ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

RCB vs CSK: ಆರ್‌ಸಿಬಿ ವಿರುದ್ಧ ಚೆನ್ನೈ ಸೋಲಿಗೆ ಕಾರಣ ತಿಳಿಸಿದ ಅಂಬಾಟಿ ರಾಯುಡು

Ambati Rayudu: ಇಎಸ್‌ಪಿಎನ್‌ಕ್ರಿಕ್‌ಇನ್ಫೊ ಜತೆ ಮಾತನಾಡಿದ ರಾಯುಡು, ಕೆಟ್ಟ ಯೋಜನೆಗಿಂತ ಹೆಚ್ಚಾಗಿ, ತಂಡದ ಆಟಗಾರರು ಕೆಟ್ಟ ಯೋಜನೆಗೆ ಅಂಟಿಕೊಂಡರು. ತಂಡಕ್ಕೆ ಯಾರೂ ಕೂಡ ನೆರವಾಗುವ ಯೋಚನೆ ಮಾಡಲಿಲ್ಲ. ಚೇಸಿಂಗ್‌ ವೇಳೆ ಆರಂಭದಲ್ಲಿ ಸ್ವಲ್ಪ ನಿಧಾನಗೊಳಿಸಬೇಕಿತ್ತು ಎಂದರು.

ಆರ್‌ಸಿಬಿ ವಿರುದ್ಧ ಚೆನ್ನೈ ಸೋಲಿಗೆ ಕಾರಣ ತಿಳಿಸಿದ ಅಂಬಾಟಿ ರಾಯುಡು

Ambati Rayudu -

Abhilash BC
Abhilash BC Apr 6, 2026 1:43 PM

ಚೆನ್ನೈ, ಎ. 6: ಕೆಟ್ಟ ಯೋಜನೆಯಿಂದಲೇ, ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB vs CSK) ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಸೋಲು ಕಂಡಿತು ಎಂದು ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ಅಂಬಾಟಿ ರಾಯುಡು(Ambati Rayudu) ಅವರು ಹೇಳಿದ್ದಾರೆ. ಎಪ್ರಿಲ್ 5 ರ ಭಾನುವಾರ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ರ 11 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆರ್‌ಸಿಬಿ ವಿರುದ್ಧ 43 ರನ್‌ ಅಂತರದ ಸೋಲು ಕಂಡಿತ್ತು.

ಇಎಸ್‌ಪಿಎನ್‌ಕ್ರಿಕ್‌ಇನ್ಫೊ ಜತೆ ಮಾತನಾಡಿದ ರಾಯುಡು, "ಕೆಟ್ಟ ಯೋಜನೆಗಿಂತ ಹೆಚ್ಚಾಗಿ, ತಂಡದ ಆಟಗಾರರು ಕೆಟ್ಟ ಯೋಜನೆಗೆ ಅಂಟಿಕೊಂಡರು. ತಂಡಕ್ಕೆ ಯಾರೂ ಕೂಡ ನೆರವಾಗುವ ಯೋಚನೆ ಮಾಡಲಿಲ್ಲ. ಚೇಸಿಂಗ್‌ ವೇಳೆ ಆರಂಭದಲ್ಲಿ ಸ್ವಲ್ಪ ನಿಧಾನಗೊಳಿಸಬೇಕಿತ್ತು. ತಂಡದ ಬೌಲಿಂಗ್‌ ಕೂಡ ಉತ್ತಮವಾಗಿರಲಿಲ್ಲ ಎಂದು ಭಾವಿಸುತ್ತೇನೆ" ಎಂದು ರಾಯುಡು ಹೇಳಿದರು.

ಆರ್‌ಸಿಬಿ ಪರ ತಂಡಕ್ಕೆ ಎಲ್ಲಾ ಬ್ಯಾಟರ್‌ಗಳು ಉಪಯುಕ್ತ ರನ್ ಕಾಣಿಕೆ ನೀಡಿದರು. ಚೆನ್ನೈ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ನಷ್ಟಕ್ಕೆ 250 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಚೆನ್ನೈ ಆರಂಭಿಕ ಆಘಾತದ ಹೊರತಾಗಿಯೂ 19.4 ಓವರ್‌ಗಳಲ್ಲಿ 207 ರನ್‌ಗೆ ಸರ್ವಪತನ ಕಂಡಿತು.

KKR vs PBKS: ಚಂಡಮಾರುತ; ಪಂಜಾಬ್‌ vs ಕೆಕೆಆರ್‌ ಪಂದ್ಯಕ್ಕೆ ಭಾರೀ ಮಳೆ ಭೀತಿ

ನಾಲ್ಕನೇ ವಿಕೆಟ್‌ಗೆ ಜತೆಯಾದ ನಾಯಕ ರಜತ್ ಪಾಟೀದಾರ್ ಹಾಗೂ ಟಿಮ್ ಡೇವಿಡ್ ಕೇವಲ 35 ಎಸೆತಗಳಲ್ಲಿ ಮುರಿಯದ 99 ರನ್ ಸಿಡಿಸುವ ಮೂಲಕ ತಂಡದ ಮೊತ್ತ 250ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಇದು ಚೆನ್ನೈಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿತು.

ರಜತ್ ಪಾಟೀದಾರ್ ಕೇವಲ 19 ಎಸೆತಗಳಲ್ಲಿ ಒಂದು ಬೌಂಡರಿ ಆರು ಸಿಕ್ಸರ್ ಸಹಿತ ಅಜೇಯ 48 ರನ್ ಬಾರಿಸಿದರು. ಟಿಮ್ ಡೇವಿಡ್ ಕೇವಲ 25 ಎಸೆತಗಳಲ್ಲಿ 3 ಬೌಂಡರಿ ಹಾಗೂ 8 ಸೊಗಸಾದ ಸಿಕ್ಸರ್‌ಗಳ ನೆರವಿನಿಂದ ಅಜೇಯ 70 ರನ್ ಬಾರಿಸಿದರು.

ಸಂಕ್ಷಿಪ್ತ ಸ್ಕೋರ್: ಆರ್‌ಸಿಬಿ 20 ಓವರ್‌ನಲ್ಲಿ 250/3 (ಡೇವಿಡ್‌ 70*, ದೇವದತ್‌ 50, ರಜತ್‌ 48*, ಸಾಲ್ಟ್‌ 46, ದುಬೆ 1-30), ಸಿಎಸ್‌ಕೆ 19.4 ಓವರ್‌ನಲ್ಲಿ 207/10 (ಸರ್ಫರಾಜ್‌ 50, ಪ್ರಶಾಂತ್‌ 43, ಓವರ್ಟನ್‌ 37, ಭುವನೇಶ್ವರ್‌ 3-41, ಸುಯಶ್‌ 1-21).