ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

KD Twitter Review: ಧ್ರುವ ಸರ್ಜಾ ನಟನೆಗೆ ಫುಲ್‌ ಮಾರ್ಕ್ಸ್‌ ಕೊಟ್ರು ಫ್ಯಾನ್ಸ್‌; ಮೂವಿ ನೋಡಿದವರು ಎನಂದ್ರು?

KD Twitter Review: 4 ವರ್ಷಗಳ ಹಿಂದೆ 'ಕೆಡಿ' ಸಿನಿಮಾ ಶುರುವಾಗಿತ್ತು. ಕೊನೆಗೂ ತೆರೆ ಕಂಡಿದೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್ ಚಿತ್ರದಲ್ಲಿ ನಟಿಸಿರುವುದು ಕುತೂಹಲ ಹೆಚ್ಚಿಸಿದೆ. ಕಿಚ್ಚ ಗೆಸ್ಟ್ ಅಪಿಯರೆನ್ಸ್ ಯಾಕೆ ಎನ್ನುವ ಪ್ರಶ್ನೆ ಫ್ಯಾನ್ಸ್‌ಗೆ ಇತ್ತು. ಅಂತೂ ಇಂದು ಎಲ್ಲದಕ್ಕೂ ಉತ್ತರ ಸಿಕ್ಕಿದೆ. ಈಗಾಗಲೇ ಸಿನಿಮಾ ನೋಡಿದವರು ಸಖತ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೆಚ್ಚಾಗಿ ಧ್ರುವ ಅವರ ನಟನೆಗೆ ಫ್ಯಾನ್ಸ್‌ ಮನಸೋತ್ತಿದ್ದಾರೆ.

KD Review: ಧ್ರುವ ಸರ್ಜಾ ನಟನೆಗೆ ಫುಲ್‌ ಮಾರ್ಕ್ಸ್‌ ಕೊಟ್ರು ಫ್ಯಾನ್ಸ್‌!

ಕೆಡಿ ಸಿನಿಮಾ -

Yashaswi Devadiga
Yashaswi Devadiga Apr 30, 2026 9:51 AM

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಹಾಗೂ ಜೋಗಿ ಪ್ರೇಮ್ (Jogi Prem) ಕಾಂಬಿನೇಷನ್‌ನ 'ಕೆಡಿ ದಿ ಡೆವಿಲ್' ಸಿನಿಮಾ ಇಂದು ತೆರೆ ಕಂಡಿದೆ. ರೀಷ್ಮಾ ನಾಣಯ್ಯ ಚಿತ್ರದ ನಾಯಕಿ. ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್ ಮುಂತಾದವರು ಚಿತ್ರದಲ್ಲಿದ್ದಾರೆ ಸುದೀಪ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಸಿನಿಮಾ ನೋಡಿದವರು ಸಖತ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೆಚ್ಚಾಗಿ ಧ್ರುವ ಅವರ ನಟನೆಗೆ ಫ್ಯಾನ್ಸ್‌ ಮನಸೋತ್ತಿದ್ದಾರೆ.

ಟ್ವಿಟರ್‌ನಲ್ಲಿ ವೀಕ್ಷಕರು ಬರೆದುಕೊಂಡಿದ್ದು ಹೀಗೆ.

#KDTheDevil ಮೊದಲಾರ್ಧ ಬೆಂಕಿ. ಪ್ರತಿಯೊಂದು ಪಾತ್ರವೂ ಪ್ರಭಾವಶಾಲಿಯಾಗಿದೆ, ದ್ವಿತೀಯಾರ್ಧದ ಸಖತ್‌ ಹೈಪ್‌ ಇದೆ ಎಂದು ಒಬ್ಬರು ಬರೆದುಕೊಂಡಿದ್ದಾರೆ.



ಮೊದಲಾರ್ಧ ಕಥೆ ಅತ್ಯದ್ಭುತ. ಧ್ರುವ ಸರ್ಜಾ ಅವರ ಅಭಿನಯ ಅಮೋಘ. ದ್ವಿತೀಯಾರ್ಧದಲ್ಲಿ ಮಾಸ್ ಕ್ಷಣ ಮಸ್ತ್‌ ಆಗಿದೆ. ಪಾತ್ರಗಳ ಪರಿಚಯ ಪೂರ್ತಿ ಚೆನ್ನಾಗಿದೆ. ಪ್ರತಿಯೊಂದು ಪಾತ್ರವೂ ಪ್ರಭಾವ ಬೀರುತ್ತದೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Actor Rajath: ರಜತ್​​ನಿಂದ ಮತ್ತೊಂದು ರೀಲ್ಸ್ ಎಡವಟ್ಟು! ನಟನ ವಿರುದ್ಧ ಪ್ರಕರಣ ದಾಖಲು



ಇನ್ನೊಬ್ಬರು ಧ್ರುವ ಸರ್ಜಾ ಡೀಸೆಂಟ್ ಎಂಟ್ರಿ. ಸಂಜಯ್ ದತ್ ಹೈಪ್‌ ತುಂಬಾ ಕೊಟ್ಟಿದ್ದಾರೆ. ಬ್ಯಾಕ್‌ಗ್ರೌಂಡ್ ಸ್ಕೋರ್ ಅಂತು ಎಲ್ಲೂ ಡ್ರಾಪ್ ಆಗಿಲ್ಲ. ಪ್ರತಿ ಸೀನ್ ಅಲ್ಲು ಸೌಂಡ್ ಜೋರ್ ಇದೆ.ಹೀರೋಯಿನ್ ಕ್ಯಾರೆಕ್ಟರೇಶನ್ ಇಷ್ಟ ಆಗ್ಲಿಲ್ಲಾ. ಭೈರವನ ಪ್ರವೇಶ (ಕಿಚ್ಚ) ಮಾಸ್‌ ಆಗಿತ್ತು ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.

ಕೆಡಿ ಸಿನಿಮಾ ಬೆಳಗಿನ ಶೋಗಳು ಸಾಕಷ್ಟು ಕಡೆಗಳಲ್ಲಿ ರದ್ದಾಗಿದೆ ಎಂದೂ ಹೇಳಲಾಗುತ್ತಿದೆ. ಜೋಗಿ ಪ್ರೇಮ್ ನಿರ್ದೇಶಿಸಿದ ಈ ಸಿನಿಮಾದ ಹಾಡು ವಿವಾದಕ್ಕೆ ಸಿಕ್ಕಿಕೊಂಡಿತ್ತು. ಅದು ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ಆ ಬಳಿಕ ಸೆನ್ಸಾರ್‌ನಲ್ಲಿ ಸಮಸ್ಯೆ ಎದುರಾಯ್ತು. ಇದೆಲ್ಲದರ ಮಧ್ಯೆ ಸಿನಿಮಾ ಈಗ ರಿಲೀಸ್‌ ಆಗಿದೆ.

ಮೊದಲ ದಿನ ಟಿಕೆಟ್ ದರ 50ರಿಂದ 100 ರೂ. ಹೆಚ್ಚಿಸಲಾಗಿದೆ. ಬೆಂಗಳೂರಿನಲ್ಲಿ ಮೊದಲ ದಿನ 320ಕ್ಕೂ ಅಧಿಕ ಶೋಗಳಲ್ಲಿ ಸಿನಿಮಾ ಪ್ರದರ್ಶನ ನಡೆಯುತ್ತಿದೆ.

ಇದನ್ನೂ ಓದಿ: KD The Devil: ಧ್ರುವ ಸರ್ಜಾ ನಟನೆಯ ‘KD’ ಇಂದು ತೆರೆಗೆ; ಆದ್ರೂ ಫ್ಯಾನ್ಸ್‌ಗೆ ಬೇಸರ ಏಕೆ?

4 ವರ್ಷಗಳ ಹಿಂದೆ 'ಕೆಡಿ' ಸಿನಿಮಾ ಶುರುವಾಗಿತ್ತು. ಕೊನೆಗೂ ತೆರೆ ಕಂಡಿದೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್ ಚಿತ್ರದಲ್ಲಿ ನಟಿಸಿರುವುದು ಕುತೂಹಲ ಹೆಚ್ಚಿಸಿದೆ. ಕಿಚ್ಚ ಗೆಸ್ಟ್ ಅಪಿಯರೆನ್ಸ್ ಯಾಕೆ ಎನ್ನುವ ಪ್ರಶ್ನೆ ಫ್ಯಾನ್ಸ್‌ಗೆ ಇತ್ತು. ಅಂತೂ ಇಂದು ಎಲ್ಲದಕ್ಕೂ ಉತ್ತರ ಸಿಕ್ಕಿದೆ. ಸಿನಿಮಾ 70ರ ದಶಕದ ಕಥೆಯನ್ನು ರೆಟ್ರೋ ಶೈಲಿಯಲ್ಲಿ ಹೇಳಲಾಗ್ತಿದೆ. 'ದಿ ವಿಲನ್' ಬಳಿಕ ಪ್ರೇಮ್ ನಿರ್ದೇಶನದ ದೊಡ್ಡ ಸಿನಿಮಾ ಇದು.