ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆಲಮಟ್ಟಿ ಜಲಾಶಯದಲ್ಲಿ ನಾಲ್ಕು ದಿನಗಳಲ್ಲಿ 40 ಟಿಎಂಸಿ ನೀರು ಸಂಗ್ರಹ

ಶುಕ್ರವಾರದಿಂದ ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಮಳೆಯ ಪ್ರಮಾಣ ಕಡಿಮೆ ಯಾಗಿದೆ ಎಂದು ಮಹಾರಾಷ್ಟ್ರ ದ ಜಲ ಸಂಪನ್ಮೂಲ ಇಲಾಖೆಯ ಮೂಲಗಳಿಂದ ತಿಳಿದು ಬಂದಿದೆ. ಹೀಗಾಗಿ ಕೃಷ್ಣಾ ನದಿಯ ಮುಖ್ಯ ಹರವಿನಲ್ಲಿ ಒಳಬರುವ ನೀರಿನ ಪ್ರಮಾಣದಲ್ಲಿ ಯಾವದೆ ಕ್ಷಣದಲ್ಲಿ ಕಡಿಮೆಯಾಗಲಿದೆ ಎಂಬ ಆತಂಕ ಮೂಡಿದೆ.

ಆಲಮಟ್ಟಿ ಜಲಾಶಯದಲ್ಲಿ ನಾಲ್ಕು ದಿನಗಳಲ್ಲಿ 40 ಟಿಎಂಸಿ ನೀರು ಸಂಗ್ರಹ

-

Profile
Ashok Nayak Jul 10, 2026 9:20 PM

ಆಲಮಟ್ಟಿ: ಉತ್ತರ ಕರ್ನಾಟಕದ ಜೀವನಾಡಿ ಆಲಮಟ್ಟಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ನಾಲ್ಕು ದಿನಗಳ ಹಿಂದೆ ಅಂದರೆ ಜು.7ರಂದು ಜಲಾಶಯದ ನೀರಿನ ಒಳಹರವು ಕೇವಲ 21 ಸಾವಿರ ಕ್ಯುಸೆಕ್ ಇತ್ತು ಮತ್ತು ನೀರಿನ ಸಂಗ್ರಹ ಕೇವಲ 22 ಟಿ.ಎಂ.ಸಿ ಇತ್ತು.

ಆದರೆ ಕಳೆದ ಮೂರು ದಿನಗಳಿಂದ ಮಹಾರಾಷ್ಟ್ರದ ಪಶ್ಚಿಮ ಘಟ್ಟದ ಪ್ರದೇಶಗಳಾದ ಮಹಾ ಬಳೇಶ್ವರ, ಕೊಯಿನಾ, ನವಜಾ, ಪಂಚಗಂಗಾ, ದೂಧಗಂಗಾ, ವೇದಗಂಗಾ ಜಲಾನಯನ ಪ್ರದೇಶ ದಲ್ಲಿ ಬಾರಿ ಪ್ರಮಾಣದ ಮಳೆಯಾದ ಕಾರಣ ಕೃಷ್ಣಾ ನದಿಯ ಒಳ ಹರವಿನ ಪ್ರಮಾಣ ಲಕ್ಷ‌ ಅಧಿಕ ಕ್ಯುಸೆಕ್ ನೀರು ಹರಿಯುತ್ತಿದ್ದು ಇದರ ಪರಿಣಾಮ ಆಲಮಟ್ಟಿ ಜಲಾಶಯದ ನೀರು ಸಂಗ್ರಹದಲ್ಲಿ ಹೆಚ್ಚಳವಾಗಿದ್ದು ಜು.10ರ ಸಾಯಂಕಾಲ 6 ಘಂಟೆಗೆ ನೀರಿನ ಒಳ ಹರವು ಸುಮಾರು 1,62,000 ಸಾವಿರ ಕ್ಯುಸೆಕ್ ನಷ್ಟಿತ್ತು ಮತ್ತು ನಾಲ್ಕು ದಿನಗಳಲ್ಲಿ 40 ಟಿ.ಎಂ.ಸಿ ನೀರು ಹರಿದು ಬಂದಿದ್ದು ಜಲಾಶಯದಲ್ಲಿ ಶುಕ್ರವಾರ ಸಂಜೆ ಹೊತ್ತಿಗೆ 62 ಟಿ.ಎಂ.ಸಿ ನೀರು ಸಂಗ್ರಹವಾಗಿದೆ.

ಇದನ್ನೂ ಓದಿ: Alamatti News: ಕೆ.ಪಿ.ಮೋಹನ ರಾಜ ಅವರಿಗೆ ಪುನರ್ವಸತಿ ಇಲಾಖೆಯ ಆಯುಕ್ತರ ಹೆಚ್ಚುವರಿ ಅಧಿಕಾರ

ಇನ್ನೂ ಒಂದು ವಾರ ಇದೇ ರೀತಿ ನೀರಿನ ಒಳ ಹರವು ಬಂದರೆ ಹೆಚ್ಚು ಕಡಿಮೆ ಆಲಮಟ್ಟಿ ಜಲಾಶಯ ಭರ್ತಿಯಾಗಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಆದರೆ ಶುಕ್ರವಾರದಿಂದ ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಮಳೆಯ ಪ್ರಮಾಣ ಕಡಿಮೆ ಯಾಗಿದೆ ಎಂದು ಮಹಾರಾಷ್ಟ್ರ ದ ಜಲ ಸಂಪನ್ಮೂಲ ಇಲಾಖೆಯ ಮೂಲಗಳಿಂದ ತಿಳಿದು ಬಂದಿದೆ. ಹೀಗಾಗಿ ಕೃಷ್ಣಾ ನದಿಯ ಮುಖ್ಯ ಹರವಿನಲ್ಲಿ ಒಳಬರುವ ನೀರಿನ ಪ್ರಮಾಣದಲ್ಲಿ ಯಾವದೆ ಕ್ಷಣದಲ್ಲಿ ಕಡಿಮೆಯಾಗಲಿದೆ ಎಂಬ ಆತಂಕ ಮೂಡಿದೆ.

ಈಗಾಗಲೇ, ನಾರಾಯಣಪುರದ ಬಸವ ಸಾಗರದ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಮುಂಗಾ ರು ಹಂಗಾಮಿನಲ್ಲಿ ಅಲ್ಪಾವಧಿಯ ಬೆಳೆ ಬೆಳೆಯುಂತೆ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯ ದರ್ಶಿಗಳು ರೈತರಲ್ಲಿ ಮನವಿ ಮಾಡಿಕೊಂಡಿದ್ದು ಮುಂಗಾರು‌ ಹಂಗಾಮಿಗೆ‌ ಕಾಲುವೆಗಳ ಜಾಲ ದಿಂದ ರೈತರ ಜಮೀನುಗಳಿಗೆ ನೀರು ಹರಿಸುವುದು ಕಷ್ಟಸಾಧ್ಯ ಎಂದು ತಮ್ಮ ಅಸಹಾಯಕತೆ ವ್ಯಕ್ತ ಪಡಿಸಿದ್ದು, ಆಲಮಟ್ಟಿ‌ ಹಾಗೂ ನಾರಾಯಣಪುರ ಜಲಾಶಯಗಳ ರೈತಾಪಿ ವರ್ಗದಲ್ಲಿ‌ ಆಂತಕ ಮೂಡಿದೆ