Pawan Kalyan: ಒಟಿಟಿಗೆ ಲಗ್ಗೆ ಇಟ್ಟ ನಟ ಪವನ್ ಕಲ್ಯಾಣ್ ಅಭಿನಯದ ಒಜಿ ಸಿನಿಮಾ- ಸ್ಟ್ರೀಮಿಂಗ್ ಯಾವಾಗ?
OG Movie in OTT: ನಟ ಪವನ್ ಕಲ್ಯಾಣ್ ಅಭಿನಯದ ದೆ ಕಾಲ್ ಹಿಮ್ ಒಜಿ (They Call Him OG) ಸಿನಿಮಾವು ನೆಟ್‌ಫ್ಲಿಕ್ಸ್ ನಲ್ಲಿ ಸ್ಟ್ರೀಮ್ ಆಗಲಿದೆ. ಈ ಬಗ್ಗೆ ನೆಟ್‌ಫ್ಲಿಕ್ಸ್ ಇಂಡಿಯಾ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಿಳಿಸಿದ್ದು ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗುವ ದಿನಾಂಕವನ್ನು ಘೋಷಿಸಿದೆ. ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ಸ್ಟ್ರೀಮಿಂಗ್ ಆಗ ಲಿದ್ದು ಅಭಿಮಾನಿಗಳಿಗೆ ಈ ವಿಚಾರ ಖುಷಿ ತರಿಸಿದೆ.

Pawan Kalyan -

ನವದೆಹಲಿ: ಇತ್ತೀಚಿನ ದಿನದಲ್ಲಿ ಸಿನಿಮಾ ಮಂದಿರದಲ್ಲಿ ಚಿತ್ರ ತೆರೆಕಂಡು ಸ್ವಲ್ಪ ದಿನಕ್ಕೆ ಒಟಿಟಿಗೆ ಲಗ್ಗೆ ಇಡುತ್ತದೆ. ಕೆಲವೊಂದು ಸೂಪರ್ ಹಿಟ್ ಚಿತ್ರಗಳು ಒಟಿಟಿನಲ್ಲಿಯೂ ಅತೀ ಹೆಚ್ಚು ವೀಕ್ಷಣೆ ಆಗುವುದು ಇದೆ. ಚಿತ್ರ ಮಂದಿರಕ್ಕೆ ಅನಿವಾರ್ಯ ಕಾರಣದಿಂದ ತೆರಳದೇ ಇದ್ದವರು, ಸಿನಿಮಾ ನೋಡಲು ಮಿಸ್ ಮಾಡಿ ಕೊಂಡವರು ಮನೆಯಲ್ಲಿಯೇ ಎಲ್ಲರೂ ಒಟ್ಟಾಗಿ ನೋಡಲು ಒಟಿಟಿ ಒಂದು ಒಳ್ಳೇ ಅವಕಾಶ.. ಅಂತೆಯೇ ಈ ಬಾರಿ 2025 ರ ಅತಿ ಹೆಚ್ಚು ಬಾಕ್ಸ್ ಆಫೀಸ್ ಗಳಿಕೆ ಮಾಡಿದ್ದ ತೆಲುಗು ಚಿತ್ರವೊಂದು ಒಟಿಟಿಗೆ ಬರಲು ಸಿದ್ಧವಾಗಿದೆ. ನಟ ಪವನ್ ಕಲ್ಯಾಣ್ (Pawan Kalyan) ಅಭಿನಯದ ದೆ ಕಾಲ್ ಹಿಮ್ ಒಜಿ (They Call Him OG) ಸಿನಿಮಾವು ನೆಟ್‌ಫ್ಲಿಕ್ಸ್ ನಲ್ಲಿ ಸ್ಟ್ರೀಮ್ ಆಗಲಿದೆ. ಈ ಬಗ್ಗೆ ನೆಟ್‌ಫ್ಲಿಕ್ಸ್ ಇಂಡಿಯಾ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಿಳಿಸಿದ್ದು ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗುವ ದಿನಾಂಕವನ್ನು ಘೋಷಿಸಿದೆ. ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ಸ್ಟ್ರೀಮಿಂಗ್ ಆಗಲಿದ್ದು ಅಭಿಮಾನಿಗಳಿಗೆ ಈ ವಿಚಾರ ಖುಷಿ ತರಿಸಿದೆ.
ಆಂಧ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಅವರು ತಮ್ಮ ರಾಜಕೀಯ ಜೀವನಕ್ಕೆ ಅಧಿಕ ಒತ್ತು ನೀಡುವ ಮೂಲಕ ಸಿನಿಮಾ ವೃತ್ತಿ ಜೀವನದಲ್ಲಿ ಅಷ್ಟಾಗಿ ಸಕ್ರಿಯವಿರಲಿಲ್ಲ. ಬಳಿಕ ಸರಿಯಾಗಿ ಶೂಟಿಂಗ್ ಗಳಿಗೆ ಭಾಗಿಯಾಗದ ಕಾರಣ ಅವರ ನಟನೆಯ 'ಹರಿಹರ ವೀರಮಲ್ಲು' (Hari Hara Veera Mallu) ಸಿನಿಮಾ ತಡವಾಗಿ ಬಿಡುಗಡೆಯಾಯಿತು. ಈ ಸಿನಿಮಾ ಅಂದುಕೊಂಡ ಮಟ್ಟಕ್ಕೆ ಯಶಸ್ಸು ಕೂಡ ಪಡೆಯದಂತಾಯ್ತು. ಅದಾದ ಬಳಿಕ ಅವರ ನಟನೆಯ ಒಜಿ ಸಿನಿಮಾ ತೆರೆ ಕಂಡು ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಇದೀಗ ಅದೇ ಸಿನಿಮಾ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಗೆ ಸಜ್ಜಾಗಿದೆ.
ಸೆಪ್ಟೆಂಬರ್ 25ರಂದು ತೆರೆಗೆ ಬಂದಿದ್ದ ''ಓಜಿ'' ಸಿನಿಮಾ ಈಗಲೂ ಕೆಲವು ಚಿತ್ರಮಂದಿರಗಳಲ್ಲಿದೆ. ಒಜಿ ಸಿನಿಮಾ ಭಾರತದಲ್ಲಿಯೇ 191.9 ಕೋಟಿರೂಪಾಯಿ ಗಳಿಕೆ ಮಾಡಿ ಭರ್ಜರಿ ಹಿಟ್ ಆಗಿತ್ತು. ವಿಶ್ವದಾದ್ಯಂತ ಅನೇಕ ಚಿತ್ರ ಮಂದಿರದಲ್ಲಿ ತೆರೆಕಂಡು 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇದೀಗ ಇದೇ ಸಿನಿಮಾ ಅಕ್ಟೋಬರ್ 23ರಂದು ಓಟಿಟಿ ಪ್ಲ್ಯಾಟ್ ಫಾರ್ಮ್ ಆದಂತಹ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಒಜಿ ಸಿನಿಮಾ ಬೇರೆ ಬೇರೆ ಭಾಷೆಯಲ್ಲಿ ಕೂಡ ಡಬ್ ಮಾಡ ಲಾದ ಕಾರಣ ಅಭಿಮಾನಿಗಳು ತಮಗೆ ಇಷ್ಟವಾದ ಭಾಷೆಯಲ್ಲಿ ಮನೆಯಲ್ಲಿ ಕೂತು ಈ ಸಿನಿಮಾವನ್ನು ನೋಡಿ ಎಂಜಾಯ್ ಮಾಡಬಹುದು.
ಇದನ್ನೂ ಓದಿ:Marutha Movie: ಬಹು ನಿರೀಕ್ಷಿತ ʼಮಾರುತʼ ಚಿತ್ರದ ಬಿಡುಗಡೆ ಮುಂದಕ್ಕೆ; ಹೊಸ ಡೇಟ್ ಅನೌನ್ಸ್
ಸಾಹೋ ಚಿತ್ರವನ್ನು ನಿರ್ದೇಶಿಸಿದ್ದ ನಿರ್ದೇಶಕ ಸುಜಿತ್ ಅವರು ಈ 'ಓಜಿ' ಚಿತ್ರವನ್ನು ನಿರ್ದೇಶಿ ಸಿದ್ದಾರೆ. ಕ್ರೈಂ ಥ್ರಿಲ್ಲಿಂಗ್ ಸಸ್ಪೆನ್ಸ್ ಕಥೆ ಉಳ್ಳ ಈ ಸಿನಿಮಾದಲ್ಲಿ ನಟ ಪವನ್ ಕಲ್ಯಾಣ್ ಅವರು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇಮ್ರಾನ್ ಹಶ್ಮಿ ಖಳನಾಯಕನಾಗಿ ಇದೇ ಸಿನಿಮಾದಲ್ಲಿ ಅಬ್ಬರಿಸಿದ್ದಾರೆ. ಡಿವಿವಿ ದಾನಯ್ಯ ಅವರ ನಿರ್ಮಾಣದ ಈ ಸಿನಿಮಾಕ್ಕೆ ಸಂಗೀತ ಕೂಡ ಪ್ಲಸ್ ಪಾಂಯ್ಟ್ ಆಗಿದೆ. ಎಸ್ ತಮನ್ ಸಂಗೀತ ನಿರ್ದೇಶನ ಮಾಡಿದ್ದು ಸಿನಿಮಾ ಎಫೆಕ್ಟ್ ಚೆನ್ನಾಗಿ ಮೂಡಿ ಬಂದಿದೆ. ನಟಿ ಪ್ರಿಯಾಂಕ ಮೋಹನ್ ಈ ಸಿನಿಮಾದ ನಾಯಕಿಯಾಗಿ ಮಿಂಚಿದ್ದಾರೆ.
ಅಂತೆಯೇ ಇದೇ ಸಿನಿಮಾದಲ್ಲಿ ಮುಂಗಾರು ಮಳೆ 2 ಚಿತ್ರದ ನಾಯಕಿ ನೇಹಾ ಶೆಟ್ಟಿ ಕೂಡ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಸಿನಿಮಾ ರಿಲೀಸ್ ಆದ ಬಳಿಕ ಈ ಹಾಡು ಅದರಲ್ಲಿ ಇರಲೇ ಇಲ್ಲ. ಆ ನಂತರ ಎಲ್ಲೆಡೆ ಈ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದ ಕಾರಣ ನಿರ್ದೇಶಕ ಸುಜಿತ್ ಅವರು ಈ ಹಾಡನ್ನು ಚಿತ್ರದಲ್ಲಿ ಮತ್ತೆ ಪುನಃ ಸೇರಿಸಿದ್ದಾರೆ. ಒಟ್ಟಿನಲ್ಲಿ ಸಿನಿಮಾ ನೋಡಲು ಥಿಯೇಟರ್ ನಲ್ಲಿ ಮಿಸ್ ಮಾಡಿಕೊಂಡವರು ಇದೀಗ ಅಕ್ಟೋಬರ್ 23ರಂದು ಒಟಿಟಿಯಲ್ಲಿ ವೀಕ್ಷಿಸಬಹುದು.