Padayappa Movie: ಸೂಪರ್ ಡೂಪರ್ ಹಿಟ್ ಆಗಿದ್ದ `ಪಡಯಪ್ಪ' ಸಿನಿಮಾವನ್ನ ಐಶ್ವರ್ಯಾ ರೈ ರಿಜೆಕ್ಟ್ ಮಾಡಿದ್ದೇಕೆ? ರಜನಿಕಾಂತ್ ಹೇಳಿದ್ದೇನು?
Rajinikanth: ಸೂಪರ್‌ಸ್ಟಾರ್ ರಜನಿಕಾಂತ್ ಹುಟ್ಟುಹಬ್ಬದ ವಿಶೇಷವಾಗಿ ಡಿಸೆಂಬರ್ 12ರಂದು ಪಡೆಯಪ್ಪ ಸಿನಿಮಾ ರಿ-ರಿಲೀಸ್ ಆಗುತ್ತಿದೆ. ಇದೇ ಸಂದರ್ಭದಲ್ಲಿ ರಜನಿಕಾಂತ್ ಪಡೆಯಪ್ಪ ಪಾರ್ಟ್-2 ಸಿನಿಮಾ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ. ಈ ಸಿನಿಮಾದ ಕಥೆಯನ್ನ ಬರೆಯುವುದರ ಜೊತೆಗೆ ನಟನೆ ಮಾಡಿ, ನಿರ್ಮಾಣ ಕೂಡಾ ಮಾಡಿದ್ದರು ನಟ ರಜನಿಕಾಂತ್. ಈಗ 25 ವರ್ಷಗಳ ಬಳಿಕ ಈ ಸಿನಿಮಾವನ್ನು ಮರುಬಿಡುಗಡೆ ಮಾಡುತ್ತಿದ್ದಾರೆ ತಲೈವ.
ರಜನಿಕಾಂತ್ -
ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ಹುಟ್ಟುಹಬ್ಬದ ವಿಶೇಷವಾಗಿ ಡಿಸೆಂಬರ್ 12ರಂದು ಪಡೆಯಪ್ಪ (Padayappa) ಸಿನಿಮಾ ರಿ-ರಿಲೀಸ್ ಆಗುತ್ತಿದೆ. ಇದೇ ಸಂದರ್ಭದಲ್ಲಿ ರಜನಿಕಾಂತ್ ಪಡೆಯಪ್ಪ ಪಾರ್ಟ್-2 ಸಿನಿಮಾ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ. ಈ ಸಿನಿಮಾದ ಕಥೆಯನ್ನ ಬರೆಯುವುದರ ಜೊತೆಗೆ ನಟನೆ ಮಾಡಿ, ನಿರ್ಮಾಣ ಕೂಡಾ ಮಾಡಿದ್ದರು ನಟ ರಜನಿಕಾಂತ್. ಈಗ 25 ವರ್ಷಗಳ ಬಳಿಕ ಈ ಸಿನಿಮಾವನ್ನು ಮರುಬಿಡುಗಡೆ (Re Release) ಮಾಡುತ್ತಿದ್ದಾರೆ ತಲೈವ. ಇನ್ನು ಈ ಸಿನಿಮಾದಲ್ಲಿ ಮೊದಲು ಐಶ್ವರ್ಯ ರೈ ಅವರನ್ನು ವಿಲನ್ ಪಾತ್ರದಲ್ಲಿ ನಟಿಸುವುದಕ್ಕೆ ಅಪ್ರೋಚ್ ಮಾಡಲಾಗಿತ್ತಂತೆ.ಆದ್ರೆ ರಮ್ಯಾ ಸೆಲೆಕ್ಟ್ ಮಾಡಿದ್ದೇಕೆ?
'ಪಡಯಪ್ಪ' ಚಿತ್ರದ ಮರು ಬಿಡುಗಡೆಯ ಟ್ರೇಲರ್
'ಪಡಯಪ್ಪ' ಚಿತ್ರದ ಮರು ಬಿಡುಗಡೆಯ ಟ್ರೇಲರ್ ಈಗ ಬಿಡುಗಡೆಯಾಗಿದ್ದು, ಡಿಸೆಂಬರ್ 12 ರಂದು ಚಿತ್ರ ಮತ್ತೆ ಚಿತ್ರಮಂದಿರಗಳಿಗೆ ಬರುವುದಕ್ಕೆ ವೇದಿಕೆ ಸಜ್ಜುಗೊಂಡಿದೆ. 90ರ ದಶಕದ ಬ್ಲಾಕ್‌ಬಸ್ಟರ್ ಚಿತ್ರ ಪಡಯಪ್ಪ ಅದ್ಧೂರಿಯಾಗಿ ತೆರೆಕಾಣಲು ಸಿದ್ಧವಾಗಿದೆ.
1999 ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ರಜನಿಕಾಂತ್, ರಮ್ಯಾ ಕೃಷ್ಣನ್ ಮತ್ತು ಸೌಂದರ್ಯ ನಟಿಸಿದ್ದಾರೆ. ಪಡಯಪ್ಪ ಸಿನಿಮಾದಲ್ಲಿ ನೀಲಾಂಬರಿ ಪಾತ್ರ ಬಹಳ ವಿಶಿಷ್ಟವಾದುದು.
'ಪಡಯಪ್ಪ' ಚಿತ್ರವನ್ನು ರಜನಿಕಾಂತ್ ಕಥೆಯನ್ನು ಬರೆದಿದ್ದಲ್ಲದೆ, ಚಿತ್ರವನ್ನು ನಿರ್ಮಿಸಿದರು. ನಿರ್ದೇಶಕ ಕೆ.ಎಸ್. ರವಿಕುಮಾರ್ ಚಿತ್ರಕಥೆಯನ್ನು ಅಭಿವೃದ್ಧಿಪಡಿಸಿದರು. ಈ ಚಿತ್ರವು 210 ಕ್ಕೂ ಹೆಚ್ಚು ಮುದ್ರಣಗಳು ಮತ್ತು 700,000 ಆಡಿಯೊ ಕ್ಯಾಸೆಟ್‌ಗಳೊಂದಿಗೆ ವಿಶ್ವಾದ್ಯಂತ ಬಿಡುಗಡೆಯಾದ ಮೊದಲ ತಮಿಳು ಚಿತ್ರವಾಯಿತು.
ಪಡೆಯಪ್ಪ ಸಿನಿಮಾದ ಹಕ್ಕುಗಳನ್ನು ಯಾರಿಗೂ ಕೊಟ್ಟಿಲ್ಲ. ಸ್ಯಾಟಲೈಟ್ ಹಾಗೂ ಓಟಿಟಿ ಹಕ್ಕುಗಳು ಈಗಲೂ ರಜನಿಕಾಂತ್ ಅವರ ಬಳಿಯೇ ಇವೆ. ಸನ್ ಟಿವಿಗೆ ಕೇವಲ ಎರಡು ಬಾರಿ ಮಾತ್ರ ಪ್ರಸಾರಕ್ಕೆ ಅವಕಾಶ ಕೊಟ್ಟಿದ್ದಾಗಿ ಹೇಳಿಕೊಂಡಿದ್ದಾರೆ.
ರಮ್ಯಾ ಕೃಷ್ಣನ್ ಆಯ್ಕೆ ಹೇಗೆ?
ಈ ಚಿತ್ರಕ್ಕೆ ನೀಲಾಂಬರಿ ಪಾತ್ರಕ್ಕೆ ಹಲವಾರು ಪ್ರಮುಖ ಮಹಿಳಾ ನಟಿಯರನ್ನು ಆಯ್ಕೆ ಮಾಡಲಾಯಿತು. ರಜನಿಕಾಂತ್, "ನಾವು ಐಶ್ವರ್ಯಾ ರೈ ಅವರನ್ನು ನೀಲಾಂಬರಿ ಪಾತ್ರ ಮಾಡಬೇಕೆಂದು ಬಯಸಿದ್ದೆವು. ಐಶ್ವರ್ಯ ರೈ ನಂತರ ಯದ್ವಾತದ್ವ ಬ್ಯುಸಿ ಇದ್ದುದ್ದರಿಂದ ಆಗಲ್ಲ ಎಂದು ಬಿಟ್ಟರು. ಐಶ್ವರ್ಯ ರೈಗಾಗಿ ಎರಡು ವರ್ಷ ಬೇಕಾದರೂ ಕಾಯಲು ಚಿತ್ರತಂಡ ಸಿದ್ಧವಿತ್ತು. ಅದಕ್ಕೂ ಮೊದಲು ಅತಿಲೋಕ ಸುಂದರಿ ಶ್ರೀದೇವಿಯಿಂದ ಹಿಡಿದು ಮೋಹಕ ನಟಿ ಮಾಧುರಿ ದೀಕ್ಷಿತ್‌ವರೆಗೆ ಹಲವರ ಬಗ್ಗೆ ಚರ್ಚೆ ಮಾಡಲಾಗಿತ್ತು. ಆದರೆ ಕಡೆಗೂ ಐಶ್ವರ್ಯ ರೈ ಪಡೆಯಪ್ಪದಲ್ಲಿ ನಾಯಕಿಯಾಗಲು ಒಪ್ಪಲಿಲ್ಲ ಎಂದು ರಜನಿಕಾಂತ್ ಹೇಳಿದ್ದರು.
"ಆದರೆ ನಾವು ನೀಲಾಂಬರಿಯನ್ನು ಪಾತ್ರದಲ್ಲಿ ನಟಿಸಲು ನಾಯಕಿಯ ಕಣ್ಣುಗಳಲ್ಲಿ ಆ ಶಕ್ತಿಯನ್ನು ಹುಡುಕುತ್ತಿದ್ದೆವು... ಮತ್ತು ರಮ್ಯಾ ಕೃಷ್ಣನ್ ಹೆಸರನ್ನು ಸೂಚಿಸಿದವರು ರವಿಕುಮಾರ್" ಎಂದು ಅವರು ಹೇಳಿದರು.
ಅದಾದ ಮೇಲೆ ರಮ್ಯಾ ಕೃಷ್ಣನ್ ನೀಲಾಂಬರಿ ಪಾತ್ರವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದರು ಎಂದು ರಜನಿಕಾಂತ್ ಕೊಂಡಾಡಿದ್ದಾರೆ. "ಇದು ನನ್ನ ಹೃದಯಕ್ಕೆ ಹತ್ತಿರವಾಗಿದೆ. ನನಗೆ ಕಲ್ಕಿಯ ಪೊನ್ನಿಯಿನ್ ಸೆಲ್ವನ್ ತುಂಬಾ ಇಷ್ಟ ಮತ್ತು ನಂದಿನಿ ಪಾತ್ರದ ಸುತ್ತ ಸುತ್ತುವ ಕಥಾವಸ್ತುವನ್ನು ಮಾಡಲು ಬಯಸಿದ್ದೆ... ಮತ್ತು ಅದರ ಫಲಿತಾಂಶವೇ ಪಡಯಪ್ಪ." ಎಂದು ಹೇಳಿಕೊಂಡಿದ್ದರು.
ಭರ್ಜರಿ ಪ್ರದರ್ಶನ
ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದು, 5 ಕೋಟಿ ರೂಪಾಯಿ ಬಜೆಟ್‌ಗೆ ಹೋಲಿಸಿದರೆ ಸುಮಾರು 40 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿತ್ತು.
"ಪಡಯಪ್ಪ " ಚಿತ್ರದ ಪ್ರಭಾವವನ್ನು ನೆನಪಿಸಿಕೊಂಡ ರಜನಿಕಾಂತ್, "ನನ್ನ 50 ವರ್ಷಗಳ ವೃತ್ತಿಜೀವನದಲ್ಲಿ, "ಪಡಯಪ್ಪ" ಚಿತ್ರಕ್ಕಾಗಿ ಮಹಿಳೆಯರು ಗೇಟ್ ಮುರಿದು ಸಿನಿಮಾ ನೋಡಿದ್ದರಂತೆ ಎಂದು ಹೇಳಿದರು.
ನೀಲಾಂಬರಿ: ಪಡೆಯಪ್ಪ 2 ಎಂಬ ಶೀರ್ಷಿಕೆಯ ಮುಂದಿನ ಭಾಗ ಬಿಡುಗಡೆ ಮಾಡುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ನಟ ಘೋಷಿಸಿದ್ದಾರೆ .
ಇದನ್ನೂ ಓದಿ: Rajinikanth-Kamal Haasan: ಬರೋಬ್ಬರಿ 4 ದಶಕಗಳ ಬಳಿಕ ತೆರೆಮೇಲೆ ಒಂದಾಗಲಿದ್ದಾರೆ ರಜನಿಕಾಂತ್-ಕಮಲ್ ಹಾಸನ್
"ಈಗ, 2.0 (ರೋಬೋಟ್ ನ ಸೀಕ್ವೆಲ್) ಮತ್ತು ಜೈಲರ್ 2 ನಂತಹ ಸೀಕ್ವೆಲ್ ನೋಡಿದಾಗ , ಪಡೆಯಪ್ಪ 2 ಏಕೆ ಮಾಡಬಾರದು ಎಂದು ನನಗೆ ಆಶ್ಚರ್ಯವಾಗುತ್ತದೆ ? ಶೀರ್ಷಿಕೆ ನೀಲಾಂಬರಿ: ಪಡೆಯಪ್ಪ 2 ಆಗಿರುತ್ತದೆ. ನಾವು ಕಥೆಯ ಬಗ್ಗೆ ಚರ್ಚಿಸುತ್ತಿದ್ದೇವೆ, ಮತ್ತು ಅದು ಪಡೆಯಪ್ಪದಂತೆಯೇ ಚೆನ್ನಾಗಿ ಬಂದರೆ, ನೀಲಾಂಬರಿ ಇರುತ್ತದೆ . ಇದು ಪ್ರೇಕ್ಷಕರಿಗೆ ರೋಮಾಂಚನಕಾರಿಯಾಗಿರುತ್ತದೆ ಮತ್ತು ನಾನು ಅದರ ಮೇಲೆ ಕೆಲಸ ಮಾಡುತ್ತಿದ್ದೇನೆ" ಎಂದು ಅವರು ಹೇಳಿದರು.