ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತೀಯ OTT ರಂಗದಲ್ಲಿ ಹೊಸ ಕ್ರಾಂತಿ; 100 ಮಿಲಿಯನ್ ದಾಟಿದ ಜಿಯೋಹಾಟ್‌ಸ್ಟಾರ್ ಬಳಕೆದಾರರ ಸಂಖ್ಯೆ!

ಜಿಯೋಹಾಟ್‌ಸ್ಟಾರ್ ಒಟಿಟಿ ವೇದಿಕೆಯ ಪ್ರೀಮಿಯಂ ಮೈಕ್ರೋ-ಕಂಟೆಂಟ್ ವಿಭಾಗವಾದ ‘TADKA’ 100 ಮಿಲಿಯನ್ ಸಕ್ರಿಯ ಬಳಕೆದಾರರನ್ನು ತಲುಪುವ ಮೂಲಕ ಭಾರತೀಯ ಡಿಜಿಟಲ್ ರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಇಂದಿನ ಅವಸರದ ಬದುಕಿಗೆ ಸೂಕ್ತವಾದ 30 ರಿಂದ 60 ಸೆಕೆಂಡುಗಳ ವರ್ಟಿಕಲ್ ಶೈಲಿಯ ಕಥೆಗಳು ಯುವ ಸಮೂಹವನ್ನು ಸೆಳೆದಿದೆ.

OTT ಲೋಕದಲ್ಲಿ ಜಿಯೋಹಾಟ್‌ಸ್ಟಾರ್ ಧಮಾಕಾ; 10 ಕೋಟಿ ದಾಟಿದ ಬಳಕೆದಾರರ ಸಂಖ್ಯೆ

-

Avinash GR
Avinash GR Jun 12, 2026 5:53 PM

ಭಾರತೀಯ ಡಿಜಿಟಲ್ ಸ್ಟ್ರೀಮಿಂಗ್ ಉದ್ಯಮದಲ್ಲಿ ಮತ್ತೊಂದು ಐತಿಹಾಸಿಕ ಮೈಲುಗಲ್ಲು ಸೃಷ್ಟಿಯಾಗಿದೆ. ಪ್ರಮುಖ ಒಟಿಟಿ ವೇದಿಕೆಯಾದ ಜಿಯೋಹಾಟ್‌ಸ್ಟಾರ್‌ನ (JioHotstar) ಬಹುನಿರೀಕ್ಷಿತ ಪ್ರೀಮಿಯಂ ಮೈಕ್ರೋ-ಕಂಟೆಂಟ್ ವಿಭಾಗವಾದ ‘TADKA’ ಬರೋಬ್ಬರಿ 100 ಮಿಲಿಯನ್ (10 ಕೋಟಿ) ಸಕ್ರಿಯ ಬಳಕೆದಾರರನ್ನು ತಲುಪುವ ಮೂಲಕ ಹೊಸ ದಾಖಲೆ ಬರೆದಿದೆ.

ಮೊಬೈಲ್ ಪ್ರಿಯರನ್ನು ಗುರಿಯಾಗಿಸಿಕೊಂಡು ಆರಂಭಿಸಲಾದ ಈ ಕಿರು-ಚಿತ್ರಣದ ಕಥನ ಶೈಲಿಯು ಇಂದಿನ ಮುಖ್ಯವಾಹಿನಿಯ ಮನರಂಜನೆಯಾಗಿ ಹೊರಹೊಮ್ಮಿದೆ. ವಿಶೇಷವೆಂದರೆ, ಲಾಂಚ್ ಆದ ದಿನದಿಂದ ಇಂದಿನವರೆಗೆ ಪ್ರತಿ ವೀಕ್ಷಕರ ದಿನನಿತ್ಯದ ಸರಾಸರಿ ವೀಕ್ಷಣಾ ಸಮಯವು (Viewing Time) 5 ಪಟ್ಟು ಹೆಚ್ಚಾಗಿದೆ.

ಯುವ ಸಮೂಹವೇ ಪ್ರಮುಖ ಆಕರ್ಷಣೆ

ಈ ಅಭೂತಪೂರ್ವ ಯಶಸ್ಸಿನ ಹಿಂದೆ ಯುವ ಪ್ರೇಕ್ಷಕರ ಪಾತ್ರ ದೊಡ್ಡದಾಗಿದೆ. ಇದರ ಒಟ್ಟು ವೀಕ್ಷಕರಲ್ಲಿ 42% ಕ್ಕಿಂತ ಹೆಚ್ಚು ಜನ 24 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಮೆಟ್ರೋ ನಗರಗಳು ಹಾಗೂ ಟೈರ್-2 ನಗರಗಳು ತಲಾ 40% ರಷ್ಟು ವೀಕ್ಷಣಾ ಸಮಯವನ್ನು ಹಂಚಿಕೊಳ್ಳುವ ಮೂಲಕ ಸಮಾನ ಆಸಕ್ತಿ ತೋರಿವೆ. ಇಂದಿನ ಅವಸರದ ಬದುಕಿನಲ್ಲಿ ಸುಲಭವಾಗಿ ಹೊಂದಿಕೊಳ್ಳುವ, ಮೊಬೈಲ್-ಫ್ರೆಂಡ್ಲಿ ಕಥೆಗಳ ಮೇಲಿನ ಹೆಚ್ಚುತ್ತಿರುವ ಕ್ರೇಜ್‌ಗೆ ಇದು ಸ್ಪಷ್ಟ ನಿದರ್ಶನವಾಗಿದೆ.

ತಡ್ಕಾ(TADKA) ಬಿಡುಗಡೆ ಮೂಲಕ ಮೈಕ್ರೋ-ಕಂಟೆಂಟ್ ಕ್ಷೇತ್ರಕ್ಕೆ ಪ್ರವೇಶಿಸಿದ Jio Hotstar

ಮುಂಬೈ-ದೆಹಲಿಯಿಂದ ಬೆಂಗಳೂರಿಗೂ ವಿಸ್ತರಿಸಿದ ಕ್ರಿಯೇಟಿವ್ ಹಬ್

ಮೈಕ್ರೋ-ಕಂಟೆಂಟ್‌ಗೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ, ಚಿತ್ರನಿರ್ಮಾಣ ಕೇವಲ ಮುಂಬೈ ಅಥವಾ ದೆಹಲಿಯಂತಹ ಸಾಂಪ್ರದಾಯಿಕ ಚಿತ್ರನಗರಿಗಳಿಗೆ ಸೀಮಿತವಾಗದೆ ಲಖನೌ, ಇಂದೋರ್, ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳಿಗೂ ವಿಸ್ತರಿಸಿದೆ. ಇದರಿಂದಾಗಿ ಪ್ರಾದೇಶಿಕ ಕಥೆಗಳು, ಹೊಸ ಧ್ವನಿಗಳು ಮತ್ತು ಸ್ಥಳೀಯ ದೃಷ್ಟಿಕೋನಗಳಿಗೆ ಭಾರಿ ಮನ್ನಣೆ ಸಿಗುತ್ತಿದ್ದು, ವೈವಿಧ್ಯಮಯ ಸೃಜನಶೀಲ ವಾತಾವರಣ ನಿರ್ಮಾಣವಾಗುತ್ತಿದೆ.

Jio Hotstar: ಜಿಯೋ ಸಿನಿಮಾ ಜತೆ ಹಾಟ್‌ಸ್ಟಾರ್‌ ವಿಲೀನ; ಪ್ರೇಕ್ಷಕರ ಜೇಬಿಗೆ ಬಿತ್ತು ಕತ್ತರಿ!

'TADKA' ವಿಶೇಷತೆ ಏನು?

ಜಿಯೋಹಾಟ್‌ಸ್ಟಾರ್ ವೇದಿಕೆಯಲ್ಲಿ ಪ್ರಸಾರವಾಗುವ 'TADKA' ಪ್ರಸ್ತುತ 100 ಕ್ಕೂ ಹೆಚ್ಚು ಮೂಲ ಒರಿಜಿನಲ್‌ ಕಂಟೆಂಟ್ ಹೊಂದಿದೆ. ಕೇವಲ 30 ರಿಂದ 60 ಸೆಕೆಂಡುಗಳವರೆಗೆ ಇರುವ‌ ವರ್ಟಿಕಲ್ ಶೈಲಿಯ ಎಪಿಸೋಡಿಕ್ ಕಥೆಗಳು ಇದರ ಹೈಲೈಟ್. ಇವು ದೈನಂದಿನ ಭಾವನೆಗಳು, ಸಂಬಂಧಗಳು ಮತ್ತು ಸಮಕಾಲೀನ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುತ್ತವೆ. ಪ್ರೇಮ, ನಾಟಕ, ಸಸ್ಪೆನ್ಸ್ ಥ್ರಿಲ್ಲರ್, ಹಾಸ್ಯ, ಕ್ರೀಡೆ ಮತ್ತು ಯುವಕೇಂದ್ರಿತ ಕಥೆಗಳು ಹಿಂದಿ, ತಮಿಳು, ತೆಲುಗು ಸೇರಿದಂತೆ ಭಾರತದ ಪ್ರಮುಖ ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯವಿವೆ.

ಜಿಯೋಸ್ಟಾರ್‌ನ ಉಪಾಧ್ಯಕ್ಷರ ಹೇಳಿದ್ದೇನು?

ಈ ಐತಿಹಾಸಿಕ ಸಾಧನೆ ಕುರಿತು ಜಿಯೋಸ್ಟಾರ್‌ನ ಮೈಕ್ರೋ ಕಂಟೆಂಟ್ ಕಾರ್ಯನಿರ್ವಹಣಾ ಉಪಾಧ್ಯಕ್ಷರಾದ ಅಂಬುಜ್ ಕಶ್ಯಪ್, "100 ಮಿಲಿಯನ್ ಬಳಕೆದಾರರನ್ನು ತಲುಪಿರುವುದು ಡಿಜಿಟಲ್ ಸ್ಟ್ರೀಮಿಂಗ್ ಇತಿಹಾಸದಲ್ಲೇ ಒಂದು ಪ್ರಮುಖ ತಿರುವು. ಗ್ರಾಹಕರ ವೀಕ್ಷಣಾ ವಿಧಾನ ಸಂಪೂರ್ಣ ಬದಲಾಗುತ್ತಿದ್ದು, ಪ್ರೀಮಿಯಂ ಮೈಕ್ರೋ-ಕಂಟೆಂಟ್ ಒಂದು ಹೊಸ ಪ್ರಮುಖ ಮನರಂಜನಾ ವರ್ಗವಾಗಿ ಬೆಳೆಯುತ್ತಿದೆ. ಈ ಫಾರ್ಮಾಟ್ ಉದ್ಯಮದ ಬೆಳವಣಿಗೆಗೆ ಹೊಸ ದಾರಿ ತೆರೆಯಲಿದೆ ಎಂಬ ನಮ್ಮ ನಂಬಿಕೆ ನಿಜವಾಗಿದೆ. ಉತ್ತಮ ಕಥನ ಮತ್ತು ಅತ್ಯಾಧುನಿಕ ಉತ್ಪನ್ನ ನಾವೀನ್ಯತೆಯ ಮೂಲಕ ಈ ವಿಭಾಗವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ನಾವು ಬದ್ಧರಾಗಿದ್ದೇವೆ" ಎಂದು ಹೇಳಿದ್ದಾರೆ.