Mahesh Babu: ಶೂಟಿಂಗ್ ಸ್ಪಾಟ್‌ನಲ್ಲಿ ಮಹೇಶ್ ಬಾಬು ಹೇಗಿರ್ತಾರೆ? ವಿವರಿಸಿದ ನಿರ್ದೇಶಕ ರಾಜಮೌಳಿ
Rajamouli: ಮಹೇಶ್ ಬಾಬು ನಾಯಕನಾಗಿ ನಟಿಸಿರುವ ತಮ್ಮ ಮುಂಬರುವ ಚಿತ್ರ 'ವಾರಣಾಸಿ'ಯ ಶೀರ್ಷಿಕೆ ಬಿಡುಗಡೆ ಸಮಾರಂಭದಲ್ಲಿ ರಾಜಮೌಳಿ ಈ ವಿಷಯ ತಿಳಿಸಿದರು. ಈ ಹಿಂದೆ ಟಾಲಿವುಡ್‌ನಲ್ಲಿ ಹಲೋ ಬ್ರದರ್, ಕ್ಷಣಕ್ಷಣಂ, ಸಂತೋಷಂ ರೀತಿಯ ಸಿನಿಮಾಗಳನ್ನು ನಿರ್ಮಾಣ ಮಾಡಿ, ʻರಾಕಿʼ ಚಿತ್ರದ ಬಳಿಕ ನಿರ್ಮಾಣದಿಂದ ದೂರವಾಗಿದ್ದ ಕೆ ಎಲ್ ನಾರಾಯಣ ಅವರು ʻವಾರಣಾಸಿʼ ಚಿತ್ರಕ್ಕೆ ಹಣ ಹಾಕುತ್ತಿದ್ದಾರೆ. ಅವರ ಜೊತೆಗೆ ರಾಜಮೌಳಿ ಪುತ್ರ ಎಸ್ ಎಸ್ ಕಾರ್ತಿಕೇಯ ಅವರು ಕೂಡ ಈ ಚಿತ್ರದ ನಿರ್ಮಾಪಕರಾಗಿದ್ದಾರೆ.
ಮಹೇಶ್ ಬಾಬು -
ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ (SS Rajamouli) ಅವರು ನಟ ಮಹೇಶ್ ಬಾಬು (Mahesh Babu) ಅವರ ಗುಣಗಳ ಬಗ್ಗೆ ಹಾಡಿ ಹೊಗಳಿದ್ದಾರೆ. ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಮಹೇಶ್ ಬಾಬು ನಾಯಕನಾಗಿ ನಟಿಸಿರುವ 'ವಾರಣಾಸಿ' (Varanasi) ಚಿತ್ರದ ಟೈಟಲ್ ಅನೌನ್ಸ್ ಕಾರ್ಯಕ್ರಮದಲ್ಲಿ ಮಹೇಶ್ ಬಾಬು ಅವರ ಪಾತ್ರ, ಅವರ ಡೆಡಿಕೇಶನ್ ಬಗ್ಗೆ ಮಾಹಿತಿ ಹಂಚಿಕೊಂಡರು.
ಫೋನ್ ಟಚ್ ಕೂಡ ಮಾಡಲ್ಲ!
"ನಾವೆಲ್ಲರೂ ಅವರಿಂದ ಕಲಿಯಬಹುದಾದದ್ದು ಒಂದು ವಿಷಯ. ಮಹೇಶ್ ಬಾಬು ಆಫೀಸ್‌ಗೆ ಅಥವಾ ಶೂಟಿಂಗ್‌ಗೆ ಬಂದಾಗ ಅವರು ತಮ್ಮ ಸೆಲ್ ಫೋನ್ ಅನ್ನು ಮುಟ್ಟುವುದಿಲ್ಲ. ಎಂಟು ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಕೆಲಸ ಆದ ಬಳಿಕವೇ ಸೆಲ್ ಫೋನ್ ಅನ್ನು ಮುಟ್ಟುತ್ತಾರೆ" ಎಂದು ಎಸ್.ಎಸ್. ರಾಜಮೌಳಿ ಹೇಳಿದರು.
ಇದನ್ನೂ ಓದಿ: Bigg Boss Kannada 12: ಅತ್ಯಂತ ಕಠಿಣ ಶಿಕ್ಷೆ ಕೊಡಿಸಿದ ಗಿಲ್ಲಿ; ಬಸ್ಕಿ ಹೊಡೆದ ಅಶ್ವಿನಿ ಗೌಡ
ಈ ಗುಣ ಎಲ್ಲರಿಗೂ ಪ್ರಯೋಜನವಾಗಬಹುದಾದದ್ದು ಎಂದು ನಿರ್ದೇಶಕರು ಹೇಳಿದರು. ಮಹೇಶ್ ಬಾಬು ನಾಯಕನಾಗಿ ನಟಿಸಿರುವ ತಮ್ಮ ಮುಂಬರುವ ಚಿತ್ರ 'ವಾರಣಾಸಿ'ಯ ಶೀರ್ಷಿಕೆ ಬಿಡುಗಡೆ ಸಮಾರಂಭದಲ್ಲಿ ರಾಜಮೌಳಿ ಈ ವಿಷಯ ತಿಳಿಸಿದರು. ಶನಿವಾರ, ಬಹುನಿರೀಕ್ಷಿತ ಮ್ಯಾಗ್ನಮ್ ಓಪಸ್ ಚಿತ್ರದ ತಯಾರಕರು ಚಿತ್ರದ ಶೀರ್ಷಿಕೆಯನ್ನು 'ವಾರಣಾಸಿ' ಎಂದು ಘೋಷಿಸಿದರು ಮತ್ತು ಚಿತ್ರದಲ್ಲಿ ಮಹೇಶ್ ಬಾಬು ರುದ್ರ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದು ಬಹಿರಂಗಪಡಿಸಿದರು.
ಈ ಸಂದರ್ಭದಲ್ಲಿ ನಿರ್ಮಾಪಕರು ಚಿತ್ರದ ಶೀರ್ಷಿಕೆ ಟೀಸರ್ ಅನ್ನು ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳು ಮತ್ತು ಚಲನಚಿತ್ರ ಪ್ರೇಮಿಗಳನ್ನು ಸಂತೋಷಪಡಿಸಿದರು.
ಕೇವಲ ಪದಗಳು ಸಾಲುವುದಿಲ್ಲ
ಈ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಎಸ್.ಎಸ್. ರಾಜಮೌಳಿ, "ನನಗೆ ಪತ್ರಿಕಾಗೋಷ್ಠಿ ನಡೆಸಿ ನನ್ನ ಕೆಲವು ಚಿತ್ರಗಳ ಕಥೆಯನ್ನು ಘೋಷಿಸುವ ಅಭ್ಯಾಸವಿತ್ತು. ಆದರೆ, ಈ ಚಿತ್ರಕ್ಕೆ, ಕೇವಲ ಪದಗಳು ಸಾಲುವುದಿಲ್ಲ. ಆದ್ದರಿಂದ, ನಾವು ವೀಡಿಯೊ ಮಾಡಲು ನಿರ್ಧರಿಸಿದೆವು ಎಂದಿದ್ದಾರೆ.
ತಾಂತ್ರಿಕ ತೊಂದರೆಗಳಿಂದಾಗಿ ಕೆಲವು ಸಮಸ್ಯೆ ಉಂಟಾದರೂ ಶೀರ್ಷಿಕೆಯ ಟೀಸರ್ ಅನ್ನು ಬಿಡುಗಡೆ ಮಾಡಿದರು. ಭಾರತೀಯ ಸಿನಿಮಾಗೆ ಪ್ರೀಮಿಯಂ ಲಾರ್ಜ್ ಸ್ಕೇಲ್ ಫಾರ್ಮ್ಯಾಟ್ ಫಿಲ್ಮ್ಡ್ ಫಾರ್ ಐಮ್ಯಾಕ್ಸ್ ಎಂಬ ಹೊಸ ತಂತ್ರಜ್ಞಾನವನ್ನು ಪರಿಚಯಿಸುತ್ತಿದ್ದೇವೆ ಎಂದು ಹೇಳಲು ಹೆಮ್ಮೆಪಡುತ್ತೇನೆ ಎಂದು ಹೇಳಿದರು.
ಈ ಚಿತ್ರದ ನಿರ್ಮಾಪಕ
ಈ ಹಿಂದೆ ಟಾಲಿವುಡ್‌ನಲ್ಲಿ ಹಲೋ ಬ್ರದರ್, ಕ್ಷಣಕ್ಷಣಂ, ಸಂತೋಷಂ ರೀತಿಯ ಸಿನಿಮಾಗಳನ್ನು ನಿರ್ಮಾಣ ಮಾಡಿ, ʻರಾಕಿʼ ಚಿತ್ರದ ಬಳಿಕ ನಿರ್ಮಾಣದಿಂದ ದೂರವಾಗಿದ್ದ ಕೆ ಎಲ್ ನಾರಾಯಣ ಅವರು ʻವಾರಣಾಸಿʼ ಚಿತ್ರಕ್ಕೆ ಹಣ ಹಾಕುತ್ತಿದ್ದಾರೆ. ಅವರ ಜೊತೆಗೆ ರಾಜಮೌಳಿ ಪುತ್ರ ಎಸ್ ಎಸ್ ಕಾರ್ತಿಕೇಯ ಅವರು ಕೂಡ ಈ ಚಿತ್ರದ ನಿರ್ಮಾಪಕರಾಗಿದ್ದಾರೆ.
ಇದನ್ನೂ ಓದಿ: Bigg Boss Kannada 12: ಬಿಗ್ ಬಾಸ್ ಮನೆಯ ಯಾರ ಜರ್ನಿ ಎಂಡ್? ಈ ಸ್ಪರ್ಧಿಯೇ ಔಟ್?
ಮಹೇಶ್ ಬಾಬು ಅವರು ಹೀರೋ ಆಗಿದ್ದು, ಅವರ ನಾಯಕಿಯಾಗಿ ಮಂದಾಕಿನಿ ಪಾತ್ರದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಳ್ಳಲಿದ್ದಾರೆ. ಕುಂಭ ಎಂಬ ವಿಲನ್ ಪಾತ್ರದಲ್ಲಿ ನಟ ಪೃಥ್ವಿರಾಜ್ ಸುಕುಮಾರನ್ ನಟಿಸುತ್ತಿದ್ದಾರೆ. ಸಂಗೀತ ನಿರ್ದೇಶನವನ್ನು ಎಂ ಎಂ ಕೀರವಾಣಿ ನೀಡುತ್ತಿದ್ದಾರೆ. ವಿಜಯೇಂದ್ರ ಪ್ರಸಾದ್ ಅವರು ಈ ಚಿತ್ರದ ಸ್ಕ್ರಿಪ್ಟ್ ಬರೆದಿದ್ದಾರೆ.