ದುಲೀಪ್ ಟ್ರೋಫಿ; ನಾಲ್ಕು ಎಸೆತಗಳಲ್ಲಿ 2 ವಿಕೆಟ್ ಕಬಳಿಸಿದ ವೈಭವ್ ಸೂರ್ಯವಂಶಿ
Vaibhav Sooryavanshi: ಸೂರ್ಯವಂಶಿ ಆಫ್ ಸ್ಟಂಪ್ ಸುತ್ತಲೂ ಉತ್ತಮ ಲೆಂಗ್ತ್ ಚೆಂಡನ್ನು ಎಸೆದರು.ಮೊದಲ ಇನಿಂಗ್ಸ್‌ನಲ್ಲಿ 467ರನ್ ಗಳಿಸಿತು. ಗುರಿ ಹಿಂಬಾಲಿಸಿದ ಈಶಾನ್ಯ ವಲಯ 111 ಆಲೌಟ್ ಆಗಿ ಫಾಲೋಆನ್ ಸಂಕಷ್ಟಕ್ಕೆ ಸಿಲುಕಿತು. ಎರಡನೇ ಇನಿಂಗ್ಸ್‌ನಲ್ಲಿಯೂ ಬ್ಯಾಟಿಂಗ್ ವೈಫಲ್ಯ ಕಂಡು 146 ಸರ್ವಪನ ಕಂಡು ಇನಿಂಗ್ಸ್ ಮತ್ತು 210 ರನ್ ಸೋಲು ಕಂಡಿತು.
Vaibhav Sooryavanshi -
ಬೆಂಗಳೂರು, ಆ.25: ಸ್ಫೋಟಕ ಬ್ಯಾಟಿಂಗ್ ಮೂಲಕ ಈಗಾಗಲೇ ವಿಶ್ವದ ಗಮನ ಸೆಳೆದಿರುವ ಹದಿಹರೆಯದ ವೈಭವ್ ಸೂರ್ಯವಂಶಿ ಇದೀಗ ಬೌಲಿಂಗ್‌ನಲ್ಲಿಯೂ ಮಿಂಚಿನ ಪ್ರದರ್ಶನ ತೋರಿದ್ದಾರೆ. ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಪೂರ್ವ ವಲಯ ಮತ್ತು ಈಶಾನ್ಯ ವಲಯ ನಡುವಿನ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದ 3 ನೇ ದಿನದಂದು ಸೂರ್ಯವಂಶಿ ಕೇವಲ ನಾಲ್ಕು
ಪೂರ್ವ ವಲಯದ ಉಪನಾಯಕರಾಗಿರುವ ಸೂರ್ಯವಂಶಿ ಎರಡು ವಿಕೆಟ್‌ಗಳನ್ನು ಪಡೆದು ಈಶಾನ್ಯ ವಲಯವನ್ನು ಒತ್ತಡಕ್ಕೆ ಸಿಲುಕಿಸಿದರು. 28ನೇ ಓವರ್‌ನಲ್ಲಿ ಕಿಶನ್ ಲಿಂಗ್ಡೋ ಮತ್ತು ಇಮ್ಲಿವತಿ ಲೆಮ್ಟೂರ್ ವಿಕೆಟ್ ಕೆಡವಿದರು. ಇದು ಸೂರ್ಯವಂಶಿಗೆ ಅವರ ಮೂರನೇ ಪ್ರಥಮ ದರ್ಜೆ ವಿಕೆಟ್.
ಸೂರ್ಯವಂಶಿ ಆಫ್ ಸ್ಟಂಪ್ ಸುತ್ತಲೂ ಉತ್ತಮ ಲೆಂಗ್ತ್ ಚೆಂಡನ್ನು ಎಸೆದರು.ಮೊದಲ ಇನಿಂಗ್ಸ್‌ನಲ್ಲಿ 467ರನ್ ಗಳಿಸಿತು. ಗುರಿ ಹಿಂಬಾಲಿಸಿದ ಈಶಾನ್ಯ ವಲಯ 111 ಆಲೌಟ್ ಆಗಿ ಫಾಲೋಆನ್ ಸಂಕಷ್ಟಕ್ಕೆ ಸಿಲುಕಿತು. ಎರಡನೇ ಇನಿಂಗ್ಸ್‌ನಲ್ಲಿಯೂ ಬ್ಯಾಟಿಂಗ್ ವೈಫಲ್ಯ ಕಂಡು 146 ಸರ್ವಪನ ಕಂಡು ಇನಿಂಗ್ಸ್ ಮತ್ತು 210 ರನ್ ಸೋಲು ಕಂಡಿತು. ಗೆಲುವಿನೊಂದಿಗೆ ಪೂರ್ವ ವಲಯ ಸೆಮಿಫೈನಲ್‌ನಲ್ಲಿ ಸ್ಥಾನವನ್ನು ಖಚಿತಪಡಿಸಿಕೊಂಡಿತು. ಪೂರ್ವ ವಲಯ ತಂಡದ ಪರ ಎರಡನೇ ಇನಿಂಗ್ಸ್‌ನಲ್ಲಿ ಅನುಕೂಲ್ ರಾಯ್ 5 ವಿಕೆಟ್ ಗೊಂಚಲು ಪಡೆದರು.
Vaibhav Sooryavanshi provides Double Delight ✌️
— BCCI Domestic (@BCCIdomestic) August 25, 2026
Picks up 2⃣ wickets in the over. 2 excellent catches as well. 🙌
North East Zone are 79/7 in the 2nd innings after following on.
Scorecard ▶️ https://t.co/XJFhfvvTIU#DuleepTrophy pic.twitter.com/NnYbBPnrja
ಆಗಸ್ಟ್ 30ರಿಂದ ಸೆ.2ರವರೆಗೆ ಸೆಮಿಫೈನಲ್ಸ್ ಸಹ ಬಿಸಿಸಿಐ ಸಿಒಇಯಲ್ಲೇ ನಡೆಯಲಿದ್ದು, ಚೆನ್ನೈನಲ್ಲಿ ಸೆ.6ರಿಂದ 10ರವರೆಗೆ ಫೈನಲ್ ಪಂದ್ಯ ನಿಗದಿಯಾಗಿದೆ. ಆಟಗಾರರ ಪದೇ ಪದೆ ಗಾಯದ ಸಮಸ್ಯೆ ಹಾಗೂ ಆವರ್ತನ ಪದ್ಧತಿಯಿಂದಾಗಿ ಮುಂಬರುವ ನ್ಯೂಜಿಲೆಂಡ್ ಪ್ರವಾಸ ಹಾಗೂ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸರಣಿಗಳ ಜತೆಗೆ ಭಾರತ ಎ ತಂಡದ ಉದಯೋನ್ಮುಖ ಆಕಾಂಕ್ಷಿಗಳಿಗೆ ಜತೆಗೆ ಅನುಭವಿಗಳಿಗೆ ವೇದಿಕೆ ಎನಿಸಿದೆ.
ಮರಡೋನಾ ‘ಹ್ಯಾಂಡ್ ಆಫ್ ಗಾಡ್’ ಗೋಲಿನ ಚೆಂಡು 32 ಕೋಟಿಗೆ ಹರಾಜು
ಸೂರ್ಯವಂಶಿ ದೀರ್ಘ ಸ್ವರೂಪಕ್ಕೆ ಯಶಸ್ವಿಯಾಗಿ ತಿರುಗುವುದು ಟೆಸ್ಟ್ ಕ್ರಿಕೆಟ್ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂದು ಭಾರತದ ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ನಂಬಿದ್ದಾರೆ.
"ನಾವೆಲ್ಲರೂ ಟೆಸ್ಟ್ ಕ್ರಿಕೆಟ್ ಉಳಿಯುವುದನ್ನು ನೋಡಲು ಬಯಸುತ್ತೇವೆ, ನಾವೆಲ್ಲರೂ ಟೆಸ್ಟ್ ಕ್ರಿಕೆಟ್ ಬೆಳೆಯುವುದನ್ನು ನೋಡಲು ಬಯಸುತ್ತೇವೆ, ಮತ್ತು ಆಟದ ಎಲ್ಲಾ ಸ್ವರೂಪಗಳನ್ನು ಆಡಲು ಸಾಧ್ಯವಾಗುವಂತೆ ಅವರಂತಹ ಆಟಗಾರರು ನಮಗೆ ಬೇಕು" ಎಂದು ದ್ರಾವಿಡ್ ಇತ್ತೀಚಿಗಿನ ಸಂದರ್ಶನೊಂದರಲ್ಲಿ ಹೇಳಿದ್ದರು.