಯಾಟವನ್ನು ಆಡುವ ಮೂಲಕ ಸಮರ್ಥಿಸಿಕೊಂಡರು. ಸ್ಪೋಟಕ ಬ್ಯಾಟ್ ಮಾಡಿದ ವಿಲ್ ಜ್ಯಾಕ್ಸ್ 22 ಎಸೆತಗಳಲ್ಲಿ 46 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
MI vs SRH: ಸತತ ನಾಲ್ಕನೇ ಪಂದ್ಯದಿಂದಲೂ ರೋಹಿತ್ ಶರ್ಮಾ ಔಟ್! ಹಿಟ್‌ಮ್ಯಾನ್ ಕೆರಿಯರ್ ಅಂತ್ಯ?
ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಕೊನೆಯವರೆಗೂ ಬ್ಯಾಟ್ ಮಾಡಿದ ಮತ್ತೊಬ್ಬ ಆರಂಭಿಕ ರಯಾನ್ ರಿಕೆಲ್ಟನ್ ಹೋಂ ಗ್ರೌಂಡ್ ಪಿಚ್‌ನ ಲಾಭವನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡರು. ವಿಲ್ ಜ್ಯಾಕ್ಸ್ ಔಟ್ ಆದ ಬಳಿಕ ತಂಡದ ಜವಾಬ್ದಾರಿ ಹೊತ್ತ ರಿಯಾನ್ ರಿಕೆಲ್ಟನ್, ಎಸ್‌ಆರ್‌ಎಚ್ ಬೌಲರ್‌ಗಳ ರಣತಂತ್ರವನ್ನು ಛದ್ರಗೊಳಿಸಿದರು. ಅವರು ಆಡಿದ 44 ಎಸೆತಗಳಲ್ಲಿ ಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ಮುಂಬೈ ಇಂಡಿಯನ್ಸ್ ಪರ ವೇಗದ ಐಪಿಎಲ್ ಶತಕವನ್ನು ಸಿಡಿಸಿ ವಿಶೇಷ ದಾಖಲೆಯನ್ನು ಬರೆದರು.
📸📸
— IndianPremierLeague (@IPL) April 29, 2026
Hang it in the Louvre 🖼️💙
That maiden 💯 feeling 🥳
Updates ▶️ https://t.co/ypWTkEr2Rc#TATAIPL | #KhelBindaas | #MIvSRH pic.twitter.com/R1GfehI89D
ಸನತ್ ಜಯಸೂರ್ಯ ದಾಖಲೆ ಮುರಿದ ರಿಕೆಲ್ಟನ್
44 ಎಸೆತಗಳಲ್ಲಿ ರಿಕೆಲ್ಟನ್ 7 ಸಿಕ್ಸರ್ ಹಾಗೂ 9 ಬೌಂಡರಿಗಳನ್ನು ಬಾರಿಸಿದರು. ತಮ್ಮ ಚೊಚ್ಚಲ ಶತಕದ ಮೂಲಕ ಶ್ರೀಲಂಕಾ ದಿಗ್ಗಜ ಸನತ್ ಜಯಸೂರ್ಯ ಅವರ ದಾಖಲೆಯನ್ನು ರಿಕೆಲ್ಟನ್ ಮುರಿದಿದ್ದಾರೆ. ಜಯಸೂರ್ಯ 2008ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು 45 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಇದೀಗ ರಯಾನ್ ರಿಕೆಲ್ಟನ್ ಮುಂಬೈ ಪರ ಶತಕವನ್ನು ಪೂರ್ಣಗೊಳಿಸಲು ಒಂದು ಎಸೆತ ಕಡಿಮೆ ತೆಗೆದುಕೊಂಡಿದ್ದಾರೆ.
𝙁𝙖𝙨𝙩𝙚𝙨𝙩 𝙃𝙪𝙣𝙙𝙧𝙚𝙙 𝙛𝙤𝙧 #MI 𝙞𝙣 #TATAIPL 𝙝𝙞𝙨𝙩𝙤𝙧𝙮 💯
— IndianPremierLeague (@IPL) April 29, 2026
Ryan Rickelton reaches the milestone in just 4️⃣4️⃣ deliveries 👏
Updates ▶️ https://t.co/ypWTkEr2Rc#KhelBindaas | #MIvSRH | @mipaltan pic.twitter.com/bJt3aSWIY4
ಮುಂಬೈ ಇಂಡಿಯನ್ಸ್ ಪರ ವೇಗದ ಶತಕ ಸಿಡಿಸಿದ ಬ್ಯಾಟರ್ಸ್
44 - ರಯಾನ್ ರಿಕೆಲ್ಟನ್ vs ಎಸ್‌ಆರ್‌ಎಚ್, ವಾಂಖೆಡೆ, 2026
45 - ಸನತ್ ಜಯಸೂರ್ಯ vs ಸಿಎಸ್‌ಕೆ, ವಾಂಖೆಡೆ, 2008
45 - ತಿಲಕ್ ವರ್ಮಾ vs ಜಿಟಿ, ಅಹಮದಾಬಾದ್, 2026
47 - ಕ್ಯಾಮರೂನ್ ಗ್ರೀನ್ vs ಎಸ್‌ಆರ್‌ಎಚ್, ವಾಂಖೆಡೆ, 2023
49 - ಸೂರ್ಯಕುಮಾರ್ vs ಜಿಟಿ, ವಾಂಖೆಡೆ, 2023
ಅಜೇಯ 123 ರನ್ ಸಿಡಿಸಿದ ರಿಕೆಲ್ಟನ್
ಶತಕ ಸಿಡಿಸಿದ ಬಳಿಕವೂ ತಮ್ಮ ಸ್ಪೋಟಕ ಬ್ಯಾಟಿಂಗ್ ಮುಂದುವರಿಸಿದ ರಯಾನ್ ರಿಕೆಲ್ಟನ್, ಅಂತಿಮವಾಗಿ 55 ಎಸೆತಗಳಲ್ಲಿ 8 ಸಿಕ್ಸರ್ ಹಾಗೂ 10 ಬೌಂಡರಿಗಳೊಂದಿಗೆ ಅಜೇಯ 123 ರನ್‌ಗಳೊಂದಿಗೆ ಪೆವಿಲಿಯನ್‌ಗೆ ಮರಳಿದರು. ಇವರ ಸ್ಪೋಟಕ ಬ್ಯಾಟಿಂಗ್ ಸಹಾಯದಿಂದ ಮುಂಬೈ ಇಂಡಿಯನ್ಸ್ ತಂಡ, ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 243 ರನ್‌ಗಳನ್ನು ಕಲೆ ಹಾಕಿತು ಹಾಗೂ ಎದುರಾಳಿ ಸನ್‌ರೈಸರ್ಸ್ ಹೈದರಾಬಾದ್‌ಗೆ 244 ರನ್‌ಗಳ ಗುರಿಯನ್ನು ನೀಡಿತು.