Krishi Thapanda: ನನ್ನ ಪಾಡಿಗೆ ಬದುಕಲು ಬಿಡಿ, ನಟನೆ ಬಿಡುತ್ತಿರುವೆ; ಕಣ್ಣೀರಿಟ್ಟ ನಟಿ ಕೃಷಿ ತಾಪಂಡ
Krishi Thapanda: ಕೃಷಿ ತಾಪಂಡ ತಮ್ಮ ವೈಯಕ್ತಿಕ ಜೀವನದ ವಿಚಾರಗಳಿಂದ ಹಲವು ಬಾರಿ ಸುದ್ದಿಯಾಗಿದ್ದರು. ಆ ನಂತರ ಅವರ ಖಾಸಗಿ ಫೋಟೋಗಳು ಲೀಕ್ ಆಗಿ ಭಾರೀ ಸುದ್ದಿಯಾಗಿದ್ದವು. ಆದರೆ ಕೆಲವರು ಇನ್ನೂ ದುಃಖ ಕೊಡೋ ರೀತಿಯಲ್ಲಿ, ಅರ್ಥವಿಲ್ಲದಂತೆ ಮಾತನಾಡುತ್ತಿದ್ದಾರೆ ಎಂದು ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್ ಜೊತೆ ಮುಕ್ತವಾಗಿ ಮಾತನಾಡಿದ್ದಾರೆ.
ಕೃಷಿ ತಾಪಂಡ -
ನಟಿ ಹಾಗೂ ಮಾಜಿ ಬಿಗ್‌ಬಾಸ್ ಸ್ಪರ್ಧಿ ಕೃಷಿ ತಾಪಂಡ (Krishi Thapanda) ತಮ್ಮ ವೈಯಕ್ತಿಕ ಜೀವನದ ವಿಚಾರಗಳಿಂದ ಹಲವು ಬಾರಿ ಸುದ್ದಿಯಾಗಿದ್ದರು. ಆ ನಂತರ ಅವರ ಖಾಸಗಿ ಫೋಟೋಗಳು (Photos) ಲೀಕ್ ಆಗಿ (Leak) ಭಾರೀ ಸುದ್ದಿಯಾಗಿದ್ದವು. ಆದರೆ ಕೆಲವರು ಇನ್ನೂ ದುಃಖ ಕೊಡೋ ರೀತಿಯಲ್ಲಿ, ಅರ್ಥವಿಲ್ಲದಂತೆ ಮಾತನಾಡುತ್ತಿದ್ದಾರೆ ಎಂದು ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್ ಜೊತೆ ಮುಕ್ತವಾಗಿ ಮಾತನಾಡಿದ್ದಾರೆ.
ಭಿನ್ನಾಭಿಪ್ರಾಯಕ್ಕೆ ಕಾರಣ ಇದು
ನಟಿ ಮಾತನಾಡಿ, ʻನನಗೆ ಉಡುಗೊರೆಗಳು ಸಿಕ್ಕಿವೆ, ಹಣ ಸಿಕ್ಕಿದೆ. ಆದರೆ ಪ್ರೀತಿ ಮತ್ತು ಸಮಯ ಸಿಗಲಿಲ್ಲ. ಅದೇ ನನಗೆ ಹೆಚ್ಚು ನೋವು ಕೊಟ್ಟದ್ದು ಎಂದು ಕೃಷಿ ತಾಪಂಡ ಹೇಳಿದ್ದಾರೆ. ಸಂಬಂಧದಲ್ಲಿ ಉಂಟಾದ ಸಮಸ್ಯೆಗಳು ದೊಡ್ಡ ಮಟ್ಟದ ಭಿನ್ನಾಭಿಪ್ರಾಯಕ್ಕೆ ಕಾರಣವಾದವು. ನನ್ನ ರಿಲೇಶನ್‌ಶಿಪ್ ಅಲ್ಲಿ ಸಮಯವೂ ಮಿಸ್ ಆಗುತ್ತಿತ್ತು. ನಿಮಗೆ ಒಂದು ಸಮಯದವರೆಗೆ ಎಲ್ಲವೂ ಚೆನ್ನಾಗಿ ಅನ್ಸತ್ತೆ. ಮತ್ತೆ ಎನೂ ಇಲ್ಲದೇ ಇದ್ದಾಗ ಎಲ್ಲವೂ ಸಿಕ್ಕಾಗ ಅದೇ ಚೆನ್ನಾಗಿ ಇದೆ ಅಂದುಕೊಳ್ಳುತ್ತೀರಾ. ಆದರೆ ಸುತ್ತ ಮುತ್ತ ಅವರೇ ಇಲ್ಲ ಎಂದಾಗ , ಇದೆಲ್ಲ ನಿಮಗೆ ಮುಖ್ಯ ಅನ್ನಿಸಲ್ಲʼ ಎಂದಿದ್ದಾರೆ.
ಇದನ್ನೂ ಓದಿ: Amruthadhaare Serial: ಮಹಿಮಾ ಬದುಕಿಗೆ ಭರವಸೆ ನೀಡಿದ ಗೌತಮ್ - ಭೂಮಿ; ಧನ್ಯವಾದ ಹೇಳಿದ ಶಕುಂತಲಾ!
ನಾಲ್ಕು ಗೋಡೆ ಮಧ್ಯೆ ಏನು ನಡೆಯುತ್ತೆ ಅದು ನಮಗೆ ಮಾತ್ರ ಗೊತ್ತು!
ನನಗೆ ಬೇಕಿದಿದ್ದು ಪ್ರೀತಿ ಮಾತ್ರ. ಸಮಯ ಅದೆಲ್ಲ. ಆದೆಲ್ಲ ನನಗೆ ಸಿಕ್ಕಿಲ್ಲ. ಲಕ್ಷುರಿ ಮಾತ್ರ ಇತ್ತು. ಕೊನೆ ಕೊನೆಯಲ್ಲಿ ನಾವು ಚೆನ್ನಾಗಿಯೇ ಇರಲಿಲ್ಲ. ಅವರ ಲೈಫ್‌ಸ್ಟೈಲ್ ಬೇರೆ ಇತ್ತು. ಕಷ್ಟ ಪಟ್ಟು ಇರೋಕ್ಕಿಂತ, ನಿಮ್ಮ ಮೈಂಡ್ ಹಾಳು ಮಾಡಿಕೊಂಡು ಬದುಕಲು ಆಗಲ್ಲ. ನಾನು ಆಚೆ ಬರೋಕೆ ಟೈಮ್ ಅಲ್ಲಿ ಅದು ಸರಳವಾಗಿ ಇರಲಿಲ್ಲ. ನಾನು ಆ ಸಮಯದಲ್ಲೇ ಕೆಲಸ ಕೂಡ ಮಾಡುತ್ತ ಇರಲಿಲ್ಲ. ಆಮೇಲೆ ನಾನು ಬೀದಿಗೆ ಬರ್ತೀನಿ ಅನ್ನೋ ಮೆಂಟಾಲಿಟಿ ಅವರಿಗೆ ಇತ್ತು.
ನಾನು ಇದನ್ನ ಹೆಚ್ಚಾಗಿ ಎಳೆಯಲು ಬರಲಿಲ್ಲ. ನಾಲ್ಕು ಗೋಡೆ ಮಧ್ಯೆ ಏನು ನಡೆಯುತ್ತೆ ಅದು ನಮಗೆ ಮಾತ್ರ ಗೊತ್ತಿರತ್ತೆ. ಬೀದಿಗೆ ಬರುತ್ತೆ ನನ್ನ ಕಥೆ ಅಂದುಕೊಂಡಿಲ್ಲ. ಆದರೆ ಈಗಲೂ ಇಷ್ಟು ದಿನ ಆದರೂ ಈಗಲೂ ಅದರ ಬಗ್ಗೆಯೇ ಕೇಳ್ತಾರೆ.ಆ ಟಾಪಿಕ್ ಬಗ್ಗೆ ಹಿಂಸೆ ಕೊಡುತ್ತಿದ್ದಾರೆ. ಇವತ್ತಿಗೂ ನನ್ನ ಕೆಲವರು ಬಿಡ್ತಾ ಇಲ್ಲ. ಮಾತಾಡಿಲ್ಲ ಅಂದರೂ ನಾನೇ ಕೆಟ್ಟವಳು ಅನ್ನೋ ಥರ ಟ್ರೀಟ್ ಮಾಡ್ತಾರೆ. ನನಗೆ ಲೈಫ್‌ನಲ್ಲಿ ಮೂವ್ ಅನ್ ಆಗಬೇಕಿದೆ.
ಬದುಕಲು ಬಿಡಿ!
ನಾನು ಕೂಡ ಮನುಷ್ಯಳು. ಮುಂದೆ ಹೋಗೋಕೆ ಬಿಡಿ. ಬದುಕಕ್ಕೆ ಬಿಡಿ. ನಾನು ಯಾರನ್ನಾದರೂ ಕೊಲೆ ಮಾಡಿದ್ದೀನಾ, ಬ್ರೇಕಪ್ ಅಷ್ಟೇ ಆಗಿದೆ. ಆದರೆ ಇವತ್ತು ನನ್ನ ಕೆಟ್ಟವಳು ಅಂತ ನೋಡ್ತಾ ಇದ್ದಾರೆ ಎಂದು ಕಣ್ಣೀರಿಟ್ಟಿದ್ದಾರೆ. ಇದೇ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಕೆಟ್ಟದಾಗಿ ಕಮೆಂಟ್ ಮಾಡಿದ್ದರು. ಆದರೆ ಅದೇ ಜನ ಈಗ ನನ್ನ ಸಪೋರ್ಟ್ ನಿಂತಿದ್ದಾರೆ. ಪುರುಷರೂ ಕೂಡ ನನ್ನ ಸಪೋರ್ಟ್ ನಿಂತಿದ್ದಾರೆ.
ನನ್ನ ಜೊತೆ ಯಾರೂ ಇಲ್ಲ. ಮನೆಯಲ್ಲಿ ಒಬ್ಬೊಬ್ಬಳೇ ಇರುವುದಕ್ಕಿಂತ ಕಂಟೆಂಟ್ ಮಾಡಿಕೊಂಡು ಇರುತ್ತೀನಿ. ನಾನು ಟ್ರೀಟ್ಮೆಂಟ್ ತಗೊಳ್ತಾ ಇದ್ದೀನಿ. ನಾನು ಬದುಕು ಮುಗಿಸೋಕೆ ಇಷ್ಟಪಡಲ್ಲ ಎಂದಿದ್ದಾರೆ. ದೇವರೇ ಕಳಿಸಿಕೊಟ್ಟಿದ್ದಾರೋ ಗೊತ್ತಿಲ್ಲ.
ಸಿನಿಮಾ ಬಿಡುತ್ತಿದ್ದೇನೆ
ನನಗೆ ಮತ್ತೆ ಭರವಸೆ ತಂದಿದ್ದು ನನ್ನ ಸೋಷಿಯಲ್ ಮೀಡಿಯಾ ಕಮ್ಯುನಿಟಿ. ನಾನು ಅಧಿಕೃತವಾಗಿ ಹೇಳ್ತಾ ಇದ್ದೇನೆ. ನಾನು ನಟಿಯಲ್ಲ. ನಾನು ನಟನೆ ಬಿಡ್ತಾ ಇದ್ದೇನೆ. ನಾನು ಇಂಡಸ್ಟ್ರಿ ಬಿಡ್ತಾ ಇದ್ದೀನಿ. ನಾನು ಸಾಮಾನ್ಯ ಮನುಷ್ಯಗಳು ಅಂತನದ್ಕೊಂಡು ಬದುಕೋಕೆ ಬಿಡಿ. ಸಾಧ್ಯವಾದರೆ ನಾನು ಬೆಂಗಳೂರು ಬಿಟ್ಟು ಹೋಗುತ್ತೇನೆ ಎಂದಿದ್ದಾರೆ. ನಾನು ಅಧಿಕೃತವಾಗಿ ಸಿನಿಮಾ ಬಿಡುತ್ತಿದ್ದೇನೆ. ನನಗೆ ಹೊಸ ಬದುಕು ಶುರು ಮಾಡಬೇಕು. ನನ್ನ ಪರ್ಸನಲ್ ಲೈಫ್ ಅನ್ನು ಪರ್ಸನಲ್ ಲೈಫ್ ಆಗಿ ಬಿಟ್ಟುಬಿಡಿ. ನನ್ನ ಬದುಕೋದಿಕ್ಕೆ ಬಿಟ್ಟರೆ ಸಾಕು ಎಂದಿದ್ದಾರೆ.
ಇದನ್ನೂ ಓದಿ: Krishi Thapanda: ಚುಚ್ಚು ಮಾತುಗಳಿಂದ ನೊಂದಿದ್ದ ನಟಿ; ಕೃಷಿ ತಾಪಂಡ ಭಾವುಕ ಪೋಸ್ಟ್!
ನೀನು ನಂಗೆ ಏನಾದರೂ ಕೊಡ್ಬಹುದು. ಆದರೆ ಅದು ಆ ಕ್ಷಣಕ್ಕೆ ಖುಷಿ ಕೊಡಬಹುದು. ಆದರೆ ಪ್ರೀತಿ ಯಾವಾಗಲೂ ಖುಷಿ ಕೊಡುತ್ತೆ. ನನ್ನ ಯಾವ ಪ್ರಪಂಚದ ಯಾವ ಮೂಲೆಗೆ ಬಿಟ್ಟರೂ ಬದುಕುತ್ತೇನೆ ಎಂದಿದ್ದಾರೆ.ಇದೇ ನನ್ನ ಕೊನೆಯ ಸಂದರ್ಶನ. ಇನ್ನು ಮುಂದೆ ಯಾವ ಕ್ಯಾಮೆರಾ ಮುಂದೆಯೂ ಬರಲು ಬಯಸುವುದಿಲ್ಲ. ದಯವಿಟ್ಟು ನನ್ನನ್ನು ನನ್ನ ಪಾಡಿಗೆ ಬದುಕಲು ಬಿಡಿ ಎಂದು ಭಾವುಕರಾಗಿ ಕೃಷಿ ತಾಪಂಡ ಮನವಿ ಮಾಡಿದ್ದಾರೆ.