ʼʼಬೆಂಗಳೂರಿನ ಜನ ಪ್ರತಿಭಾವಂತರು; ಪ್ರಯಾಣ ಮಾತ್ರ ಆರೋಗ್ಯವನ್ನೇ ಕೆಡಿಸಿತುʼʼ: ಸಿಲಿಕಾನ್ ಸಿಟಿಯ ಬಗ್ಗೆ ದೆಹಲಿಯ ಉದ್ಯಮಿ ಹೇಳಿದ್ದೇನು?
Viral News: ಖ್ಯಾತ ಮಹಿಳಾ ಉದ್ಯಮಿಯೊಬ್ಬರು ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರತಿಭೆಗಳನ್ನು ಮುಕ್ತ ಕಂಠದಿಂದ ಹೊಗಳಿದ್ದಾರೆ. ಬೆಂಗಳೂರಿನ ಉದ್ಯಮಿಗಳು, ಉತ್ಪನ್ನ ವ್ಯವಸ್ಥಾಪಕರು ಮತ್ತು ತಂತ್ರಜ್ಞಾನ ವೃತ್ತಿಪರರ ಶ್ರಮ ಅದ್ಭುತವಾದುದು. ಆದರೆ ಇಲ್ಲಿನ ದೈನಂದಿನ ಸಂಚಾರ ಹಾಗೂ ಟ್ರಾಫಿಕ್ ತಮ್ಮ ಆರೋಗ್ಯವನ್ನೇ ಹಾಳುಗೆಡವಿದೆ ಎಂದು ಹೇಳಿಕೊಂಡಿದ್ದಾರೆ.
ಬೆಂಗಳೂರಿನ ಪ್ರತಿಭೆಗಳನ್ನು ಮುಕ್ತ ಕಂಠದಿಂದ ಹೊಗಳಿದ ದೆಹಲಿ ಉದ್ಯಮಿ ಮತ್ತು ಸಾಂದರ್ಭಿಕ ಚಿತ್ರ -
ಬೆಂಗಳೂರು, ಆ.18: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಉದ್ಯೋಗ ಗಿಟ್ಟಿಸಿಕೊಂಡ ಅನೇಕ ಯುವಕ-ಯುವತಿಯರು ಇದ್ದಾರೆ. ಇಲ್ಲಿನ ಉದ್ಯಮಶೀಲತೆ, ತಂತ್ರಜ್ಞಾನಕ್ಕೆ ಹೊಂದಿಕೊಂಡು ಯಶಸ್ಸು ಗಳಿಸಿದ ಅನೇಕರೂ ಕಾಣ ಸಿಗುತ್ತಾರೆ. ಇದೀಗ ಖ್ಯಾತ ಉದ್ಯಮಿಯೊಬ್ಬರು ಸಿಲಿಕಾನ್ ಸಿಟಿಯಲ್ಲಿರುವ ಪ್ರತಿಭೆಗಳನ್ನು ಮುಕ್ತ ಕಂಠದಿಂದ ಹೊಗಳಿದ್ದಾರೆ. ಜತೆಗೆ ಇಲ್ಲಿನ ಸಮಸ್ಯೆಯತ್ತಲೂ ಬೆಳಕು ಚೆಲ್ಲಿದ್ದಾರೆ. ಬೆಂಗಳೂರಿನ ಉದ್ಯಮಿಗಳು, ಉತ್ಪನ್ನ ವ್ಯವಸ್ಥಾಪಕರು ಮತ್ತು ತಂತ್ರಜ್ಞಾನ ವೃತ್ತಿಪರ ಶ್ರಮ ಅದ್ಭುತ. ಆದರೆ ಇಲ್ಲಿನ ದೈನಂದಿನ ಸಂಚಾರ ಹಾಗೂ ಟ್ರಾಫಿಕ್ ತಮ್ಮ ಆರೋಗ್ಯವನ್ನೇ ಹಾಳುಗೆಡವಿದೆ ಎಂದು (Viral News) ಹೇಳಿಕೊಂಡಿದ್ದಾರೆ.
ದೆಹಲಿ ಮೂಲದ ಮಹಿಳಾ ಉದ್ಯಮಿ ನಗರದಲ್ಲಿ ಎರಡು ವಾರಗಳನ್ನು ಕಳೆದಿದ್ದು, ಬೆಂಗಳೂರಿನ ನವೋದ್ಯಮ ಪ್ರತಿಭೆಗಳನ್ನು ಹೊಗಳಿದ್ದಾರೆ. ʼʼಬೆಂಗಳೂರಿನ ಉದ್ಯಮಿ, ಉತ್ಪನ್ನ ವ್ಯವಸ್ಥಾಪಕರು ಮತ್ತು ತಂತ್ರಜ್ಞಾನ ವೃತ್ತಿಪರರೊಂದಿಗಿನ ಮಾತುಕತೆ ನಿಜಕ್ಕೂ ನನ್ನ ಗಮನ ಸೆಳೆಯಿತು. ಇಲ್ಲಿರುವ ಜನರು ಪ್ರತಿಭಾವಂತರು. ಆದರೆ ನಗರದ ಟ್ರಾಫಿಕ್ ಜಾಮ್ ನನ್ನ ಆರೋಗ್ಯವನ್ನೇ ಹಾಳುಗೆಡವಿದೆʼʼ ಎಂದು ಬೇಸರ ಹೊರಹಾಕಿದ್ದಾರೆ.
ವಿಡಿಯೊ ಇಲ್ಲಿದೆ:
2 weeks in Bangalore have annihilated my health. Every single event, every single conversation, was miles ahead of what I have in Delhi/ Ggn.
— Abhilasha Purwar (@AbhilashaPurwar) August 17, 2026
The product, tech, growth, marketing, revenue, business development understanding / lingo/ experience/ knowledge of every founder/…
ಬ್ಲೂ ಸ್ಕೈ ಅನಾಲಿಟಿಕ್ಸ್‌ನ ಮಾಜಿ ಸಿಇಒ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಅನುಭವವನ್ನು ಹಂಚಿಕೊಂಡಿದ್ದಾರೆ. ದೆಹಲಿ ಮತ್ತು ಗುರ್‌ಗಾಂವ್‌ಗೆ ಹೋಲಿಸಿದರೆ ಬೆಂಗಳೂರಿನಲ್ಲಿರುವ ಉದ್ಯಮಿಗಳು, ಸಾಫ್ಟ್‌ವೇರ್ ಎಂಜಿನಿಯರ್‌ಗಳ ತಾಂತ್ರಿಕ ಸಾಮರ್ಥ್ಯ, ತಂತ್ರಜ್ಞಾನ, ಬೆಳವಣಿಗೆ, ಮಾರ್ಕೆಟಿಂಗ್, ಭಾಷಾ ಸಾಮರ್ಥ್ಯ, ಜ್ಞಾನ ಅಪಾರವಾದುದು. ನಗರದ ಪ್ರತಿಭೆಯೂ ತಮ್ಮನ್ನು ಬಹಳಷ್ಟು ಆಕರ್ಷಿಸಿದೆ ಎಂದು ಅವರು ಹೇಳಿದ್ದಾರೆ.
ಸಿಬ್ಬಂದಿಯನ್ನು ಬ್ಯಾಂಕ್‌ನಲ್ಲೇ ಲಾಕ್ ಮಾಡಿದ ಮ್ಯಾನೇಜರ್!
ಆದರೆ ಬೆಂಗಳೂರಿನ ಟ್ರಾಫಿಕ್ ನಗರವನ್ನು ಸಂಪೂರ್ಣವಾಗಿ ಆನಂದಿಸಲು ಅಡ್ಡಿಯಾಗಿದೆ. ಪ್ರಯಾಣ ಮಾಡಿದ ಕೆಲವೇ ನಿಮಿಷಗಳಲ್ಲಿ ದಣಿದು ಹೋಗಿದ್ದೆ. ಇಂದಿರಾ ನಗರ, ಕೋರಮಂಗಲ, ಎಚ್‌ಎಸ್‌ಆರ್ ಲೇಔಟ್‌ನಂತಹ ಹತ್ತಿರದ ಪ್ರದೇಶಗಳ ನಡುವೆ ಪ್ರಯಾಣಿಸುವುದು ತೀವ್ರ ಆಯಾಸಕ್ಕೆ ಕಾರಣವಾಯಿತು. ಸಣ್ಣ ಪ್ರಯಾಣ ಕೂಡ ತನ್ನನ್ನು ಕುಗ್ಗಿಸಿದೆ ಎಂದು ವಿವರಿಸಿದ್ದಾರೆ.
ʼʼ2026ರಲ್ಲಿ ನನ್ನ ಆರೋಗ್ಯ ಕೆಟ್ಟಿರುವುದು ಇದೇ ಮೊದಲು. ಬೆಂಗಳೂರಿನಲ್ಲಿ ಕಳೆದ ಎರಡು ವಾರಗಳು ನನ್ನ ಆರೋಗ್ಯವನ್ನು ಹಾಳು ಮಾಡಿದೆ. ಜೈಪುರ, ದೆಹಲಿ, ಡೆಹ್ರಾಡೂನ್ ಸುತ್ತಿದರೂ ಇಷ್ಟು ಆಯಾಸ ಎನಿಸಿರಲಿಲ್ಲ. ಇಲ್ಲಿನ ಜನರು ದೈನಂದಿನ ಪ್ರಯಾಣವನ್ನು ಹೇಗೆ ನಿರ್ವಹಿಸುತ್ತಾರೆ? ಎಂದು ಪ್ರಶ್ನಿಸಿದ್ದಾರೆ.
ʼʼದೇಶದಲ್ಲೇ ಅತ್ಯಂತ ಹೆಚ್ಚು ಪ್ರತಿಭಾವಂತರಿರುವ ನಗರಕ್ಕೆ ಈ ಮಟ್ಟದ ಕಳಪೆ ಮೂಲಸೌಕರ್ಯ ಏಕೆ ನೀಡಲಾಗುತ್ತಿದೆ? ನಿಜವಾಗಿಯೂ ಬೆಂಗಳೂರಿನ ಪ್ರತಿಭೆಯ ಸುತ್ತಲೂ ಇರಲು ಬಯಸುತ್ತೇನೆ. ಆದರೆ ಈ ದೈನಂದಿನ ಪ್ರಯಾಣದ ಆಯಾಸಕ್ಕೆ ಯಾವ ಶಕ್ತಿ ವರ್ಧಕವನ್ನು ತೆಗೆದುಕೊಳ್ಳುತ್ತೀರಿ?ʼʼ ಎಂದು ತಮಾಷೆ ಮಾಡಿದ್ದಾರೆ.