ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Coolie Movie: ಭಾರತೀಯ ಚಿತ್ರರಂಗದಲ್ಲೇ ಹೊಸದೊಂದು ಇತಿಹಾಸ ಬರೆಯಲು ರಜನಿಕಾಂತ್‌ ಸಜ್ಜು; 100ಕ್ಕೂ ಹೆಚ್ಚು ದೇಶಗಳಲ್ಲಿ ʼಕೂಲಿʼ ರಿಲೀಸ್‌

Actor Rajinikanth: ಜಾಗತಿಕ ಸಿನಿಪ್ರಿಯರ ಗಮನ ಸೆಳೆದ, ತಮಿಳು ಸೂಪರ್‌ ಸ್ಟಾರ್‌ ರಜನಿಕಾಂತ್‌ ಅಭಿನಯದ ʼಕೂಲಿʼ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಆ. 14ರಂದು ತೆರೆಗೆ ಬರಲಿದೆ. ಈ ಮಧ್ಯೆ ಚಿತ್ರ 100ಕ್ಕೂ ಹೆಚ್ಚು ದೇಶಗಳಲ್ಲಿ ರಿಲೀಸ್‌ ಆಗಲಿದೆ ಎನ್ನುವ ಸುದ್ದಿ ಹರಡಿದೆ.

100ಕ್ಕೂ ಹೆಚ್ಚು ದೇಶಗಳಲ್ಲಿ ರಜನಿಕಾಂತ್‌ ನಟನೆಯ ʼಕೂಲಿʼ ಚಿತ್ರ ರಿಲೀಸ್‌

'ಕೂಲಿʼ ಚಿತ್ರದಲ್ಲಿ ರಜನಿಕಾಂತ್‌.

Profile Ramesh B Jul 5, 2025 9:44 PM

ಚೆನ್ನೈ: ಸದ್ಯ ಜಾಗತಿಕ ಸಿನಿಪ್ರಿಯರ ಗಮನ ಸೆಳೆದ ಚಿತ್ರಗಳ ಪೈಕಿ ಕಾಲಿವುಡ್‌ ಸೂಪರ್‌ ಸ್ಟಾರ್‌ ರಜನಿಕಾಂತ್‌ (Rajinikanth) ಅಭಿನಯದ ʼಕೂಲಿʼ (Coolie Movie) ಕೂಡ ಒಂದು. ತಮಿಳಿನಲ್ಲಿ ಹೊಸ ಅಲೆಯ ಚಿತ್ರಗಳನ್ನು ನಿರ್ದೇಶಿಸುವ ಮೂಲಕ ಭರವಸೆ ಮೂಡಿಸಿರುವ ಲೋಕೇಶ್‌ ಕನಕರಾಜ್‌ (Lokesh Kanakaraj) ʼಕೂಲಿʼ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದು, ಈಗಾಗಲೇ ನಿರೀಕ್ಷೆ ಮೂಡಿಸಿದೆ. ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಆ. 14ರಂದು ಸಿನಿಮಾ ಅದ್ಧೂರಿಯಾಗಿ ತೆರೆಗೆ ಬರಲಿದೆ. ಇದೀಗ ಹೊರ ಬಂದಿರುವ ಸುದ್ದಿಯ ಪ್ರಕಾರ ಈ ಚಿತ್ರ 100ಕ್ಕೂ ಹೆಚ್ಚು ದೇಶಗಳಲ್ಲಿ ಬಿಡುಗಡೆಯಾಗಲಿದೆ. ಆ ಮೂಲಕ ರಜನಿಕಾಂತ್‌ ಭಾರತೀಯ ಚಿತ್ರರಂಗದಲ್ಲೇ ನೂತನ ಇತಿಹಾಸ ಬರೆಯಲು ಸಜ್ಜಾಗಿದ್ದಾರೆ.

ಈಗಾಗಲೇ ಬಹುತಾರಾಗಣದ ಮೂಲಕ ಸದ್ದು ಮಾಡುತ್ತಿರುವ ʼಕೂಲಿʼ ಚಿತ್ರದಲ್ಲಿ ರಜನಿಕಾಂತ್‌ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಆ್ಯಕ್ಷನ್‌ ಪ್ಯಾಕ್ಡ್‌ ಚಿತ್ರದ ಟೀಸರ್‌, ಹಾಡು ಈಗಾಗಲೇ ಕುತೂಹಲ ಕೆರಳಿಸಿದ್ದು, ಬಾಕ್ಸ್‌ ಆಫೀಸ್‌ನಲ್ಲಿ ಮೋಡಿ ಮಾಡುವ ಸೂಚನೆ ಈಗಲೇ ಸಿಕ್ಕಿದೆ.

ಈ ಸುದ್ದಿಯನ್ನೂ ಓದಿ: Actor Rajinikanth: ಮತ್ತೊಂದು ದಾಖಲೆ ಬರೆದ ರಜನಿಕಾಂತ್‌; ಬಿಡುಗಡೆ ಮುನ್ನವೇ ಬರೋಬ್ಬರಿ 120 ಕೋಟಿ ರೂ.ಗೆ ʼಕೂಲಿʼ ಒಟಿಟಿ ಹಕ್ಕು ಸೇಲ್‌?

100ಕ್ಕೂ ಹೆಚ್ಚು ದೇಶಗಳಲ್ಲಿ ರಿಲೀಸ್‌?

ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿತ್ರ ರಿಲೀಸ್‌ ಮಾಡುವ ಹಂಸಿನಿ ಎಂಟರ್‌ಟೈನ್‌ಮೆಂಟ್‌ (Hamsini Entertainment) ಇದೀಗ ʼಕೂಲಿʼ ಸಿನಿಮಾದ ಜಾಗತಿಕ ವಿತರಣೆ ಹಕ್ಕು ಪಡೆದುಕೊಂಡಿದೆ. ಈಗಾಗಲೇ ಜಾಗತಿಕವಾಗಿ ವಿವಿಧ ಭಾಷೆಗಳ 130ಕ್ಕೂ ಹೆಚ್ಚು ಚಿತ್ರಗಳನ್ನು ರಿಲೀಸ್‌ ಮಾಡಿರುವ ಹಂಸಿನಿ ಎಂಟರ್‌ಟೈನ್‌ಮೆಂಟ್‌ ʼಕೂಲಿʼ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ಸಜ್ಜಾಗಿದೆ ಎಂದು ಮೂಲಗಳು ತಿಳಿಸಿದೆ. ಹಂಸಿನಿ ಎಂಟರ್‌ಟೈನ್‌ಮೆಂಟ್‌ ತಮಿಳು ಸ್ಟಾರ್‌ ವಿಜಯ್‌ ಅಭಿನಯದ ʼಗೋಟ್‌ʼ ಚಿತ್ರವನ್ನು 40ಕ್ಕೂ ಹೆಚ್ಚು ದೇಶಗಳಲ್ಲಿ ರಿಲೀಸ್‌ ಮಾಡಿದ್ದರೆ, ಜೂ.ಎನ್‌ಟಿಆರ್‌ ಅಭಿಯದ ತೆಲುಗು ಸಿನಿಮಾ ʼದೇವರʼವನ್ನು 90ಕ್ಕೂ ಹೆಚ್ಚು ದೇಶಗಳಲ್ಲಿ ಬಿಡುಗಡೆ ಮಾಡಿತ್ತು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೂಲಿಯನ್ನು 100ಕ್ಕೂ ಹೆಚ್ಚು ದೇಶಗಳ ಪ್ರೇಕ್ಷಕರ ಮುಂದೆ ತರಲು ಮುಂದಾಗಿದೆ.

ಎಲ್ಲವೂ ಅಂದುಕೊಂಡಂತಾದರೆ ಭಾರತೀಯ ಚಿತ್ರವೊಂದು ಇಷ್ಟು ದೇಶಗಳಲ್ಲಿ ರಿಲೀಸ್‌ ಆಗುತ್ತಿರುವುದು ಇದು ಮೊದಲ ಬಾರಿ ಎನಿಸಿಕೊಳ್ಳಲಿದೆ. ಆ ಮೂಲಕ ದಾಕಲೆಗಳ ಸರದಾರ ತಲೈವಾ ರಜನಿಕಾಂತ್‌ ಹೆಸರಲಲ್ಲಿ ಮತ್ತೊಂಡು ರೆಕಾರ್ಡ್‌ ಸೃಷ್ಟಿಯಾಗಲಿದೆ. ಈ ಚಿತ್ರವನ್ನು ಸನ್‌ ಪಿಕ್ಚರ್ಸ್‌ ಸುಮಾರು 350 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದೆ. ಈಗಾಗಲೇ ಈ ಚಿತ್ರದ ಓಟಿಟಿ ಹಕ್ಕು ದಾಖಲೆಯ 120 ಕೋಟಿ ರೂ.ಗೆ ಮಾರಾಟವಾಗಿದೆ ಎಂದು ವರದಿಯೊಂದು ತಿಳಿಸಿದೆ.

ಬಹುತಾರಾಗಣ ಹೊಂದಿರುವ ಈ ಚಿತ್ರದಲ್ಲಿ ಸ್ಯಾಂಡಲ್‌ವುಡ್‌ ನಟ ಉಪೇಂದ್ರ ಕೂಡ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಜತೆಗೆ ಬಾಲಿವುಡ್‌ ನಟ ಆಮೀರ್‌ ಖಾನ್‌ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇವರೊಂದಿಗೆ ನಾಗಾರ್ಜುನ್‌, ಸತ್ಯರಾಜ್‌, ಸೌಬಿನ್‌ ಶಬೀರ್‌, ಶ್ರುತಿ ಹಾಸನ್‌ ಮತ್ತಿತರರೂ ಅಭಿನಯಿಸಿದ್ದಾರೆ. ಇನ್ನು ಕರಾವಳಿ ಬೆಡಗಿ ಪೂಜಾ ಹೆಗ್ಡೆ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅನುರುದ್ಧ ರವಿಚಂದರ್‌ ಸಂಗೀತ ಹೈಲೈಟ್‌ ಆಗಲಿರಲಿದೆ.