ಅಬ್ಬಬ್ಬಾ! ಇದೆಂಥಾ ದಾಖಲೆ? ನಾಲ್ಕೇ ದಿನಕ್ಕೆ ಕರ್ನಾಟಕದಲ್ಲಿ 50+ ಕೋಟಿ ರೂ. ಬಾಚಿದ ʻಧುರಂಧರ್ 2ʼ
ರಣವೀರ್ ಸಿಂಗ್ ಅಭಿನಯದ ಧುರಂಧರ್ 2 ಚಿತ್ರವು ಕರ್ನಾಟಕದಲ್ಲಿ ಕೇವಲ ನಾಲ್ಕು ದಿನಗಳಲ್ಲಿ ಬರೋಬ್ಬರಿ 53.83 ಕೋಟಿ ಗಳಿಸಿ ಸಾರ್ವಕಾಲಿಕ ದಾಖಲೆ ಬರೆದಿದೆ. ವಿಶೇಷವೆಂದರೆ, ಪಾರ್ಟ್ 1 ರ ಲೈಫ್ ಟೈಮ್ ಗಳಿಕೆಯನ್ನು ಈ ಸಿನಿಮಾ ಕೇವಲ ನಾಲ್ಕೇ ದಿನದಲ್ಲಿ ಮೀರಿಸಿದೆ.
-
ರಣವೀರ್ ಸಿಂಗ್ ನಟನೆಯ ʻಧುರಂಧರ್ 2ʼ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ವಿಶ್ವಾದ್ಯಂತ ಈ ಚಿತ್ರದ ಒಟ್ಟಾರೆ ಗಳಿಕೆಯು 700 ಕೋಟಿ ರೂ. ದಾಟಿರುವುದು ಹೊಸ ದಾಖಲೆಯಾಗಿದೆ. ಈ ನಡುವೆ ಕರ್ನಾಟಕದಿಂದಲೂ ಈ ಸಿನಿಮಾಗೆ ದಾಖಲೆ ಪ್ರಮಾಣದ ಗಳಿಕೆ ಸಿಕ್ಕಿರುವುದು ವಿಶೇಷ. ಅದರಲ್ಲೂ ಮುಖ್ಯವಾಗಿ ಹಿಂದಿ ವರ್ಷನ್‌ನಿಂದಲೇ ಬಹುತೇಕ ಹೆಚ್ಚಿನ ಕಮಾಯಿ ಆಗಿದೆ.
ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಮೊದಲ ನಾಲ್ಕು ದಿನಗಳಿಗೆ ಈ ಸಿನಿಮಾವು 53.83 ಕೋಟಿ ರೂ.ಗಳಿಗೂ ಅಧಿಕ ಮೊತ್ತವನ್ನು ಕರ್ನಾಟಕದಿಂದಲೇ ಬಾಚಿಕೊಂಡಿರುವುದು ವಿಶೇಷ. ಮಾರ್ಚ್ 18ರ ಸಂಜೆ ಕರ್ನಾಟಕದಲ್ಲಿ ಧುರಂಧರ್: ದಿ ರಿವೆಂಜ್ ಸಿನಿಮಾದ ಪೇಯ್ಡ್ ಪ್ರೀಮಿಯರ್ ಶೋಗಳನ್ನು ಮಾಡಲಾಗಿತ್ತು. ಬರೀ ಅದರಿಂದಲೇ ಸುಮಾರು 6.74 ಕೋಟಿ ರೂ. ಹಣ ಹರಿದುಬಂದಿತ್ತು ಎಂಬ ಮಾಹಿತಿ ಇದೆ. ಈ ವರ್ಷ ತೆರೆಕಂಡಿರುವ ಕನ್ನಡದ ಯಾವ ಸಿನಿಮಾದ ಲೈಫ್ ಟೈಮ್ ಕಲೆಕ್ಷನ್ 6.50 ಕೋಟಿ ರೂ. ಕೂಡ ದಾಟಿಲ್ಲ ಎಂಬುದು ಅಚ್ಚರಿಯ ಅಂಶ!
Dhurandhar 2 Review: ಆದಿತ್ಯ ಧರ್ ಸೃಷ್ಟಿಸಿದ ಧುರಂಧರ್‌ನ ರಿವೆಂಜ್ ಹಾದಿಯಲ್ಲಿ ಬೆಂಕಿಯ ಬೇಲಿಗಳು!
ಪ್ರತಿದಿನ ಎಷ್ಟಾಗಿದೆ ಗಳಿಕೆ?
ದಿನ 1 – 11.05 ಕೋಟಿ ರೂ.
ದಿನ 2 – 10.16 ಕೋಟಿ ರೂ.
ದಿನ 3 – 13.07 ಕೋಟಿ ರೂ.
ದಿನ 4 – 12.81 ಕೋಟಿ ರೂ.
- ಹೀಗೆ ಪ್ರತಿದಿನವು ಡಬಲ್ ಡಿಜಿಟ್‌ನಲ್ಲೇ ಗಳಿಕೆ ಮಾಡಿರುವ ಧುರಂಧರ್ 2 ಸಿನಿಮಾವು 53.83 ಕೋಟಿ ರೂ.ಗಳಿಸಿದೆ ಎಂಬ ಮಾಹಿತಿ ಇದೆ. ಗುರುವಾರ ಮುಗಿಯುವುದರೊಳಗೆ ಈ ಚಿತ್ರದ ಒಟ್ಟಾರೆ ಕರ್ನಾಟಕದಲ್ಲಿನ ಗಳಿಕೆಯೇ 80 ಕೋಟಿ ರೂ. ತಲುಪಿದರೂ ಅಚ್ಚರಿ ಇಲ್ಲ. ಕಾಂತಾರ ಹೊರತುಪಡಿಸಿ, ಕನ್ನಡದ ಯಾವ ಸಿನಿಮಾವು ಕೂಡ ಈ ಪ್ರಮಾಣದ ಕಲೆಕ್ಷನ್ ಅನ್ನು ಮಾಡಿಲ್ಲ. ಅಲ್ಲದೆ, ಈ ಹಿಂದಿನ ಧುರಂಧರ್ 1 ಚಿತ್ರದ ಒಟ್ಟಾರೆ ಗಳಿಕೆಯು 50+ ಕೋಟಿ ರೂ. ಆಗಿತ್ತು. ಪಾರ್ಟ್ 1ರ ಲೈಫ್‌ಟೈಮ್ ಕಲೆಕ್ಷನ್ ಅನ್ನು ಪಾರ್ಟ್ 2 ಬರೀ ನಾಲ್ಕೇ ದಿನದಲ್ಲಿ ಉಡಾಯಿಸಿದೆ.
Dhurandhar 2 Twitter Review: ಮಾಸ್ಟರ್ ಪೀಸ್ ಪಕ್ಕಾ! ಯಶಸ್ಸು ಖಚಿತ; ಧುರಂಧರ್ 2 ಸಿನಿಮಾ ನೋಡಿದವರು ಏನಂದ್ರು?
ಆದಿತ್ಯ ಧರ್ ನಿರ್ದೇಶನ ಮಾಡಿರುವ ಧುರಂಧರ್ 2 ಸಿನಿಮಾದಲ್ಲಿ ರಣವೀರ್ ಸಿಂಗ್, ಸಾರಾ ಅರ್ಜುನ್, ಅರ್ಜುನ್ ರಾಮ್‌ಪಾಲ್, ಸಂಜಯ್ ದತ್, ರಾಕೇಶ್ ಬೇಡಿ ಮುಂತಾದವರು ನಟಿಸಿದ್ದು, ಜಿಯೋ ಸ್ಟುಡಿಯೋಸ್, ಬಿ62 ಸ್ಟುಡಿಯೋಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿವೆ.