ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mahesh Babu: ಜಾಹೀರಾತಿನಲ್ಲಿ ನಟಿಸಿ ಪೇಚಿಗೆ ಸಿಲುಕಿದ ಮಹೇಶ್ ಬಾಬು; ವಂಚನೆ ಆರೋಪದಲ್ಲಿ ದೂರು ದಾಖಲು

ಹೈದರಾಬಾದ್‌ನ ವೈದ್ಯೆಯೊಬ್ಬರು ಸಾಯಿ ಸೂರ್ಯ ಡೆವಲಪರ್ಸ್ ವಿರುದ್ಧ 34.8 ಲಕ್ಷ ರೂ. ವಂಚನೆ ಆರೋಪ ಮಾಡಿದ್ದು, ದೂರು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ನಟ ಮಹೇಶ್ ಬಾಬು ಅವರನ್ನು ಮೂರನೇ ಆರೋಪಿಯನ್ನಾಗಿ ಮಾಡಿದ್ದಾರೆ ಎಂದು ವರದಿಯಾಗಿದೆ.

ಮಹೇಶ್ ಬಾಬುವಿಗೆ ಸಂಕಷ್ಟ ತಂದಿಟ್ಟ ಜಾಹೀರಾತು

ಮಹೇಶ್ ಬಾಬು

Profile Sushmitha Jain Jul 7, 2025 8:33 PM

ಹೈದರಾಬಾದ್: ಹೈದರಾಬಾದ್‌ನ (Hyderabad) ವೈದ್ಯೆಯೊಬ್ಬರು ಸಾಯಿ ಸೂರ್ಯ ಡೆವಲಪರ್ಸ್ (Sai Surya Developers) ವಿರುದ್ಧ 34.8 ಲಕ್ಷ ರೂ. ವಂಚನೆ ಆರೋಪ ಮಾಡಿದ್ದು, ದೂರು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ನಟ ಮಹೇಶ್ ಬಾಬು (Mahesh Babu) ಅವರನ್ನು ಮೂರನೇ ಆರೋಪಿಯನ್ನಾಗಿ ಮಾಡಿದ್ದಾರೆ ಎಂದು ವರದಿಯಾಗಿದೆ. ದೂರಿನ ಪ್ರಕಾರ, ಮಹೇಶ್ ಬಾಬು ಅವರ ಸಾಯಿ ಸೂರ್ಯ ಡೆವಲಪರ್ಸ್‌ನ ಜಾಹೀರಾತಿನಿಂದ ಗ್ರಾಹಕರಲ್ಲಿ ವಿಶ್ವಾಸ ಮೂಡಿತ್ತು, ಆದರೆ ಇದು ಭೂಮಿಯ ಖರೀದಿ ವಿಚಾರದಲ್ಲಿ ವಂಚನೆ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದೆ.

2025ರ ಏಪ್ರಿಲ್‌ನಲ್ಲಿ ಕಾನೂನುಬಾಹಿರ ಹಣ ವರ್ಗಾವಣೆ ತನಿಖೆಯ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯ (ED) ಮಹೇಶ್ ಬಾಬು ಅವರನ್ನು ವಿಚಾರಣೆಗೊಳಪಡಿಸಿತ್ತು. ಸಾಯಿ ಸೂರ್ಯ ಡೆವಲಪರ್ಸ್ ಮತ್ತು ಸುರಾನಾ ಗ್ರೂಪ್‌ಗೆ ಸಂಬಂಧಿಸಿದ ಈ ತನಿಖೆಯಲ್ಲಿ, ಕಂಪನಿಯ ಮಾಲೀಕ ಕಂಚರ್ಲ ಸತೀಶ್ ಚಂದ್ರ ಗುಪ್ತಾ ‘ಗ್ರೀನ್ ಮೀಡೋಸ್’ ಯೋಜನೆಯಲ್ಲಿ ವಿಫಲರಾದ ಆರೋಪ ಎದುರಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಈ ಸುದ್ದಿಯನ್ನು ಓದಿ: Viral Video: ಮಹಿಳೆ ಮೈಮೇಲೆ ಬಿದ್ದ ಪೆಟ್ರೋಲ್‍; ನೆಟ್ಟಿಗರು ಹೇಳಿದ್ದೇನು?

ಮೂಲಗಳ ಪ್ರಕಾರ, ಮಹೇಶ್ ಬಾಬು ಅವರು ವಂಚನೆ ಬಗ್ಗೆ ಯಾವುದೇ ಮಾಹಿತಿ ಇಲ್ಲದೆ ಜಾಹೀರಾತು ಮಾಡಿರಬಹುದು. ಆದರೆ ಈ ನೋಟಿಸ್‌ನಿಂದ ಅವರು ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ವರದಿಗಳ ಪ್ರಕಾರ, ಜಾಹೀರಾತಿಗಾಗಿ ಮಹೇಶ್ ಬಾಬು 5.9 ಕೋಟಿ ರೂ. ಸಂಭಾವನೆ ಚೆಕ್ ಮತ್ತು ನಗದು ರೂಪದಲ್ಲಿ ಪಡೆದಿದ್ದಾರೆ. ಆದರೆ ಆರ್ಥಿಕ ಅವ್ಯವಹಾರದಲ್ಲಿ ಅವರು ತೊಡಗಿಕೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಈ ಹೊಸ ಆರೋಪಕ್ಕೆ ಮಹೇಶ್ ಬಾಬು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಮಹೇಶ್ ಬಾಬು ಸದ್ಯ ಎಸ್‌.ಎಸ್.ರಾಜಮೌಳಿ ನಿರ್ದೇಶನದ ‘SSMB29’ ಎಂಬ ಬಿಗ್‌ ಬಜೆಟ್‌ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಭಾರತೀಯ ಚಿತ್ರರಂಗವು ಈ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದೆ. ವಿವಾದದ ನಡುವೆಯೂ ಮಹೇಶ್ ಬಾಬು ಅವರ ಚಿತ್ರರಂಗದ ಪಯಣ ಮುಂದುವರಿದಿದ್ದು, ಈ ಪ್ರಕರಣದ ತನಿಖೆಯ ಬಗ್ಗೆ ಗ್ರಾಹಕರು ಮತ್ತು ಅಭಿಮಾನಿಗಳು ಕಾತರದಿಂದ ಎದುರುನೋಡುತ್ತಿದ್ದಾರೆ.