ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karan Johar: ಶಾರುಖ್‌ ಖಾನ್‌ ಮಗ ನಿರ್ದೇಶಿಸುತ್ತಿರುವ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ ಕರಣ್ ಜೋಹರ್!

ಆರ್ಯನ್ ಖಾನ್ ಅವರ ಚೊಚ್ಚಲ ನಿರ್ದೆಶನದದ 'ದಿ ಬ್ಯಾಡ್ಸ್ ಆಫ್ ಬಾಲಿವುಡ್' ಸಿನಿಮಾ ಬಹಳಷ್ಟು ಸದ್ದು ಮಾಡುತ್ತಿದೆ. ಈ ಸಿನಿಮಾದಲ್ಲಿ ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. ಈ ಕುರಿತಂತೆ ಕರಣ್ ಜೋಹರ್ ಅವರೇ ಸ್ವತಃ ಸ್ಪಷ್ಟನೆ ನೀಡಿದ್ದು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಬಗ್ಗೆ ಬರೆದು ಕೊಂಡಿದ್ದಾರೆ..

ಆರ್ಯನ್ ಖಾನ್ ನಿರ್ದೇಶನದ ಚಿತ್ರದಲ್ಲಿ ಕರಣ್ ಜೋಹರ್ ನಟನೆ!.

Karan Johar

Profile Pushpa Kumari Aug 18, 2025 9:37 PM

ಮುಂಬೈ: ಬಾಲಿವುಡ್‌ನ ಕಿಂಗ್ ಖಾನ್ ಶಾರುಖ್ ಖಾನ್ ಅವರ ಹಿರಿಯ ಮಗ ಆರ್ಯನ್ ಖಾನ್ ನಿರ್ದೇಶನಕ್ಕೆ ಸಜ್ಜಾಗಿದ್ದಾರೆ. ಆರ್ಯನ್ ಖಾನ್ ಅವರ ಚೊಚ್ಚಲ ನಿರ್ದೆಶನದದ 'ದಿ ಬ್ಯಾಡ್ಸ್ ಆಫ್ ಬಾಲಿವುಡ್' ಸಿನಿಮಾ ಬಹಳಷ್ಟು ಸದ್ದು ಮಾಡುತ್ತಿದೆ. ಈ ಸಿನಿಮಾದಲ್ಲಿ ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್ (Karan Johar) ಅವರು ಅತಿಥಿ ಪಾತ್ರದಲ್ಲಿ ಕಾಣಿಸಿ ಕೊಳ್ಳಲಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. ಈ ಕುರಿತಂತೆ ಕರಣ್ ಜೋಹರ್ ಅವರೇ ಸ್ವತಃ ಸ್ಪಷ್ಟನೆ ನೀಡಿದ್ದು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಬಗ್ಗೆ ಬರೆದು ಕೊಂಡಿದ್ದಾರೆ..

ಕರಣ್ ಜೋಹರ್ ಆರ್ಯನ್ ಖಾನ್ ಅವರ ಚೊಚ್ಚಲ ಸರಣಿ 'ದಿ ಬಾಡ್ಸ್ ಆಫ್ ಬಾಲಿವುಡ್' ನಲ್ಲಿ ನಟಿಸುವುದು ಪಕ್ಕಾ ಎಂದು ಹೇಳಿದ್ದಾರೆ. ಅದರ ಜೊತೆ ಕರಣ್ ಜೋಹರ್ ಆರ್ಯನ್ ಕೌಶಲ್ಯತೆ ಬಗ್ಗೆ ಹೆಮ್ಮೆಯನ್ನು ಕೂಡ ವ್ಯಕ್ತಪಡಿಸಿದ್ದಾರೆ. ಆರ್ಯನ್ ಚಿಕ್ಕವನಿದ್ದಾಗ ಅವರನ್ನು ತಮ್ಮ ತೋಳುಗಳಲ್ಲಿ ಹಿಡಿದುಕೊಂಡಿದ್ದನ್ನು ಮತ್ತು ಈಗ ಆರ್ಯನ್ ನಿರ್ದೇಶನ ಮಾಡುತ್ತಿರುವುದನ್ನು ನೆನಪಿಸಿ ಕೊಂಡಿದ್ದಾರೆ. ಅವರು ತಮ್ಮ 2001 ರ ಚಿತ್ರ 'ಕಭಿ ಖುಷಿ ಕಭಿ ಗಮ್'‌ ನಲ್ಲಿ ಆರ್ಯನ್ ಖಾನ್ ಅವರ ಪಾತ್ರದ ಮುದ್ದಾದ ಹಿಂದಿನ ಚಿತ್ರಗಳನ್ನು ಕೂಡ ಹಂಚಿಕೊಂಡಿದ್ದಾರೆ.

ಕರಣ್ ಜೋಹರ್ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಭಾವನಾತ್ಮಕ ಸಂದೇಶವನ್ನು ಸಹ ಪೋಸ್ಟ್ ಮಾಡಿದ್ದಾರೆ. ಆರ್ಯನ್ ಅವರು "ನನ್ನ ಹೃದಯದಿಂದ ಹುಟ್ಟಿದ ಮೊದಲ ಮಗು" ಎಂದು ಕರೆದಿದ್ದಾರೆ ಮತ್ತು ಅವರ ಪ್ರಾಮಾಣಿಕತೆ, ಕಠಿಣ ಪರಿಶ್ರಮದ ಸಾಮರ್ಥ್ಯವನ್ನು ಶ್ಲಾಘಿಸಿದ್ದಾರೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಕರಣ್ ಜೋಹರ್, ಇದೀಗ ಹೊಸ ಪ್ರತಿಭೆಯಾದ ಆರ್ಯನ್ ಖಾನ್ ಅವರ ನಿರ್ದೇಶನದ ಸರಣಿಯಲ್ಲಿ ನಟಿಸುತ್ತಿರುವುದು ಅವರ ಫ್ಯಾನ್ಸ್​ ಗೆ ಬಹಳಷ್ಟು ಖುಷಿ ನೀಡಿದೆ. ಕರಣ್ ಜೋಹರ್ ಅವರು ಈ ಸರಣಿಯಲ್ಲಿ ಅತಿಥಿ ಪಾತ್ರ ನಿರ್ವಹಿಸುತ್ತಿದ್ದಾರೆ. ಇವರ ಜೊತೆ ಬಾಬಿ ಡಿಯೋಲ್, ಲಕ್ಷ್ಯ, ಸಾಹರ್ ಬಂಬಾ ಮತ್ತು ಇತರರು ಕಾಣಿಸಿ ಕೊಳ್ಳಲಿದ್ದಾರೆ ಎಂದು ಹೇಳಾಗುತ್ತಿದೆ.

ಇದನ್ನು ಓದಿ: Coolie Movie: ರಿಲೀಸ್‌ಗೂ ಮುನ್ನ ರಜನಿಕಾಂತ್‌ ನಟನೆಯ ಕೂಲಿಗೆ ಭರ್ಜರಿ ಕಲೆಕ್ಷನ್‌!

'ದಿ ಬಾಡ್ಸ್ ಆಫ್ ಬಾಲಿವುಡ್' ಸರಣಿಯ ಮೊದಲ ನೋಟದ ಟೀಸರ್ ಇತ್ತೀಚೆಗೆ ಬಿಡುಗಡೆ ಯಾಗಿದೆ. ಆಗಸ್ಟ್ 20ಕ್ಕೆ ಪ್ರಿವ್ಯೂ ಕೂಡ ಬಿಡುಗಡೆಯಾಗಲಿದೆ. 'ದಿ ಬ್ಯಾಡ್ಸ್ ಆಫ್ ಬಾಲಿವುಡ್​’ ವೆಬ್ ಸರಣಿಗೆ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಅವರು ಬಂಡ ವಾಳ ಹೂಡಿದ್ದಾರೆ. ಸದ್ಯ ಈ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.