ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

28 ವರ್ಷಗಳಿಂದ ಜಗ್ಗೇಶ್‌ ಕಾರು ಚಾಲಕನಾಗಿದ್ದ ಪದ್ಮನಾಭ ನಿಧನ; ʻನಶ್ವರ ಈ ಜಗತ್ತು..ʼ ಎಂದು ಕಂಬನಿಮಿಡಿದ ʻನವರಸ ನಾಯಕʼ

Jaggesh Driver Padmanabha Death: ಅವರು ಗುರುವಾರ ಹೃದಯ ಸ್ತಂಭನದಿಂದ ವಿಧಿವಶರಾಗಿದ್ದಾರೆ. ಸುಮಾರು 28 ವರ್ಷಗಳಿಂದ ಜಗ್ಗೇಶ್ ಅವರ ನೆರಳಿನಂತೆ ಕೆಲಸ ಮಾಡಿದ್ದ ಪದ್ಮನಾಭ, ಕೇವಲ ಚಾಲಕನಾಗಿರದೆ ಮನೆಯ ಸದಸ್ಯನಂತಿದ್ದರು. ಜಗ್ಗೇಶ್ ಅವರ ರಾಜಕೀಯ ಮತ್ತು ಸಿನಿಮಾ ವ್ಯವಹಾರಗಳ ಸಂಪರ್ಕ ಕೊಂಡಿಯಾಗಿದ್ದ ಪದ್ದನ ನಿಧನಕ್ಕೆ ಜಗ್ಗೇಶ್ ತೀವ್ರ ಕಂಬನಿ ಮಿಡಿದಿದ್ದಾರೆ. ಕೊನೆ ಕ್ಷಣದವರೆಗೂ ಜೊತೆಗಿದ್ದು ತಮ್ಮ ಪ್ರೀತಿಯ ಚಾಲಕನಿಗೆ ನಟ ವಿದಾಯ ಹೇಳಿ ಬಂದಿದ್ದಾರೆ.

'ನಶ್ವರ ಈ ಜಗತ್ತು..'; ಪ್ರೀತಿಯ ಆಪ್ತನನ್ನು ಕಳೆದುಕೊಂಡು ಜಗ್ಗೇಶ್ ಭಾವುಕ

-

Avinash GR
Avinash GR Jan 29, 2026 5:24 PM

ನಟ, ರಾಜ್ಯಸಭಾ ಎಂಪಿ ಜಗ್ಗೇಶ್‌ ಅವರ ಕಾರು ಚಾಲಕ ಪದ್ಮನಾಭ ಗುರುವಾರ (ಜ.29) ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ. ಪದ್ಮನಾಭ ಅವರನ್ನು ಪದ್ದ ಎಂದೇ ಪ್ರೀತಿಯಿಂದ ಕರೆಯುತ್ತಿದ್ದರು ಜಗ್ಗೇಶ್.‌ ಅಂದಹಾಗೆ, ಜಗ್ಗೇಶ್‌ ಅವರ ಜೊತೆಗೆ ಸುಮಾರು 28 ವರ್ಷಗಳಿಂದ ಕಾರು ಚಾಲಕನಾಗಿ ಪದ್ಮನಾಭ ಕೆಲಸ ಮಾಡುತ್ತಿದ್ದರು. ಇದೀಗ ತಮ್ಮ ಪ್ರೀತಿಯ ಉದ್ಯೋಗಿಯನ್ನು ಕಳೆದುಕೊಂಡಿರುವುದಕ್ಕೆ ನಟ ಜಗ್ಗೇಶ್‌ ಅವರು ಭಾವುಕರಾಗಿದ್ದಾರೆ.

ಪದ್ಮನಾಭ ಬಗ್ಗೆ ಜಗ್ಗೇಶ್‌ ಹೇಳಿದ್ದೇನು?

ಪದ್ಮನಾಭ ಅವರ ನಿಧನದ ಬಗ್ಗೆ ಪೋಸ್ಟ್‌ ಹಂಚಿಕೊಂಡಿರುವ ನಟ ಜಗ್ಗೇಶ್‌, "ಒಂದು ದಿನ ಇದ್ದದ್ದು ಮತ್ತೊಂದು ದಿನ ಇಲ್ಲವಾಗುತ್ತೆ. ನಶ್ವರ ಈ ಜಗತ್ತು. ಶ್ರೀ ಕೃಷ್ಣನ ಮಾತು.. ನನ್ನ ಚಾಲಕ ಪದ್ಧ (ಪದ್ಮನಾಭ) 28 ವರ್ಷ ನನ್ನ ಚಾಲಕನಾಗಿ ಕಾರ್ಯ ನಿರ್ವಹಿಸಿದ್ದ" ಎಂದು ಹೇಳಿಕೊಂಡಿದ್ದಾರೆ.

ಜಗ್ಗೇಶ್‌ ಅವರು ಹಂಚಿಕೊಂಡ ಪೋಸ್ಟ್‌

ಎಲ್ರಿಗಿಂತ ಮುಂಚೆ ಗಿಲ್ಲಿ ನಟನ ಬಗ್ಗೆ ಭವಿಷ್ಯ ನುಡಿದಿದ್ದ ಜಗ್ಗೇಶ್‌; ಗೆದ್ದ ಪಳಾರ್‌ಗೆ ಸನ್ಮಾನಿಸಿದ ʻನವರಸ ನಾಯಕʼ

ನನಗಿಂತ ಹೆಚ್ಚು ಮೊಬೈಲ್ ಕರೆ ಇವನಿಗೆ ಬರುತ್ತಿತ್ತು

"ನಮ್ಮ ಮನೆಯಲ್ಲಿ ಹೆಂಡತಿ, ಮಕ್ಕಳು, ಮೊಮ್ಮಗನಿಗೆ ಹಾಗೂ ನಮ್ಮ ಮನೆಯ ಸದಸ್ಯರು ಶ್ವಾನ (ಅರ್ಜುನ, ಪಿಂಟು, ಸೂರಜ್, ಸೂರ್ಯ) ಆತ್ಮೀಯನಾಗಿದ್ದ. ನನಗಿಂತ ಹೆಚ್ಚು ಮೊಬೈಲ್ ಕರೆ ಇವನಿಗೆ ಬರುತ್ತಿತ್ತು. ಸಿನಿಮಾ ಹಾಗೂ ರಾಜಕೀಯದ ನನ್ನ ಸ್ನೇಹಿತರು ಇವನಿಗೆ ಕರೆಮಾಡಿ ನನಗೆ ವಿಷಯ ಮುಟ್ಟಿಸುತ್ತಿದ್ದರು. ಕಾರಣ, ನಾನು ಮೊಬೈಲ್ ಬಳಸೋಲ್ಲ. ಆ ಕಾರಣ ನನ್ನ ಬಲ್ಲ ಎಲ್ಲರಿಗೂ ತಿಳಿದಿದೆ. ಸಾಮಾಜಿಕ ಜಾಲತಾಣ ಮಾತ್ರ ಬಳಸುತ್ತೇನೆ" ಎಂದು ಜಗ್ಗೇಶ್‌ ಬರೆದುಕೊಂಡಿದ್ದಾರೆ.

Actor Jaggesh: ಪೈರಸಿ ವಿರುದ್ಧ ಹೋರಾಟಕ್ಕೆ ಇಳಿದ ಜಗ್ಗೇಶ್‌! ಚಿತ್ರರಂಗದ ಬೆಂಬಲ ಇಲ್ಲ ಎಂದು ಪೋಸ್ಟ್‌

ಕೊನೆ ಕ್ಷಣದವರೆಗೂ ಜೊತೆಗಿದ್ದು ವಿದಾಯ ಹೇಳಿಬಂದೆ!

"ಕೇವಲ 54 ವರ್ಷ ವಯಸ್ಸಿಗೆ ಹೃದಯ ಸ್ತಂಭನವಾಗಿ ಕೊನೆಯ ಉಸಿರು ನಿಲ್ಲಿಸಿದ. ಅವನ ಮೇಲಿನ ಪ್ರೀತಿ ಹಾಗೂ ಸೇವೆಯ ಋಣಕ್ಕೆ ಅವನ ಕೊನೆಯ ಕ್ಷಣದವರೆಗೂ ಜೊತೆಗಿದ್ದು ವಿದಾಯ ಹೇಳಿಬಂದೆ. ಮನಸ್ಸಿಗೆ ತುಂಬಾ ದುಃಖವಾಯಿತು. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಪದ್ದ. ಹೋಗಿ ಬಾ.." ಎಂದು ಭಾವುಕರಾಗಿ ಪೋಸ್ಟ್‌ ಹಂಚಿಕೊಂಡಿದ್ದಾರೆ ಜಗ್ಗೇಶ್‌.