ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ramayana Movie: ಯಶ್‌ ʼರಾಮಾಯಣʼಕ್ಕೆ ಮತ್ತಷ್ಟು ಸ್ಟಾರ್‌ಗಳ ಸೇರ್ಪಡೆ; ಇಲ್ಲಿದೆ ಕಲಾವಿದರ ಪಟ್ಟಿ

Actor Yash: ಸದ್ಯ ಜಾಗತಿಕ ಸಿನಿಪ್ರಿಯರ ಗಮನ ಸೆಳೆದಿರುವ ಬಾಲಿವುಡ್‌ನ ʼರಾಮಾಯಣʼ ಚಿತ್ರಕ್ಕೆ ಹಲವು ಸ್ಟಾರ್‌ಗಳು ಸೇರ್ಪಡೆಯಾಗುತ್ತಿದ್ದಾರೆ. ಬರೋಬ್ಬರಿ 835 ಕೋಟಿ ರೂ. ವೆಚ್ಚದಲ್ಲಿ ತಯಾರಾಗುತ್ತಿದ್ದು, ಇದೀಗ ವಿವೇಕ್‌ ಒಬೇರಾಯ್‌ ಅಭಿನಯಿಸುತ್ತಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ.

ಯಶ್‌ ʼರಾಮಾಯಣʼಕ್ಕೆ ಮತ್ತಷ್ಟು ಸ್ಟಾರ್‌ಗಳ ಸೇರ್ಪಡೆ

ವಿವೇಕ್ ಒಬೆರಾಯ್‌.

Profile Ramesh B Jun 7, 2025 3:10 PM

ಮುಂಬೈ: ಭಾರತೀಯ ಚಿತ್ರರಂಗ ಮಾತ್ರವಲ್ಲ ಜಾಗತಿಕ ಸಿನಿಪ್ರಿಯರ ಗಮನ ಸೆಳೆದ ಚಿತ್ರ ʼರಾಮಾಯಣʼ (Ramayana Movie). ಈಗಾಗಲೇ ಸೂಪರ್‌ ಹಿಟ್‌ ಚಿತ್ರಗಳ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ ಜನಪ್ರಿಯ ನಿರ್ದೇಶಕ ನಿತೇಶ್‌ ತಿವಾರಿ (Nitesh Tiwari) ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಈ ಚಿತ್ರದ ಮೂಲಕ ಯಶ್‌ (Yash) ಬಾಲಿವುಡ್‌ಗೆ ಕಾಲಿಡುತ್ತಿದ್ದು, ಪವರ್‌ಫುಲ್‌ ರಾವಣನ ಪಾತ್ರದಲ್ಲಿ ಅವರು ಅಬ್ಬರಿಸಲಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್‌ ಆರಂಭವಾಗಿದ್ದು, ಘಟಾನುಘಟಿ ಕಲಾವಿದರು ಅಭಿನಯಿಸುತ್ತಿದ್ದಾರೆ. ಮೂಲಗಳ ಪ್ರಕಾರ ಇದು ಬರೋಬ್ಬರಿ 835 ಕೋಟಿ ರೂ. ವೆಚ್ಚದಲ್ಲಿ ತಯಾರಾಗುತ್ತಿದ್ದು, 2 ಭಾಗಗಳಲ್ಲಿ ರಿಲೀಸ್‌ ಆಗಲಿದೆ. ಆ ಮೂಲಕ ಭಾರತದ ಅತೀ ದುಬಾರಿ ಚಿತ್ರ ಎನಿಸಿಕೊಳ್ಳಲಿದೆ. ಬಹುತಾರಾಗಣದ ಈ ಚಿತ್ರದಲ್ಲಿ ನಟಿಸುತ್ತಿರುವ ಕಲಾವಿದರ ಪಟ್ಟಿ ಹೊರ ಬಿದ್ದಿದೆ. ಮೂಲಗಳ ಪ್ರಕಾರ ಬಿಗ್‌ ಬಿ ಅಮಿತಾಭ್‌ ಬಚ್ಚನ್‌, ಕರ್ನಾಟಕದ ಅಳಿಯ ವಿವೇಕ್ ಒಬೆರಾಯ್‌ (Vivek Oberoi) ಈ ಚಿತ್ರದ ಭಾಗವಾಗುತ್ತಿದ್ದಾರೆ.

ʼರಾಮಾಯಣʼದಲ್ಲಿ ರಾಮನಾಗಿ ರಣಬೀರ್‌ ಕಪೂರ್‌ ನಟಿಸುತ್ತಿದ್ದು, ಸೀತೆಯಾಗಿ ದಕ್ಷಿಣ ಭಾರತದ ಜನಪ್ರಿಯ ನಟಿ ಸಾಯಿ ಪಲ್ಲವಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ಮೂಲಕ ಭರ್ಜರಿಯಾಗಿಯೇ ಬಾಲಿವುಡ್‌ಗೆ ಕಾಲಿಡುತ್ತಿದ್ದಾರೆ. ಇದೀಗ ವಿವೇಕ್ ಒಬೆರಾಯ್‌ ಕೂಡ ಚಿತ್ರದಲ್ಲಿ ನಟಿಸುತ್ತಿದ್ದು, ಯಾವ ಪಾತ್ರ ನಿರ್ವಹಿಸಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.

ಈ ಸುದ್ದಿಯನ್ನೂ ಓದಿ: Ramayana Movie: ಹಿರಿದಾಗುತ್ತಿದೆ 'ರಾಮಾಯಣ' ಪಾತ್ರವರ್ಗ; ಯಶ್‌ ತಾಯಿ ಪಾತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟಿ ಎಂಟ್ರಿ

ಯಾರಿಗೆ ಯಾವ ಪಾತ್ರ?

ಚಿತ್ರಕ್ಕೆ ಹೊಸದಾಗಿ ಸೇರ್ಪಡೆಯಾದ ವಿವೇಕ್‌ ಒಬೆರಾಯ್‌ ಶೂರ್ಪನಖಿ ಪತಿ ವಿದ್ಯುತ್ಜಿಹ್ವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ʼರಾಮಾಯಣʼ ಕಥೆಗೆ ಬಹುಮುಖ್ಯ ತಿರುವು ನೀಡುವ ಶೂರ್ಪನಖಿಯಾಗಿ ರಾಕುಲ್‌ ಪ್ರೀತ್‌ ಸಿಂಗ್‌ ಬಣ್ಣ ಹಚ್ಚಲಿದ್ದಾರೆ. ಇನ್ನು ಜಟಾಯುವಾಗಿ ಅಮಿತಾಭ್‌ ಬಚ್ಚನ್‌ ನಟಿಸುವ ಸಾಧ್ಯತೆ ಇದೆ. ಲಾರಾ ದತ್ತ ಕೈಕೇಯಿಯಾದರೆ, ಕಾಜಲ್‌ ಅಗರ್ವಾಲ್‌ ರಾವಣನ ಪತ್ನಿ ಮಂಡೋದರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಮೋಹಿತ್‌ ರೈನಾ ಶಿವನಾಗಿ ಅಭಿನಯಿಸಲಿದ್ದು, ಇನ್ನೊಂದು ಬಹುಮುಖ್ಯ ಪಾತ್ರ ಹನುಮಂತ ಸನ್ನಿ ಡಿಯೋಲ್‌ ಪಾಲಾಗಿದೆ. ರವಿ ದುಬೆ ಲಕ್ಷ್ಮಣ, ಅರುಣ್‌ ಗೋವಿಲ್‌ ದಶರಥನಾಗಿ ತೆರೆಮೇಲೆ ಪ್ರತ್ಯಕ್ಷವಾಗಲಿದ್ದಾರೆ. ಕುನಾಲ್‌ ಕಪೂರ್‌ ಇಂದ್ರನಾಗಿ, ಆದಿನಾಥ್‌ ಕೊಥಾರೆ ಭರತನಾಗಿ ಮೋಡಿ ಮಾಡಲಿದ್ದಾರೆ. ಅನಿಲ್‌ ಕಪೂರ್‌ ಮತ್ತು ವಿಕ್ರಾಂತ್‌ ಮೆಸ್ಸಿ ಚಿತ್ರದ ಭಾಗವಾಗಲಿದ್ದಾರೆ ಎನ್ನಲಾಗಿದ್ದು, ಇನ್ನೂ ಅಧಿಕೃತವಾಗಿಲ್ಲ.

ದೀಪಾವಳಿಗೆ ರಿಲೀಸ್‌

ಈಗಾಗಲೇ ಕುತೂಹಲ ಭಾರಿ ಕೆರಳಿಸಿದ ರಾಮಾಯಣದ ಮೊದಲ ಭಾಗ 2026ರ ದೀಪಾವಳಿಯಂದು ಮತ್ತು 2ನೇ ಭಾಗ 2027ರ ದೀಪಾವಳಿಯಂದು ರಿಲೀಸ್‌ ಆಗಲಿದೆ. ʼಕೆಜಿಎಫ್‌ʼ ಸರಣಿ ಚಿತ್ರಗಳ ಮೂಲಕ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದ ಯಶ್‌ ನಟಿಸುತ್ತಿರುವ ಚಿತ್ರ ಇದಾಗಿರುವುದರಿಂದಲೇ ನಿರೀಕ್ಷೆ ಗರಿಗೆದರಿದೆ. 2022ರಲ್ಲಿ ತೆರೆಕಂಡ ʼಕೆಜಿಎಫ್‌ 2ʼ ಸಿನಿಮಾದ ಬಳಿಕ ಯಶ್‌ ಅಭಿನಯದ ಯಾವ ಚಿತ್ರವೂ ತೆರೆಕಂಡಿಲ್ಲ. ಅದರಲ್ಲಿಯೂ ರಾವಣನಂತಹ ಪವರ್‌ಫುಲ್‌ ಪಾತ್ರ ನಿರ್ವಹಿಸುತ್ತಿರುವುದರಿಂದ ಕುತೂಹಲ ತುಸು ಹೆಚ್ಚೇ ಇದೆ.