BBK 12: ಬಿಗ್ ಬಾಸ್ ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್; ಡಾಗ್ ಸತೀಶ್ ಔಟ್
Bigg Boss Kannada 12: ಬಿಗ್ ಬಾಸ್ ಕನ್ನಡ ಸೀಸನ್ 12ರ ವಾರದ ಮಧ್ಯದಲ್ಲಿ ಎಲಿಮಿನೇಷನ್ ನಡೆದಿದೆ. ಆರಂಭದಲ್ಲಿ ಚಂದ್ರಪ್ರಭಾ ಜತೆ ಜಂಟಿ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ಡಾಗ್ ಸತೀಶ್ ಗುರುವಾರ (ಅ. 16) ದೊಡ್ಮನೆಯಿಂದ ಹೊರ ಬಂದಿದ್ದಾರೆ.

-

ಬೆಂಗಳೂರು, ಅ 17: ಹಲವು ಟ್ವಿಸ್ಟ್‌ಗಳಿಂದ ಕೂಡಿರುವ ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 12ರ (BBK 12) ವಾರದ ಮಧ್ಯದಲ್ಲಿ ಎಲಿಮಿನೇಷನ್ ನಡೆದಿದೆ. ಆರಂಭದಲ್ಲಿ ಚಂದ್ರಪ್ರಭಾ ಜತೆ ಜಂಟಿ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ಡಾಗ್ ಸತೀಶ್ ಗುರುವಾರ (ಅ. 16) ದೊಡ್ಮನೆಯಿಂದ ಹೊರ ಬಂದಿದ್ದಾರೆ. ಈ ಬಾರಿ 2 ಫೈನಲ್ ಇರಲಿದೆ ಎಂದು ಮೊದಲೇ ಸ್ಪರ್ಧಿಗಳಿಗೆ ಎಚ್ಚರಿಕೆ ನೀಡಲಾಗಿತ್ತು. ಅದರಂತೆ ಮೊದಲ ಫಿನಾಲೆಗೂ ಮುನ್ನ ಮಿಡ್ ವೀಕ್ ಎಲಿಮಿನೇಷನ್ ನಡೆದಿದೆ.
ಮಿಡ್ ವೀಕ್ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಡಾಗ್ ಸತೀಶ್ ಔಟ್ ಆಗಿದ್ದಾರೆ. ಮಧ್ಯರಾತ್ರಿ 2 ಗಂಟೆಯಲ್ಲಿ ಏಕಾಏಕಿ ಸೌರನ್ ಹೊಡೆದುಕೊಂಡಿತ್ತು. ಎಲ್ಲರನ್ನೂ ಕೂಡಲೇ ಗಾರ್ಡನ್ ಏರಿಯಾಗೆ ಕರೆಯಲಾಯಿತು. ಮನೆಯೊಳಗಿನ ಸ್ಪರ್ಧಿಗಳ ಅಭಿಪ್ರಾಯದ ಆಧಾರದ ಮೇಲೆ ಯಾರು ಎಲಿಮಿನೇಟ್ ಆಗಬೇಕು ಎಂಬುದನ್ನು ನಿರ್ಧರಿಸಲಾಯಿತು. ಹೆಚ್ಚಿನ ಸ್ಪರ್ಧಿಗಳು ಸತೀಶ್ ಹೆಸರನ್ನು ಸೂಚಿಸಿದ್ದರಿಂದ ಅವರೇ ಔಟ್ ಆಗಿದ್ದಾರೆ. ಆ ಮೂಲಕ ಬಿಗ್ ಬಾಸ್ ಟೈಟಲ್ ಗೆಲ್ಲಬೇಕೆಂಬ ಅವರ ಕನಸು ಅರ್ಧದಲ್ಲೇ ಕಮರಿ ಹೋದಂತಾಗಿದೆ.
ಕಲರ್ಸ್ ಕನ್ನಡ ವಾಹಿನಿಯ ಇನ್‌ಸ್ಟಾಗ್ರಾಮ್ ಪೋಸ್ಟ್:
ಈ ಸುದ್ದಿಯನ್ನೂ ಓದಿ: BBK 12: ಬಿಗ್ ಬಾಸ್ ಮೊದಲ ಫಿನಾಲೆಯಲ್ಲಿ ಎಲಿಮಿನೇಟ್ ಆಗೋದು ಎಷ್ಟು ಮಂದಿ: ಇಲ್ಲಿದೆ ಮಾಹಿತಿ
ಕಾವ್ಯ ಶೈವ, ಅಭಿಷೇಕ್, ಮಂಜು ಭಾಷಿಣಿ, ಅಶ್ವಿನಿ ಎಸ್.ಎನ್., ಚಂದ್ರಪ್ರಭ, ರಾಶಿಕಾ ಶೆಟ್ಟಿ, ಮಾಳು ನಿಪನಾಳ, ಧ್ರವಂತ್, ಸ್ಪಂದನಾ, ಧನುಷ್, ಮಲ್ಲಮ ಸೇರಿ 11 ಮಂದಿ ಸತೀಶ್ ಹೆಸರನ್ನೇ ಸೂಚಿಸಿದ್ದರಿಂದ ಅವರು ಎಲಿಮಿನೇಟ್ ಆಗಿದ್ದಾರೆ.
ಡಾಗ್ ಸತೀಶ್ ಹಿನ್ನೆಲೆ
ಸತೀಶ್ ಡಾಗ್ ಬ್ರೀಡರ್. ಬೀದಿ ನಾಯಿಗಳು, ಕ್ರಾಸ್ ಬ್ರೀಡ್ ಎಂದು ವಿವಿಧ ರೀತಿಯ ನಾಯಿಯನ್ನು ಖರೀದಿಸುತ್ತಾರೆ. ಒಂದು ನಾಯಿ ಖರೀದಿ ಮಾಡೋದು, ಆಮೇಲೆ ಅದನ್ನು ಮಾರೋದು, ಅದರಿಂದ ಇನ್ನೊಂದು ನಾಯಿ ತಗೊಳೋದು ಮಾಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಸತೀಶ್, ತಮ್ಮನ್ನ ʻವಿಶ್ವದ ನಂ.1 ಸೆಲೆಬ್ರಿಟಿ ಡ್ರಾಗ್ ಬ್ರೀಡರ್ʼ, ʻಗ್ಲೋಬಲ್ ಸೂಪರ್‌ಸ್ಟಾರ್ʼ ಎಂದು ಕರೆದುಕೊಳ್ಳುತ್ತಾರೆ.
ಸತೀಶ್ ಅವರ ಬಳಿ 100 ಕೋಟಿ ರೂಪಾಯಿ ನಾಯಿ ಇದೆ ಎನ್ನಲಾಗಿದೆ. ಕತ್ತೆಯಷ್ಟು ಸೈಜ್ ಇದೆ ಎಂದು ಆ ನಾಯಿಗೆ 100 ಕೋಟಿ ರೂಪಾಯಿ ಬೆಲೆ ಕಟ್ಟಲಾಗಿದೆಯಂತೆ ಎಂದು ಅವರೇ ತಿಳಿಸಿದ್ದರು.
ಮೊದಲ ಫಿನಾಲೆ ಯಾವಾಗ?
ಬಿಗ್ ಬಾಸ್ ಕನ್ನಡ ಸೀಸನ್ 12 ಮೊದಲ ಫಿನಾಲೆ ಅಕ್ಟೋಬರ್ 18 ಹಾಗೂ 19ರಂದು ನಡೆಯಲಿದೆ. ಸದ್ಯ ದೊಡ್ಮನೆಯಲ್ಲಿ 16 ಮಂದಿ ಇದ್ದಾರೆ. ವಾರಾಂತ್ಯದಲ್ಲಿ ನಾಲ್ಕರಿಂದ ಐದು ಜನ ಔಟ್ ಆಗಬಹುದು ಎಂದು ಹೇಳಲಾಗುತ್ತಿದೆ. ಈಗಾಗಲೇ ಫಿನಾಲೆಗೆ ಸ್ಪರ್ಧಿಗಳು ಯಾರು ಎಂಬುದು ಫೈನಲ್ ಆಗಿದೆ. ಕಾಕ್ರೋಚ್ ಸುಧಿ, ಅಶ್ವಿನಿ ಗೌಡ, ಮಾಳು ಹಾಗೂ ರಾಶಿಕಾ ಫಿನಾಲೆಯಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನೂ ಯಾರೆಲ್ಲ ಫಿನಾಲೆಗೆ ಆಯ್ಕೆಯಾಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನು ಬಿಗ್ ಬಾಸ್ ಕನ್ನಡ ಸೀಸನ್ 12ರ ಮೊದಲ ವಾರವೇ ಡಬಲ್ ಎಲಿಮಿನೇಷನ್ ನಡೆದು ವೀಕ್ಷಕರಿಗೆ ಅಚ್ಚರಿ ಎದುರಾಗಿತ್ತು. ಸಾಮಾನ್ಯವಾಗಿ ಹಿಂದಿನ ಸೀಸನ್ಗಳಲ್ಲೆಲ್ಲ ಮೊದಲ ವಾರವೇ ಸ್ಪರ್ಧಿಗಳು ಎಲಿಮಿನೇಟ್ ಆಗಿರುವುದು ಬೆರಳಣಿಕಯಷ್ಟು ಮಾತ್ರ. ಸ್ಪರ್ಧಿಗಳು ಮನೆಗೆ ಹೊಂದಿಕೊಂಡು ಸೆಟ್ ಆಗಲಿ ಎಂದು ಮೊದಲ ವಾರ ಎಲಿಮಿನೇಟ್ ಮಾಡುವುದಿಲ್ಲ. ಆದರೆ ಬಿಗ್ ಬಾಸ್ ಕನ್ನಡ ಇತಿಹಾಸದಲ್ಲೇ ಇದೇ ಮೊದಲ ಬಾರಿ ಮೊದಲ ವಾರವೇ ಡಬಲ್ ಎಲಿಮಿನೇಷನ್ ನಡೆದಿದೆ. ಆರ್ಜೆ ಅಮಿತ್ ಹಾಗೂ ಬಾಡಿ ಬಿಲ್ಡರ್ ಕರಿಬಸಪ್ಪ ಎಲಿಮಿನೇಟ್ ಆಗಿದ್ದರು.