#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Meghana Shankarappa: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸೀತಾರಾಮ ಧಾರಾವಾಹಿಯ ನಟಿ ಮೇಘನಾ ಶಂಕರಪ್ಪ

ಕಿನ್ನರಿ’, ‘ಸೀತಾರಾಮ’ ಸೀರಿಯಲ್‌ಗಳ ಮೂಲಕ ಮನೆ ಮಾತಾದ ನಟಿ ಮೇಘನಾ ಶಂಕರಪ್ಪ (Meghana Shankarappa) ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಜಯಂತ್ (Jayanth) ಜೊತೆ ನಟಿ ಹಸೆಮಣೆ ಏರಿದ್ದಾರೆ. ಹೊಸ ಜೋಡಿಗೆ ಅಭಿಮಾನಿಗಳು ಶುಭಕೋರಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆಯ ಸ್ಟಾರ್ ನಟಿ; ಇಲ್ಲಿದೆ ವಿಡೀಯೋ

ಹೊಸ ಜೀವನಕ್ಕೆ ಕಾಲಿಟ್ಟಿರುವ ಕನ್ನಡ ಧಾರಾವಾಹಿ ನಟಿ ಮೇಘನಾ

Profile Sushmitha Jain Feb 11, 2025 3:02 PM

ಬೆಂಗಳೂರು: ಸೀತಾರಾಮ ಧಾರಾವಾಹಿಯ ಮೂಲಕ ಸಖತ್​ ಫೇಮಸ್​ ಆಗಿದ್ದ ಕ್ಯೂಟ್​ ಬೆಡಗಿ ಪ್ರಿಯಾ ಅಲಿಯಾಸ್ ಮೇಘನಾ ಶಂಕರಪ್ಪ (Meghana Shankarappa) ಅವರು ದಾಂಪತ್ಯ ಜೀವನಕ್ಕೆ ಅದ್ದೂರಿಯಾಗಿ ಕಾಲಿಟ್ಟಿದ್ದು, ಅವರ ಮದುವೆ ಸಂಭ್ರಮ ಜೋರಾಗಿಯೇ ನಡೆದಿದೆ. ಸೋಷಿಯಲ್​ ಮೀಡಿಯಾದಲ್ಲಿ ನಟಿ ಮೇಘನಾ ಶಂಕರಪ್ಪ ಮದುವೆ ಫೋಟೋಗಳು ವೈರಲ್​ ಆಗುತ್ತಿದ್ದು, ಹೊಸ ಜೀವನಕ್ಕೆ ಕಾಲಿಟ್ಟ ನಟಿಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.ಫೆ.9ರಂದು ಜಯಂತ್ (Jayanth) ಜೊತೆ ನಟಿ ಹಸೆಮಣೆ ಏರಿದ್ದು, ಇವರದ್ದು ಅರೇಂಜ್ಡ್​ ಮ್ಯಾರೇಜ್​ ಆಗಿದೆ. ಜಯಂತ್‌ ಅವರು ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದು, ಮೂಲತ: ಜಯಂತ್‌ ಅವರು ಬೆಂಗಳೂರಿನವರೇ ಆಗಿದ್ದಾರೆ. ಎರಡು ಕುಟುಂಬದ ಹಿರಿಯರ ಸಮ್ಮುಖದಲ್ಲಿ ಇಬ್ಬರು ಹಸೆಮಣೆ ಏರಿದ್ದು, ಇವರ ಮದುವೆಗೆ ಸ್ನೇಹಿತರು, ಸಂಬಂಧಿಗಳು, ಕಿರುತೆರೆಯ ನಟ, ನಟಿಯರು ಆಗಮಿಸಿ ಶುಭ ಹಾರೈಸಿದ್ದಾರೆ.

ಇದನ್ನು ಓದಿ: Meghana Shankarappa: ಅಸಲಿ ಬಾಯ್‌ಫ್ರೆಂಡ್‌ ಫೇಸ್ ರಿವೀಲ್ ಮಾಡಿದ 'ಸೀತಾರಾಮ' ನಟಿ!

ಇದೀಗ ವೈವಾಹಿಕ ಜೀವನ ಆರಂಭಿಸಿರುವ ಮೇಘನಾ ಶಂಕರಪ್ಪ ಮದುವೆಯ ವಿಡೀಯೋ ಹಾಗೂ ಫೋಟೋಗಳನ್ನು ಹಂಚಿಕೊಂಡಿದ್ದು, ಈ ಮೂಲಕ ನನ್ನ ಗಂಡನನ್ನು ಪರಿಚಯಿಸುತ್ತಿದ್ದೇನೆ ಎಂದು ಕ್ಯಾಪ್ಷನ್ ನೀಡಿ, ಮದುವೆಗೆ ಬಂದು ಹಾರೈಸಿದ ನಿಮ್ಮ ಪ್ರೀತಿ ಆಶೀರ್ವಾದಕ್ಕೆ ತುಂಬು ಹೃದಯದ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಸದಾ ಸೋಶಿಯಲ್‌ ಮೀಡಿಯಾದಲ್ಲಿ ಸಖತ್ ಆಕ್ಟಿವ್‌ ಆಗಿರುವ ಮೇಘನಾ ತಮ್ಮ ಅರಿಶಿಣ ಶಾಸ್ತ್ರ, ಮೆಹೆಂದಿ, ಸಂಗೀತ, ಪ್ರಿ ವೆಡ್ಡಿಂಗ್‌ ಕಾರ್ಯಕ್ರಮದ ವಿಡಿಯೋಗಳನ್ನು ಶೇರ್ ಮಾಡಿದ್ದು, ಈಗ ವಿವಾಹ ಸಮಾರಂಭದ ಇವರ ಕೆಲ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಪ್ರೀವೆಡ್ಡಿಂಗ್ ಫೋಟೋಶೂಟ್ ಗಳ ಮೂಲಕವೂ ಗಮನ ಸೆಳೆದಿದ್ದ ಮೇಘನಾ, ಮುದುವೆಗೂ ಮುನ್ನವೇ ಭಾವಿ ಪತಿಯ ಜೊತೆಗೆ ರೊಮ್ಯಾಂಟಿಕ್ ಹಾಗೂ ಭಾರೀ ಬೋಲ್ಡ್ ಆಗಿ ಫೋಟೋಗಳಿಗೆ ಪೋಸ್ ಕೊಟ್ಟಿದ್ದರು. ಜೋಡಿಗಳು ವೈಟ್ ಆಂಡ್ ವೈಟ್ ನಲ್ಲಿ ಮಿಂಚಿದ್ದರು.

ಮೇಘನಾ 'ಸೀತಾರಾಮ' ಧಾರಾವಾಹಿಗೂ ಮುನ್ನ ಅವರು, ಕಲರ್ಸ್ ಕನ್ನಡ ವಾಹಿನಿಯ 'ನಮ್ಮನೆ ಯುವರಾಣಿ', ʼಕಿನ್ನರಿʼ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. 'ಕೃಷ್ಣ ತುಳಸಿ', 'ದೇವಯಾನಿ', 'ರತ್ನಗಿರಿ ರಹಸ್ಯ', 'ಸಿಂಧೂರ' ಧಾರಾವಾಹಿಯಲ್ಲಿಯೂ ಅವರು ನಟಿಸಿದ್ದರು. ಇನ್ನು ಜೀ ಕನ್ನಡದ ಡ್ಯಾನ್ಸಿಂಗ್‌ ರಿಯಾಲಿಟಿ ಶೋನಲ್ಲಿ ಮೇಘನಾ ಭಾಗವಹಿಸಿ ಉತ್ತಮ ನೃತ್ಯ ಪ್ರದರ್ಶನ ನೀಡಿದ್ದರು. ಮೇಘನಾ ಡ್ಯಾನ್ಸ್‌ ನೋಡಿ ಶಿವರಾಜ್‌ಕುಮಾರ್‌, ರಕ್ಷಿತಾ ಪ್ರೇಮ್‌, ವಿಜಯ್‌ ರಾಘವೇಂದ್ರ, ಚಿನ್ನಿ ಪ್ರಕಾಶ್ ಮುಂತಾದವರು ಮೆಚ್ಚಿದ್ದರು.