ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Kannada New Movie: ಚಂದ್ರಹಾಸ ಸಿನಿಮಾಗಾಗಿ ಜೊತೆಯಾಗಿ ಹಾಡಿದ ನಟ ಶರಣ್‌, ನವೀನ್‌ ಸಜ್ಜು!

Kannada New Movie:ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಮಾಡಿರೋ ಚಂದ್ರಹಾಸ ಸಿನಿಮಾದ ಮೊದಲ ಹಾಡಿಗೆ ಯೋಗರಾಜ್‌ ಭಟ್‌ ಸಾಹಿತ್ಯ ಬರೆದಿದ್ದಾರೆ.. ಚಡ್ಡಿ ಬಡ್ಡಿ ಅಂತ ಇರೋ ಈ ಹಾಡು ಸ್ನೇಹಿತರ ಮಧ್ಯೆ ಇರೋ ಬಾಂದವ್ಯದ ಮೇಲೆ ರಚಿಸಲಾಗಿದೆ. ಈ ಚಡ್ಡಿ ಬಡ್ಡಿ ಹಾಡನ್ನ ನಟ ಶರಣ್‌ ಹಾಗೂ ಗಾಯಕ ನವೀನ್‌ ಸಜ್ಜು ಹಾಡಿರೋದು ವಿಶೇಷ. ಇದೇ ಮೊದಲ ಬಾರಿಗೆ ಇಬ್ಬರು ಜೊತೆಯಾಗಿ ಹಾಡನ್ನ ಹಾಡಿದ್ದಾರೆ .

ಚಂದ್ರಹಾಸ ಸಿನಿಮಾಗಾಗಿ ಜೊತೆಯಾಗಿ ಹಾಡಿದ ನಟ ಶರಣ್‌, ನವೀನ್‌ ಸಜ್ಜು!

ಚಂದ್ರಹಾಸ ಸಿನಿಮಾ -

Yashaswi Devadiga
Yashaswi Devadiga Jul 18, 2026 8:18 PM

ಚಂದ್ರಹಾಸ ಕಾಮಿಡಿ ಕಿಲಾಡಿ ವಿನ್ನರ್‌ ಹರೀಶ್‌ ಹಿರಿಯೂರ್ (harish Hiriyur) ಅಭಿನಯದ ಸಿನಿಮಾ. ಚಂದ್ರಹಾಸ ಸಿನಿಮಾದ ಮೊದಲ ಹಾಡು ಬಿಡುಗಡೆ ಆಗಿದ್ದು ಇತ್ತೀಚಿಗಷ್ಟೇ ನಿರ್ಮಾಪಕಿ ಶೈಲಜಾ ನಾಗ್‌ ಚಂದ್ರಹಾಸ ಸಿನಿಮಾದ ಮೊದಲ ಹಾಡನ್ನು (First Song) ಬಿಡುಗಡೆ ಮಾಡಿಕೊಟ್ಟರು.ಹೊಸ ಕಲಾವಿದರೇ ಸೇರಿ ಮಾಡಿರುವ ಚಂದ್ರಹಾಸ ಸಿನಿಮಾವನ್ನ ಆನಂದ್‌ ಎಸ್‌ ಕಲಕಬಂಡಿ ನಿರ್ದೇಶನ ಮಾಡಿದ್ದಾರೆ.

ಮೊದಲ ಬಾರಿಗೆ ಇಬ್ಬರು ಜೊತೆಯಾಗಿ ಹಾಡು

ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಮಾಡಿರೋ ಚಂದ್ರಹಾಸ ಸಿನಿಮಾದ ಮೊದಲ ಹಾಡಿಗೆ ಯೋಗರಾಜ್‌ ಭಟ್‌ ಸಾಹಿತ್ಯ ಬರೆದಿದ್ದಾರೆ.. ಚಡ್ಡಿ ಬಡ್ಡಿ ಅಂತ ಇರೋ ಈ ಹಾಡು ಸ್ನೇಹಿತರ ಮಧ್ಯೆ ಇರೋ ಬಾಂದವ್ಯದ ಮೇಲೆ ರಚಿಸಲಾಗಿದೆ. ಈ ಚಡ್ಡಿ ಬಡ್ಡಿ ಹಾಡನ್ನ ನಟ ಶರಣ್‌ ಹಾಗೂ ಗಾಯಕ ನವೀನ್‌ ಸಜ್ಜು ಹಾಡಿರೋದು ವಿಶೇಷ. ಇದೇ ಮೊದಲ ಬಾರಿಗೆ ಇಬ್ಬರು ಜೊತೆಯಾಗಿ ಹಾಡನ್ನ ಹಾಡಿದ್ದಾರೆ .

ಇದನ್ನೂ ಓದಿ: Varanasi Movie: ‘ವಾರಣಾಸಿ’ಯ ಪ್ರಿಯಾಂಕಾ ಚೋಪ್ರಾ ಲುಕ್ ಪೋಸ್ಟರ್ ಔಟ್‌!

ಚಂದ್ರಹಾಸ ಸಿನಿಮಾವನ್ನ ಬಸವಂತಗೌಡ ಪಾಟೀಲ್‌ ನಿರ್ಮಾಣ ಮಾಡಿದ್ದು ಬಸಣ್ಣ ಕಮತ್ತರ್‌ ಸಹ ನಿರ್ಮಾಪಕರಾಗಿದ್ದಾರೆ…ಡಿಬೀಟ್ಸ್‌ ಯೂಟ್ಯೂಬ್‌ ಚಾನೆಲ್‌ ನಲ್ಲಿ ಚಂದ್ರಹಾಸ ಚಿತ್ರದ ಚಡ್ಡಿಬಡ್ಡಿ ಹಾಡು ಬಿಡುಗಡೆ ಆಗಿದೆ. ಚಂದ್ರಹಾಸ ಚಿತ್ರದಲ್ಲಿ ಹರೀಶ ಹಿರಿಯೂರು ನಾಯಕನಾಗಿ ಅಭಿನಯ ಮಾಡಿದ್ದು , ಛಾಯಾಶ್ರೀ ಉಮೇಶ್‌ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ ಸ್ನೇಹಿತನ ಪಾತ್ರದಲಗಲಿ ನಿಂಗರಾಜು ಮಂಡ್ಯ ಅಭಿನಯಿಸಿದ್ದು ಸಂತೋಶ್‌ ಕೆರಿ , ಸೂರ್ಯಕಲ, ಜ್ಯೂತಿ ಮಂಗಳೂರು, ಕಳಕಪ್ಪ ತಲವಾರ್‌ ಇನ್ನು ಅನೇಕರು ಚಿತ್ರದಲ್ಲಿ ಅಭಿನಯ ಮಾಡಿದ್ದಾರೆ…

ಚಂದ್ರಹಾಸ ಧ್ವನಿ ಸುರಳಿ ಕಾರ್ಯಕ್ರಮಕ್ಕೆ ಕಾಮಿಡಿ ಕಿಲಾಡಿ ಶೋ ನ ಕಲಾವಿದರಾದ ಅಪ್ಪಣ್ಣ, ಜಗಪ್ಪ, ಸುಷ್ಮಿತಾ, ನಯನಾ, ಇನ್ನೂ ಅನೇಕರು ಬಂದು ಸ್ನೇಹಿತನಿಗೆ ಸಾಥ್‌ ನೀಡಿದ್ರು.

ಇದನ್ನೂ ಓದಿ: 72nd National Film Awards: ದೇಶೀಯ ಮಟ್ಟದಲ್ಲಿ ಮಿಂಚಿದ ಸ್ಯಾಂಡಲ್‌ವುಡ್‌ನ ʼಮಿಥ್ಯʼ: ತುಳುವಿನ 'ಇಂಬು'ಗೆ ಅವಾರ್ಡ್‌

ಚೇತನ್‌ ಶರ್ಮ ಕ್ಯಾಮೆರಾ ವರ್ಕ್‌ ಇರೋ ಚಂದ್ರಹಾಸ ಸಿನಿಮಾಗೆ ವಿ ಗಿರೀಶ್‌ ಎಂ ಸಿ ಹಳ್ಳಿ ಸಂಕಲನ ಮಾಡಿದ್ದಾರೆ..ಸದ್ಯ ಮೊದಲ ಹಾಡಿನಿಂದ ಗಮನ ಸೆಳೆಯುತ್ತಿರೋ ಚಂದ್ರಹಾಸ ಸಿನಿಮಾ ಶೀಘ್ರದಲ್ಲಿಯೇ ಪ್ರೇಕ್ಷಕರ ಮುಂದೆ ಬರಲಿದೆ.