ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pushpalatha: ದಕ್ಷಿಣ ಭಾರತದ ಹೆಸರಾಂತ ಹಿರಿಯ ನಟಿ ಪುಷ್ಪಲತಾ ವಿಧಿವಶ!

ದಕ್ಷಿಣ ಭಾರತದ ಬಹುಭಾಷಾ ನಟಿ ಪುಷ್ಪಲತಾ ವಯೋಸಹಜ ಕಾಯಿಲೆಯಿಂದ ವಿಧಿವಶರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ದಕ್ಷಿಣ ಭಾರತದ ನಾಲ್ಕು ಭಾಷೆಯ ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಕನ್ನಡದಲ್ಲಿ ಕೂಡ ಹಲವು ನಾಯಕ ನಟರೊಂದಿಗೆ ಅವರು ನಟಿಸಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಡಾ. ರಾಜ್‌ಕುಮಾರ್ ನಟನೆಯ 'ಎರಡು ಕನಸು' ಚಿತ್ರವು ಅವರಿಗೆ ಮಹತ್ವದ ತಿರುವನ್ನು ನೀಡಿತ್ತು.

ದಕ್ಷಿಣ ಭಾರತದ ಬಹುಭಾಷಾ ನಟಿ ಪುಷ್ಪಲತಾ ವಿಧಿವಶ!

Pushpalatha

Profile Deekshith Nair Feb 5, 2025 1:54 PM

ಚೆನ್ನೈ: ದಕ್ಷಿಣ ಭಾರತದ(South India) ಬಹುಭಾಷಾ ನಟಿ ಪುಷ್ಪಲತಾ(Pushpalatha) ವಯೋಸಹಜ ಕಾಯಿಲೆಯಿಂದ ಇಂದು(ಫೆ.5) ವಿಧಿವಶರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ದಕ್ಷಿಣ ಭಾರತದ ನಾಲ್ಕು ಭಾಷೆಯ ಸಿನಿಮಾಗಳಲ್ಲಿ ಅವರು ನಟಿಸಿದ್ದರು. ತಮಿಳಿನ ಪ್ರಸಿದ್ಧ ನಟರಾದ ಎಂಜಿಆರ್‌, ಶಿವಾಜಿ ಗಣೇಶನ್‌ ಜೊತೆ ನಟಿಸಿದ್ದ ಪುಷ್ಪಲತಾ ಅವರು ಕನ್ನಡದಲ್ಲೂ ಹಲವು ನಾಯಕ ನಟರೊಂದಿಗೆ ನಟಿಸಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಡಾ. ರಾಜ್‌ಕುಮಾರ್ ನಟನೆಯ 'ಎರಡು ಕನಸು' ಚಿತ್ರವು ಅವರಿಗೆ ಮಹತ್ವದ ತಿರುವನ್ನು ನೀಡಿತ್ತು.

ಮೂರ್ನಾಲ್ಕು ದಶಕಗಳಿಗೂ ಹೆಚು ಕಾಲ ನಾಯಕ ನಟಿಯಾಗಿ ನಟಿಸಿದ ಪುಷ್ಪಲತಾ ಮುಂದೆ ಪೋಷಕ ನಟಿಯಾಗಿ ತಮ್ಮ ಪ್ರತಿಭೆಯ ಮೂಲಕ ಚಿತ್ರ ರಸಿಕರನ್ನು ರಂಜಿಸಿದರು. ಆರಂಭದ ದಿನಗಳಲ್ಲಿ ಎವಿಎಂ ರಾಜು ಅವರ ಜೊತೆ ನಾಯಕಿಯಾಗಿ ನಟಿಸಿದ್ದರು. ಇದೇ ವೇಳೆ ಇಬ್ಬರೂ ಪ್ರೀತಿಸಿ 1964ರಲ್ಲಿ ಮದುವೆ ಆದರು. ದಶಕಗಳ ಹಿಂದೆಯೇ ಲಕ್ಸ್ ಸೋಪಿಗೆ ಪುಷ್ಪಲತಾ ಅವರು ಮಾಡೆಲ್ ಆಗಿ ಕಾಣಿಸಿಕೊಂಡಿದ್ದು ತೀರಾ ವಿಶೇಷ.



ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಹುಟ್ಟಿ ಬೆಳೆದ ಪುಷ್ಪಲತಾ ಅವರು ಬಾಲ್ಯದಲ್ಲೇ ಭರತನಾಟ್ಯ ಕಲಿತಿದ್ದರು. ಮೊಟ್ಟ ಮೊದಲು 'ನಲ್ಲ ತಂಗೈ' ಚಿತ್ರದ ಸಣ್ಣ ಪಾತ್ರದಲ್ಲಿ ನಟಿಸಿದರು. ಬಳಿಕ 'ಕೊಂಗ ನಾಟು ತಂಗಂ' ಚಿತ್ರದ ಮೂಲಕ ಅಧಿಕೃತವಾಗಿ ನಟನೆಯನ್ನು ಆರಂಭಿಸಿದರು. 50ರ ದಶಕದಲ್ಲಿ ನಾಯಕ ನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಪುಷ್ಪಲತಾ ಐದು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದರು.

ಈ ಸುದ್ದಿಯನ್ನೂ ಓದಿ:PM Modi at Mahakumbh : ಮಹಾಕುಂಭ ಮೇಳದಲ್ಲಿ ಪ್ರಾಧಾನಿ ಮೋದಿ; ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ

ತಮಿಳು, ತೆಲುಗು, ಕನ್ನಡ, ಮಲಯಾಳಂ ಮಾತ್ರವಲ್ಲದೇ ಹಿಂದಿ ಚಿತ್ರದಲ್ಲಿ ಕೂಡ ಪುಷ್ಪಲತಾ ನಟಿಸಿದ್ದರು. 1974ರಲ್ಲಿ 'ಎರಡು ಕನಸು' ಚಿತ್ರದ ಪಾತ್ರವೊಂದರಲ್ಲಿ ಅವರು ನಟಿಸಿದ್ದರು. ಬಳಿಕ 'ಹೆಣ್ಣಿನ ಸೇಡು', 'ಒಲವೇ ಬದುಕು' ಹಾಗೂ 'ಜೀವನ ಜ್ಯೋತಿ' ಚಿತ್ರದಲ್ಲಿ ಪೋಷಕ ನಟಿಯಾಗಿ ಮಿಂಚಿ ಹೆಸರುಗಳಿಸಿದರು.