ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಾತ್ರಿ ಮಲಗಿದ ನಟ ದಿಲೀಪ್‌ ರಾಜ್‌ ಏಳಲೇ ಇಲ್ಲ; ಇದ್ದಕಿದ್ದಂತೆ ಆಗಿದ್ದೇನು?

Dilip Raj: ಕನ್ನಡ ಕಿರುತೆರೆ, ಸಿನಿಮಾ ರಂಗದ ಖ್ಯಾತ ನಟ, ನಿರ್ಮಾಪಕ, ಕಂಠದಾನ ಕಲಾವಿದ 48 ವರ್ಷದ ದಿಲೀಪ್‌ ರಾಜ್‌ ನಿಧನ ಹೊಂದಿದ್ದಾರೆ. ನಾಯಕ, ಪೋಷಕ ನಟ, ನಿರ್ಮಾಪಕ ಹೀಗೆ ವಿವಿಧ ರಂಗಗಳಲ್ಲಿ ಗುರುತಿಸಿಕೊಂಡಿದ್ದ ಅವರು ಕಿರುತೆರೆ, ಬೆಳ್ಳಿತೆರೆ ಎರಡರಲ್ಲೂ ತಮ್ಮ ಪ್ರತಿಭೆ ಪ್ರದರ್ಶಿಸಿದ್ದರು.

ನಟ ದಿಲೀಪ್‌ ರಾಜ್‌ ಬೆಳಗ್ಗೆ ಏಳಲೇ ಇಲ್ಲ; ಇದ್ದಕಿದ್ದಂತೆ ಆಗಿದ್ದೇನು?

ನಟ ದಿಲೀಪ್‌ ರಾಜ್‌ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole May 13, 2026 9:26 AM

ಬೆಂಗಳೂರು, ಮೇ 13: ಕನ್ನಡ ಕಿರುತೆರೆ, ಸಿನಿಮಾ ರಂಗದ ಖ್ಯಾತ ನಟ, ನಿರ್ಮಾಪಕ, ಕಂಠದಾನ ಕಲಾವಿದ ದಿಲೀಪ್‌ ರಾಜ್‌ (Dilip Raj) (48) ನಿಧನ ಸುದ್ದಿ ಬುಧವಾರ ಬೆಳಗ್ಗೆ ಸಿಡಿಲಿನಂತೆ ಬಂದೆರಗಿದೆ. ನಾಯಕ, ಪೋಷಕ ನಟ, ನಿರ್ಮಾಪಕ ಹೀಗೆ ವಿವಿಧ ರಂಗಗಳಲ್ಲಿ ಗುರುತಿಸಿಕೊಂಡಿದ್ದ ಅವರು ಕಿರುತೆರೆ, ಬೆಳ್ಳಿತೆರೆ ಎರಡರಲ್ಲೂ ತಮ್ಮ ಪ್ರತಿಭೆ ಪ್ರದರ್ಶಿಸಿದ್ದರು. ಅವರ ನಿಧನಕ್ಕೆ ಹಲವು ಕಲಾವಿದರು, ಗಣ್ಯರು ಆಘಾತ ವ್ಯಕ್ತಪಡಿಸಿದ್ದಾರೆ.

ರಾತ್ರಿ ಮಲಗಿದ್ದ ದಿಲೀಪ್‌ ರಾಜ್‌ಗೆ ಇದ್ದಕ್ಕಿದ್ದಂತೆ ಹೃದಯಾಘಾತವಾಗಿದೆ. ತಕ್ಷಣ ಅವರ ಪತ್ನಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ. ಕುಮಾರಸ್ವಾಮಿ ಲೇಔಟ್​ನ ಅಪೋಲೊ ಆಸ್ಪತ್ರೆಯಲ್ಲಿ ದಿಲೀಪ್ ರಾಜ್​ ಕೊನೆಯುಸಿರೆಳೆದಿದ್ದಾರೆ. ಸದ್ಯ ಪಾರ್ಥೀವ ಶರೀರರವನ್ನು ಉತ್ತರಹಳ್ಳಿಯಲ್ಲಿರುವ ಅವರ ನಿವಾಸಕ್ಕೆ ತರಲಾಗಿದ್ದು, ರಜನಿ ಸೇಸೇರಿದಂತೆ ಹಲವು ಗಣ್ಯರು ಆಗಮಿಸಿ ಅಂತಿಮ ದರ್ಶನ ಪಡೆದಿದ್ದಾರೆ.

ಧಾರಾವಾಹಿ ನಿರ್ಮಾಣ

ದಿಲೀಪ್‌ ರಾಜ್‌ ನಟನೆ ಮಾತ್ರವಲ್ಲ ಪತ್ನಿ ಶ್ರೀವಿದ್ಯಾ ಅವರೊಂದಿಗೆ ಸೇರಿ ಧಾರಾವಾಹಿಗಳನ್ನು ನಿರ್ಮಿಸಿದ್ದಾರೆ. ಅವರು ನಿರ್ಮಿಸಿದ ಧಾರಾವಾಹಿಗಲೆಲ್ಲ ಹಿಟ್‌ ಆಗಿವೆ. ‘ಹಿಟ್ಲರ್ ಕಲ್ಯಾಣ’, ʼಪಾರು, ʼನಾ ನಿನ್ನ ಬಿಡಲಾರೆ. ʼಕೃಷ್ಣ ರುಕ್ಕುʼ, ʼವಿದ್ಯಾ ವಿನಾಯಕʼ ಮುಂತಾದ ಧಾರಾವಾಹಿಗಳು ಇವರ ನಿರ್ಮಾಣದಲ್ಲಿ ಮೂಡಿ ಬಂದಿವೆ.

ಕಿರುತೆರೆ ಖ್ಯಾತ ನಟ ದಿಲೀಪ್‌ ರಾಜ್‌ ಹೃದಯಾಘಾತದಿಂದ ನಿಧನ

ಸ್ಯಾಂಡಲ್‌ವುಡ್‌ನಲ್ಲೂ ಜನಪ್ರಿಯ

ಕನ್ನಡ ಕಿರುತೆರೆಯಲ್ಲಿ ಗಮನ ಸೆಳೆದ ದಿಲೀಪ್‌ ರಾಜ್‌ 2005ರಲ್ಲಿ ತೆರೆಕಂಡ ʼಭಾಯ್ ಫ್ರೆಂಡ್ʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶಿಸಿದರು. ಮೊದಲ ಚಿತ್ರ ಹೇಳಿಕೊಳ್ಳುವಂತಹ ಹಿಟ್‌ ಆಗದಿದ್ದರೂ ನಟನಾಗಿ ಗಮನ ಸೆಳೆದರು. 2007ರಲ್ಲಿ ರಿಲೀಸ್‌ ಪುನೀತ್‌ ರಾಜ್‌ಕುಮಾರ್‌-ಪಾರ್ವತಿ ಮೆನನ್‌ ನಟನೆಯ ʼಮಿಲನʼ ಚಿತ್ರದ ಖಳನಾಯಕ ಪಾತ್ರ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತು. ಬಳಿಕ ಅವರು ಅನೇಕ ಚಿತ್ರಗಳಲ್ಲಿ ಮುಖ್ಯ ಪಾತ್ರ ನಿರ್ವಹಿಸಿದರು.

ʼ7 ಓ ಕ್ಲಾಕ್ʼ, ʼಕ್ಷಣ ಕ್ಷಣʼ, ʼಯು ಟರ್ನ್ʼ, ʼಅಂಬಿ ನಿಂಗ್ ವಯಸ್ಸಾಯ್ತೋʼ, ʼಕಿಸ್ಮತ್ʼ ಮುಂತಾದ 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡರು. ದಿಲೀಪ್‌ ನಟಿಸಿದ ʼಲವ್‌ ಮಾಕ್ಟೆಲ್‌ 3' ಸಿನಿಮಾ ಇತ್ತೀಚೆಗೆ ಥಿಯೇಟರ್‌ಗಳಲ್ಲಿ 50 ದಿನ ಪೂರೈಸಿತ್ತು. ಅಲ್ಲದೆ ಒಟಿಟಿಯಲ್ಲಿ ರಿಲೀಸ್‌ ಆಗಿದೆ. ಈ ಚಿತ್ರದ ದಿಲೀಪ್‌ ಪಾತ್ರ ಪ್ರೇಕ್ಷಕರ ಗಮನ ಸೆಳೆದಿದೆ.

ʼಹಿಟ್ಲರ್‌ ಕಲ್ಯಾಣʼದ ಎಜೆ

ಕೆಲವು ವರ್ಷಗಳ ಹಿಂದೆ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದ್ದ ʼಹಿಟ್ಲರ್‌ ಕಲ್ಯಾಣʼ ಧಾರಾವಾಹಿಯಲ್ಲಿ ದಿಲೀಪ್‌ ರಾಜ್‌ ನಿರ್ವಹಿಸಿದ ಅಭಿರಾಮ್ ಜಯಶಂಕರ್ ಆಲಿಯಾಸ್‌ ಎಜೆ ಪಾತ್ರ ಇಂದಿಗೂ ಜನಪ್ರಿಯ. ಮುಖ್ಯ ಪಾತ್ರ ನಿರ್ವಹಿಸುವ ಜತೆ ಅವರು ನಿರ್ಮಾಣವನ್ನೂ ಮಾಡಿದ್ದರು. ಈ ಧಾರಾವಾಹಿಯಲ್ಲಿ ಅವರಿಗೆ ಜಫಡಿಯಾಗಿ ರಜನಿ ಕಾಣಿಸಿಕೊಂಡಿದ್ದರು. ಕಳೆದ ವರ್ಷ ನಿಧನರಾದ ಕಲಾವಿದ ರಾಕೇಶ್‌ ಪೂಜಾರಿ ಕೂಟ ʼಹಿಟ್ಲರ್‌ ಕಲ್ಯಾಣʼ ಧಾರಾವಾಹಿಯಲ್ಲಿ ದಿಲೀಪ್‌ ಜತೆ ನಟಿಸಿದ್ದರು.