ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಟಿ20 ರನ್‌; ಇಶಾನ್ ಕಿಶನ್ ದಾಖಲೆ

Ishan Kishan: 2026ರಲ್ಲಿ ಭಾರತಕ್ಕಾಗಿ ಅತಿ ಹೆಚ್ಚು T20I ರನ್‌ಗಳನ್ನು ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ, ಇಶಾನ್ ಮತ್ತು ಅಭಿಷೇಕ್ ನಂತರದ ಸ್ಥಾನದಲ್ಲಿ ಸಂಜು ಸ್ಯಾಮ್ಸನ್ ಇದ್ದಾರೆ. 30 ಪಂದ್ಯಗಳನ್ನು ಆಡಿ 810 ರನ್‌ಗಳನ್ನು ಗಳಿಸಿದ್ದಾರೆ.

ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಟಿ20 ರನ್‌; ಇಶಾನ್ ದಾಖಲೆ

Ishan Kishan -

Abhilash BC
Abhilash BC Nov 1, 2026 3:52 PM

ಹ್ಯಾಮಿಲ್ಟನ್‌, ನ.1: ಒಂದು ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಟಿ20 ಅಂತರರಾಷ್ಟ್ರೀಯ (T20I) ರನ್‌ಗಳನ್ನು ಗಳಿಸಿದ ಭಾರತೀಯ ಬ್ಯಾಟರ್ ಎಂಬ ಹಿರಿಮೆಗೆ ಇಶಾನ್ ಕಿಶನ್ ಪಾತ್ರರಾಗಿದ್ದಾರೆ.

ಭಾನುವಾರ (ನವೆಂಬರ್ 1) ನ್ಯೂಜಿಲೆಂಡ್ ವಿರುದ್ಧ ನಡೆದ ಐದನೇ ಟಿ20 ಪಂದ್ಯದಲ್ಲಿ, ಸೂರ್ಯಕುಮಾರ್ ಯಾದವ್ ಅವರ ದಾಖಲೆಯನ್ನು ಮುರಿಯಲು ಇಶಾನ್‌ಗೆ ಆರು ರನ್‌ಗಳ ಅಗತ್ಯವಿತ್ತು. ಇಶಾನ್, ತಮ್ಮ ಇನ್ನಿಂಗ್ಸ್‌ನ ನಾಲ್ಕನೇ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ತಮ್ಮ ಖಾತೆಯನ್ನು ತೆರೆದರು. ಇದೇ ವೇಳೆ ದಾಖಲೆಯನ್ನು ತಮ್ಮ ಹೆಸರಿಗೆ ಬರೆದರು.

ಇದಕ್ಕೂ ಮುನ್ನ ಈ ದಾಖಲೆ ಸೂರ್ಯಕುಮಾರ್‌ ಯಾದವ್‌ ಹೆಸರಿನಲ್ಲಿತ್ತು. 2022ರಲ್ಲಿ ಸೂರ್ಯಕುಮಾರ್‌ ಯಾದವ್‌ ಭಾರತಕ್ಕಾಗಿ 32 ಟಿ20 ಅಂತಾರಾಷ್ಟ್ರೀಯ (T20I) ಪಂದ್ಯಗಳನ್ನು ಆಡಿ 1,164 ರನ್‌ಗಳನ್ನು ಗಳಿಸಿದ್ದರು. ಇದೀಗ 2026ರಲ್ಲಿ ಇಶಾನ್ 37 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 1,165* ರನ್‌ಗಳನ್ನು ಗಳಿಸಿದ್ದಾರೆ.

ಕ್ಯಾಲೆಂಡರ್ ವರ್ಷದಲ್ಲಿ ಭಾರತದ ಪರ ಅತ್ಯಧಿಕ ಟಿ20 ರನ್‌

ಇಶಾನ್‌ ಕಿಶನ್‌-1220*

ಸೂರ್ಯಕುಮಾರ್‌ ಯಾದವ್‌-1164

ಅಭಿಷೇಕ್‌ ಶರ್ಮಾ-1153

ಸಂಜು ಸ್ಯಾಮ್ಸನ್‌-810

ವಿರಾಟ್‌ ಕೊಹ್ಲಿ-781

ಐದನೇ ಟಿ20 ಪಂದ್ಯದಲ್ಲಿ, ವಿಶ್ವದ ನಂ. 1 ಟಿ20 ಬ್ಯಾಟರ್ ಅಭಿಷೇಕ್ ಶರ್ಮಾ ಅವರಿಗೆ ಸೂರ್ಯಕುಮಾರ್ ಅವರನ್ನು ಹಿಂದಿಕ್ಕುವ ಅವಕಾಶವಿತ್ತು. ಆದರೆ ಅವರು 2 ಎಸೆತಗಳಲ್ಲಿ ಕೇವಲ 1 ರನ್ ಗಳಿಸಲಷ್ಟೇ ಶಕ್ತರಾದರು. ಭಾರತದ ಇನ್ನಿಂಗ್ಸ್‌ನ ಎರಡನೇ ಓವರ್‌ನ ಮೊದಲ ಎಸೆತದಲ್ಲಿ ಆಡಮ್ ಮಿಲ್ನೆ ಅವರು ಅಭಿಷೇಕ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಸಿಕ್ಸರ್‌ ಬಾರಿಸುವ ಯತ್ನದಲ್ಲಿ ಡೇರಿಲ್ ಮಿಚೆಲ್ ಅವರಿಗೆ ಕ್ಯಾಚ್ ನೀಡಿದರು.

ವಿಜಯ್ ಹಜಾರೆ ಟ್ರೋಫಿಯಲ್ಲಿ ಕಣಕ್ಕಿಳಿಯಲು ಸಜ್ಜಾದ ರೋಹಿತ್ ಶರ್ಮಾ

ಭಾರತೀಯ ಆಟಗಾರನೊಬ್ಬನಿಂದ ಅತಿ ವೇಗದ ಟಿ20 ಅಂತರರಾಷ್ಟ್ರೀಯ (T20I) ಶತಕ ಬಾರಿಸಿದ ದಾಖಲೆಯನ್ನು ಹೊಂದಿರುವ ಅಭಿಷೇಕ್, 2026ರಲ್ಲಿ ಆಡಿದ 39 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 1,153 ರನ್‌ಗಳನ್ನು ಗಳಿಸಿದ್ದಾರೆ.

2026ರಲ್ಲಿ ಭಾರತಕ್ಕಾಗಿ ಅತಿ ಹೆಚ್ಚು T20I ರನ್‌ಗಳನ್ನು ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ, ಇಶಾನ್ ಮತ್ತು ಅಭಿಷೇಕ್ ನಂತರದ ಸ್ಥಾನದಲ್ಲಿ ಸಂಜು ಸ್ಯಾಮ್ಸನ್ ಇದ್ದಾರೆ. 30 ಪಂದ್ಯಗಳನ್ನು ಆಡಿ 810 ರನ್‌ಗಳನ್ನು ಗಳಿಸಿದ್ದಾರೆ.