ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dev Anand: ಬ್ಲಾಕ್‌ ಕೋಟ್‌ ಹಾಕಿದ್ರೆ ಜೈಲು ಎಂದು ಈ ನಟನಿಗೆ ನ್ಯಾಯಲಯವೇ ಎಚ್ಚರಿಕೆ ನೀಡಿತ್ತು! ಅಂಥದ್ದೇನಿದೆ?

ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ನಟ ದೇವಾನಂದ್ ಅವರು ಅನೇಕ ವರ್ಷದಿಂದ ಕಲಾ ಸೇವೆ ನೀಡಿದ್ದಾರೆ. 1958ರಲ್ಲಿ ತೆರೆಕಂಡ ಕಾಲಾ ಪಾನಿ (Kala Pani) ಮತ್ತು 1961ರಲ್ಲಿ ತೆರೆಕಂಡ ಹಮ್ ದೋನೋ (Hum Dono) ಸಿನಿಮಾಗಳಲ್ಲಿ ಬ್ಲ್ಯಾಕ್ ಕೋಟ್ ಧರಿಸಿ ಅದನ್ನೇ ಒಂದು ಫ್ಯಾಷನ್ ಆಗಿ ಅವರು ಮಾರ್ಪ‌ಡಿಸಿದ್ದರು.

ಬಾಲಿವುಡ್ ನಟ ದೇವ್ ಆನಂದ್ ಬ್ಲ್ಯಾಕ್ ಕೋಟ್ ಹಿಂದಿನ ಸ್ಟೋರಿ ಏನು ಗೊತ್ತಾ?

ಬಾಲಿವುಡ್ ನಟ ದೇವ್ ಆನಂದ್ -

Profile
Pushpa Kumari Dec 12, 2025 7:02 PM

ನವದೆಹಲಿ, ಡಿ. 12: ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ನಟ ದೇವಾನಂದ್ (Dev Anand) ಅವರು ಅನೇಕ ವರ್ಷದಿಂದ ಕಲಾ ಸೇವೆ ನೀಡಿದ್ದಾರೆ. ಬಾಲಿವುಡ್ ಸಿನಿಮಾರಂಗದಲ್ಲಿ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದ ಇವರು ನಮ್ಮೊಂದಿಗೆ ಇಲ್ಲವಾಗಿದ್ದರೂ ಕೂಡ ಅವರು ನಟಿಸಿದ್ದ ಸಿನಿಮಾ ಮೂಲಕ ಸದಾ ಜೀವಂತ ಎನಿಸಿದ್ದಾರೆ. ಅವರ ಅಭಿನಯ , ಹಾವಭಾವ, ವಿಭಿನ್ನ ಸ್ಟೈಲ್ ಗಳು ಆ ಕಾಲದಲ್ಲಿಯೇ ಸಿನಿ ಪ್ರಿಯರ ಮನಗೆದ್ದಿತ್ತು. ಅವರ ಅಭಿನ ಯದ ಹಲವಾರು ಚಿತ್ರಗಳಲ್ಲಿ ತಮ್ಮದೇ ಆದ ಐಕಾನಿಕ್ ಸ್ಟೈಲ್ ಅನ್ನೇ ಮುಂದುವರಿಸಿಕೊಂಡು ಹೋಗಿದ್ದರು. 1958ರಲ್ಲಿ ತೆರೆಕಂಡ ಕಾಲಾ ಪಾನಿ (Kala Pani) ಮತ್ತು 1961ರಲ್ಲಿ ತೆರೆಕಂಡ ಹಮ್ ದೋನೋ (Hum Dono) ಸಿನಿಮಾಗಳಲ್ಲಿ ಬ್ಲ್ಯಾಕ್ ಕೋಟ್ ಧರಿಸಿ ಅದನ್ನೇ ಒಂದು ಫ್ಯಾಷನ್ ಆಗಿ ಅವರು ಮಾರ್ಪ‌ ಡಿಸಿದ್ದರು. ಅವರ ಹೇರ್ ಸ್ಟೈಲ್ ಆ ಬ್ಲ್ಯಾಕ್ ಕೋಟ್‌ಗೆ ಸಂಪೂರ್ಣವಾಗಿ ಪೂರಕ ವಾಗಿದ್ದು ಅದು ಅವರ ಟ್ರೇಡ್‌ಮಾರ್ಕ್ ಎಂದೆ ಆ ಕಾಲದಲ್ಲಿ ಫೇಮಸ್ ಆಗಿತ್ತು. ಆದರೆ ನಟ ದೇವ್ ಆನಂದ್ ಅವರ ಇದೇ ಕೋಟ್ ಸುತ್ತ ಅನೇಕ ಕಥೆಗಳಿದ್ದು ಈ ಬಗ್ಗೆ ಮಾಹಿತಿ ಇಲ್ಲಿದೆ.

ನಟ ದೇವ್ ಆನಂದ್ ಅವರು ಸಿನಿಮಾ ಮಾತ್ರವಲ್ಲದೆ ಸಾರ್ವಜನಿಕವಾಗಿ ರಂಗದಲ್ಲಿ ಕೆಲವು ಕಾರ್ಯಕ್ರಮಕ್ಕೆ ಭಾಗಿಯಾಗುವ ಸಂದರ್ಭದಲ್ಲಿ ಕೂಡ ಅವರು ಕಪ್ಪು ಕೋಟ್ ಅನ್ನೇ ಧರಿಸುತ್ತಿ ದ್ದರಂತೆ. ಅವರ ಸ್ಟೈಲ್ ಕಂಡು ಯುವತಿಯರು ಅವರ ಚೆಂದಕ್ಕೆ ಮನ ಸೋಲುತ್ತಿದ್ದದ್ದು ಇದೆ. ಅವರನ್ನು ಕೋಟ್ ನಲ್ಲಿ ಕಾಣಲೆಂದೆ ಬಹುತೇಕ ಯುವತಿಯರು ಹಂಬಲಿಸುತ್ತಿದ್ದರಂತೆ. ಅವರ ಸಿನಿಮಾ ಕಂಡ ಕೆಲವು ಹುಡುಗಿಯರು ಕೂಡ ಅವರ ಈ ಸ್ಟೈಲ್ ಕಂಡು ಸಿನಿಮಾ ಮಂದಿರಗಳಲ್ಲಿ ಮೂರ್ಛೆ ಹೋಗಿದ್ದರೆಂದು ಕೂಡ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇನ್ನೊಂದು ಮಾಹಿತಿಯ ಪ್ರಕಾರ, ಅವರು ಬ್ಲ್ಯಾಕ್ ಕೋಟ್ ಧರಿಸಿದ್ದಾಗ ಅವರನ್ನು ಕಾಣಲು ಯುವತಿಯರು, ಮಕ್ಕಳು , ಮಹಿಳೆಯರು ಎಲ್ಲರೂ ಸಾರ್ವಜನಿಕವಾಗಿ ಮುತ್ತಿಗೆ ಹಾಕುತ್ತಿದ್ದರಂತೆ. ಹೀಗಾಗಿ ಅವರಿಗೆ ಬಹಿರಂಗವಾಗಿ ಓಡಾಡುವುದು ಕಷ್ಟವಾಗಿತ್ತು. ಜನರು ಏಕಾಏಕಿ ಅವರನ್ನು ಕಾಣಲು ಮುತ್ತಿಗೆ ಹಾಕುವ ಕಾರಣ ಕಾಲ್ತುಳಿತ, ಗಲಾಟೆ ಆಗುವ ಸಾಧ್ಯತೆ ಹೆಚ್ಚಿ ರುತ್ತದೆ ಎಂಬ ಕಾರಣಕ್ಕೆ ಪೊಲೀಸ್ ಅಧಿಕಾರಿಗಳು ದೇವ್ ಆನಂದ್ ಅವರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಕಪ್ಪು ಕೋಟುಗಳನ್ನು ಧರಿಸದಂತೆ ಸಲಹೆ ನೀಡಿದ್ದಾರೆ ಎಂದು ವರದಿಯೊಂದರಲ್ಲಿ ತಿಳಿದು ಬಂದಿದೆ.

Padayappa Movie: ಸೂಪರ್ ಡೂಪರ್ ಹಿಟ್ ಆಗಿದ್ದ `ಪಡಯಪ್ಪ' ಸಿನಿಮಾವನ್ನ ಐಶ್ವರ್ಯಾ ರೈ ರಿಜೆಕ್ಟ್‌ ಮಾಡಿದ್ದೇಕೆ? ರಜನಿಕಾಂತ್‌ ಹೇಳಿದ್ದೇನು?

ಕಾಲ ಕ್ರಮೇಣ ನಟ ದೇವ್ ಆನಂದ್ ಅವರಿಗೂ ತನ್ನ ಬ್ಲ್ಯಾಕ್ ಕೋಟ್ ಉಡುಪಿನಿಂದಾಗಿ ಜನರು ಟ್ರೆಂಡ್ ಇಷ್ಟಪಡುತ್ತಿದ್ದಾರೆ ಎಂಬ ಅರಿವಾಯ್ತು. ಆದರೆ ಅವರು ಎಲ್ಲಿಗೆ ಹೋಗಬೇಕಾದರೂ ವಿಶೇಷ ರಕ್ಷಣೆ ಭದ್ರತಾ ವ್ಯವಸ್ಥೆ ಅಗತ್ಯವಾಯ್ತು ಎಂದು ಸ್ವತಃ ಅವರೇ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ. ಅವರ ಆತ್ಮಚರಿತ್ರೆ 'ರೊಮ್ಯಾನ್ಸಿಂಗ್ ವಿಥ್ ಲೈಫ್' ನಲ್ಲಿ ಕೂಡ ದೇವ್ ಆನಂದ್ ಅವರ ಕಪ್ಪು ಕೋಟ್ ಬಗ್ಗೆ ಆಗ ಏನೆಲ್ಲ ಗದ್ದಲ ಸೃಷ್ಟಿಯಾಗಿತ್ತು ಎಂದು ಉಲ್ಲೇಖಿಸಲಾಗಿದೆ. ಕೊನೆಗೆ ಇದೆಲ್ಲದರಿಂದ ಬೇಸರವಾಗಿ ಅವರೇ ಸ್ವ ಇಚ್ಛೆಯಿಂದ ಅದನ್ನು ಧರಿಸುವುದನ್ನು ನಿಲ್ಲಿಸಿದರು. ಅನಂತರ ದಿನದಲ್ಲಿ ತಮ್ಮ ಸಿನಿಮಾದ ಪಾತ್ರಗಳಲ್ಲಿ ಕೂಡ ಸೂಟ್‌ಗಳನ್ನು ಮಾತ್ರವೇ ಧರಿಸಿದರು. ಅವುಗಳಲ್ಲಿ ಬಹುತೇಕ ನೀಲಿಬಣ್ಣದ ಬಣ್ಣಗಳನ್ನೇ ಹೆಚ್ಚು ಅವರು ಬಳಸುತ್ತಿದ್ದರು ಎಂದು ಅವರ ಆತ್ಮಚರಿತ್ರೆಯಲ್ಲಿ ಈ ಬಗ್ಗೆ ತಿಳಿಸಿದ್ದರು.

ನಟ ದೇವ್ ಆನಂದ್ ಅವರು ಬ್ಲ್ಯಾಕ್ ಕೋಟ್ ನಿಷೇಧ ಮಾಡಿದ್ದ ವಿಚಾರವು ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿತು. ಇಂದಿಗೂ ಅವರು ಕಪ್ಪು ಕೋಟ್ ತ್ಯೆಜಿಸಿದ್ದ ವಿಚಾರದ ಅನೇಕ ಸಂಗತಿಗಳು ನಿಗೂಢವಾಗಿಯೇ ಉಳಿದುಕೊಂಡಿದೆ. ಒಟ್ಟಾರೆಯಾಗಿ ಅವರ ವರ್ಚಸ್ಸು, ಸ್ಟೈಲ್ ಆ ಕಾಲದಲ್ಲಿ ಆ ಮಟ್ಟಿಗೆ ಖ್ಯಾತಿ ಪಡೆದಿತ್ತು ಎಂಬ ಸುದ್ದಿ ಈಗ ಮತ್ತೆ ಮುನ್ನಲೆಗೆ ಬಂದಿದ್ದು ಅವರ ಸಿನಿಮಾ , ವೈಯಕ್ತಿಕ ಜೀವನ ಇತರ ವಿಚಾರಗಳು ಇದೀಗ ಮತ್ತೆ ಕೂಡ ಸುದ್ದಿಯಾಗುತ್ತಿದೆ.