ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Yash: 'ಟಾಕ್ಸಿಕ್' ಜೊತೆಗೆ 'ಜಾಕಿ 42' ಸಿನಿಮಾ ಟ್ರೇಲರ್‌ ಪ್ರದರ್ಶನ, ಕುದುರೆ ರೇಸ್‌ ಕುರಿತ ಚಿತ್ರದಲ್ಲಿ ನಟ ಕಿರಣ್‌ ರಾಜ್‌

'ಟಾಕ್ಸಿಕ್' ಚಿತ್ರದ ಜೊತೆಗೆ ನಟ ಕಿರಣ್ ರಾಜ್ ಅಭಿನಯದ 'ಜಾಕಿ 42' ಚಿತ್ರದ ಟ್ರೇಲರ್ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ. ಭಾರತೀಯ ಚಿತ್ರರಂಗದಲ್ಲೇ ಅಪರೂಪದ ಕುದುರೆ ರೇಸ್ ಕಥಾಹಂದರ ಹೊಂದಿರುವ ಈ ಸಿನಿಮಾವನ್ನು ಗುರುತೇಜ್ ಶೆಟ್ಟಿ ನಿರ್ದೇಶಿಸಿದ್ದಾರೆ. ಭಾರತಿ ಸತ್ಯನಾರಾಯಣ ನಿರ್ಮಾಣದ ಈ ಚಿತ್ರವು ಶೀಘ್ರದಲ್ಲೇ ಬಿಡುಗಡೆ ಆಗಲಿದೆ.

'ಟಾಕ್ಸಿಕ್' ಸಿನಿಮಾದ ಜೊತೆಗೆ 'ಜಾಕಿ 42' ಚಿತ್ರದ ಟ್ರೇಲರ್‌ ಪ್ರದರ್ಶನ

-

Avinash GR
Avinash GR Aug 25, 2026 2:07 PM

ವಿಶ್ವಾದ್ಯಂತ ‘ರಾಕಿಂಗ್ ಸ್ಟಾರ್’ ಯಶ್ ನಟನೆಯ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರದ ಹವಾ ಜೋರಾಗಿದ್ದು, ಇದೀಗ ಇದೇ ಚಿತ್ರದ ಪ್ರದರ್ಶನದ ಜೊತೆಗೆ ನಟ ಕಿರಣ್ ರಾಜ್ ಅಭಿನಯದ 'ಜಾಕಿ 42' ಚಿತ್ರದ ಥಿಯೇಟರಿಕಲ್ ಟ್ರೇಲರ್ ಕೂಡ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ.

ಕುದುರೆ ರೇಸ್ ಕುರಿತಾದ ಸಿನಿಮಾ

'ಗೋಲ್ಡನ್ ಗೇಟ್ ಸ್ಟುಡಿಯೋ' ಬ್ಯಾನರ್ ಅಡಿಯಲ್ಲಿ ಭಾರತಿ ಸತ್ಯನಾರಾಯಣ ಅವರು ನಿರ್ಮಿಸಿರುವ 'ಜಾಕಿ 42' ಚಿತ್ರಕ್ಕೆ ಗುರುತೇಜ್ ಶೆಟ್ಟಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಇದು ಕುದುರೆ ರೇಸ್ ಹಿನ್ನೆಲೆಯುಳ್ಳ ವಿಶಿಷ್ಟ ಕಥಾಹಂದರದ ಚಿತ್ರವಾಗಿದೆ. ‌

Ramayana: 'ರಾಮಾಯಣ'ದಲ್ಲಿ ನಟಿಸಲು ನೂರಾರು ಕೋಟಿ ರೂ. ಸಂಭಾವನೆ ಪಡೆದ ಯಶ್-ರಣಬೀರ್ ಕಪೂರ್‌

"ಇದು ಕುದುರೆ ರೇಸ್ ಹಿನ್ನೆಲೆಯ ಕಥಾಹಂದರದ ಚಿತ್ರ. ನನಗೆ ತಿಳಿದ ಹಾಗೆ ಭಾರತೀಯ ಚಿತ್ರರಂಗದಲ್ಲೇ ಯಾವ ಚಿತ್ರದಲ್ಲೂ ಕುದುರೆ ರೇಸ್ ಕುರಿತು ಇಡೀ ಸಿನಿಮಾ ಬಂದಿಲ್ಲ. ನಮ್ಮ ಇಡೀ ಸಿನಿಮಾ ಕುದುರೆ ರೇಸ್ ಸುತ್ತ ಸಾಗುತ್ತದೆ. ಗುಣಮಟ್ಟದ ಮೇಕಿಂಗ್ ಹಾಗೂ ವಿಶಿಷ್ಟವಾದ ಚಿತ್ರಕಥೆಯಿರುವ ಚಿತ್ರವಿದು. ಟಾಕ್ಸಿಕ್ ನೋಡೋ ಪ್ರೇಕ್ಷಕರಿಗೆ ಕುತೂಹಲ ಹುಟ್ಟಿಸಲಿದೆ ಹಾಗೂ ಥಿಯೇಟರಲ್ಲೇ ಜಾಕಿ 42 ಸಿನಿಮಾವನ್ನ ನೋಡಬೇಕು ಅಂತ ಪ್ರೇರಪಿಸಲಿದೆ" ಎಂದು ನಿರ್ದೇಶಕ ಗುರುತೇಜ್ ಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‌Naveen Sagar Column: ಯಶ್-ದ ಫೇರಿ ಟೇಲ್‌ ಆಫ್‌ ಎ ಗ್ರೋನ್‌ ಅಪ್

ಶೀಘ್ರದಲ್ಲೇ ಬಿಡುಗಡೆ ದಿನಾಂಕ ಘೋಷಣೆ

'ಜಾಕಿ 42' ಚಿತ್ರದಲ್ಲಿ ಕಿರಣ್ ರಾಜ್ ಜೊತೆಗೆ ಹೃತಿಕ್ ಶ್ರೀನಿವಾಸ್, ಯುಕ್ತಾ, ದೀಪಕ್ ರೈ, ರಾಜೇಂದ್ರ ಕಾರಂತ್, ಚೇತನ್ ರೈ ಮಣಿ, ಮಧುಸೂಧನ್ ರಾವ್, ಗಿರೀಶ್ ಹೆಗಡೆ ಹಾಗೂ ಅರುಣ್ ಆಚಾರ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಎರಡು ಹಾಡುಗಳು ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದು, ಇದೀಗ 'ಟಾಕ್ಸಿಕ್' ಚಿತ್ರಮಂದಿರಗಳಲ್ಲಿ ಟ್ರೇಲರ್ ಪ್ರದರ್ಶಿಸುವ ಮೂಲಕ ಚಿತ್ರತಂಡ ಭರ್ಜರಿ ಪ್ರಚಾರಕ್ಕೆ ಚಾಲನೆ ನೀಡಿದೆ. ಸದ್ಯದಲ್ಲೇ ಮತ್ತೊಂದು ಹಾಡನ್ನು ಬಿಡುಗಡೆ ಮಾಡಲು ಸಜ್ಜಾಗಿರುವ ಚಿತ್ರತಂಡ, ಶೀಘ್ರದಲ್ಲೇ ಸಿನಿಮಾ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಿದೆ.