ʻಟಾಕ್ಸಿಕ್ʼ ಟ್ರೈಲರ್ ರಿಲೀಸ್‌ಗೆ ಕ್ಷಣಗಣನೆ; ಹೊಸ ಪೋಸ್ಟರ್ ಮೂಲಕ ಟೈಮಿಂಗ್ಸ್ ಅನೌನ್ಸ್ ಮಾಡಿದ ಯಶ್
Toxic Trailer: ಇತ್ತೀಚೆಗಷ್ಟೇ ಯಶ್ ನಟನೆಯ ಬಾಲಿವುಡ್‌ನ 'ರಾಮಾಯಣ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಇದರ ಬೆನ್ನಲ್ಲೇ 'ಟಾಕ್ಸಿಕ್' ಟ್ರೈಲರ್‌ನ ಅಧಿಕೃತ ಬಿಡುಗಡೆಗೆ ಸಮಯ ನಿಗದಿಯಾಗಿದೆ. ಯಶ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸಿನಿಮಾ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಟ್ರೈಲರ್ ರಿಲೀಸ್ ಟೈಮಿಂಗ್ಸ್ ಅನೌನ್ಸ್ ಮಾಡಿದ್ದಾರೆ.
ʼಟಾಕ್ಸಿಕ್ʼ ಚಿತ್ರದ ಪೋಸ್ಟರ್ -
ಬೆಂಗಳೂರು, ಆ. 8: ʼಕೆಜಿಎಫ್ʼ ಸರಣಿ ಚಿತ್ರಗಳ ಯಶಸ್ಸಿನ ಬಳಿಕ ರಾಕಿಂಗ್ ಸ್ಟಾರ್ ಯಶ್ (Yash) ತಮ್ಮ ಫೇಮ್ ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ. ಮುಂಬರುವ ಅತ್ಯಂತ ಬಹು ನಿರೀಕ್ಷಿತ ಸಿನಿಮಾ 'ಟಾಕ್ಸಿಕ್' ಜತೆಗೆ ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದಲ್ಲೂ ಯಶ್ ಪ್ರಮುಖ ಪಾತ್ರದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಇತ್ತೀಚೆಗೆ 'ರಾಮಾಯಣ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಇದರ ಬೆನ್ನಲ್ಲೇ 'ಟಾಕ್ಸಿಕ್' (Yash's Toxic) ಟ್ರೈಲರ್ ಅಧಿಕೃತ ಬಿಡುಗಡೆಗೆ ಸಮಯ ನಿಗದಿಯಾಗಿದೆ. ಇಂದು ಯಶ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸಿನಿಮಾ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಟ್ರೈಲರ್ ರಿಲೀಸ್ ಟೈಮಿಂಗ್ಸ್ ಅನೌನ್ಸ್ ಮಾಡಿದ್ದಾರೆ.
ಶನಿವಾರ ಬೆಂಗಳೂರಿನ ಮೆಜೆಸ್ಟಿಕ್ ಏರಿಯಾದಲ್ಲಿರುವ ಎಎಂಬಿ ಮಾಲ್‌ನಲ್ಲಿ ʼಟಾಕ್ಸಿಕ್ʼ ಟ್ರೈಲರ್ ರಿಲೀಸ್ ಇವೆಂಟ್ ನಡೆಯಲಿದ್ದು, ಭರ್ಜರಿ ತಯಾರಿ ನಡೆಸಲಾಗಿದೆ. ಚಿತ್ರತಂಡದ ಮಾಹಿತಿಯಂತೆ ಟ್ರೈಲರ್ ಆಗಸ್ಟ್ 8ರ ಸಂಜೆ 7:01ಕ್ಕೆ ಅದ್ಧೂರಿಯಾಗಿ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಯಶ್ ಶೇರ್ ಮಾಡಿದ ಪೋಸ್ಟರ್ ಮೂಲಕ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದ್ದು ಬೆಂಕಿ ಹಾಗೂ ಉರಿಯುವ ಜ್ವಾಲೆ ನಡುವೆ ಯಶ್ ಗಾಂಭಿರ್ಯದಿಂದ ನಡೆದುಬರುವ ಮಾಸ್ ಲುಕ್ ಇದರಲ್ಲಿದೆ. ಈ ಪೋಸ್ಟರ್‌ಗೆ ಡೆಟೋನೇಟಿಂಗ್ 7:01 PM ಎಂದು ಯಶ್ ಶೀರ್ಷಿಕೆ ನೀಡಿದ್ದಾರೆ.
ʼಟಾಕ್ಸಿಕ್ʼ ಚಿತ್ರದ ಹೊಸ ಪೋಸ್ಟರ್ ಇಲ್ಲಿದೆ:
DETONATING.
— KVN Productions (@KvnProductions) August 8, 2026
7:01 PM | TODAY#ToxicTrailer pic.twitter.com/FJAE0ku8Ro
ಇನ್ನು ಈ ಅದ್ದೂರಿ ಟ್ರೈಲರ್ ಲಾಂಚ್ ಇವೆಂಟ್ ಅನ್ನು ಜನಪ್ರಿಯ ನಿರೂಪಕ ಹಾಗೂ ನಟ ದಾನಿಶ್ ಸೇಠ್ ನಡೆಸಿ ಕೊಡಲಿದ್ದಾರೆ. ಇಲ್ಲಿಯವರೆಗೆ ಬಿಡುಗಡೆಯಾಗಿರುವ ಟೀಸರ್ ಮತ್ತು ಪೋಸ್ಟರ್‌ಗಳು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸುವಲ್ಲಿ ಯಶಸ್ವಿಯಾಗಿವೆ. ಇಂದು ಬಿಡುಗಡೆಯಾಗಲಿರುವ ಟ್ರೈಲರ್ ಬಗ್ಗೆ ಅಭಿಮಾನಿಗಳು ಕಾತುರರಾಗಿದ್ದಾರೆ.
'ಟಾಕ್ಸಿಕ್' ಸಂಗೀತ ನಿರ್ದೇಶಕ ವಿಶಾಲ್ ಮಿಶ್ರಾ ಹೊಸ ಪೋಸ್ಟ್!
ಗೀತು ಮೋಹನ್‌ದಾಸ್ ನಿರ್ದೇಶಿಸಿರುವ ಈ ಸಿನಿಮಾ ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಏಕಕಾಲದಲ್ಲಿ ನಿರ್ಮಾಣವಾಗಿದೆ. ಚಿತ್ರವು ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗೂ ಡಬ್ಬಿಂಗ್ ಮಾಡಲಾಗಿದೆ. ʼಟಾಕ್ಸಿಕ್' ಗೋವಾದ ಗ್ಯಾಂಗ್ ಸ್ಟರ್ ಕಥೆಯಾಗಿದ್ದು, ಹಳೆಯ ಕಾಲದ ಡ್ರಗ್ ಮಾಫಿಯಾ, ರಕ್ತಪಾತ, ಹಗೆತನ ಮತ್ತು ಅಧಿಕಾರಕ್ಕಾಗಿ ನಡೆಯುವ ಸಂಘರ್ಷದ ನಡುವೆ ಸಾಗುತ್ತದೆ.
ಈ ಚಿತ್ರದಲ್ಲಿ ಯಶ್ ಜತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಹಲವು ರಿಲೀಸ್ ಡೇಟ್ ಬದಲಾವಣೆಯಾಗಿದ್ದು ಅಂತಿಮವಾಗಿ ಆಗಸ್ಟ್ 26ರಂದು ವಿಶ್ವದಾದ್ಯಂತ ಅದ್ದೂರಿಯಾಗಿ ತೆರೆಗೆ ಬರಲಿದೆ.