ಮೊಬೈಲ್ ಬಳಕೆಯಿಂದ ನಿಮ್ಮ ಕೈಗಳಿಗೂ ಸಮಸ್ಯೆ? ಹೇಗೆ ತಿಳಿದಿದೆಯೇ?
Health Tips: ನಮ್ಮ ಕೈಗಳು ರೂಪುಗೊಂಡಿರುವುದೇ ಬಗೆಬಗೆಯ ಕೆಲಸಗಳನ್ನು ಮಾಡುವುದಕ್ಕೆ. ಮಾಡುವ ಕೆಲಸಗಳಲ್ಲಿ ವೈವಿಧ್ಯತೆಯಿದ್ದರೆ ಬೆರಳುಗಳ ಆರೋಗ್ಯವೂ ಚೆನ್ನಾಗಿರುತ್ತದೆ. ಹಾಗಿಲ್ಲದೆ, ಒಂದೇ ಕೆಲಸವನ್ನೇ ಪದೇಪದೇ ಮಾಡುತ್ತಿದ್ದರೆ ಅದಕ್ಕೆ ಬೇಕಾಗುವ ಸ್ನಾಯುಗಳು ಮತ್ತು ಕೀಲುಗಳ ಮೇಲಿನ ಒತ್ತಡ ಹೆಚ್ಚಲಾರಂಭಿಸುತ್ತದೆ. ಅದರಲ್ಲೂ ಸ್ಮಾರ್ಟ್ ಫೋನ್ ಮತ್ತು ಕೀಬೋರ್ಡ್ ಮೇಲಿನ ಕೆಲಸಗಳು ಬೆರಳುಗಳ ಸೂಕ್ಷ್ಮವಾದ ನರಗಳು, ಮಾಂಸಪೇಶಿಗಳು, ಟೆಂಡನ್ಗಳು ಮತ್ತು ಮಣಿಕಟ್ಟಿನ ಕೀಲುಗಳ ಮೇಲೆ ಹೆಚ್ಚಿನ ಒತ್ತಡ ಹಾಕುತ್ತವೆ.
ಇಂಟರ್ ನೆಟ್ ಚಿತ್ರ -
ನವದೆಹಲಿ: ಸ್ಮಾರ್ಟ್ ಫೋನ್ ಇಲ್ಲದಿದ್ದರೆ (Mobil Effects) ಬದುಕು ನಡೆಯುವುದಿಲ್ಲ ಈಗ. ದಿನವಿಡೀ ಫೋನಿನಲ್ಲಿ ನಮಗೆ ಕೆಲಸವಿರುತ್ತದೆ ಎಂದೇನಲ್ಲ. ಏನೋ ನೋಡುವುದು, ಇನ್ನೇನೋ ಹುಡುಕುವುದು, ಯಾವುದೋ ಮೀಟಿಂಗು, ಯಾರಿಗೋ ಏನೋ ಹೇಳುವುದು ಹೀಗೆ ಫೋನಿನಲ್ಲಿ ಕೆಲಸ ಇಲ್ಲದಿದ್ದರೂ ಅದನ್ನು ಸೃಷ್ಟಿಸಿಕೊಳ್ಳುತ್ತೇವೆ. ಏನಿಲ್ಲದಿದ್ದರೆ ಯಾವುದೋ ಓಟಿಟಿಯಲ್ಲಿ ನೋಡುವುದು ಅಥವಾ ಗೇಮಿಂಗ್ ಆದರೂ ಸರಿ! ಈ ಅತಿಯಾದ ಮೊಬೈಲ್ ಉಪಯೋಗದಿಂದ ನಮ್ಮ ತಲೆ ಮತ್ತು ಕಣ್ಣುಗಳು ಹಾಳಾಗಿ ಹೋಗುತ್ತಿರುವ ಬಗ್ಗೆ ಬಹಳಷ್ಟು ಓದಿ-ಕೇಳಿರುತ್ತೇವೆ. ಆದರೆ ಇದರಿಂದಾಗಿ ಸಮಸ್ಯೆಗೆ ಈಡಾಗುತ್ತಿರುವ ಬೆರಳುಗಳು ಮತ್ತು ಮಣಿಕಟ್ಟಿನ ಬಗ್ಗೆ ನಾವೆಷ್ಟು ಗಮನ ನೀಡುತ್ತೇವೆ?
ನಮ್ಮ ಕೈಗಳು ರೂಪುಗೊಂಡಿರುವುದೇ ಬಗೆಬಗೆಯ ಕೆಲಸಗಳನ್ನು ಮಾಡುವುದಕ್ಕೆ. ಮಾಡುವ ಕೆಲಸಗಳಲ್ಲಿ ವೈವಿಧ್ಯತೆಯಿದ್ದರೆ ಬೆರಳುಗಳ ಆರೋಗ್ಯವೂ ಚೆನ್ನಾಗಿರುತ್ತದೆ. ಹಾಗಿಲ್ಲದೆ, ಒಂದೇ ಕೆಲಸವನ್ನೇ ಪದೇಪದೇ ಮಾಡುತ್ತಿದ್ದರೆ ಅದಕ್ಕೆ ಬೇಕಾಗುವ ಸ್ನಾಯುಗಳು ಮತ್ತು ಕೀಲುಗಳ ಮೇಲಿನ ಒತ್ತಡ ಹೆಚ್ಚಲಾರಂಭಿಸುತ್ತದೆ. ಅದರಲ್ಲೂ ಸ್ಮಾರ್ಟ್ ಫೋನ್ ಮತ್ತು ಕೀಬೋರ್ಡ್ ಮೇಲಿನ ಕೆಲಸಗಳು ಬೆರಳುಗಳ ಸೂಕ್ಷ್ಮವಾದ ನರಗಳು, ಮಾಂಸಪೇಶಿಗಳು, ಟೆಂಡನ್ಗಳು ಮತ್ತು ಮಣಿಕಟ್ಟಿನ ಕೀಲುಗಳ ಮೇಲೆ ಹೆಚ್ಚಿನ ಒತ್ತಡ ಹಾಕುತ್ತವೆ.
ಹೆಬ್ಬೆರಳು: ಫೋನ್ನಲ್ಲಿ ಟೆಕ್ಟ್ಸ್ ಮಾಡುವಾಗ ಮಾತ್ರವೇ ನಾವು ಹೆಬ್ಬೆರಳು ಎತ್ತುವ ಚಿತ್ರ ಬಳಸುವುದಲ್ಲ, ಫೋನ್ ಹಿಡಿದಷ್ಟೂ ಹೊತ್ತು ನಿಜವಾದ ಹೆಬ್ಬೆರಳನ್ನೇ ಪ್ರಧಾನವಾಗಿ ಬಳಸುತ್ತೇವೆ. ಇದಕ್ಕಾಗಿ ನಮ್ಮ ಮಣಿಕಟ್ಟನ್ನು ಬಗ್ಗಿಸಿ ಹಿಡಿದಂಥ ಭಂಗಿಯಲ್ಲೇ ಇರಿಸಿಕೊಳ್ಳುತ್ತೇವೆ. ಇದಕ್ಕಾಗಿ ನಮ್ಮ ಹೆಬ್ಬೆರಳಿನ ಸೂಕ್ಷ್ಮ ಸ್ನಾಯುಗಳು ಒತ್ತಡಕ್ಕೆ ಒಳಗಾಗುತ್ತವೆ. ಎಷ್ಟೋ ಜನರಲ್ಲಿ ಹೆಬ್ಬೆರಳು ಮತ್ತು ಮಣಿಕಟ್ಟಿನ ನೋವು ಕಾಣಿಸಿಕೊಳ್ಳುವುದೇ ಮೊಬೈಲು ಬಳಕೆಯ ಕಾರಣಕ್ಕೆ.
ಭಂಗಿ: ಮೊಬೈಲನ್ನು ಅತಿಯಾಗಿ ಬಳಸುವವರ ಭಂಗಿಗಳನ್ನೊಮ್ಮೆ ಗಮನಿಸಿ- ಭುಜ ಮತ್ತು ಕಿವಿಯ ನಡುವೆ ಫೋನ್ ಸಿಕ್ಕಿಸಿಕೊಂಡು ಕೆಲಸ ಮಾಡುತ್ತಾ, ವಾಹನ ಚಲಾಯಿಸುತ್ತಾ ಅಥವಾ ಇನ್ನೇನೋ ಮಾಡುತ್ತಾ ಮಾತಾಡುವುದು, ನಡೆಯುತ್ತಾ ಟೆಕ್ಟ್ಸ್ ಮಾಡುತ್ತಲೇ ಹೆಜ್ಜೆ ಹಾಕುವುದು- ಇಂಥ ಕೆಟ್ಟ ಭಂಗಿಗಳು ನಮ್ಮ ಕುತ್ತಿಗೆ, ಭುಜ, ಮೊಣಕೈ, ಮಣಿಕಟ್ಟು ಮತ್ತು ಬೆರಳುಗಳ ಮೇಲೆ ವಿಪರೀತ ಒತ್ತಡ ಹಾಕುತ್ತವೆ. ಇವುಗಳನ್ನೇ ಬಹಳಷ್ಟು ದಿನಗಳವರೆಗೆ, ದಿನದಲ್ಲೂ ದೀರ್ಘಕಾಲ ಮಾಡುತ್ತಿರುತ್ತೇವೆ. ಈ ಅವಯವಗಳ ಗತಿಯೇನಾಗಬೇಕು?
Health Tips: ಹಸಿ ಬೀಟ್ರೂಟ್ ಅಥವಾ ಬೇಯಿಸಿದ ಬೀಟ್ರೂಟ್: ಮೂತ್ರಪಿಂಡದ ಆರೋಗ್ಯಕ್ಕೆ ಯಾವುದು ಉತ್ತಮ?
ಏನಾಗುತ್ತದೆ?: ಬೆರಳುಗಳಲ್ಲಿ ಮತ್ತು ಮಣಿಕಟ್ಟಿನಲ್ಲಿ ನೋವು, ಕೈಯಲ್ಲಿ ಶಕ್ತಿಯೇ ಇಲ್ಲದಂಥ ಭಾವನೆ, ಬೆರಳುಗಳಲ್ಲಿ ಚುಚ್ಚಿದ ಅಥವಾ ಮರಗಟ್ಟಿದ ಅನುಭವ ಇವೆಲ್ಲ ನಮ್ಮ ಕೈಗಳಲ್ಲಿ ಸಮಸ್ಯೆಗಳು ಉಂಟಾಗುತ್ತಿರುವ ಲಕ್ಷಣಗಳು. ಅತಿಯಾಗಿ ಕಂಪ್ಯೂಟರ್ನಲ್ಲಿ ಟೈಪಿಂಗ್, ಗೇಮಿಂಗ್ ಮುಂತಾದವು ಮುಂದುವರಿದರೆ ಗಿಡವಾಗಿದ್ದ ಸಮಸ್ಯೆ ಮರವಾಗುತ್ತದೆ. ನೋವು ಹೆಚ್ಚಾಗಿ ಊತ ಕಾಣಲಾರಂಭಿಸುತ್ತದೆ. ಹಾಗಾಗಿ ಈ ಲಕ್ಷಣಗಳು ಕಾಣುತ್ತಿದ್ದಂತೆ ಎಚ್ಚೆತ್ತುಕೊಂಡು, ಕೆಲವು ಸರಳ ಬದಲಾವಣೆಗಳನ್ನು ನಮ್ಮ ಜೀವನಶೈಲಿಯಲ್ಲಿ ಮಾಡಿಕೊಳ್ಳುವುದು ಜಾಣತನ. ಏನು ಬದಲಾವಣೆಗಳವು?
ಎರಡೂ ಕೈ: ಸ್ಮಾರ್ಟ್ ಫೋನ್ ಬಳಸುವಾಗ ಒಂದೇ ಕೈಯಲ್ಲಿ ತಪ್ಪು ಭಂಗಿಯಲ್ಲಿ ಹಿಡಿದುಕೊಳ್ಳುವ ಬದಲು, ಫೋನನ್ನು ಎರಡೂ ಕೈಗಳಲ್ಲಿ ಹಿಡಿಯುವ ಅಭ್ಯಾಸ ಮಾಡಿಕೊಳ್ಳಿ
ಬದಲಾಯಿಸಿ: ಒಂದೇ ಕೈಯಲ್ಲಿ ಒಂದೇ ಭಂಗಿಯಲ್ಲಿ ಟೆಕ್ಟ್ಸ್ ಮಾಡುವ ಬದಲು ಕೈಬದಲಾಯಿಸಿ. ದೀರ್ಘ ಸಮಯದವರೆಗೆ ಒಂದೇ ಭಂಗಿಯಲ್ಲಿ ಫೋನ್ ಹಿಡಿಯಬೇಡಿ.
ವಿರಾಮವಿರಲಿ: ಫೋನ್ ಬಳಕೆಗೆ ಆಗಾಗ ವಿರಾಮ ನೀಡಿ. ನಿಮ್ಮ ತಲೆ, ಕಣ್ಣು, ಬೆರಳು ಹಾಗೂ ಮಣಿಕಟ್ಟಿಗೆ ವಿಶ್ರಾಂತಿ ಬೇಕಾಗುತ್ತದೆ.
ರಿಲಾಕ್ಸ್ ಪ್ಲೀಸ್!: ನಮ್ಮ ಫೋನ್ಗಳನ್ನು ನಮಗೇ ಅರಿವಿಲ್ಲದಂತೆ ಬಿಗಿಯಾಗಿ ಹಿಡಿದಿರುತ್ತೇವೆ. ದುಬಾರಿ ಬೆಲೆಯ ಫೋನ್ಗಳು ಬಿದ್ದರೆ ಹಾಳಾಗುತ್ತವೆ ಎಂಬ ಭಯವೇ ಇದಕ್ಕೆ ಮೂಲ. ಇದಕ್ಕಾಗಿ ಜಾರದಂಥ ಫೋನ್ ಕವರ್ಗಳನ್ನು ಬಳಸುವುದು ಸೂಕ್ತ. ಆಗ ನಮ್ಮ ಹಿಡಿತವೂ ಸಡಿಲವಾಗುತ್ತದೆ.
ಧ್ವನಿ ಬಳಸಿ: ಹೆಚ್ಚಿನ ಟೈಪಿಂಗ್ ಇದ್ದರೆ ಫೋನಿನಲ್ಲಿರುವ ಉಕ್ತಲೇಖನ ಸೌಲಭ್ಯವನ್ನು ಬಳಸಿಕೊಳ್ಳಿ. ಆಗ ನೀವು ಹೇಳಿದಂತೆ ಅದು ನಿಮಗೆ ಟೈಪ್ ಮಾಡಿಕೊಡುತ್ತದೆ.