Mr Rani Movie: ‘ಲಕ್ಷ್ಮಿ ನಿವಾಸ’ ಖ್ಯಾತಿಯ ದೀಪಕ್ ಸುಬ್ರಹ್ಮಣ್ಯ ಅಭಿನಯದ ‘ಮಿಸ್ಟರ್ ರಾಣಿ’ ಚಿತ್ರ ಫೆ.7ಕ್ಕೆ ರಿಲೀಸ್
Mr Rani Movie: ʼಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಜಯಂತ್ ಪಾತ್ರದ ಮೂಲಕ ಖ್ಯಾತಿ ಗಳಿಸಿದ ದೀಪಕ್ ಸುಬ್ರಹ್ಮಣ್ಯ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಮಿಸ್ಟರ್ ರಾಣಿ’ ಚಿತ್ರ ಫೆ.7 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಕುರಿತ ವಿವರ ಇಲ್ಲಿದೆ.
ಬೆಂಗಳೂರು: ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ ಚಿತ್ರದ ನಿರ್ದೇಶಕ ಮಧುಚಂದ್ರ ನಿರ್ದೇಶನದ ʼಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಜಯಂತ್ ಪಾತ್ರದ ಮೂಲಕ ಖ್ಯಾತಿ ಗಳಿಸಿದ ದೀಪಕ್ ಸುಬ್ರಹ್ಮಣ್ಯ (Deepak Subrahmanya) ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಮಿಸ್ಟರ್ ರಾಣಿ’ ಚಿತ್ರ (Mr Rani Movie) ಫೆ.7 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರದ ಕತೆಯನ್ನು ನಿರ್ದೇಶಕ ಮಧುಚಂದ್ರ ಸುಮಾರು 700 ಜನಕ್ಕೆ ಹೇಳಿದ್ದಾರೆ!. ಅವರಿಂದ ಫೀಡ್ ಬ್ಯಾಕ್ ತೆಗೆದುಕೊಂಡರು. ಅದರ ವೀಡಿಯೋ ಕೂಡ ಮಾಡಿದರು. ಈ ಕತೆಯನ್ನು ತುಂಬಾ ಜನರು ಇಷ್ಟಪಡುತ್ತಾರೆ ಎಂದು ಖಚಿತ ಪಡಿಸಿಕೊಂಡ ನಂತರ ಮುಂದಿನ ಹೆಜ್ಜೆ ಇಟ್ಟಿದ್ದಾರೆ.
ಅವರ ಈ ಪ್ರಾಮಾಣಿಕ ಮತ್ತು ವಿಭಿನ್ನ ಪ್ರಯತ್ನ ನೋಡಿ ಅವರಿಗೆ 150 ಜನ ಫ್ಯಾಮಿಲಿಗಳು ಸೇರಿ ಚಿತ್ರ ನಿರ್ಮಿಸಲು ಮುಂದೆ ಬಂದರು. ಚಿತ್ರದ ರಿಲೀಸ್ ಮುಂಚೆಯೇ ಚಿತ್ರತಂಡದ 150 ಜನ ನಿರ್ಮಾಪಕರು ತಮ್ಮ ಫ್ಯಾಮಿಲಿ, ನೆಂಟರು, ಗೆಳೆಯರು ಎಲ್ಲರನ್ನೂ ಸೇರಿದಂತೆ ಸುಮಾರು 2 ಸಾವಿರ ಜನಕ್ಕೆ ಈಗಾಗಲೇ ಸಿನಿಮಾ ತೋರಿಸಿದ್ದಾರೆ. ಅವರೆಲ್ಲ ನೋಡಿ ಭೇಷ್ ಎಂದು ಹೇಳಿದ್ದಾರೆ. ತಮ್ಮ ಚಿತ್ರವನ್ನು ಮೊದಲೇ ಪ್ರೇಕ್ಷಕರಿಗೆ ತೋರಿಸಿ ಸಣ್ಣಪುಟ್ಟ ತಪ್ಪುಗಳನ್ನು ಸರಿಪಡಿಸಿ ನಂತರ ಇಡೀ ಕನ್ನಡ ಪ್ರೇಕ್ಷಕರ ಮುಂದೆ ಸಿನಿಮಾ ರಿಲೀಸ್ ಮಾಡುವ ವಿಧಾನವನ್ನು ನಿರ್ದೇಶಕ ಮಧುಚಂದ್ರ ಅವರಿಗೆಲ್ಲಾ ಹೇಳಿದಾಗ ಎಲ್ಲರಿಗೂ ಇದು ಸರಿ ಎನ್ನಿಸಿ ಹೀಗೆ ಮಾಡಿದ್ದಾರೆ.
ಸುಮಾರು 200 ಜನರಂತೆ 10 ಶೋಸ್‌ಗಳನ್ನು ಸಣ್ಣ ಪ್ರಮಾಣದ ಥಿಯೇಟರ್‌ನಲ್ಲಿ ಮಾಡಿ ಪರೀಕ್ಷೆ ಮಾಡಿದ್ದಾರೆ. ಇದು ಇಡೀ ಕನ್ನಡ ಚಿತ್ರರಂಗಕ್ಕೆ ಒಂದು ರೀತಿಯಲ್ಲಿ ಹೊಸ ಮಾದರಿ ಮಾರ್ಗವನ್ನು ತೋರಿಸಿಕೊಟ್ಟಿದೆ.
ಈ ಸುದ್ದಿಯನ್ನೂ ಓದಿ | Valentines Day Shopping 2025: ಆಗಲೇ ಶುರುವಾಯ್ತು ವ್ಯಾಲೆಂಟೈನ್ಸ್ ಡೇ ಶಾಪಿಂಗ್ !
‘ಮಿಸ್ಟರ್ ರಾಣಿ’ ಚಿತ್ರದ ಬಗ್ಗೆ ಈಗಾಗಲೇ ಸಿನಿಪ್ರಿಯರಲ್ಲಿ ದೊಡ್ಡ ಮಟ್ಟದ ಕ್ರೇಜ್ ಕ್ರಿಯೇಟ್ ಮಾಡಿದೆ. ಫೆಬ್ರವರಿ 7 ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ ಎಂದು ನಿರ್ದೇಶಕ ಮಧುಚಂದ್ರ ತಿಳಿಸಿದ್ದಾರೆ.