ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻಗಿಲ್ಲಿ ನಟನಿಗೆ ಕೇಳಿದಷ್ಟು ಸಂಭಾವನೆ ಕೊಟ್ಟಿದ್ದೀವಿ, ಆದ್ರೂ ಪ್ರಮೋಷನ್‌ ಮಾಡ್ತಿಲ್ಲʼ; ಬಿಗ್‌ ಬಾಸ್‌ ವಿನ್ನರ್‌ ವಿರುದ್ಧ ದಿಢೀರ್‌ ಅಂತ ಫಿಲ್ಮ್‌ ಚೇಂಬರ್‌ಗೆ ದೂರು!

Gilli Actor Controversy: 'ಸರ್ಕಾರಿ ಶಾಲೆ H8' ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ, ಈಗ ಚಿತ್ರದ ಪ್ರಚಾರ ಕಾರ್ಯಗಳಿಗೆ ಅಸಹಕಾರ ತೋರುತ್ತಿದ್ದಾರೆಂದು ನಿರ್ಮಾಪಕರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಕೇಳಿದಷ್ಟು ಸಂಭಾವನೆ ಪಡೆದೂ ಕರೆ ಸ್ವೀಕರಿಸುತ್ತಿಲ್ಲ ಮತ್ತು ಸಿನಿಮಾ ಬಿಡುಗಡೆಯ ದಿನವೂ ಪ್ರಮೋಷನ್‌ಗೆ ಬರುತ್ತಿಲ್ಲ ಎಂದು ನಿರ್ಮಾಪಕರು ಗಂಭೀರ ಆರೋಪ ಮಾಡಿದ್ದಾರೆ.

ಗಿಲ್ಲಿ ನಟನ ವಿರುದ್ಧ ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ನಿರ್ಮಾಪಕ

-

Avinash GR
Avinash GR Feb 6, 2026 6:12 PM

ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರಲ್ಲಿ ಭಾಗವಹಿಸಿ, ವಿನ್ನರ್‌ ಆಗಿದ್ದ ಗಿಲ್ಲಿ ನಟ ಈಗ ನೆಗೆಟಿವ್‌ ವಿಚಾರಕ್ಕೆ ಕಾರಣವಾಗಿದ್ದಾರೆ. ಹೌದು, ಗಿಲ್ಲಿ ನಟ ಅವರ ವಿರುದ್ಧ ದೂರು ನೀಡಲಾಗಿದೆ. ಅದು ಕೂಡ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ. ಅಷ್ಟಕ್ಕೂ ದೂರು ಕೊಟ್ಟವರು ಯಾರು ಅಂತೀರಾ? ಮುಂದೆ ಓದಿ.

'ಸರ್ಕಾರಿ ಶಾಲೆ H8' ಚಿತ್ರದಲ್ಲಿ ಗಿಲ್ಲಿ ನಟ ಅವರು ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. "ನಮ್ಮ ಸಿನಿಮಾದ ಪಾತ್ರಕ್ಕಾಗಿ ಅವರು ಕೇಳಿದಷ್ಟು ಸಂಭಾವನೆಯನ್ನು ನಿರ್ಮಾಪಕರು ನೀಡಿದ್ದೆವು. ಆದರೆ, ಗಿಲ್ಲಿ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸದೆ ಗಿಲ್ಲಿ ನಟ ನಿರ್ಲಕ್ಷ್ಯ ತೋರುತ್ತಿದ್ದಾರೆ" ಎಂದು ನಿರ್ಮಾಪಕರು ಗಂಭೀರ ಆರೋಪ ಮಾಡಿದ್ದಾರೆ. ಬಿಗ್‌ ಬಾಸ್‌ ಕನ್ನಡ 12ರ ಶೋಗೆ ಹೋಗುವುದಕ್ಕೂ ಮುನ್ನವೇ ಅವರ ಪಾಲಿನ ಸಂಭಾವನೆಯನ್ನು ನಿರ್ಮಾಪಕರು ಕೊಟ್ಟಿದ್ದರಂತೆ!

Chowkidar Movie : ಗಿಲ್ಲಿ ನಟ ನಟಿಸಿರೋ ಮತ್ತೊಂದು ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌! ಪಾತ್ರ ಏನು?

ತೆರೆಕಂಡಿರುವ ಸಿನಿಮಾ

ಫೆ.6ರಂದು 'ಸರ್ಕಾರಿ ಶಾಲೆ H8' ಸಿನಿಮಾ ತೆರೆಕಂಡಿದೆ. ಸಿನಿಮಾ ಬಿಡುಗಡೆಯಾಗಿದೆ. ಈಗ ಪ್ರಚಾರ ಕಾರ್ಯಗಳು ಭರದಿಂದ ಸಾಗಬೇಕಿದೆ. ಆದರೆ, ಪ್ರಮುಖ ಪಾತ್ರಧಾರಿಗಳಲ್ಲಿ ಒಬ್ಬರಾದ ಗಿಲ್ಲಿ ಅವರು ಪ್ರಮೋಷನ್‌ಗೆ ಬರುತ್ತಿಲ್ಲ ಎಂದು ನಿರ್ಮಾಪಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಅವರು ಕೇಳಿದಷ್ಟು ಸಂಭಾವನೆಯನ್ನು ನಾವು ಕೊಟ್ಟಿದ್ದೇವೆ. ಆದರೆ ಈಗ ನಮ್ಮ ಕರೆಗಳನ್ನೂ ಸ್ವೀಕರಿಸುತ್ತಿಲ್ಲ. ಫೋನ್ ಮಾಡಿದರೆ ಪಿಕ್ ಮಾಡುತ್ತಿಲ್ಲ. ಖುದ್ದಾಗಿ ಬಂದು ಪ್ರಚಾರ ಮಾಡುವುದಿರಲಿ, ಕನಿಷ್ಠಪಕ್ಷ ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ಬಗ್ಗೆ ಒಂದು ಸಣ್ಣ ಪೋಸ್ಟ್ ಹಾಕುವ ಮೂಲಕವೂ ಬೆಂಬಲ ನೀಡುತ್ತಿಲ್ಲ" ಎಂದು ನಿರ್ಮಾಪಕರು ಫಿಲ್ಮ್‌ ಚೇಂಬರ್‌ಗೆ ನೀಡಿರುವ ದೂರಿನಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

Bigg Boss 12: ʻನಗ್ ನಗ್ತಾನೇ ಚುರುಕು ಮುಟ್ಟಿಸೋ ಚಾಲಾಕಿ, ಊರಗೆಲ್ಲಾ ಗೊತ್ತೂ ಗಿಲ್ಲಿ ಗಮ್ಮತ್ತುʼ; ಪಳಾರ್‌ ಗಿಲ್ಲಿ ನಟನ ಬಗ್ಗೆ ʻಬಿಗ್‌ ಬಾಸ್‌ʼ ಪಂಚ್‌ ಲೈನ್

ಗಿಲ್ಲಿ ನಟ ಅಸಹಕಾರ ತೋರುತ್ತಿದ್ದಾರೆ ಎಂದು ಆರೋಪಿಸಿ, ನಿರ್ಮಾಪಕರು ನ್ಯಾಯ ಕೋರಿ ವಾಣಿಜ್ಯ ಮಂಡಳಿಯ ಕದ ತಟ್ಟಿದ್ದಾರೆ. ದೂರು ಸ್ವೀಕರಿಸಿರುವ ಮಂಡಳಿಯು ಈ ಬಗ್ಗೆ ನಟ ಗಿಲ್ಲಿ ಅವರನ್ನು ಸಂಪರ್ಕಿಸಿ ವಿಚಾರಣೆ ನಡೆಸುವ ಸಾಧ್ಯತೆಯಿದೆ.

ಸದ್ಯ ಈ ಬಗ್ಗೆ ಗಿಲ್ಲಿ ನಟ ಅವರ ಕಡೆಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಹೊರಬಿದ್ದಿಲ್ಲ. ನಿರ್ಮಾಪಕರ ಆರೋಪಗಳಿಗೆ ಗಿಲ್ಲಿ ನಟ ಏನು ಉತ್ತರ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕು.